Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, February 21, 2017

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 32/2017 ಕಲಂ: 87 Karnataka Police Act.
ದಿ : 20-02-2017 ರಂದು 4-30 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಹಲಿಗೇರಿ ಗ್ರಾಮದ ಶ್ರೀ ಹಮ್ಮಿಗೇಶ್ವರ ದೇವಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 11 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದ್ದು 09 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ, 930=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 08 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 23/2017 ಕಲಂ: 78(3) Karnataka Police Act.
ದಿನಾಂಕ: 20-02-2017 ರಂದು ಸಾಯಂಕಾಲ 7-15 ಪಿ.ಎಮ್ ಕ್ಕೆ ಶ್ರೀ ರಾಜಕುಮಾರ ಪಿ.ಐ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಮಟಕ ಜೂಜಾಟದಲ್ಲಿ ತೊಡಗಿದ್ದ ಒಬ್ಬ ವ್ಯಕ್ತಿಯೊಂದಿಗೆ ಮಟಕ ದಾಳಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ತಮ್ಮದೊಂದು ವರದಿಯೊಂದಿಗೆ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 20-02-2017 ರಂದು 5-45 ಪಿ.ಎಮ್ ಗಂಟೆಯ ಸುಮಾರಿಗೆ ಆರೋಪಿತನಾದ ಉಸ್ಮಾನ್ ಬೇಗ್ ತಂದೆ ಮಹ್ಮದ್ ಬೇಗ್, ಸಾ: ಲಕ್ಷ್ಮಿ ಕ್ಯಾಂಪ್ ಗಂಗಾವತಿ. ಈತನು ಗಂಗಾವತಿ ನಗರದ ಅಜಯ್ ಬಾರ್ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವಮೇಲೆ ಪಿ.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಸದರಿಯವರಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟಕಾ ಜೂಜಾಟದ ಹಣ ನಗದು ಹಣ ರೂ. 430-00 02 ] ಮಟಕಾ ನಂಬರ ಬರೆದ 02 ಚೀಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಆರೋಪಿತನಿಂದ ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3]  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 40/2017 ಕಲಂ: 279, 337, 338,3304(ಎ) ಐ.ಪಿ.ಸಿ:.
ದಿನಾಂಕ : 20-02-2017 ರಂದು ಬೆಳಿಗ್ಗೆ ಕಂದಕೂರಿನ ಒಂದು ಮನೆಯ  ಟೈಲ್ಸ ಕೆಲಸಕ್ಕೆ ನಾವು ಅಂದರೆ ನಾನು ಮತ್ತು ನನ್ನ ಅಣ್ಣ ಮಹ್ಮದ ಜಾಕೀರ ಹಾಗೂ ನಮ್ಮೂರ ಮಹ್ಮದ ಗೌಸ್, ಮಂಜುನಾಥ   ಟೆಂಗುಂಟಿ ಹೋಗಿದ್ದು ನಂತರ ಮದ್ಯಾಹ್ನ ಊಟಕ್ಕೆ ವಾಪಾಸ್ ಕುಷ್ಟಗಿಗೆ ಬಂದು ಊಟ ಮುಗಿಸಿಕೊಂಡು ಪುನಃ ನಮ್ಮ ಕೆಲಸದ ನಿಮಿತ್ಯ ನಾನು ಮತ್ತು ಮಂಜುನಾಥ ಟೆಂಗುಂಟಿ  ಕೂಡಿಕೊಂಡು ಒಂದು ಮೋ ಸೈ ನಲ್ಲಿ ಅದರಂತೆ ನನ್ನಅಣ್ಣನಾದ ಮಹ್ಮದ ಜಾಕೀರ ಮತ್ತು ಮಹ್ಮದ ಗೌಸ್ ರವರು ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್  ಮೋ.ಸೈ ನಂ : ಕೆ.-37/ಕೆ-6619 ನೇದ್ದರಲ್ಲಿ ಕಂದಕೂರಿಗೆ ಹೋರಟಿದ್ದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ನಾವು ಕುಷ್ಟಗಿ ಕಂದಕೂರು ರಸ್ತೆಯಲ್ಲಿ ಕಂದಕೂರು ಇನ್ನೂ ಸುಮಾರು 1 ಕಿ.ಮಿ. ಇರುವಾಗ್ಗೆ ಹನಮಂತ ನಾಯಕರವರ ಹೊಲದ ಹತ್ತಿರ ಮಹ್ಮದ ಗೌಸ್ ಇತನು ನಮ್ಮ ಮುಂದೆ ಮುಂದೆ ತನ್ನ ಮೋ.ಸೈ  ನಂ ಕೆ.-37/ಕೆ-6619 ನೇದನ್ನು ಅತೀ ವೆಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋರಟು ನಾವು ನೋಡು ನೋಡುತ್ತಿದ್ದಂತೆಯೇ ರಸ್ತೆಯ ತಿರುವಿನಲ್ಲಿ ಮೋ.ಸೈ ನ್ನು ಕಂಟ್ರೋಲ್ ಮಾಡದೇ ರಸ್ತೆ ಬದಿಯ ತೆಗ್ಗಿನಲ್ಲಿ ಹೋಗಿ ಬೈಕ್ ನ್ನು ಸ್ಕೀಡ್ ಮಾಡಿಕೊಂಡು ಬಿದ್ದಿದ್ದು ಆಗ ನಾವು ಘಾಬರಿಯಾಗಿ ಹತ್ತಿರ ಹೋಗಿ ನೋಡಲಾಗಿ ಮೋ.ಸೈ ನಡೆಸುತ್ತಿದ್ದ ಮಹ್ಮದ್ ಗೌಸ್ ಇತನಿಗೆ ಗದ್ದಕ್ಕೆ, ಕೆಳ ತುಟಿಗೆ, ಬಲಗಡೆ ಮುಖಕ್ಕೆ ತೆರಚಿದ ಗಾಯ, ಎಡಗಡೆ ಕಪಾಳಕ್ಕೆ ಒಳಪೆಟ್ಟಾಗಿ ಬಾವು ಬಂದಿದ್ದು, ಬಲಗೈ ಮುಂಗೈಗೆ ಎಡಗೈ ಬೆರಳಿನ ಹತ್ತಿರ ತೆರಚಿದ ಗಾಯವಾಗಿದ್ದು ಸದರಿ ಮೋ.ಸೈ ನ ಹಿಂದೆ ಕುಳಿತಿದ್ದ  ನನ್ನ ಅಣ್ಣನಾದ ಮಹ್ಮದ ಜಾಕೀರ ಇತನನ್ನು ನೋಡಲಾಗಿ ಆತನಿಗೆ  ಹಣೆಯ ಮೇಲೆ ಭಾರಿ ರಕ್ತ ಗಾಯವಾಗಿ, ಮೂಗು ಹೊಡೆದು ಭಾರಿ ರಕ್ತ ಗಾಯವಾಗಿದ್ದು, ಎಡಗಾಲು ಹೆಬ್ಬರಳಿಗೆ ಮತ್ತು ಬಲಗೈಗೆ ಭಾರಿ ಗಾಯವಾಗಿದ್ದು ಸದರಿಯವನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
4] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 07/2017 ಕಲಂ: 379 ಐ.ಪಿ.ಸಿ:
ದಿನಾಂಕ:20-02-2017 ರಂದು 6-00 ಪಿಎಂಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ದೂರನ್ನು ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ: 19-02-2017 ರ ಸುಮಾರು ರಾತ್ರಿ 11 ಗಂಟೆಯಿಂದ ದಿನಾಂಕ: 20-02-2017 ರ ಬೆಳಗಿನ ಜಾವ 05 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು 24 ಕಂಬಗಳಲ್ಲಿಯ ಸುಮಾರು 1200 ಮೀಟರ್ ಉದ್ದದ ಅಂದಾಜು 24,000/- ರೂ. ಬೆಲೆ ಬಾಳುವ ಅಲ್ಯೂಮೀನಿಯಂ ವಾಯರ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾದ ನಿಖರ ಬೆಲೆಯನ್ನು ಬೆಲೆ ಪಟ್ಟಿಯನ್ನು ನೋಡಿ ತಿಳಿಸಲಾಗುವದು. ಕಾರಣ ಕಳ್ಳತನವಾದ ಅಲ್ಯೂಮೀನಿಯಂ ವಾಯರ್ ಹಾಗೂ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ವಗೈರೆ ವಿಷಯವಿದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
5] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 15/2017 ಕಲಂ: 353, 341, 323, 504, 186 ಸಹಿತ 34 ಐ.ಪಿ.ಸಿ:
ದಿನಾಂಕ 20-02-2017 ರಂದು ಸಂಜೆ 4-30 ಗಂಟೆಗೆ  ಫಿರ್ಯಾದಿದಾರರಾದ   ಶ್ರೀ ಉಮಾಪತಿ ಪಿಸಿ-224 ತಾವರಗೇರಾ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ಹಾಜರುಪಡಿಸಿದ್ದು, ಸಾರಾಂಶವೇನೆಂದರೆ ನಾನು ಇಂದು ದಿನಾಂಕ 20-02-2017 ರಂದು ಮದ್ಯಾಹ್ನ 2-00 ಗಂಟೆಯಿಂದ ಠಾಣಾ ಪಹರೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶ್ರೀ ಶಂಕ್ರಪ್ಪ ಮೇಟಿ ಹೆಚ್.ಸಿ-06 ರವರು ಠಾಣಾಧಿಕಾರಿ ಕರ್ತವ್ಯದ ಮೇಲಿದ್ದರು. ಹಾಗೂ ಠಾಣಾ ಬರಹಗಾರರಾದ ಶ್ರೀ ವಿರುಪಾಕ್ಷ ಪಿಸಿ-271, ಶ್ರೀ ಬಸವರಾಜ ಪಿಸಿ-72 ಶ್ರೀ ಗಂಗಾಧರರಾವ್ ಪಿಸಿ-362 ಹಾಗೂ ಎಸ್.ಬಿ ಕರ್ತವ್ಯ ನಿರ್ವಹಿಸುವ ಶ್ರೀ ತಿಮ್ಮಣ್ಣ ಪಿಸಿ-179 ರವರು ಸಹ ಠಾಣೆಯಲ್ಲಿದ್ದರು. ಮದ್ಯಾಹ್ನ 3-15 ಗಂಟೆ ಸುಮಾರಿಗೆ ನಾನು ಠಾಣಾ ಪಹರೆ ಕರ್ತವ್ಯದ ಮೇಲಿದ್ದಾಗ ಮಹಿಬೂಬಸಾಬ ತಂದೆ ರಹಿಮಾನಸಾಬ ನಾಡಗೌಡ ವಯ: 35 ವರ್ಷ. ಜಾತಿ: ಮುಸ್ಲಿಂ. ಉ: ಒಕ್ಕಲುತನ. ಸಾ: ವಿದ್ಯಾನಗರ ತಾವರಗೇರಾ ಹಾಗೂ ರಾಜಾನಾಯಕ ತಂದೆ ಖಾಜಾನಾಯಕ ನಾಯಕ. ವಯ: 47 ವರ್ಷ. ಜಾತಿ: ಮುಸ್ಲಿಂ. ಉ: ವ್ಯಾಪಾರ. ಸಾ: ತಾವರಗೇರಾ. ರವರು ಠಾಣೆಗೆ ಬಂದಿದ್ದು ಅದರಲ್ಲಿ ಮಹಿಬೂಬಸಾಬ ನಾಡಗೌಡ ಇವರು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯವರು ತನ್ನ ಟ್ರ್ಯಾಕ್ಟರ್ನ್ನು ಲೋನ್ ಕಟ್ಟದೆ ಇದ್ದದ್ದಕ್ಕೆ ಜಪ್ತಿ ಮಾಡಲು ಬಂದಿದ್ದು ನೀವು ಬಂದು ಅವರನ್ನು ಒದೆಯಿರಿ ಎಂದು ಕೇಳಿದ್ದು ಅದೇ ವೇಳೆಗೆ ನಮ್ಮ ಪಿ.ಎಸ್.ಐ ಸಾಹೇಬರಾದ ಶ್ರೀ ಅಮರೇಶ ಹುಬ್ಬಳ್ಳಿ ರವರು ಠಾಣೆಗೆ ಬಂದಿದ್ದು ಮುಳ್ಳೂರು ಕ್ರಾಸ್ ಹತ್ತಿರ ಅಪಘಾತವಾಗಿದೆ ಬೇಗನೇ ಹೋಗೊಣ ಬನ್ನಿ ಅಂತಾ ಹೇಳುತ್ತಿದ್ದಾಗ ಮಹಿಬೂಬಸಾಬ ನಾಡಗೌಡ ಮತ್ತು ರಾಜಾನಾಯಕ ನಾಯಕ ರವರು ಸೇರಿ ಇಬ್ಬರೂ ಏರು ಧ್ವನಿಯಲ್ಲಿ ನಿವೇನು ಪೊಲೀಸ್ ಕೆಲಸ ಮಾಡುತ್ತಿದ್ದಿರಾ ಇಲ್ಲ ಬೇರೆ ಕೆಲಸ ಮಾಡುತ್ತಿರಾ. ಎಂದಾಗ ಸಾಹೇಬರು ಅವರಿಗೆ ಕೂಳಿತುಕೊಳ್ಳಿ ಮುಳ್ಳೂರು ಕ್ರಾಸ್ ಹತ್ತಿರ ಅಪಘಾತವಾಗಿದೆ ಹೋಗಿ ಬಂದ ನಂತರ ನಿಮ್ಮ ಸಮಸ್ಯೆ ಬಗ್ಗೆ ವಿಚಾರ ಮಾಡೋಣ ಅಂತಾ ಹೇಳಿದಾಗ ಮಹಿಬೂಬಸಾಬ ನಾಡಗೌಡ ಮತ್ತು ರಾಜಾನಾಯಕ ನಾಯಕ ಇವರಿಬ್ಬರೂ ಬೇಗನೆ ಬಂದು ನಮ್ಮ ಟ್ರ್ಯಾಕ್ಟರ್ ಬಿಡಿಸಿ ಕೊಡುತ್ತಿರೋ ಇಲ್ಲವೋ? ಅಂತಾ ಜೋರಾಗಿ ವದರಾಡುತ್ತಿರುವಾಗ, ಆಗ ನಾನು ಮತ್ತು ಹೆಚ್.ಸಿ-06, ಪಿ.ಸಿ-271, ಪಿ.ಸಿ-72, ಪಿ.ಸಿ-362, ಹಾಗೂ ಪಿಸಿ-179 ರವರು ಅವರನ್ನು ಕೂಡಿಸಲು ಹೋದಾಗ ಅವರು ನನ್ನ ಎದೆಯ ಮೇಲಿನ ಸಮವಸ್ತ್ರ ಹಿಡಿದು ಎಳೆದಾಡಿ ಇಬ್ಬರು ತಮ್ಮ ಕೈಗಳಿಂದ ನನ್ನ ಕಪಾಳಕ್ಕೆ ಹೊಡೆದು, ಪೊಲೀಸರು ಏನು ಸೆಂಟಾ ಮಾಡುತ್ತಾರೆ ನೋಡುತ್ತೆವೆ ಅಂತಾ ಮುಂತಾಗಿ ಅವಾಚ್ಯ ಶಬ್ದಗಳಿಂದ ಬೈದಾಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
6] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 25/2017 ಕಲಂ: 366 ಹಾಗೂ 34 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:.

ದಿನಾಂಕ 20-02-2017 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ಗಂಗಾವತಿ ನಗರದ ಶಿವೆ ಟಾಕೀಜ ಹತ್ತಿರದಿಂದ ಗಾಂಧಿನಗರದಲ್ಲಿರುವ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಆರೋಪಿತರಾದ (01) ಪ್ರಕಾಶ ಮತ್ತು (02) ಹನುಮೇಶ  ಇವರು ಒಂದು ಮೋಟಾರ ಸೈಕಲ್ ನಡೆಸಿಕೊಂಡು ಬಂದು ಫಿರ್ಯಾದಿದಾರಳ ಹತ್ತಿರ ನಿಲ್ಲಿಸಿ ಮಾತನಾಡಿಸಿದ್ದು ಫಿರ್ಯಾದಿದಾರಳು ಮಾತನಾಡದಿದ್ದಕ್ಕೆ ಮೋಟಾರ ಸೈಕಲ್ ದಲ್ಲಿ ಹಿಂದೆ ಕುಳಿತಿದ್ದವನು ವಾಹನದಿಂದ ಕೆಳಗೆ ಇಳಿದು ಫಿರ್ಯಾದಿದಾರಳಿಗೆ  ಹಿಡಿದುಕೊಂಡು ಮೋಟಾರ ಸೈಕಲ್ ಮೇಲೆ ಕೂಡಿಸಲು ಫಿರ್ಯಾದಿದಾರಳು ಚೀರಾಡುತ್ತಿರುವಾಗ ಅವಳ ಬಾಯಿಯನ್ನು ಮುಚ್ಚಿ ಮೋಟಾರ ಸೈಕಲ್ ಮೇಲೆ ಕೂಡಿಸಿ ತಾನು ಹಿಂದೆ ಕುಳಿತುಕೊಂಡಿದ್ದು, ನಂತರ ಆನೇಗುಂದಿ ಕಡೆಗೆ ಕರೆದುಕೊಂಡು ಹೋಗುತ್ತಿರುವಾಗ ಬಂಡಿ ಬಸಪ್ಪ ಕ್ಯಾಂಪ್ ಹತ್ತಿರ ಫಿರ್ಯಾದಿದಾರಳು ಚೀರಾಡಿ ಅಳುತ್ತಿರುವುದನ್ನು ನೋಡಿ ರಸ್ತೆಯ ಮೇಲೆ ನಿಂತಿದ್ದ ಒಬ್ಬ ವ್ಯಕ್ತಿಯು ಬಂದು ಮೋಟಾರ ಸೈಕಲ್ ನಿಲ್ಲಿಸಿ ವಿಚಾರಿಸಿದಾಗ  ಫಿರ್ಯಾದಿದಾರಳು ಅವರಿಗೆ ಆರೋಪಿತರು ಅಪಹರಿಸಿಕೊಂಡು ಬಂದಿರುವ ವಿಷಯ ತಿಳಿಸಿದ್ದು ಇರುತ್ತದೆ. ನಂತರ ಸದರಿ ವ್ಯಕ್ತಿಯು ಅವರಿಗೆ ಸಿಟ್ಟು ಮಾಡಿ ಮೋಟಾರ ಸೈಕಲ್ ದಿಂದ ಕೆಳಗೆ ಇಳಿಸಿ ಪೊಲೀಸರಿಗೆ ಫೋನ ಮಾಡಿದ್ದರಿಂದ ಸ್ವಲ್ಪ ಹೊತ್ತಿನ ನಂತರ ಪೊಲೀಸರು ಜೀಪ್ ತೆಗೆದುಕೊಂಡು ಹೋಗಿ ಫಿರ್ಯಾದಿದಾರಳನ್ನು ಮತ್ತು ಆರೋಪಿತರನ್ನು ಕರೆದುಕೊಂಡು ಬಂದಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008