1] ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ: 06/2017 ಕಲಂ : 279, 338 ಐ.ಪಿ.ಸಿ:.
ದಿನಾಂಕ 26-01-2017
ರಂದು ರಾತ್ರಿ 9-26 ಗಂಟೆಗೆಯ
ಸುಮಾರಿಗೆ ಕೊಪ್ಪಳದ ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ
ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವಿನ ಹೆಂಡತಿ ಶ್ರೀಮತಿ ಶ್ಯಾಲಿನಿ ಇವರಿಂದ ಲಿಖಿತ
ಫಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ. 26-01-2017 ರಂದು ರಾತ್ರಿ 9-10 ಗಂಟೆಯ ಸುಮಾರಿಗೆ ಪಿರ್ಯಾದಿಯ ಗಂಡ ಪಕೀರಪ್ಪ @ ಪ್ರಕಾಶ ಇವರು ಸಂಜೆ ಹೊರಗಡೆ ಹೋಗಿ ಬರುತ್ತೇನೆಂದು ನಮ್ಮ ಟಿ.ವಿ.ಎಸ್. ಎಕ್ಸ್ .ಎಲ್ ಗಾಡಿ ನಂ. ಕೆಎ-37/ಎಸ್-1039 ನೇದ್ದನ್ನು ಭಾಗ್ಯನಗರದಿಂದ ಕೊಪ್ಪಳದ ಕಡೆಗೆ ಬಂದಿದ್ದು ರಾತ್ರಿ 9-45 ಗಂಟೆ ಸುಮಾರಿಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ನನ್ನ ಗಂಡನ ಮೋಬೈಲಿನಿಂದ ನನ್ನ ಗಂಡನು
ಜವಾಹರ ರಸ್ತೆಯಿಂದ ಅಶೋಕ ಸರ್ಕಲ್ ಮುಖಾಂತರ ಭಾಗ್ಯನಗರಕ್ಕೆ ಬರುವಾಗ ಅಶೋಕ ಸರ್ಕಲ್ ದಲ್ಲಿ ಗದಗ
ರಸ್ತೆ ಕಡೆಯಿಂದ ಒಂದು ಟ್ಯಾಂಕರ್ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಗಂಡನಿಗೆ ಟಕ್ಕರಮಾಡಿ ಅಪಘಾತಮಾಡಿದ್ದು ಇದರಿಂದ ಪಕೀರಪ್ಪ @ ಪ್ರಕಾಶ
ಇತನಿಗೆ ತಲೆಗೆ ಒಳಪೆಟ್ಟಾಗಿ ಎಡಮೊಣಕೈಗೆ, ಬಲಭುಜಕ್ಕೆ ಹಾಗೂ ತುಟಿಗೆ ತೆರಚಿದ ಗಾಯವಾಗಿರುತ್ತದೆ ಮತ್ತು ಅಪಘಾತದಿಂದ ನನ್ನ ಗಂಡನಿಗೆ
ಪ್ರಜ್ಞೆ ತಪ್ಪಿರುತ್ತದೆ. ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 14/2017 ಕಲಂ : 323, 324, 504, 506 ಸಹಿತ
34 ಐ.ಪಿ.ಸಿ:.
ದಿನಾಂಕ 26-01-2017 ರಂದು ಬೆಳಿಗ್ಗೆ 06-00 ಗಂಟೆ ಸುಮಾರಿಗೆ
ಪಿರ್ಯಾದುದಾರರು ಹಳೆಕುಮಟಾ ಗ್ರಾಮದಲ್ಲಿ ವಾಲ್ಮಿಕಿ ಸರ್ಕಲ್ ಹತ್ತಿರ ನಿಂತಾಗ ಅಲ್ಲಿ ಸುದೀಪ ಇವರ
ಚಿತ್ರಪಟವನ್ನು ಹಾಕಿದ್ದು ಅದನ್ನು ನೋಡಿದ ಆರೋಪಿತರು ಪಿರ್ಯಾದುದಾರನಿಗೆ ಅವಾಚ್ಯವಾಗಿ ಬೈದು
ಕಯಯಿಂದ ಹಾಗೂ ಕೊಡಲಿಯಿಂದ ಹೊಡೆದು ಜೀವದಬೆರಿಕೆ ಹಾಕಿರುತ್ತಾರೆ ಎಂದು ಮುಂತಾಗಿದ್ದ
ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿರುತ್ತದೆ.
0 comments:
Post a Comment