1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 40/2017, ಕಲಂ: 279, 337 ಐಪಿಸಿ 187 ಐ.ಎಂ.ವಿ ಕಾಯ್ದೆ.
ದಿನಾಂಕ: 27-02-2017
ರಂದು ರಾತ್ರಿ 11-30 ಗಂಟೆ ಸುಮಾರಿಗೆ ಪಿರ್ಯಾದಿದಾರರು, ಗಾಯಾಳು ಹಾಗೂ ಸಾಕ್ಷಿದಾರರು ತಮ್ಮ ತಮ್ಮ ಮೋಟರ ಸೈಕಲಗಳ ಮೇಲೆ
ಹಿಟ್ನಾಳದಿಂದ ಹೊಸಪೇಟಗೆ ಎನ್.ಎಚ್-50 ರಸ್ತೆಯಲ್ಲಿ ನ್ಯೂ ಜೈ ಹಿಂದ ಹೊಟೆಲ್ ಹತ್ತಿರ ಹೋಗುತ್ತಿರುವಾಗ ಹಿಂದಿನಿಂದ ಆರೋಪಿತನು ತನ್ನ
ಟಿಪ್ಪರ ಲಾರಿ ನಂ. ಜಿಎ-09/ಯು-2286 ನೇದನ್ನು ಹೊಸಪೇಟೆಗೆ ಕಡೆಗೆ ಅತೀ ವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಪಿರ್ಯಾದಿದಾರರ ಮೋಟರ ಸೈಕಲಗೆ ಡಿಕ್ಕಿ
ಪಡಿಸಿದ್ದರಿಂದ ಪಿರ್ಯಾದಿದಾರರ ಮೋಟರ ಸೈಕಲ್ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಗಾಯಾಳುವಿನ
ಮೋಟರ ಸೈಕಲಗೆ ಟಚ್ ಆಗಿದ್ದರಿಂದ ಪಿರ್ಯಾದಿದಾರರು ಮತ್ತು ಗಾಯಾಳು ಪ್ರಸನ್ನ ಇಬ್ಬರಿಗೂ ಗಾಯ
ಪೆಟ್ಟುಗಳಾಗಿರುತ್ತವೆ. ಪ್ರಕರಣ ದಾಖಲಾಗಿರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 11/2017
ಕಲಂ: 279, 337, 338 ಐ.ಪಿ.ಸಿ:.
ದಿನಾಂಕ: 26-02-2017 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ಮರ್ಕಟ್-ಚಿಕ್ಕಮನ್ನಾಪೂರ ರಸ್ತೆಯ ಮೇಲೆ ಮರ್ಕಟ್ ಸೀಮಾದಲ್ಲ್ಲಿ ಆರೋಪಿತನು ತಾನು ನಡೆಸುತ್ತಿದ್ದ ತನ್ನ ಮೋಟಾರ್ ಸೈಕಲ್ ನಂ: KA-37 EB-9182 ನೇದ್ದರಲ್ಲಿ ಇನ್ನಿಬ್ಬರಾದ ಯಮನೂರ ಮತ್ತು ಪರಶುರಾಮ್ ಎಂಬುವರನ್ನು ಕೂಡಿಸಿಕೊಂಡು ಮರ್ಕಟ್ ಕಡೆಯಿಂದ ಚಿಕ್ಕಮನ್ನಾಪೂರ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ನಡೆಸಿಕೊಂಡು ಹೋಗಿ ಮುಂದೆ ಹೊರಟಿದ್ದ ಸೈಕಲ್ ಸವಾರ ಮನೋಜ ಇವನ ಸೈಕಲ್ಗೆ ಹಿಂದಿನಿಂದ ಬಲವಾಗಿ ಟಕ್ಕರ್ಕೊಟ್ಟು ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಮನೋಜ ಇವನಿಗೆ ಭಾರಿ ಸ್ವರೂಪದ ಗಾಯವಾಗಿದ್ದು ಮತ್ತು ಅಪಘಾತ ಮಾಡಿದ ಆರೋಪಿತನಿಗೆ ಮತ್ತು ಇವನ ಹಿಂದೆ ಕುಳಿತಿದ್ದ ಯಮನೂರ ಮತ್ತು ಪರಶುರಾಮ್ ಇವರಿಬ್ಬರಿಗೂ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತವೆ. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 54/2017 ಕಲಂ: 143, 147, 448, 323, 427, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:- 01-03-2017 ರಂದು ರಾತ್ರಿ 8:30 ಗಂಟೆಗೆ ಫಿರ್ಯಾದಿದಾರರಾದ ರಮೇಶ ತಂದೆ ಯಲ್ಲಪ್ಪ ಹರಶಿಣಗಿ, ವಯಸ್ಸು 38 ವರ್ಷ, ದಿನಾಂಕ:- 01-03-2017 ರಂದು ನಾನು ನನ್ನ ಮನೆಯ ಮುಂದೆ ಶೌಚಾಲಯವನ್ನು ಕಟ್ಟಿಕೊಳ್ಳುತ್ತಿರುವಾಗ ಸಂಜೆ 5:30 ಗಂಟೆಯ ಸುಮಾರಿಗೆ (1) ಶ್ರೀಮತಿ ಜ್ಯೋತಿ ಗಂಡ ಹನುಮಂತ, ಮಾದಿಗ, 35 ವರ್ಷ, ಗ್ರಾ.ಪಂ.ಸದಸ್ಯರು ಸಾ: ಶ್ರೀರಾಮನಗರ (2) ಹನುಮಂತ ತಂದೆ ಕರಿಯಪ್ಪ, 40 ವರ್ಷ, (3) ಮಾದೇವ ತಂದೆ ಕರಿಯಪ್ಪ, 30 ವರ್ಷ, (4) ಸೊಂಡಿ ದುರಗಪ್ಪ ತಂದೆ ಸಣ್ಣ ಮರಿಯಪ್ಪ, 35 ವರ್ಷ (5) ಶಿವ ತಂದೆ ಸಣ್ಣ ಮರಿಯಪ್ಪ, 30 ವರ್ಷ, (6) ದುರಗಪ್ಪ ತಂದೆ ದೊಡ್ಡ ಮರಿಯಪ್ಪ, 35 ವರ್ಷ (7) ಭೀಮಪ್ಪ ತಂದೆ ಸಾಬಣ್ಣ, 28 ವರ್ಷ (8) ಸಂಗಮೇಶ ತಂದೆ ದೊಡ್ಡ ಹನುಮಂತ, 25 ವರ್ಷ ಎಲ್ಲರೂ ಜಾತಿ: ಮಾದಿಗ ಸಾ: ಶ್ರೀರಾಮನಗರ ಇವರುಗಳು ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಕೂಡಿಕೊಂಡು ಬಂದು ನನಗೆ “ ಲೇ ಸೂಳೇ ಮಗನೇ ನೀನು ಇಲ್ಲಿ ಯಾಕೆ ಶೌಚಾಲಯ ಕಟ್ಟುತ್ತೀಯಾ, ನೀನು ಈ ಜಾಗೆ ಖಾಲಿ ಮಾಡಿಕೊಂಡು ಹೋಗು ಇಲ್ಲದಿದ್ದರೆ ನಾವೇ ಈ ಮನೆಯನ್ನು ಕಿತ್ತಿ ಹಾಕುತ್ತೇವೆ ” ಅಂತಾ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದು ನನಗೆ ಕೈಗಳಿಂದ ಹೊಡಿ-ಬಡಿ ಮಾಡಿ ಕಾಲಿನಿಂದ ಒದ್ದರು. ಆಗ ಬಿಡಿಸಲು ಬಂದ ನನ್ನ ತಮ್ಮನಾದ ದುರುಗೇಶ-35 ವರ್ಷ ಈತನಿಗೂ ಸಹ ಎಲ್ಲರೂ ಸೇರಿ ಕೈಗಳಿಂದ ಹೊಡಿ-ಬಡಿ ಮಾಡಿ ಕಾಲಿನಿಂದ ಒದ್ದರು. ಇದರಿಂದ ನಮ್ಮಿಬ್ಬರಿಗೂ ಒಳಪೆಟ್ಟಾಗಿರುತ್ತವೆ.
ನಂತರ ಅವರು ನನ್ನ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ನನ್ನ ಶೆಡ್ಡನ ಸುತ್ತಲಿನ ಮೂರು ಭಾಗಗಳನ್ನು ಕಿತ್ತಿ ಹಾಕಿ ಸುಮಾರು 10,000-00 ರೂ.
ಗಳಷ್ಟು ಲುಕ್ಷಾನ್ ಮಾಡಿರುತ್ತಾರೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment