1] ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 57/2017, ಕಲಂ: 87 Karnataka Police Act.
ದಿನಾಂಕ:- 04-03-2017 ರಂದು
ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕರಾಂಪೂರ ಸೀಮಾದಲ್ಲಿ ಗುಡ್ಡದಲ್ಲಿ
ಒಂದು ಕಲ್ಲು ಬಂಡೆ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ
ಮಾಹಿತಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ.ರವರಿಗೆ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಸಾಹೇಬರು ಹಾಗೂ
ಸಿಪಿಐ ಸಾಹೇಬರ ಮಾರ್ಗದರ್ಶನದಲ್ಲಿ ದಾಳಿ ಮಾಡಲು ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ
ಹೆಚ್.ಸಿ. 177, 44, 173, ಪಿ.ಸಿ. ನಂ: 131, 237, 335, 38 ಇವರನ್ನು ಸಂಗಡ ಕರೆದುಕೊಂಡು ಚಿಕ್ಕರಾಂಪೂರ
ಗ್ರಾಮದ ಊರ ಹೊರಗೆ ಗುಡ್ಡದ ಹತ್ತಿರ ಜೀಪನ್ನು ನಿಲ್ಲಿಸಿ ಎಲ್ಲರೂ ಕೂಡಿಕೊಂಡು ನಡೆದುಕೊಂಡು ಹೋಗಿ
ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಗುಡ್ಡದಲ್ಲಿ ಒಂದು ಕಲ್ಲು ಬಂಡೆ ಕೆಳಗೆ ನೆರಳಿನಲ್ಲಿ
ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ
ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಆಗ ಸಮಯ ಮಧ್ಯಾಹ್ನ
3:30 ಗಂಟೆಯಾಗಿತ್ತು. ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ
ತೊಡಗಿದ್ದ 04
ಜನರು ಸಿಕ್ಕಿಬಿದ್ದಿದ್ದು. ವಿಚಾರಿಸಲು ಅವರು ತಮ್ಮ ಹೆಸರುಗಳು
(1)
ಪರಸಪ್ಪ ತಂದೆ ಬಸಪ್ಪ ಕಬ್ಬೇರ, ವಯಸ್ಸು: 28 ವರ್ಷ ಜಾತಿ: ಗಂಗಾಮತ, ಉ: ಕೂಲಿಕೆಲಸ ಸಾ: ಆನೆಗುಂದಿ,
(2) ಶಾಂತಾ ತಂದೆ ಭೀಮಪ್ಪ ವಯಸ್ಸು: 45 ವರ್ಷ ಜಾತಿ: ಮಾದಿಗ, ಉ: ಒಕ್ಕಲತನ ಸಾ: ಸಂಗಾಪೂರ, (3) ಜೆ.
ಶಾಂತರಾಜ ತಂದೆ ಭರಮಪ್ಪ ಜಾದು ವಯಸ್ಸು: 34 ವರ್ಷ ಜಾತಿ: ಲಿಂಗಾಯತ, ಉ: ಒಕ್ಕಲತನ ಸಾ: ಬಸವೇಶ್ವರ
ಟಾಕೀಸ್ ಹತ್ತಿರ ಕಮಲಾಪೂರ, ತಾ: ಹೊಸಪೇಟೆ, (4) ಮಂಜುನಾಥ ತಂದೆ ರಂಗನಾಥ ವಡ್ಡರ, ವಯಸ್ಸು: 22 ವರ್ಷ
ಜಾತಿ: ಭೋವಿ, ಉ: ಎಳೆನೀರು ವ್ಯಾಪಾರ, ಸಾ: ಆನೆಗುಂದಿ, ಅಂತಾ ತಿಳಿಸಿದರು. ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ
ಸ್ಥಳದಿಂದ ಜೂಜಾಟದ ನಗದು ಹಣ ರೂ. 45,250/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ
ಒಂದು ಟಾವೆಲ್ ಹಾಗೂ
ಸ್ಥಳದಲ್ಲಿದ್ದ ಮೋಟಾರ ಸೈಕಲಗಳನ್ನು ಪರಿಶೀಲಿಸಲು (1) ಕೆ.ಎ-37/ವಿ-2609 ಟಿ.ವಿ.ಎಸ್. ಸಿಟಿ ಸ್ಟಾರ್
ಸ್ಪೋಟರ್ಡ (2) ಕೆ.ಎ-17/ಇ.ಬಿ-2589 ಹಿರೋ ಹೊಂಡಾ ಸ್ಪ್ಲೆಂಡರ್ + (3) ಕೆ.ಎ-37/ಕೆ-4397 ಯಮಹ ಲಿಬ್ರರೋ
ಸಿಕ್ಕಿದ್ದು ಇರುತ್ತವೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 42/2017 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:04-03-2017 ರಂದು ಸಂಜೆ 7-00 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಭೀಮಪ್ಪ ಸಾ: ಒಣಬಳ್ಳಾರಿ. ಇವರ ಹೇಳಿಕೆ ಫಿರ್ಯಾದಿಯನ್ನು
ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ಫಿರ್ಯಾದಿದಾರರು ತನ್ನ ತಂದೆ ದುರುಗಪ್ಪ ಇವರಿಗೆ ಸಂಗಡ ಕರೆದುಕೊಂಡು ಕೊಪ್ಪಳದಲ್ಲಿ ಕೆಲಸ
ಮುಗಿಸಿಕೊಂಡು ವಾಪಾಸ್ ಊರಿಗೆ ಹೋಗಲು ತನ್ನ ಮೋಟಾರ ಸೈಕಲ್ ನಂ: ಕೆಎ-36/ಯು-3529 ನೇದ್ದರಲ್ಲಿ ಹಿಂದೆ ತನ್ನ ತಂದೆಗೆ ಕೂಡ್ರಿಸಿಕೊಂಡು ಸಂಜೆ 5-30 ಗಂಟೆಯ ಸುಮಾರಿಗೆ ಲೇಬಗೇರಿ ಕ್ರಾಸ್ ದಾಟಿ ಇರಕಲಗಡ ಕಡೆಗೆ
ಹೊರಟಿದ್ದಾಗ ಅದೇ ಸಮಯಕ್ಕೆ ತನ್ನ ಮುಂದೆ ಹೊರಟಿದ್ದ ಟ್ರ್ಯಾಕ್ಟರ ನಂ:ಕೆಎ-37/ಟಿ-6217 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಚಲಾಯಿಸಿಕೊಂಡು
ಹೋಗುವಾಗ ಯಾವುದೇ ಸೂಚನೆಗಳನ್ನು ನೀಡದೇ ಒಮ್ಮೆಲೆ ರಸ್ತೆಯ ಬಲಗಡೆ ತೆಗೆದುಕೊಂಡು ಫಿರ್ಯಾದಿದಾರರ
ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ ವಾಹನ ಬಿಟ್ಟು ಚಾಲಕನು ಓಡಿ ಹೋಗಿದ್ದು
ಇರುತ್ತದೆ. ಸದರಿ ಅಪಘಾತದಲ್ಲಿ ಫಿರ್ಯಾದಿಗೆ ಸಾದಾಗಾಯ ಹಾಗೂ ಫಿರ್ಯಾದಿಯ ತಂದೆ ದುರುಗಪ್ಪ
ಇವರಿಗೆ ಭಾರಿ ಗಾಯವಾಗಿದ್ದು ಅದೆ. ಕಾರಣ ಅಪಘಾತ ಮಾಡಿದ ಟ್ರ್ಯಾಕ್ಟರ ನಂ; ಕೆಎ-37/ಟಿ-6217 ನೇದ್ದರ ಚಾಲಕನಿಗೆ ಪತ್ತೆ
ಮಾಡಿ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment