1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 19/2017, ಕಲಂ:324,307,504,506,
ಸ/ವಾ 34 ಐಪಿಸಿ.
ಶ್ರೀಮತಿ
ಅಂಬಮ್ಮ ಗಂಡ ಯಮನಪ್ಪ ತಳವಾರ ವಯ:35,
ಜಾತಿ:ವಾಲ್ಮೀಕಿ
ಉ:ಹೊಲಮನೆಕೆಲಸ
ಸಾ:ಲಿಂಗದಹಳ್ಳಿ
ತಾ:ಕುಷ್ಟಗಿ ಇವರು ನೀಡಿರುವ
ನುಡಿ ಹೇಳಿಕೆಯ ಪಿರ್ಯಾದಿಯ ಸಾರಾಂಶವೆನೆಂದರೆ
ಪಿರ್ಯಾದಿ ಮನೆಯವರಿಗೂ ಹಾಗೂ ಅವರ ಮೈದುನನಾದ ರುದ್ರಪ್ಪ ತಂದೆ ಯಮನಪ್ಪ ತಳವಾರ ರವರ
ಮನೆಯವರಿಗೂ ಲಿಂಗದಳ್ಳಿ ಸೀಮಾಂತರದಲ್ಲಿ ಜಮೀನಿನ ನಾಲಾ ಬದುವಿನ ಸಲುವಾಗಿ ಸುಮಾರು
ವರ್ಷದಿಂದ ಜಗಳವಾಗಿ ವೈ ಮನಸ್ಸು ಇದ್ದುದು ಇರುತ್ತದೆ.
ಇಂದು ದಿನಾಂಕ:28-02-2017
ರಂದು ಸಾಯಂಕಾಲ 17-00
ಗಂಟೆಯ ಸುಮಾರು ಪಿರ್ಯಾದಿ ಅಂಬಮ್ಮ ಗಂಡ ಯಮನಪ್ಪ ತಳವಾರ ಹಾಗೂ ಆಕೆಯ ಗಂಡ ಯಮನಪ್ಪ ತಳವಾರ
ನಾಲಾ ಬದುವಿನ ಕಲ್ಲು ಉರುಳಿದ್ದು ಅವುಗಳನ್ನು ಸರಿಪಡಿಸುತ್ತಿದ್ದಾಗ ಅಲ್ಲಿಗೆ ಪಿರ್ಯಾದಿ ಮೈದುನ
ಆರೋಪಿತರಾದ ರುದ್ರಪ್ಪ ತಂದೆ ಯಮನಪ್ಪ ತಳವಾರ ಹಾಗೂ ಅವರ ಅಳಿಯನಾದ ಯಂಕಪ್ಪ ತಂದೆ ಭೀಮಪ್ಪ ತಳವಾರ
ರವರು ಹೋಗಿದ್ದು ಆಗ ರುದ್ರಪ್ಪ ತಂದೆ ಯಮನಪ್ಪ ತಳವಾರ ನಾಲಾ ಬದುವಿನ ಜಗಳವಾಗಿ ವೈ ಮನಸ್ಸಿನ
ದ್ವೇಷದಿಂದ ಅವಾಚ್ಯ ಬೈದು ಇವತ್ತ ನಿನ್ನ ಜೀವ ಸಹಿತ ಉಳಿಸುವದಿಲ್ಲಾ ಅಂತಾ ಕೊಲೆ ಮಾಡುವ
ಉದ್ದೇಶದಿಂದ ಕೈಯಲ್ಲಿ ಹಿಡಿದು ತಂದಿದ್ದ ಕೊಡಲಿ ಕಾವಿನಿಂದ ಪಿರ್ಯಾದಿ ಅಂಬಮ್ಮಳ ತಲೆಗೆ ಎಡಗಡೆ
ಹೊಡೆದಿದ್ದು ಇದರಿಂದ ಅವಳಿಗೆ ತಲೆಗೆ ಒಳಪೆಟ್ಟಾಗಿದ್ದು ಮತ್ತು ಕಿವಿಗೆ ರಕ್ತಗಾಯವಾಗಿದ್ದು
ಇರುತ್ತದೆ. ಆಗ ಸ್ವಲ್ಪ
ದೂರದಲ್ಲಿದ್ದ ಪಿರ್ಯಾದಿ ಗಂಡ ಯಮನಪ್ಪ ಓಡಿ ಬಂದು ಜಗಳ ಬಿಡಿಸಿದ್ದು ಇರುತ್ತದೆ. ಹೋಗುವಾಗ ಆರೋಪಿ
ಯಂಕಪ್ಪ ತಂದೆ ಭೀಮಪ್ಪ ತಳವಾರ ಇವತ್ತ ನಿನ್ನ ಗಂಡ ಅದಾನ ಅಂತಾ ಉಳಿದಿ ಇಲ್ಲಾ ಅಂದರ ನಿನ್ನ ಜೀವ
ಸಹಿತ ಉಳಿಸುತ್ತಿರಲಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಪಿರ್ಯಾದಿಯ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ
ಗುನ್ನೆ ನಂ: 28/2017 ಕಲಂ: 420 ಐ.ಪಿ.ಸಿ:.
ಇಂದು ದಿನಾಂಕ: 28-02-2017 ರಂದು 06-00 ಪಿ.ಎಂ. ಕ್ಕೆ ಫಿರ್ಯಾದಿದಾರರಾದ ಶ್ರೀ ಧೀರಜ್ ತಂದೆ ಜಗಧೀಶ ಕೂಡತಕರ್ ವಯಾ: 34 ವರ್ಷ ಜಾ:
ದೈವಜ್ಞ ಬ್ರಾಹ್ಮಣ ಉ: ಬಂಗಾರದ ಆಭರಣಗಳ ವ್ಯಾಪಾರ
ಸಾ: ಜುಲೈ ನಗರ ಗಂಗಾವತಿ, ರವರು ಠಾಣೆಗೆ
ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ: 24-02-2017 ರಂದು
ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಗಂಗಾವತಿ ನಗರದ ಗಣೇಶ ಸರ್ಕಲ್ ಹತ್ತಿರ ಇರುವ
ತಮ್ಮ ಜೆ ಕೆ ಜ್ಯೂವೇಲರ್ಸ ಅಂಗಡಿಯಲ್ಲಿರುವಾಗ ಅಂದಾಜು
35 ರಿಂದ 45 ವಯಸ್ಸಿನ ಇಬ್ಬರೂ ಹೆಂಗಸರು ಪಿರ್ಯಾಧಿದಾರರ
ಅಂಗಡಿಗೆ ಬಂದು ಅದರಲ್ಲಿ ಒಬ್ಬ ಹೆಂಗಸು ತನ್ನ ಹೆಸರು
ವಾಣಿ ಗಂಡ ರಾಚಪ್ಪ ಸಾ: ಮಾರೆಮ್ಮನ ಗುಡಿ ಹತ್ತಿರ, ಅಂಗಡಿ ಸಂಗಣ್ಣ ಕ್ಯಾಂಪ, ಗಂಗಾವತಿ ಅಂತಾ ಪರಿಚಯಿಸಿಕೊಂಡು
ಒಂದೆಳೆಯ ಬಂಗಾರದ ಎರಡು ಸರಗಳು ಬೇಕಾಗಿವೆ ಅಂತಾ ಹೇಳಿ ತಮ್ಮ ಹತ್ತಿರ ಇದ್ದ ಒಂದು ಎರಡೆಳೆಯ ಸರ ಹಾಗೂ
ಬ್ರಾಸ್ ಲೈಟ ನಕಲಿ ಬಂಗಾರದ ಆಭರಣ ಕೊಟ್ಟು ಅವು ಅಸಲಿ ಬಂಗಾರ ಅಂತಾ ನಂಬಿಸಿ ಗಳನ್ನು ಅದರ ಬದಲಾಗಿ
26 ಗ್ರಾಂ ಹಾಗೂ 20 ಗ್ರಾಂ ತೂಕದ ಒಂದೆಳೆಯ ಬಂಗಾರದ ಎರಡೂ ಸರಗಳು ಒಟ್ಟು ಕಿ. 1,35,000-00 ಬೆಲೆ
ಬಾಳುವವುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಅಂತಾ ನೀಡಿದ ಗಣಕಿಕೃತ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ
ಗುನ್ನೆ ನಂ: 29/2017 ಕಲಂ: 420 ಐ.ಪಿ.ಸಿ:.
ದಿನಾಂಕ: 28-02-2017 ರಂದು 06-30 ಪಿ.ಎಂ. ಕ್ಕೆ ಫಿರ್ಯಾದಿದಾರರಾದ ಶ್ರೀ ಹೆಚ್. ಮಹೇಶ ಕುಮಾರ ತಂದೆ ಹೆಚ್. ಗೌಸ್ಲೇಪ್ಪ ವಯಾ:
34 ವರ್ಷ ಜಾ: ಲಿಂಗಾಯತ ಉ: ಬಂಗಾರದ ಆಭರಣಗಳ ವ್ಯಾಪಾರ
ಸಾ: ಗುಂಜಳ್ಳಿ ಓಣಿ ದೇವಂಗಾ ಮಠದ ಹತ್ತಿರ ಗಂಗಾವತಿ. ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ
ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ: 24-02-2017 ರಂದು ಬೆಳಿಗ್ಗೆ 11-30 ಗಂಟೆಯ
ಸುಮಾರಿಗೆ ಫಿರ್ಯಾದಿದಾರರು ಗಂಗಾವತಿ ನಗರದ ಗಣೇಶ ಸರ್ಕಲ್ ದಲ್ಲಿರುವ ತಮ್ಮ ಸಿ.ಬಿ.ಎಸ್ ಜ್ಯೂವೆಲರಿ
ವರ್ಕ್ಸ್ ಅಂಗಡಿಯಲ್ಲಿರುವಾಗ ಅಂದಾಜು 1] ಅಂ. 50
ರಿಂದ 55 ವರ್ಷ ವಯಸ್ಸಿನ ಒಬ್ಬ ಗಂಡಸು 2] ಅಂ. 45 ರಿಂದ 50 ವರ್ಷ ವಯಸ್ಸಿನ ಒಬ್ಬ ಹೆಂಗಸು ರಿಂದ 45
ವಯಸ್ಸಿನ ಇಬ್ಬರೂ ಪಿರ್ಯಾಧಿದಾರರ ಅಂಗಡಿಗೆ ಬಂದು
ಅದರಲ್ಲಿ ಒಬ್ಬ ಗಂಡಸು 1 ನೆಕ್ಲೆಸ್ ತೂಕ
18 ಗ್ರಾಂ ಬೆಲ ರೂ 54 ಸಾವಿರ , 1 ಜೋತೆ ಕಿವಿ ಓಲೆಯ
ತೂಕ 3 ಗ್ರಾಂ ಬೆಲೆ, ರೂ 9 ಸಾವಿರ ಮತ್ತು 1 ಗಂಡಸು ಹಾಕುವ ಉಂಗುರದ ತೂಕ ಅಂದಾಜು 3 ಗ್ರಾಂ ಇದ್ದು
ಬೆಲೆ ರೂ 9 ಸಾವಿರ ಇದ್ದು ಇದೇ ರೀತಿ ಒಟ್ಟು 72 ಸಾವಿರ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಖರೀದಿ
ತಮ್ಮ ಬಳಿ ಇದ್ದ ತೂಕ 35 ಗ್ರಾಂ ಇದ್ದು ಬೆಲೆ ರೂ 75,500-00 ಗಳು ಎರಡು ಚೈನ್ ಸರ ನಕಲಿ ಬಂಗಾರದ
ಆಭರಣ ಕೊಟ್ಟು ಅವು ಅಸಲಿ ಬಂಗಾರ ಅಂತಾ ನಂಬಿಸಿ ಗಳನ್ನು ಅದರ ಬದಲಾಗಿ 72 ಸಾವಿರ ಬೆಲೆ ಬಾಳುವ ಬಂಗಾರದ
ಆಭರಣಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಅಂತಾ ನೀಡಿದ ಗಣಕಿಕೃತ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment