1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 31/2017
ಕಲಂ: 78(3) Karnataka Police Act.
ದಿನಾಂಕ:-24-02-2017 ರಂದು ಮದ್ಯಾಹ್ನ
3-45 ಗಂಟೆಗೆ ಮಲ್ಲಪ್ಪ ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ಮಟ್ಕಾ ಜೂಜಾಟದ ವರದಿ ಮೂಲ ಪಂಚನಾಮೆ ಮತ್ತು
ಮಾನ್ಯ ನ್ಯಾಯಾಲಯದ ಪರವಾನಿಗೆಯೊಂದಿಗೆ ಠಾಣೆಗೆ ಹಾಜರಾಗಿ ಕೊಟ್ಟ ವರದಿಯ ಸಾರಾಂಶದಲ್ಲಿ ಇಂದು ದಿನಾಂಕ:-24-02-2017
ರಂದು ಮದ್ಯಾಹ್ನ 2-00 ಗಂಟೆಗೆ ಹಗೇದಾಳ ಗ್ರಾಮದಲ್ಲಿ ಆರೋಪಿ ಲಕ್ಮಣ ತಂದಿ ಹುಲಿಗೆಪ್ಪ ತಳವಾರ ವಯಾ-26
ವರ್ಷ ಸಾ. ಹಗೇದಾಳ ಈತನು ಹಗೇದಾಳ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ
ಪಂಚರ ಸಮಕ್ಷಮದಲ್ಲಿ ಎ.ಎಸ್.ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹಿಡಿದುಕೊಂಡು ಆರೋಪಿತನಿಂದು ರೂ. 1450=00 ಗಳನ್ನು ಮತ್ತು ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು
ಆರೋಪಿ ಸಮೇತ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 32/2017
ಕಲಂ: 279, 338 ಐ.ಪಿ.ಸಿ:.
ದಿನಾಂಕ:-24-02-2017 ರಂದು ಸಾಯಂಕಾಲ 6-40 ಗಂಟೆಗೆ ಪಿರ್ಯಾದಿದಾರರಾದ
ಬಾಬುಸಾಬ ತಂದಿ ಖಾಜಾಹುಸೇನ ಕೊಪ್ಪಳದ ವಯಾ-62ರ್ಷ ಸಾ. ಕಾರಟಗಿ ಇವರು ಠಾಣೆಗೆ ಹಾಜರಾಗಿ
ಒಂದು ಲಿಖಿತ ದೂರು ಕೊಟ್ಟಿದ್ದ ಸದ್ರಿ ದೂರಿನ ಸಾರಾಂಶದಲ್ಲಿ ಇಂದು ದಿನಾಂಕ:-24-02-2017 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರ
ಮೊಮ್ಮಗನಾದ ಅಜ್ಮೀರ ವಯಾ-11 ವರ್ಷ ಇತನಿಗೆ ಟಾಟಾ ಏಸ್ ನಂ ಕೆ.ಎ-35/ಬಿ-1723 ನೆದ್ದರ ಚಾಲಕನು ತಮ್ಮ ವಾಹನದಲ್ಲಿ ಕೂಡಿಸಿಕೊಂಡು ಅತೀ ವೇಗ ಅಲಕ್ಷತನದಿಂದಚಲಾಯಿಸಿಕೊಂಡು
ಹೋಗಿದ್ದರಿಂದ ಗಂಗಾವತಿ-ಸಿಂಧನೂರು ರಸ್ತೆಯ ಕಾರಟಗಿ ಸರಕಾರಿ ಆಸ್ಪತ್ರೆಯ ಕ್ರಾಸ್ ಹತ್ತಿರ ಟಾಟಾ
ಏಸ್ ವಾಹನದಲ್ಲಿ ಕುಳಿತುಕೊಂಡಿದ್ದ ಅಜ್ಮೀರ ಈತನು ಪುಟಿದು ಕೆಳಗೆ ಬಿದ್ದು ತಲೆಗೆ ಈತರೆ ಕಡೆಗೆ
ಗಂಭೀರ ಸ್ವರೂಪದ ಗಾಯಗಳಾಗಿದ್ದು ಟಾಟಾ ಏಸ್ ವಾಹನದ ಚಾಲಕನ ಮೇಲೆಕಾನೂನು ಕ್ರಮ ಕೈಗೊಳ್ಳಲು
ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ
ಗುನ್ನೆ ನಂ: 26/2017 ಕಲಂ: 41(1)(ಡಿ) ಸಹಿತ 102 ಸಿ.ಆರ್.ಪಿ.ಸಿ ಮತ್ತು
379 ಐ.ಪಿ.ಸಿ:.
ದಿನಾಂಕ 24-02-2017 ರಂದು ಮುಂಜಾನೆ 9-30 ಗಂಟೆಗೆ ಶ್ರೀ ಕಾಮಣ್ಣ, ಎ.ಎಸ್.ಐ. ಗಂಗಾವತಿ ನಗರ ಪೊಲೀಸ್ ಠಾಣೆ ರವರು ಅಪರಾಧ ವಿಭಾಗದ ಸಿಬ್ಬಂದಿಯವರಾದ ಪಿಸಿ 205 ರವರೊಂದಿಗೆ ಗಂಗಾವತಿ ನಗರದಲ್ಲಿ ಪೆಟ್ರೋಲಿಂಗ್ ಮಾಡುತ್ತ
ಡಾಲ್ಪಿನ್ ಕ್ರಾಸ್ ಹತ್ತಿರ
ಬಂದಾಗ ಆರೋಪಿತನಾದ ರಾಜಾಹುಸೇನಿ @ ಬಾರ್ಡರ್ ತಂದೆ ಅಬ್ದುಲ್ ಗನಿ ವಯಸ್ಸು 24 ವರ್ಷ ಜಾ: ಮುಸ್ಲಿಂ ಸಾ: ಲಕ್ಷ್ಮೀಕ್ಯಾಂಪ್, ಗಂಗಾವತಿ ಇವನು ಒಂದು ಟಿ.ವಿ.ಎಸ್. ಎಕ್ಸ್.ಎಲ್. ವಾಹನದ ಮೇಲೆ ಗಂಗಾವತಿ ಕಡೆಗೆ ಬರುತ್ತಿದ್ದು ಸದರಿಯವನಿಗೆ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದಾಗ ಸದರಿಯವನು ವಾಹನವನ್ನು ನಿಲ್ಲಿಸದೆ ಹಾಗೆಯೇ ಚಲಾಯಿಸಿಕೊಂಡು ಹೋಗಿದ್ದರಿಂದ ಸದರಿಯವನಿಗೆ ಬೆನ್ನಟ್ಟಿ ಹಿಡಿದು ವಾಹನಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ವಿಚಾರಿಸಿದಾಗ ಸದರಿಯವರು ದಾಖಲಾತಿಗಳನ್ನು ಹಾಜರ ಪಡಿಸಲು ವಿಫಲರಾಗಿದ್ದು ಸದರಿಯವನು ಈಗ್ಗೆ 02 ದಿವಸಗಳಿಂದೆ ಮದ್ಯಾಹ್ನ 02-00 ಗಂಟೆಯ ಸುಮಾರಿಗೆ ಹಗರಿಬೊಮ್ಮನ ಹಳ್ಳಿಯ ಮಾರ್ಕೇಟನಲ್ಲಿನ ಕೊಟ್ಟುರೇಶ್ವರ ಸಿನಿಮಾ ಥೇಟರ್ ಹತ್ತಿರ ನಿಲ್ಲಿಸಿರುವುದನ್ನು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಹೇಳಿದ್ದರಿಂದ ಸ್ಥಳಕ್ಕೆ ಇಬ್ಬರು ವ್ಯಕ್ತಿಗಳನ್ನು ಹಾಜರ ಪಡಿಸಿಕೊಂಡು ಪಂಚರನ್ನಾಗಿ ನೇಮಿಸಿಕೊಂಡು ಸದರಿಯವರ ಸಮಕ್ಷಮ ಟಿ.ವಿ.ಎಸ್. ಎಕ್ಸ್.ಎಲ್. ಹೆವಿ ಡ್ಯೂಟಿ ವಾಹನವಾಗಿದ್ದು, ಇದರ ನೊಂ.ಸಂ. ವಾಹನ ನೊಂ.ಸಂ K.A.35/W 2687 ಹಸಿರು ಬಣ್ಣದ್ದು
ಚಾಸ್ಸಿ MD621BD13B2N97777
ಇಂಜಿನ್ ಸಂ OD1NB11687669 ಅಂ.ಕಿ.ರೂ. 25,000-00. ಬೆಲೆ ಬಾಳುವುದನ್ನು ಪಂಚರ ಸಮಕ್ಷಮ 9-30 ಎ.ಎಂ. ದಿಂದ 10-30 ಎ.ಎಂ.ದ ವರೆಗೆ ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment