Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, February 22, 2017

1]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 51/2017 ಕಲಂ: 87 Karnataka Police Act.
ದಿನಾಂಕ:- 21-02-2017 ರಂದು ಸಾಯಂಕಾಲ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬಟ್ಟರಹಂಚಿನಾಳ ಗ್ರಾಮ ಸೀಮಾದಲ್ಲಿ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ದಾಳಿ ಮಾಡಲು ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಹೆಚ್.ಸಿ. 32, ಪಿ.ಸಿ. ನಂ: 65, 131, 363, 354, 335, 429, 38, ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಐದು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 05 ಜನರು ಸಿಕ್ಕಿಬಿದ್ದಿದ್ದು. ವಿಚಾರಿಸಲು ಅವರು ತಮ್ಮ ಹೆಸರುಗಳು (1) ಕೆ. ಬಸವರಾಜ ತಂದೆ ಹುಚ್ಚಪ್ಪ ವಯಸ್ಸು: 25 ವರ್ಷ ಜಾತಿ: ಕುರುಬರ, ಉ: ರಾಡ ಬೈಂಡಿಂಗ್ ಸಾ: ಮಾರುತೇಶ್ವರ ನಗರ 8 ನೇ ವಾರ್ಡ ಗಂಗಾವತಿ (2) ಚಂದ್ರಶೇಖರ ತಂದೆ ಹುಸೇನಪ್ಪ ವಯಸ್ಸು: 30 ವರ್ಷ ಜಾತಿ: ಜಿಗೇರ, ಉ: ಒಕ್ಕಲತನ ಸಾ: ಬಸವೇಶ್ವರ ನಗರ, ಗಂಗಾವತಿ (3) ಅಬುಬಕರ್ ತಂದೆ ಗಲಿಸಾಬ ವಯಸ್ಸು: 27 ವರ್ಷ ಜಾತಿ: ಮುಸ್ಲಿಂ, ಉ: ಚಿಕನ್ ಅಂಗಡಿ, ಸಾ: 4ನೇ ವಾರ್ಡ ಕಿಲ್ಲಾ ಏರಿಯಾ ಗಂಗಾವತಿ (4) ಮೌಲಾಹುಸೇನ ತಂದೆ ರಹಿಮತ್ ಅಲಿ ವಯಸ್ಸು: 46 ವರ್ಷ ಜಾತಿ: ಮುಸ್ಲಿಂ, ಉ: ವೈರಿಂಗ ಕೆಲಸ ಸಾ: ಕಿಲ್ಲಾ ಏರಿಯಾ ಗಂಗಾವತಿ (5) ಶರಣಪ್ಪ ತಂದೆ ವೀರಭದ್ರಗೌಡ ವಯಸ್ಸು: 45 ವರ್ಷ ಜಾತಿ: ಲಿಂಗಾಯತ, ಉ: ಒಕ್ಕಲತನ ಸಾ:ಜಯನಗರ 4 ನೇ ಕ್ರಾಸ ಗಂಗಾವತಿ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 6,650/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಟಾವೆಲ್ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 14/2017 ಕಲಂ: 295(ಎ) ಐ.ಪಿ.ಸಿ:
ದಿನಾಂಕ: 20-02-2017 ರ ರಾತ್ರಿ 11-50 ರಿಂದ ದಿನಾಂಕ; 21-02-2017 ರ ಬೆಳಗಿನ 06-00 ಗಂಟೆಯ ಮಧ್ಯದ ಅವಧಿಯಲ್ಲಿ ಯಲಬುರ್ಗಾ ಪಟ್ಟಣದಲ್ಲ ಬರುವ ಶಾದಿಮಹಲ ಹತ್ತಿರ ಯಲಬುರ್ಗಾ–ಬಂಡಿ ರಸ್ತೆಯ ಪಶ್ಚಿಮ ಭಾಗದಲ್ಲಿರುವ ಟಿಪ್ಪುಸುಲ್ತಾನ ಸರ್ಕಲದಲ್ಲಿ ಯಾರೋ ದುಷ್ಕರ್ಮಿಗಳು ಸುಟ್ಟ ಕಪ್ಪು ಆಯಿಲ/ಕಪ್ಪು ಬಣ್ಣವನ್ನು ಟಿಪ್ಪು ಸುಲ್ತಾನ ಭಾವಚಿತ್ರಕ್ಕೆ ಸುರುವಿ ಮತೀಯ ನಂಬಿಕೆಗಳನ್ನು ಅವಮಾನಗೊಳಿಸಿ, ಮತೀಯ ಭಾವನೆಗಳಿಗೆ ಧಕ್ಕೆ ಉಂಟುಮಾಡುವ  ಉದ್ದೇಶದಿಂದ ಈ ಕೃತ್ಯ ಮಾಡಿರುತ್ತಾರೆ ಸದರಿ ದುಷ್ಕರ್ಮಿಗಳು ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶವಿದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡ್ಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 36/2017 ಕಲಂ: 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ 21-02-2017 ರಂದು 6-50 ಪಿ.ಎಂ.ಕ್ಕೆ. ಪಿರ್ಯಾದುದಾರರು ಠಾಣೆಗೆ ಬಂದು ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ,  ಗಾಯಾಳು ಯಮನಮ್ಮ ಗಂಡ ನಿಂಗಪ್ಪ ಗಾಳಿ ವಯ: 50 ವರ್ಷ ಮತ್ತು  ಶರಣಪ್ಪ ತಂದೆ ಬಸಪ್ಪ ಗಾಳಿ ಇವರು ದಿನಾಂಕ: 19-02-2017 ರಂದು 4-30 ಎ.ಎಂ. ಸುಮಾರಿಗೆ ಎನ್.ಎಚ್.ಹೊಸೂರು ಬಿಟ್ಟು 5-30 ಎ.ಎಂ. ಸುಮಾರಿಗೆ ಎನ್.ಎಚ್-50 ರಸ್ತೆಯಲ್ಲಿ ವಣಬಳ್ಳಾರಿ ಕ್ರಾಸ್ ಹತ್ತಿರ ಬಳ್ಳಾರಿ ಜಿಲ್ಲೆ ಕೊಟ್ಟೂರು ಬಸವೇಶ್ವರ ಜಾತ್ರೆಗೆಂದು ಪಾದಯಾತ್ರೆ ಮಾಡಿಕೊಂಡು ಹೊರಟಿದ್ದು, ಆ ಸಮಯದಲ್ಲಿ ಕುಷ್ಟಗಿ ಕಡೆಯಿಂದ ಹೊಸಪೇಟೆ ಕಡೆಗೆ ಯಾವುದೋ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮುಂದೆ ಹೊರಟಿದ್ದು ಗಾಯಾಳು ಯಮನಮ್ಮಳಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಲಾರಿಯನ್ನು ನಿಲ್ಲಸದೇ ಹೋಗಿರುತ್ತಾನೆ.  ಲಾರಿ ನಂಬರ ಮತ್ತು ಚಾಲಕನ ಹೆಸರು ತಿಳಿದಿರುವುದಿಲ್ಲ.  ಈ ಅಪಘಾತದಲ್ಲಿ ಯಮನಮ್ಮಳ ಎಡಗಾಲ ಮೊಣಕಾಲ ಕೆಳಗೆ ಭಾರಿ ರಕ್ತಗಾಯ, ತಲೆಗೆ ರಕ್ತಗಾಯ ಮತ್ತು ಎಡಗೈ ರಕ್ತಗಾಯವಾಗಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.   
4] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 09/2017 ಕಲಂ: 279, 337 ಐ.ಪಿ.ಸಿ:.


ದಿನಾಂಕ: 20-02-2017 ರಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ಕುಷ್ಠಗಿ-ಕೊಪ್ಪಳ ರಸ್ತೆಯ ಮೇಲೆ ಬೇವೂರ ಸೀಮಾದಲ್ಲ್ಲಿ ಆರೋಪಿತನು ತಾನು ನಡೆಸುತ್ತಿದ್ದ ಕಾರ್ ನಂ: PÉ.J-37 JªÀÄ-7543 ನೇದ್ದನ್ನು ಕುಷ್ಟಗಿ ಕಡೆಯಿಂದ ಕೊಪ್ಪಳ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು  ತನ್ನ ಕಾರಿನ ಮೇಲೆ ನಿಯಂತ್ರಣ ಸಾದಿಸದೆ ಒಮ್ಮಿಂದೊಮ್ಮೆಲೆ ರಸ್ತೆಯ ಬಲಕ್ಕೆ ಬಂದು ಬೆವಿನ ಮರಕ್ಕೆ ಬಲವಾಗಿ ಟಕ್ಕರ್ಕೊಟ್ಟು ಅಪಘಾತ ಮಾಡಿದ್ದರಿಂದ ಟಕ್ಕರ್ಕೊಟ್ಟ ರಬಸಕ್ಕೆ ಕಾರ್ ಎಡಮಗ್ಗಲಾಗಿ ಪಲ್ಟಿಯಾಗಿ ಬಿದ್ದಿದ್ದು ಇರುತ್ತದೆ ಸದರಿ ಅಪಘಾತದಲ್ಲಿ ಆರೋಪಿತನಿಗೆ ಸಾದಾ ಸ್ವರೂಪದ ಗಾಯವಾಗಿವೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008