Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, March 4, 2017

1]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 41/2017, ಕಲಂ: 279, 337, 338, 304(ಎ) ಐಪಿಸಿ :.
ದಿ:04-02-17 ರಂದು 00-50 ಎ.ಎಮ್ ಕ್ಕೆ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಸ್ವೀಕೃತವಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಯಮನೂರಪ್ಪ ಎಮ್ಮೆರ. ಸಾ:ಇಂದರಗಿ ತಾ:ಜಿ:ಕೊಪ್ಪಳ. ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ದಿ:03-03-2017 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಕಿಡದಾಳ ಗ್ರಾಮದ ಹನುಮಂತಪ್ಪ ಜಲವರ್ಧೀನಿ ಬೋರವೆಲ್ ಲಾರಿಯಲ್ಲಿ ಮುದ್ದಾಬಳ್ಳಿ ಸೀಮಾದಲ್ಲಿ ಬೋರ ಹಾಕುವ ಕೂಲಿಕೆಲಸಕ್ಕೆ ಅಂತಾ ಲಾರಿ ನಂ: ಕೆಎ-37/ಎ-2620 ನೇದ್ದರಲ್ಲಿ ತಾನೂ ಮತ್ತು ಇತರೆ ಕೂಲಿಜನರು ಕುಳಿತುಕೊಂಡು ಬಿ.ಹೊಸಳ್ಳಿ ದಾಟಿ ಹ್ಯಾಟಿ ರಸ್ತೆಯ ರಾಜಾಸಾಬ ಇವರ ಹೊಲದ ಹತ್ತಿರ ಹೊರಟಿದ್ದಾಗ, ಸದರ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಹೋಗುವಾಗ ರಸ್ತೆ ತಿರುವನ್ನು ಗಮನಿಸದೇ ಮತ್ತು ವಾಹನ ನಿಯಂತ್ರಿಸದೇ ರಸ್ತೆಯ ಬಾಜು ಪಲ್ಟಿ ಮಾಡಿದ್ದರಿಂದ ಸದರಿ ಲಾರಿಯಲ್ಲಿದ್ದ ಫಿರ್ಯಾದಿ ಮತ್ತು ಇತರೆ ಕೂಲಿಕಾರರಾದ, ಬಾಬು, ಲಚಮ, ಸುರೇಶ, ಮಂಗಲು, ರಾಜೇಶ ಇವರಿಗೆ ಸಾಧಾ ಮತ್ತು ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ. ಮತ್ತು ಇನ್ನೋರ್ವ ಕೂಲಿಕಾರ ಗುಡದಪ್ಪ ಕುರಿ ಇತನಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಅಪಘಾತ ಮಾಡಿದ ಲಾರಿ ನಂ: ಕೆಎ-37/ಎ-2620 ನೇದ್ದರ ಚಾಲಕ ಚನ್ನಪ್ಪ @ ಚನ್ನನಗೌಡ ಗೌಡರ. ಸಾ:ಕೌಜಗನೂರ. ತಾ: ಹುನಗುಂದ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಹೇಳಿಕೆ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2]  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 26/2017 ಕಲಂ: 341, 353, 504, 506, 384, 511 ಸಹಿತ 34 ಐ.ಪಿ.ಸಿ:.

ದಿನಾಂಕ: 03-03-2017 ರಂದು ಸಂಜೆ 07-30 ಗಂಟೆಗೆ ಫಿರ್ಯಾದಿ ಕನಕಪ್ಪ ಜೀರಾಳ ಪರಿಚಾರಕರು ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 03-03-2017 ರಂದು ಸಾಯಂಕಾಲ 4-00 ಗಂಟೆಗೆ ನಾನು ಕೊಪ್ಪಳ ಜಿಲ್ಲಾಧಿಕಾರಿಗಳ ಭವನದ ನಮ್ಮ ಕಾರ್ಯಾಲಯದಲ್ಲಿ ಕರ್ತವ್ಯದಲ್ಲಿದ್ದಾಗ ಜಿಲ್ಲಾ ಮಾದಿಗ ಯುವ ಸೇನೆ ಸಂಘಟನೆಯವರು ಅಂತಾ ಹೇಳಿಕೊಂಡು ಸಿದ್ದು ಮಣ್ಣಿನವರ ಮತ್ತು ಮಾರುತಿ ಚಾಮಲಾಪೂರ ಹಾಗೂ ಇತರರು ಸೇರಿಕೊಂಡು ಬಂದು ನಮ್ಮ ಸಾಹೇಬರಿಗೆ ಕೇಳಿದ್ದು, ಅವರು ಇಲ್ಲಾ ಅಂತಾ ಹೇಳಿದ್ದಕ್ಕೆ ನನಗೆ ತಡೆದು ನಿಲ್ಲಿಸಿ ನನ್ನ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೆ ನಮ್ಮ ಮಾಮೂಲಿ ಕೊಡುವಂತೆ ಒತ್ತಾಯ ಮಾಡಿದ್ದು, ಲೇ ಸೂಳೆ ಮಕ್ಕಳ ನಿಮ್ಮ ಆಫೀಸಿನವರು ಮಾಮೂಲಿ ಕೊಡದೇ ಹೋದರೆ ನಿಮ್ಮ ಮೇಲೆ ಕೇಸು ಮಾಡಿ ನಿಮ್ಮ ಜೀವ ಸಹಿತ ಬಿಡುವುದಿಲ್ಲ ಅಂತಾ ಪ್ರಾಣ ಬೆದರಿಕೆ ಹಾಕಿದ್ದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008