1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 15/2017 ಕಲಂ : 279, 337 ಐ.ಪಿ.ಸಿ:.
ದಿ:27-01-2017 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ
ಸಾರಾಂಶವೇನೆಂದರೇ, ಇಂದು ದಿ:27-01-17 ರಂದು ಬೆಳಗಿನಜಾವ 05-00 ಗಂಟೆಗೆ ಆರೋಪಿ ಭೀಮಾಶಂಕರ ಇತನು ಕೊಪ್ಪಳದ ಕಡೆಯಿಂದ ತನ್ನ ಟಾಟಾ ನಂ: ಕೆಎ-49/2192 ನೇದ್ದನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಚಲಾಯಿಸಿಕೊಂಡು ಗದಗ
ಕಡೆಗೆ ಹೊರಟಿದ್ದಾಗ ಹಲಿಗೇರಿ ಸಮೀಪದ ವೇಯಿಂಗ ಮಷಿನ್ ಹತ್ತಿರ ವಾಹನವನ್ನು ನಿಯಂತ್ರಿಸದೇ ರಸ್ತೆಯ
ಬಲ ತಗ್ಗಿನಲ್ಲಿ ಪಲ್ಟಿ ಮಾಡಿದ್ದು ಇರುತ್ತದೆ. ಅಪಘಾತ ಮಾಡಿದ ಚಾಲಕನಿಗೆ ಸಾಧಾ ಗಾಯಗಳಾಗಿದ್ದು
ಇರುತ್ತದೆ. ಕಾರಣ ಅಪಘಾತ ಮಾಡಿದ ಟಾಟಾ ವಾಹನದ ಚಾಲಕ ಭೀಮಾಶಂಕರ ಇತನ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 18/2017 ಕಲಂ : 279, 337 ಐ.ಪಿ.ಸಿ ಮತ್ತು
187 ಐ.ಎಂ.ವಿ. ಕಾಯ್ದೆ:.
ದಿನಾಂಕ 27-01-2017 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಪಿರ್ಯಾದುದಾರರು ಮತ್ತು ಅವರ ಸ್ನೆಹಿತರಾದ ರೇಣುಕಪ್ಪ ಮತ್ತು ಚನ್ನಬಸಯ್ಯ ಇವರು ಕೂಡಿಕೊಂಡು ಹುಲಿಗೆಮ್ಮದೇವಸ್ಥಾನಕ್ಕೆ ಹೋಗಿ ವಾಪಾಸ್ ಊರಿಗೆ ಹೋಗುತ್ತಿರುವಾಗ ಪಿರ್ಯಾದುದಾರರ ಮತ್ತು ರೇಣುಕಪ್ಪ ಒಂದು ಮೋ.ಸೈ,ನಲ್ಲಿ ಹೋಗುತಿದ್ದು ಮತ್ತು ಚನ್ನಬಸಯ್ಯ ಇವರು ತಮ್ಮ ಮೋ.ಸೈ.ನಂ.ಕೆ.ಎ.34/ಇ-6242 ನೇದ್ದರಲ್ಲಿ ಮುದ್ಲಾಪೂರ -ಹುಲಗಿ ರಸ್ತೆಯ ಮೇಲೆ ಹೋಗುತ್ತಿರುವಾಗ ಅವರ ಮುಂದೆ ನೀರಿನ ಟ್ಯಾಂಕರ ಟ್ರಾಕ್ಟರ್ ನಂ.ಕೆ.ಎ.37/ಟಿ.ಎ.2597 ನೇದ್ದರ ಚಾಲಕನು ಅಲಕ್ಷತನದಿಂದ ಹೋಗುತ್ತಿರುವಾಗ ಯಾವುದೇ ಮುನ್ಸೂಚನೆಯನ್ನು ನೀಡದೆ ಒಮ್ಮಲೆ ಟ್ರಾಕ್ಟಗೆ ಬ್ರೇಕನ್ನು ಹಾಕಿದ್ದರಿಂದ ಹಿಂದೆಹೋಗುತ್ತಿದ್ದ ಚನ್ನಬಸಯ್ಯ ಇವರು ಟ್ರಾಕ್ಟರಗೆ ಡಿಕ್ಕಿಕೊಟ್ಟಿದ್ದರಿಂದ ಚನ್ನಬಸಯ್ಯ ಇವರಿಗೆ ಗಾಯ ಪೆಟ್ಟಗಳಾಗಿರುತ್ತವೆ ಮತ್ತು ಟ್ರಾಕ್ಟರ್ ಚಾಲಕನು ಓಡಿಹೋಗಿರುತ್ತಾನೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 09/2017 ಕಲಂ : 341, 353, 504, 506 ಸಹಿತ
34 ಐ.ಪಿ.ಸಿ:.
ದಿನಾಂಕ: 27-01-2017 ರಂದು ಮದ್ಯಾನ 3-30 ಗಂಟೆಗೆ ಫಿರ್ಯಾಧಿ ಬಸಪ್ಪ ಪರಿಚಾರಕರು ಜಿಲ್ಲಾಧಿಕಾರಿಗಳ ಕಛೇರಿ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 27-01-2017 ರಂದು ಮಧ್ಯಾಹ್ನ 12-15 ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ಮಾನ್ಯ ಜಿಲ್ಲಾಧಿಕಾರಿಗಳ ಚೇಂಬರದಲ್ಲಿ ಮಾನ್ಯ ಕೊಪ್ಪಳ ಸಂಸದರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದಾಗ ನಾನು ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಬಾಗಿಲದಲ್ಲಿ ಪರಿಚಾರಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನು. ಆಗ ಸದರಿ ಆರೋಪಿತರಾದ ವೀರಣ್ಣ ಹಂಚಿನಾಳ ಮತ್ತು ಗುಲಾಮಹುಸೇನ ಎಂಬುವವರು ಬಂದು ನಮಗೆ ಒಳಗಡೆ ಬಿಡು ಅಂತಾ ಒತ್ತಾಯ ಮಾಡಿ ನಾನು ಅವರಿಗೆ ತಿಳಿ ಹೇಳಿದರೂ ಸಹ ನನ್ನ ಮಾತಿಗೆ ಒಗ್ಗೊಡದೇ ನನಗೆ ತಡೆದು ನಿಲ್ಲಿಸಿ ಚೇಂಬರ್ ಒಳಗೆ ನುಗ್ಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಅವಾಚ್ಯವಾಗಿ ಬೈದಾಡಿ ನನ್ನ ಮತ್ತು ಜಿಲ್ಲಾಧಿಕಾರಿಗಳ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪರಿಸಿದ್ದು ಅಲ್ಲದೆ ಜೀವದ ದಮಿಕಿ ಹಾಕಿ ಹೋಗಿರುತ್ತಾರೆ, ಪ್ರಕರಣ ದಾಖಲಿಸಿ ತನಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment