1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 23/2017 ಕಲಂ
323,
504, 506 ರೆಡ್
ವಿತ್ 34 ಐ.ಪಿ.ಸಿ. ಮತ್ತು 3(1)(x) SC/ST. P.A. Act. 1989
ದಿನಾಂಕ:- 28-01-2017 ರಂದು ಸಾಯಂಕಾಲ 4:00 ಗಂಟೆಗೆ ಫಿರ್ಯಾದಿದಾರರಾದ
ಶ್ರೀ ಬಸವರಾಜ ತಂದೆ ರಾಜಪ್ಪ ನಾಯಕ, ವಯಸ್ಸು: 37 ವರ್ಷ ಜಾತಿ: ನಾಯಕ, ಉ: ಒಕ್ಕಲತನ ಸಾ: ಡಣಾಪೂರ, ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ಫಿರ್ಯಾದಿಯನ್ನು ಹಾಜರಪಡಿಸಿದ್ದು,
ಅದರ ಸಾರಾಂಶ ಈ ಪ್ರಕಾರ
ಇದೆ." ಮೊನ್ನೆ ದಿನಾಂಕ: 26-01-2017 ರಂದು ನಮ್ಮೂರಲ್ಲಿ ನಾಟಕ ಇದ್ದುದರಿಂದ ನಾನು ಸಹ ನಾಟಕದಲ್ಲಿ ಪಾತ್ರ ಮಾಡಿದ್ದೆನು. ಅದರಂತೆ ನಮ್ಮೂರ ಕೆ.ಉಡುಚಪ್ಪ ಇವರ ತಮ್ನನಾದ ವಿರೇಶನು ಸಹ ಪಾತ್ರ ಮಾಡಿದ್ದನು. ಆದರೆ ನಾಟಕದ ಖಚರ್ು ವೆಚ್ಚಿನ ಹಣವನ್ನು ನಿನ್ನೆ ದಿನಾಂಕ: 27-01-2017 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ವಿರೇಶನಿಗೆ ಕೇಳಿದಾಗ ಉಡುಚಪ್ಪ ಹಾಗೂ ಇತರರೂ ಕೂಡಿ ಬಾಯಿ ಮಾಡಿದಾಗ ಅಲ್ಲಿಯೇ ಇದ್ದ ನಮ್ಮೂರ ದೊಡ್ಡನಗೌಡ ತಂದೆ ಶಿವಪ್ಪ 36 ವರ್ಷ ಹಾಗೂ ಬಸವ ತಂದೆ ತಿಮ್ಮ ನಾಯಕ 37 ವರ್ಷ ಇವರುಗಳು ಅವರಿಗೆ ಬುದ್ದಿವಾದ ಹೇಳಿ ಕಳುಹಿಸಿದರು. ಪುನ: ಸಂಜೆ 6:00 ಗಂಟೆಯ ಸುಮಾರಿಗೆ ನಾನು ನಮ್ಮೂರ ವಿ.ಎಸ್.ಎಸ್. ಬ್ಯಾಂಕ್ ಮುಂಭಾಗ ನಿಂತಿರುವಾಗ 1] ಕೆ. ಉಡುಚಪ್ಪ ತಂದೆ ಹೊನ್ನೂರಪ್ಪ ವರ್ಷ ಜಾತಿ: ಕುರುಬರ, 2] ಹೊನ್ನೂರಪ್ಪ ವಯಸ್ಸು: 50 ವರ್ಷ ಜಾತಿ: ಕುರುಬರ, 3] ಅಕ್ಕಮ್ಮ ಶರಣಪ್ಪ ವಯಸ್ಸು: 36 ವರ್ಷ ಜಾತಿ: ಕುರುಬರ, 4] ಅಕ್ಕಮ ಹನುಮೇಶ ವಯಸ್ಸು: 35 ವರ್ಷ ಜಾತಿ: ಕುರುಬರ, ಎಲ್ಲರೂ ಸೇರಿಕೊಂಡು ಬಂದು ನನಗೆ ಏಕಾಏಕಿಯಾಗಿ ಲೇ ಬ್ಯಾಡರ ಸೂಳೇ ಮಗನೇ ನೀನು ನಮ್ಮ ಹುಡುಗನಿಗೆ ನಾಟಕದ ಖರ್ಚು ಕೇಳುತ್ತೀಯಾ ದೇಣಿಗೆ ಹಣದಲ್ಲಿ ಎಷ್ಟು ಹಣ ತಿಂದಿದಿಯಾ ಹಣದ ಲೆಕ್ಕ ಕೊಡು ಅಂತಾ ಜಗಳ ತೆಗೆದು ಕೈಯಿಂದ
ಹೊಡಿಬಡಿ ಮಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಕಾರಣ ಮಾನ್ಯರು ನಾಲ್ಕು ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ನೀಡಿದ ಗಣಕೀಕರಣ ಮಾಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 24/2017 ಕಲಂ
323, 324, 504, 506 ರೆ/ವಿ 34 ಐಪಿಸಿ.
ದಿನಾಂಕ. 28-01-2017 ರಂದು
05-30 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಶರಣಪ್ಪ ತಂ/ ಸಂಗಪ್ಪ ವಯಾ 35, ಜಾ. ಕುರುಬರು ಉ. ಒಕ್ಕಲುತನ
ಸಾ. ಡಣಾಪುರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿದ ಫಿರ್ಯಾದಿ ಹಾಜರಾ ಪಡಿಸಿದ್ದು ಸಾರಾಂಶವೆನಂದರೆ.
ನಿನ್ನೆ ದಿನಾಂಕ. 27-01-2017 ರಂದು ಸಾಯಂಕಾಲ 06-00 ಗಂಟೆ ಸುಮಾರಿಗೆ ಡಣಾಪುರ ಗ್ರಾಮದ ವಿ.ಎಸ್.ಎಸ್.ಎನ್
ಸೋಸೈಟಿ ಹತ್ತಿರ ಆರೋಪಿತರಾದ ಬಸವರಾಜ ಮತ್ತು ದೊಡ್ಡನಗೌಡ ಇವರು ಇದ್ದು ಫಿರ್ಯಾದಿದಾರನು ಮತ್ತು ಮಹೇಶ
ಇವರು ಕೂಡಿಕೊಂಡು ಬಸವರಾಜ ಮತ್ತು ದೊಡ್ಡನಗೌಡ ಇವರಿಗೆ ನಾಟಕ ಮಾಡಿದ ಖರ್ಚು ಕೇಳಿದ್ದರಿಂದ ಬಸವರಾಜ
ಮತ್ತು ದೊಡ್ಡನಗೌಡ ಇವರು ಫಿರ್ಯಾದಿಗೆ ಸೂಳೆ ಮಗನೆ ಎಂದು ಅವಾಚ್ಯ ಬೈದು ಕೊಲೆ ಮಾಡುತ್ತೆವೆ ಎಂದು
ಜೀವದ ಬೆದರಿಕೆ ಹಾಕುತ್ತಾ ಬಸವರಾಜನು ಫಿರ್ಯಾದಿಗೆ ಬಂಡಿಗೂಟ(ಕಟ್ಟಿಗೆ)ದಿಂದ ಬೆನ್ನೆಗೆ ಹೊಡೆದಿರುತ್ತಾನೆ.
ಮತ್ತು ದೊಡ್ಡನಗೌಡನು ಇನ್ನೊಂದು ಕಟ್ಟಿಗೆಯಿಂದ ಹೊಡೆದಿರುತ್ತಾನೆ. ಅಲ್ಲಿಯೇ ಇದ್ದ ಬಸವರಾಜನ ಮಗ ಮಂಜುನಾಥನು
ಮನೆಯಲ್ಲಿ ಚಾಕು ತಂದು ಫಿರ್ಯಾದಿಗೆ ಹೊಡೆಯಲು ಹೋಗಿರುತ್ತಾನೆ. ದೊಡ್ಡನಗೌಡ ಇವರ ತಂದೆಯಾದ ಶಿವಪ್ಪ
ಬಕಾರ ಈತನು ಕೊಡಲಿಯಿಂದ ಫಿರ್ಯಾದಿಗೆ ಹೊಡೆಯಲು ಹೋಗಿರುತ್ತಾನೆ. ಅಲ್ಲದೆ ಬಸವರಾಜ, ದೊಡ್ಡನಗೌಡ ಮತ್ತು
ಮಂಜುನಾಥ, ಶಿವಪ್ಪ ನಾಲ್ಕು ಜನರು ಕೂಡಿಕೊಂಡು ಫಿರ್ಯಾದಿ ಜೊತೆಗೆ ಇದ್ದ ಮಹೇಶನಿಗೆ ಕೈಯಿಂದ ಹೊಡೆದು
ಕಾಲಿನಿಂದ ಒದ್ದಿರುತ್ತಾರೆ. ನಂತರ ಇವತ್ತು ಉಳಿದುಕೊಂಡಿರಿ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲಾ
ಕೊಲೆ ಮಾಡುತ್ತೆವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ
ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment