1] ಕೊಪ್ಪಳ ನಗರ ಪೊಲೀಸ್ ಠಾಣೆ
ಯು.ಡಿ.ಆರ್. ನಂ: 04/2017, ಕಲಂ: 174 ಸಿ.ಆರ್.ಪಿ.ಸಿ:.
ದಿ: 05-03-2017 ರಂದು 12-45 ಪಿ.ಎಮ್. ಕ್ಕೆ ಫಿರ್ಯಾದಿ ಶ್ರೀಮತಿ ಅನಿತಾ @ ವೀಣಾ ಕೆಂಚಗಳ್ಳಿ
ಇವರು ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ತಂದೆ ಟಿ. ಶಶಿಧರ ಇವರು ಕೊಪ್ಪಳ ಜಿಲ್ಲಾ ಪೊಲೀಸ್ ಕಂಟ್ರೋಲ್
ರೂಮನಲ್ಲಿ ಪಿ.ಎಸ್.ಐ. ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ಈಗ್ಗೆ ಸುಮಾರು 01 ವರ್ಷದ ಹಿಂದೆ ಅವರ
ಮಗ ಆತ್ನಹತ್ಯೆ ಮಾಡಿಕೊಂಡಿದ್ದರಿಂದ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ನೊಂದಿದ್ದು, ಅಲ್ಲದೆ ಅವರು
ಈಗ ಸುಮಾರು 6 ತಿಂಗಳಿಂದ ಗಂಟಲು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಕೊಪ್ಪಳ ಪೊಲೀಸ್ ಕ್ವಾಟರ್ಸದಲ್ಲಿ
ಒಬ್ಬರೇ ಇದ್ದರು. ನಂತರ ದಿ: 04-03-2017 ರಂದು 11-00 ಗಂಟೆಯಿಂದ ದಿ: 05-03-2017 ರಂದು ಮುಂಜಾನೆ
060-00 ಗಂಟೆ ನಡುವಿನ ಅವಧಿಯಲ್ಲಿ ತಾನು ವಾಸಿಸುವ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು,
ನನ್ನ ತಂದೆಯ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಮುಂದಿನ ಕ್ರಮ ಜರುಗಿಸಲು ವಿನಂತಿ
ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
2] ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 58/2017 ಕಲಂ: 18 ಸಹಿತ 20(ಬಿ) ಎನ್.ಡಿ.ಪಿ.ಎಸ್. ಕಾಯ್ದೆ 1989:.
ದಿನಾಂಕ:- 05-03-2017
ರಂದು ಸಂಜೆ 6:45 ಗಂಟೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು
ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ
ಇದೆ. "ಇಂದು
ದಿನಾಂಕ:-05-03-2017 ರಂದು
ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಆನೆಗುಂದಿ
ಗ್ರಾಮದ ತಳವಾರಘಟ್ಟ ಹತ್ತಿರ ತಿರುಗಾಡುವ ಪ್ರವಾಸಿಗರಿಗೆ ಮೂರು ಜನರು ಸೇರಿಕೊಂಡು ಅಕ್ರಮವಾಗಿ ಗಾಂಜಾ
ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಪ್ರಕಾಶ ಮಾಳಿ, ಪಿ.ಎಸ್.ಐ. ರವರಿಗ
ಬಂದಿದ್ದು, ಕೂಡಲೇ ಆನೆಗುಂದಿಗೆ ಹೋಗಿ ಮಾಹಿತಿ ಇದ್ದ ದುರ್ಗಾ ಪ್ಯಾರಡೈಸ್-ತಳವಾರಘಟ್ಟ ರಸ್ತೆಯ ಬಯಲು
ರಂಗಮಂದಿರ ಹತ್ತಿರ ಮರೆಯಲ್ಲಿ ಕಾಯುತ್ತಾ ನಿಂತಾಗ ಸಾಯಂಕಾಲ 4:00 ಗಂಟೆಯ ಸುಮಾರಿಗೆ ತಳವಾರ ಘಟ್ಟ
ರಸ್ತೆ ಕಡೆಯಿಂದ ಮೂವರು ನಡೆದುಕೊಂಡು ಬರುತ್ತಿದ್ದು ಅವರಲ್ಲಿ ಒಬ್ಬನು ಕೈಯಲ್ಲಿ ಒಂದು ಪ್ಲಾಸ್ಟಿಕ್
ಚೀಲವನ್ನು ಹಿಡಿದುಕೊಂಡು ಬಂದಿದ್ದು ಅವರನ್ನು ನೋಡಿ ಸಂಶಯ ಬಂದು ನಾವು ವಿಚಾರಿಸಲು ಅವರ ಕಡೆಗೆ ಹೋಗುತ್ತಿರುವಾಗ
ನಮ್ಮನ್ನು ಕಂಡು ಅವರು ಓಡಿ ಹೋಗಲು ಪ್ರಯತ್ನಿಸಿದ್ದು, ಆಗ ಸಿಬ್ಬಂದಿಯವರು ಅವರನ್ನು ಬೆನ್ನತ್ತಿ ಹಿಡಿದು
ತಂದಿದ್ದು, ವಿಚಾರಣೆ ಮಾಡಲಾಗಿ ಕೈಯಲ್ಲಿ ಚೀಲ ಹಿಡಿದುಕೊಂಡವನ ಹೆಸರು 1] ಎ.ಎನ್. ಕುಮಾರ ತಂದೆ ನಾಗಪ್ಪ
ಆಡಿನ್ ವಯಸ್ಸು: 29 ವರ್ಷ ಜಾತಿ: ಮಾದಿಗ, ಉ: ಕೂಲಿಕೆಲಸ ಸಾ: ಸಂಗಾಪೂರ, ತಾ: ಗಂಗಾವತಿ ಅಂತಾ ತಿಳಿಸಿದ್ದು
ಉಳಿದಿಬ್ಬರನ್ನು ವಿಚಾರಿಸಲು 2] ವೆಂಕಟೇಶ ತಂದೆ ಫಕೀರಪ್ಪ ಹೂಗಾರ, ವಯಸ್ಸು: 32 ವರ್ಷ ಜಾತಿ: ಗಂಗಾಮತ,
ಉ: ಹೂವಿನವ್ಯಾಪಾರ, ಸಾ: ಆನೆಗುಂದಿ, ತಾ: ಗಂಗಾವತಿ 3] ಶರಣಬಸವ ತಂದೆ ಹನುಮಂತಪ್ಪ ಕಂಠಿ, ವಯಸ್ಸು:
22 ವರ್ಷ ಜಾತಿ: ಮಾದಿಗ, ಉ: ಕೂಲಿಕೆಲಸ ಸಾ: ಈಳಿಗನೂರ, ತಾ: ಗಂಗಾವತಿ ಅಂತಾ ತಿಳಿಸಿದರು. ನಂತರ ಎ.ಎನ್.ಕುಮಾರ
ಈತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಒಂದು ದಿನ ಪತ್ರಿಕೆಯ ಪೇಪರನಲ್ಲಿ ಒಣಗಿದ
ಎಲೆಯ ಹಾಗೂ ಹೂವಿನ ಪುಡಿ ಪುಡಿಯಾದ ಗಾಂಜಾ ಇದ್ದು, ನಾವು ಎಲ್ಲರೂ ಸೇರಿ ಮಾರಾಟ ಮಾಡಲು ತಂದಿರುತ್ತೇವೆ
ಅಂತಾ ತಿಳಿಸಿದರು. ವೆಂಕಟೇಶ ಮತ್ತು ಶರಣಬಸವ ಇವರ ಹತ್ತಿರ ಯಾವುದೇ ವಸ್ತು ಇರಲಿಲ್ಲಾ. ನಾವು ಮೂರು
ಜನರು ಕೂಡಿ ಗಾಂಜಾ ಮಾರಾಟ ಮಾಡಲು ಇಲ್ಲಿಗೆ ಬಂದಿರುವದಾಗಿ ತಿಳಿಸಿದರು. ನಂತರ ಮೂವರನ್ನು ಪರಿಶೀಲಿಸಲಾಗಿ
ವೆಂಕಟೇಶನ ಹತ್ತಿರ ಗಾಂಜಾ ಮಾರಾಟದಿಂದ ಬಂದ ನಗದು ಹಣ ರೂ 280/- ಗಳು ಮತ್ತು ಶರಣಬಸವ ಈತನ ಹತ್ತಿರ
ರೂ 200/- ಗಳು ದೊರೆಯಿತು. ನಂತರ ಕುಮಾರ ಈತನ ಕೈಯಲ್ಲಿದ್ದ ಚೀಲದಲ್ಲಿದ್ದ ಗಾಂಜಾವನ್ನು ತೂಕ ಮಾಡಿಸಲು
ಸೋಮನಾಥ ಉ: ವ್ಯಾಪರ, ಸಾ: ಆನೆಗುಂದಿ ಎಂಬುವವರಿಂದ ತೂಕ ಮಾಡಿಸಲಾಗಿ ಅದು 850 ಗ್ರಾಂ. ಒಣ
ಗಾಂಜಾ ಇದ್ದು, ಅದರ ಅಂದಾಜು ಕಿಮ್ಮತ್ತು ರೂ. 3,000-00 ಆಗಬಹುದು. ಮೂವರ ವಿರುದ್ಧ ಪ್ರಕರಣ
ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ:
14/2017 ಕಲಂ: 279,
337 ಐ.ಪಿ.ಸಿ:
ದಿನಾಂಕ: 04-03-2017 ರಂದು ರಾತ್ರಿ 11 ಗಂಟೆ ಸುಮಾರಿಗೆ ಪಿರ್ಯಾದಿದಾರನು ತಮ್ಮೂರಿನ ಶರಣಪ್ಪ
ಸಂಶಿ ಇತನೊಂದಿಗೆ ಟ್ರ್ಯಾಕ್ಟರ ನೊಂದಣಿ ಸಂ. ಕೆಎ-26/9921 ನೇದ್ದನ್ನು ಕೊಪ್ಪಳದಲ್ಲಿ ರಿಪೇರಿ ಮಾಡಿಸಿಕೊಂಡು
ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ಮೇಲೆ ಬನ್ನಿಕೊಪ್ಪ ದಾಟಿ ಬನ್ನಿಕೊಪ್ಪ ಸೀಮಾದಲ್ಲಿಯ ಪೆಟ್ರೋಲ್
ಬಂಕ್ ದಾಟಿ ಸ್ವಲ್ಪ ಅಂತರದಲ್ಲಿರುವ ಬ್ರಿಡ್ಜ್ ದಾಟಿ ಹೋರಟಿದ್ದಾಗ ಆರೋಪಿತನು ತಾನು ಚಲಾಯಿಸುತಿದ್ದ
ಕಾರ್ ನಂ. ಕೆಎ-20/ಝೆಡ್-7011 ನೇದ್ದನ್ನು ಗದಗ ಕಡೆಯಿಂದ ಕೊಪ್ಪಳ ಪಡೆಗೆ ಅತಿಜೋರಾಗಿ & ಅಲಕ್ಷತನದಿಂದ
ಹೆಡ್ ಲೈಟ್ ಡಿಪ್ ಡಿಮ್ ಮಾಡದೇ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಡಿಕ್ಕಿ ಹೊಡೆಸಿ ಅಪಘಾತಪಡಿಸಿರುತ್ತಾನೆ.
ಇದರಿಂದಾಗಿ ಪಿರ್ಯಾದಿದಾರನಿಗೆ, ಟ್ರ್ಯಾಕ್ಟರ್ ಚಾಲಕ ಶರಣಪ್ಪ ಸಂಶಿ & ಆರೋಪಿತನಿಗೆ ಸಾದಾ ಸ್ವರೂಪದ
ಗಾಯಗಳಾಗಿರುತ್ತವೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೇನು.
4] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ:
13/2017 ಕಲಂ: 279,
304(ಎ) ಐ.ಪಿ.ಸಿ:
ದಿನಾಂಕ: 05-03-2017 ರಂದು ರಾತ್ರಿ 7:00 ಗಂಟೆ ಸುಮಾರಿಗೆ ಹೊಸಪೇಟ್- ಕುಷ್ಠಗಿ ಎನ್ಹೆಚ್-50
ರಸ್ತೆ ಮೇಲೆ ಪುಟಗಮರಿ ಸೀಮಾದಲ್ಲಿ ಆರೋಪಿತನು ತಾನು
ನಡೆಸುತ್ತಿದ್ದ ಲಾರಿ ನಂ: ಕೆ.ಎ 03 ಡಿ 1169 ನೇದ್ದನ್ನು ಹೊಸಪೇಟ್- ಕಡೆಯಿಂದ ಕುಷ್ಠಗಿ ಕಡೆಗೆ ಅತೀವೇಗವಾಗಿ
ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ನಡೆಸಿಕೊಂಡು ಹೋಗಿದ್ದರಿಂದ ಲಾರಿಯಲ್ಲಿ
ಪಾರ್ಸಲ ಲೋಡ್ ಮೇಲೆ ಕುಳಿತುಕೊಂಡಿದ್ದ ಯಮನೂರಪ್ಪ ಇವನು ಪುಟಿದು ರಸ್ತೆಯ ಮೇಲೆ ಬಲವಾಗಿ ಬಿದ್ದಿದ್ದರಿಂದ
ಸದರಿಯವನ ತಲೆಗೆ ಭಾರಿ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿಯೇ
ಮೃತಪಟ್ಟಿದ್ದು ಇರುತ್ತದೆ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 42/2017 ಕಲಂ: 279, 283, 304(ಎ) ಐ.ಪಿ.ಸಿ:
ದಿನಾಂಕ: 06-03-2017 ರಂದು 1-30 ಎ.ಎಂ. ಕ್ಕೆ ಸುಮಾರಿಗೆ ಪಿರ್ಯಾದುದಾರರಿಂದ ಗಣಕೀಕರಣ ಹೇಳಿಕೆ ಪಿರ್ಯಾದಿಯನ್ನು ಸ್ವೀಕರಿಸಿದ್ದು
ಅದರ ಸಾರಾಂಶವೆನೆಂದರೆ, ದಿನಾಂಕ: 05-03-2017 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಬೂದಗುಂಪಾ-ಗಂಗಾವತಿ
ರಸ್ತೆಯಲ್ಲಿ ಗಾದಿಲಿಂಗೇಶ್ವರ ಗುಡಿಯ ಹತ್ತಿರ ಆರೋಪಿ ನಂ. 2 ನೇದವನು ತನ್ನ ಲಾರಿ ನಂ. 07/7569 ನೇದ್ದನ್ನು
ಇಂಡಿಕೇಟರ್ ಹಾಕದೆ ರಸ್ತೆಯಲ್ಲಿ ತಿರುಗಾಡುವ ವಾಹನಗಳಿಗೆ ಅಡತಡೆಯಾಗುವಂತೆ ತನ್ನ ಲಾರಿಯನ್ನು ನಿಲ್ಲಿಸಿದ್ದು,
ಆರೋಪಿ ನಂ. 1 ನೇದವನು ತನ್ನ ಮೋಟರ ಸೈಕಲ್ ನಂ. ಕಎಎ-37/ಹೆಚ್-7888 ನೇದ್ದನ್ನು ಬೂದಗುಂಪಾ ಕಡೆಯಿಂದ
ಗಂಗಾವತಿ ಕಡೆಗೆ ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ನಿಂತಿದ್ದ ಲಾರಿಗೆ
ಹಿಂದಿನಿಂದ ಲಾರಿಯ ಹಿಂದಿನ ಬಲಗಡೆ ಗಾಲಿಯ ಮಡ್ ಗಾರ್ಡಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿಕೊಂಡು ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು
ಕೈಗೊಂಡಿರುತ್ತದೆ.
0 comments:
Post a Comment