1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 48/2017,
ಕಲಂ: 279, 304(ಎ) ಐಪಿಸಿ :.
ದಿನಾಂಕ : 02-03-2017 ರಂದು ಮುಂಜಾನೆ 06-30 ಗಂಟೆಯ ಸುಮಾರಿಗೆ
ನಮ್ಮೂರ ಫಕೀರಪ್ಪ ತಂದೆ ಮುತ್ತಪ್ಪ ಪೂಜಾರ ಈತನಿಗೆ ಪ್ಲಾಟೀನ ಮೋಟಾರ ಸೈಕಲ್ ನಂ :
K.A-26-X-4079 ಮೋಟಾರ ಸೈಕಲ ಕೊಟ್ಟು ಹಿರೇಬನ್ನಿಗೋಳದಲ್ಲಿ ಇರುವ ನನ್ನ ತಂಗಿಯಾದ ಗೌರಮ್ಮಳನ್ನು
ದುರಗಮ್ಮ ಜಾತ್ರೆಯ ಹಬ್ಬಕ್ಕಾಗಿ ಕರೆದುಕೊಂಡು ಬರುವಂತೆ ಹೇಳಿ ಕಳುಹಿಸಿದ್ದು ಇರುತ್ತದೆ. ನಂತರ ನನಗೆ
ಇಂದು ಮುಂಜಾನೆ 08-30 ಗಂಟೆಯ ಸುಮಾರಿಗೆ. ನಿಮ್ಮ ತಂಗಿ ಗೌರಮ್ಮಳು ಮೋಟಾರ ಸೈಕಲ್ ಅಪಘಾತದಿಂದ ಮೃತಪಟ್ಟಿರುತ್ತಾಳೆ.
ಆಕೆಯನ್ನು ಆಸ್ಪತ್ರೆಯಲ್ಲಿ ತಂದು ಹಾಕಿರುತ್ತಾರೆ ಅಂತಾ ಸುದ್ದಿ ಗೊತ್ತಾಗಿ ಕೂಡಲೇ ನಾನು ಸರಕಾರಿ
ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಿರುತ್ತದೆ. ಸದರಿ ನಮ್ಮ ಸಂಬಂದಿಕ ಪಕೀರಪ್ಪ ಪೂಜಾರ ಈತನು
ಮೋಟಾರ ಸೈಕಲ್ ನಂ : K.A-26-X-4079 ನೇದ್ದನ್ನು ತೆಗೆದುಕೊಂಡು ಹಿರೇಬನ್ನಿಗೋಳದಿಂದ ಬೆನಕನಾಳಗೆ
ಕುಷ್ಟಗಿ-ಗಜೇಂದ್ರಗಡಾ ರಸ್ತೆಯ ಮೇಲೆ ಕನಕೊಪ್ಪ ಕ್ರಾಸ್ ಹತ್ತಿರ ಮುಂಜಾನೆ 08-00 ಗಂಟೆಯ ಸುಮಾರಿಗೆ
ಮೋಟಾರ ಸೈಕಲ್ ನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದರಿಂದ ಹಿಂದೆ ಕುಳಿತ
ನಮ್ಮ ತಂಗಿ ಗೌರಮ್ಮಳು ಪುಟಿದು ಬಿದ್ದು ಅಪಘಾತವಾಗಿದ್ದು ಸದರಿ ಅಪಘಾತದಿಂದ ತಲೆಯ ಹಿಂದುಗಡೆ ಭಾರಿ
ರಕ್ತಗಾಯ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 55/2017 ಕಲಂ: 279, 304(ಎ) ಐ.ಪಿ.ಸಿ:.
ದಿನಾಂಕ: 02-03-2017 ರಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ಫಿರ್ಯಾದಿ ಮನೆಯಲ್ಲಿರುವಾಗ
ನಮ್ಮ ಅಣ್ಣನಾದ ಚೆನ್ನಬಸವ ಈತನು ತನ್ನ ಶಾಲೆಯ ವಾಹನವನ್ನು ತಗೆದುಕೊಂಡು ಮನೆಗೆ ಬಂದಿದ್ದು ನಮ್ಮ ಅಣ್ಣನ
ಮಕ್ಕಳು ಇಬ್ಬರೂ ಮನೆಯ ಮುಂಭಾಗ ರಸ್ತೆಯ ಪಕ್ಕದಲ್ಲಿ ಆಟ ಆಡುತ್ತಿದ್ದರು. ನಂತರ ಮಧ್ಯಾಹ್ನ 1:35 ಗಂಟೆಯ
ಸುಮಾರಿಗೆ ನನ್ನ ಅಣ್ಣನ ಹೆಂಡತಿ ಚೀರಾಡಿದ್ದನ್ನು ಕಂಡು ನಾನು ಹೊರಗೆ ಬಂದು ನೋಡಲು ನನ್ನ ಅಣ್ಣನು
ತನ್ನ ವಾಹನವನ್ನು ಪುನ: ಶಾಲೆಗೆ ಹೋಗಲು ತನ್ನ ವಾಹನವನ್ನು ವೇಗವಾಗಿ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ
ಹಿಂಭಾಗ ನಡೆಯಿಸಿದ್ದರಿಂದ ರಸ್ತೆಯಲ್ಲಿ ಆಟ ಆಡುತ್ತಿದ್ದ ನನ್ನ ಅಣ್ಣನ ಮಗನಾದ ನಿರಂಜನ ಈತನಿಗೆ ಟಕ್ಕರು
ಕೊಟ್ಟು ಅಪಘಾತ ಮಾಡಿದ್ದರಿಂದ ವಾಹನದ ಹಿಂಭಾಗದ ಬಲಗಡೆ ಗಾಲಿ ತಲೆ ಮೇಲೆ ಹಾಯ್ದು ತೀವ್ರವಾಗಿ ಗಾಯಗೊಂಡು
ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನಂತರ ನಾನು ಮತ್ತು ನನ್ನ ಅಣ್ಣನ ಹೆಂಡತಿ ವೇದವತಿ ಮತ್ತು ರಸ್ತೆಯಲ್ಲಿ
ಇದ್ದ ವಿ. ಜೀವಪ್ರಕಾಶ ಎಲ್ಲರೂ ಸೇರಿ ಮೃತದೇಹವನ್ನು ಹೊರಗಡೆ ತಗೆದಿದ್ದು ಇರುತ್ತದೆ. ನಮ್ಮ ಅಣ್ಣನು
ನಡೆಸುತ್ತಿದ್ದ ವಾಹನದ ನಂಬರ್ ನೋಡಲು ಕೆ.ಎ-37/ಎ-7324 ಅಂತಾ ಇರುತ್ತದೆ. ನಂತರ ಶವವನ್ನು ಯಾವುದೋ
ಒಂದು ಅಟೋದಲ್ಲಿ ತಗೆದುಕೊಂಡು ಗಂಗಾವತಿ ಉಪವಿಭಾಗ ಆಸ್ಪತ್ರೆಯ ಶವಾಗಾರ ಕೋಣೆಗೆ ತಂದು ಹಾಕಿ ಠಾಣೆಗೆ
ಬಂದು ಈ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ. ನನ್ನ ಅಣ್ಣನಾದ ಚೆನ್ನಬಸವ ಈತನು ತನ್ನ ಶಾಲಾ ವಾಹನ
ನಂ: ಕೆ.ಎ-37/ಎ-7324 ನೇದ್ದನ್ನು ಮನೆಯ ಮುಂಭಾಗ ಇರುವ ರಸ್ತೆಯಲ್ಲಿ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ
ಹಿಂಭಾಗಕ್ಕೆ ನಡೆಯಿಸಿ ರಸ್ತೆಯಲ್ಲಿ ಆಟ ಆಡುತ್ತಿದ್ದ ಕುಮಾರ ನಿರಂಜನ ಈತನಿಗೆ ಟಕ್ಕರು ಕೊಟ್ಟು ಅಪಘಾತ
ಪಡಿಸಿದ್ದರಿಂದ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 18/2017 ಕಲಂ: 87 Karnataka Police Act.
ದಿನಾಂಕ 02-03-2017 ರಂದು ಸಂಜೆ 4-00 ಗಂಟೆಯಿಂದ 5-00 ಗಂಟೆಯ ಅವಧಿಯಲ್ಲಿ ಠಾಣಾ ವ್ಯಾಪ್ತಿಯ
ಬಸರಿಹಾಳ ಸೀಮಾದ ಹಳ್ಳದ ದಂಡೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಅಂದರ-ಬಾಹರ
ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ಪೊಲೀಸ್ರು ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲಾಗಿ, ಜೂಜಾಟ
ಆಡುತ್ತಿದ್ದವರ ಪೈಕಿ 6 ಜನರು ಓಡಿ ಹೋಗಿದ್ದು ಉಳಿದ 4 ಜನರು ಸಿಕ್ಕಿದ್ದು, ಸದರಿ 4 ಜನರನ್ನು ಹಾಗೂ
ಜೂಜಾಟಕ್ಕೆ ಉಪಯೋಗಿಸಿದ ಒಟ್ಟು ಹಣ ರೂ.1230=00 ಗಳನ್ನು ಮತ್ತು ಜೂಜಾಟಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನು
ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
4] ಗಂಗಾವತಿ ನಗರ ಪೊಲೀಸ್ ಠಾಣೆ
ಗುನ್ನೆ ನಂ: 30/2017 ಕಲಂ: 143, 147, 323, 324, 341, 504 ಸಹಿತ 149 ಐ.ಪಿ.ಸಿ
ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ 1989.
ದಿನಾಂಕ: 02-03-2017 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಫಿರ್ಯಾದಿ ಗುಳಗಿಯನ್ನು ತರಲು ಜುಲೈ ನಗರಕ್ಕೆ ಬಂದು ಔಷದಿ ಅಂಗಡಿಯಲ್ಲಿ
ಗುಳಿಗೆಯನ್ನು ತೆಗೆದುಕೊಂಡು ಅಲ್ಲಯೇ ಪಕ್ಕದಲ್ಲಿದ್ದ ಚೇತನ್ ರೇಸ್ಟೋರೆಂಟಿನಲ್ಲಿ ಹೋಗಿ
ಗುಳಿಗೆಯನ್ನು ತೆಗೆದುಕೊಂಡು ನೀರನ್ನು ಕುಡಿದು ವಾಪಸ್ಸು ಹೋರಗೆ ಬರುತ್ತಿರಲು ರೂಮಿನಲ್ಲಿ ಕೆಲವು
ಜನರು ಕುಳಿತು ಊಟಮಾಡುತ್ತಿರಲು ನಾನು ಪದರಿಯನ್ನು ಏತ್ತಿ ನೋಡಲು ಅಲ್ಲಿ ಫಿರ್ಯಾದಿಗೆ ಪರಿಚಯವಿದ್ದ ಆರೋಪಿತರಾದ ನಾಯಕ ಜನಾಂಗದ ಅಂಜೀ @ ಅಂಜನೇಯಾ, ಮತ್ತು ಅಟೋ ಚಾಲಕ ಶೇಕ್ಷಾವಲಿ, ಟೈಲ್ಸ್ ಕೆಲಸ ಮಾಡುವ ರಾಜಾ, ಮುರಾರಿ ಕ್ಯಾಂಪಿನ ಬಾಷ ಮತ್ತು ಗೋವಿಂದ, ಇವರುಗಳು ಫಿರ್ಯಾದಿಗೆ ಜಾತಿ ನಿಂದನೆ
ಮಾಡಿ ಫಿರ್ಯಾದಿಯು ಅವರಿಗೆ ನಾನೇನು ಮಾಡಿನಿ ನಮ್ಮ ಹುಡುಗರು ಯಾರಾದರು ಇದ್ದಾರೆಂದು ನೋಡಿದ್ದಿನಿ ಅಂತಾ ಹೇಳಿ
ರೆಸ್ಟೊರೆಂಟಿನಿಂದ ಹೋರಗೆ ಬಂದು ಮನೆಯ ಕಡೆಗೆ ಹೋಗುತ್ತಿರಲು ಊಟಕ್ಕೆ ಕುಳಿತ್ತಿದ್ದ ಆರೋಪಿತರೆಲ್ಲರು ಸೇರಿ ಅಕ್ರಮ ಕೂಟವನ್ನು ರಚಿಸಿಕೊಂಡು ಬಂದವರೇ ಲೇ ಭಜಂತ್ರಿ ಸೋಳೆ ಮಗನೆ ನಾವು ಊಟಕ್ಕೆ
ಕುಳಿತಾಗ ನಮಗೆ ನೋಡುತ್ತಿಯಾ ಅಂತಾ ಅಂದವರೇ ಫಿರ್ಯಾದಿಗೆ ತಡೆದು ನೀಲಲ್ಲೇ ಸೋಳೆ ಮಗನೆ ಅಂತಾ ಅಂದವರೆ ಎಲ್ಲರೂ ಫಿರ್ಯಾದಿಗೆ ಕಾಲುಗಳಿಂದ ತೋಡೆಯ ಹತ್ತಿರ ಬೆನ್ನಿಗೆ ಒದ್ದರು ಅಂಜಿಯು ಕೈಗಳಿಂದ ಮುಷ್ಟಿ ಮಾಡಿ ಮುಖಕ್ಕೆ ಗುದ್ದಿದ್ದು ಎಡ ತುಟಿಯ
ಹತ್ತಿರ ಪೇಟ್ಟಾಗಿ ರಕ್ತ ಬಂದಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment