1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 10/2017
ಕಲಂ: 143, 147, 148, 427, 448, 354, 323, 324, 506 ಸಹಿತ 149 ಐ.ಪಿ.ಸಿ:.
ದಿನಾಂಕ:
27-02-2017 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿದಾರಳ ಮನೆಯ
ಮುಂದಿನ ಗೇಟನ್ನು ಕಿತ್ತು ಹಾಕಿ ಎಲ್ಲರೂ ಏಕಾಏಕಿ ಯಾವ ಕಾರಣ ಇಲ್ಲದಿದ್ದರೂ ಮನೆಗೆ ನುಗ್ಗಿ ಪಿರ್ಯಾದಿದಾರಳಿಗೆ
ಹೊಡೆದು ಬಡಿದಿದ್ದು, ಆಕೆಯ ಗಂಡನಿಗೆ ಎಳೆದಾಡಿ ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಮಾಡಿದ್ದು, ದೌರ್ಜನ್ಯದಿಂದ
ಪಿರ್ಯಾದಿದಾರಳ ಸೀರೆ ಹರೆದು ಮಾನ ಹೋಗುವಂತೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ
ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 34/2017
ಕಲಂ: 279, 337, 338 ಐ.ಪಿ.ಸಿ:.
ದಿನಾಂಕ:-28-02-2017 ರಂದು ಬೆಳಗಿನ ಜಾವ 3-40 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಮಲ್ಲಿಕಾರ್ಜುನ ತಂದೆ ಪರಮೇಶ್ವರಪ್ಪ ಸಜ್ಜನ್ ವಯ 44 ವರ್ಷ ಜಾತಿ ಲಿಂಗಾಯತ ಉ. ವ್ಯಾಪಾರ ಸಾ. ನವಶಕ್ತಿ ಗ್ಯಾರೇಜ್ ಹಿಂದೆ ಕಾರಟಗಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ದಿನಾಂಕ:-27-02-2017 ರಂದು ರಾತ್ರಿ 8-50 ಗಂಟೆಯ ಸುಮಾರಿಗೆ ಕಾರಟಗಿ ಬಸವೇಶ್ವರ ನಗರದಲ್ಲಿರುವ ನವ ಶಕ್ತಿ ಗ್ಯಾರೇಜ್ ಹತ್ತಿರ ಗಂಗಾವತಿ-ಸಿಂಧನೂರು ರಸ್ತೆಯ ಮೇಲೆ ಆರೋಪಿ ಚಾಲಕ ರಂಗನಾಥ ತಂದಿ ವೀರಣ್ಣ ಭೋವಿ ಈತನು ಕಾರಟಗಿ ಹಳೆ ಬಸ್ ನಿಲ್ದಾಣ ಕಡೆಯಿಂದ ತನ್ನ ಮೋ.ಸೈ ನಂ ಕೆ.ಎ-34/ವಾಯ್-7000 ನೇದ್ದನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ವಾಕಿಂಗ್ ಮಾಡುತ್ತಿದ್ದ ಪಿರ್ಯಾದಿದಾರರ ಹೆಂಡತಿ ಶ್ರೀಮತಿ ಯಶೋದ ಗಂಡ ಮಲ್ಲಿಕಾರ್ಜುನ, 35 ವರ್ಷ ಮತ್ತು ಶಿವಮ್ಮ ಗಂಡ ದುರಗಪ್ಪ, 55ವರ್ಷ ಸಾ. ಕಾರಟಗಿ ಇವರಿಗೆ ಟಕ್ಕರ ಮಾಡಿ ಅಪಘಾತಪಡಿಸಿದ್ದರಿಂದ ಯಶೋದಾ, ಶಿವಮ್ಮ ಹಾಗೂ ಮೋಟಾರ್ ಸೈಕಲ್ ಹಿಂಭಾಗದಲ್ಲಿ ಕುಳಿತುಕೊಂಡಿದ್ದ ಲಕ್ಷ್ಮಣ್ಣ ತಂದಿ ವೀರಣ್ಣ ಇವರಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತವೆ. ನಾನು ನನ್ನ ಹೆಂಡತಿಯನ್ನು ಮತ್ತು ಶಿವಮ್ಮಳನ್ನು ಹೆಚ್ಚಿನ ಚಿಕಿತ್ಸೆ ಕುರಿತು ಗಂಗಾವತಿಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಲಕ್ಷ್ಮಣ್ಣನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಸಿಂಧನೂರಿಗೆ ಕರೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿದುಕೊಂಡು ಈಗ ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿರುತ್ತೇನೆ. ಅಂತಾ ಮುಂತಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment