Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, January 31, 2017

1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 07/2017 ಕಲಂ 78(3) Karnataka Police Act.
ದಿನಾಂಕ 30-01-2017 ರಂದು ಸಂಜೆ 7-00 ಗಂಟೆಗೆ ಶ್ರೀ ವೀರಾರೆಡ್ಡಿ ಪಿ.ಎಸ್.ಐ. ಕನಕಗಿರಿ ಠಾಣೆ ರವರು ಠಾಣೆಗೆ ಬಂದು ವರದಿ, ಹಾಗೂ ಪಂಚನಾಮೆ ಹಾಗೂ ಆರೋಪಿತರನ್ನು ಮತ್ತು ಮಟಕಾ ಸಂಬಂಧಿಸಿದ ಸಾಮಾಗ್ರಿಗಳನ್ನು ಹಾಜರಪಡಿಸಿದ್ದು, ಸದರ ವರದಿಯ ಸಾರಾಂಶವೇನೆಂದರೆ, ದಿನಾಂಕ 30-01-2017 ರಂದು ಸಂಜೆ 5-30 ಗಂಟೆಯ ಸುಮಾರಿಗೆ ಕನಕಗಿರಿ ಗ್ರಾಮದ ಅಗಸಿ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ.1 ಮತ್ತು 2 ರವರು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ನಸೀಬದ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ದಾಳಿ ಮಾಡಿ ಹಿಡಿದು ಅವನಿಂದ ನಗದು ಹಣ ರೂ.605=00 ಹಾಗೂ ಅದಕ್ಕೆ ಸಂಬಂದಿಸಿದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಪಂಚನಾಮೆಯನ್ನು ಆರೋಪಿ ಮತ್ತು ಮಟಕಾ ಸಾಮಾಗ್ರಿಗಳೊಂದಿಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡೆನು  
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 12/2017 ಕಲಂ 379  ಐಪಿಸಿ.

ದಿನಾಂಕ 30-01-2017 ರಂದು ರಾತ್ರಿ 8-00 ಗಂಟೆಗೆ ಫಿರ್ಯಾಧಿದಾರರಾದ ಸುರೇಶ ತಂಧೆ ವೀರಣ್ಣ ಗದಗ ಲಿಖಿತ ಫಿರ್ಯಾದಿ ನೀಡಿದ್ದು ಫೀರ್ಯಾದಿದಾರರು ದಿನಾಂಕ 16-01-2017 ರಂದು ಸಾಯಂಕಾಲ 4-30 ಗಂಟೆಗೆ ತಮ್ಮ ದೊಡ್ಡಪ್ಪನಾದ ವೀರಭದ್ರಪ್ಪ ಗದಗ ರವರ ಹಿರೋ ಹೋಂಡಾ ಪ್ಯಾಶನ್ ಪ್ರೋ ಮೋ ಸೈ ನಂ ಕೆಎ 37 ಆರ್ 1121 ನೇದ್ದನ್ನು ತನ್ನ ವೈಕ್ತಿಕ ಕೆಲಸದ ನಿಮಿತ್ತ ಕೊಪ್ಪಳಕ್ಕೆ ಬಂದು ಬಸ್ ನಿಲ್ದಾಣದ ಮುಂದೆ ಮೋ/ಸೈ ನ್ನೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ಚಹಾ ಕುಡಿಯಲು ಹೋಗಿ ವಾಪಾಸ್ ಸಂಜೆ 05-30 ಗಂಟೆಗೆ ಬಂದು ನೋಡಿದಾಗ ತನ್ನ ಮೋಟಾರ ಸೈಕಲ್ ಕಾಣಲಿಲ್ಲಾ ಕೂಡಲೇ ತಾನು ಅಲ್ಲಿ ಸುತ್ತಾಮುತ್ತ ಹುಡುಕಾಡಲು ಎಲ್ಲಿಯೂ ಕಂಡು ಬರಲಿಲ್ಲಾ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008