1] ಕೊಪ್ಪಳ ನಗರ ಪೊಲೀಸ್ ಠಾಣೆ
ಗುನ್ನೆ. ನಂ: 28/2017, ಕಲಂ: 143, 147, 353, 341 ಸಹಿತ 149 ಐ.ಪಿ.ಸಿ:
ದಿನಾಂಕ: 07-03-2017 ರಂದು ರಾತ್ರಿ 10-45 ಗಂಟೆಗೆ ಫಿರ್ಯಾಧಿ ಹನುಮಪ್ಪ ಹಕಾರಿ ಪಿಸಿ-435 ನಗರ ಠಾಣೆ ಕೊಪ್ಪಳ ರವರು ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿನಾಂಕ: 04-03-2017 ರಂದು ಕೊಪ್ಪಳ ನಗರಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಸವರಾಜ ರಾಯರೆಡ್ಡಿ ಮತ್ತು ಶ್ರೀ ಆರ್. ವಿ. ದೇಶಪಾಂಡೆ. ಕೈಗಾರಿಕಾ ಸಚಿವರು ಕರ್ನಾಟಕ ಸರ್ಕಾರ ರವರು ಆಗಮಿಸಿದ್ದು, ಸಚಿವರು ಕೊಪ್ಪಳ ಭಾಗ್ಯನಗರ ರಸ್ತೆಯ ರೈಲ್ವೆ ಗೇಟ್ ಮೇಲ್ ಸೇತುವೆ ಕಾಮಗಾರಿಯ ಹಂತವನ್ನು ವೀಕ್ಷಣೆ ಮಾಡಲು ಬಂದಂತಹ ಸಂರ್ಬದಲ್ಲಿ ಬಂದೋಬಸ್ತ ಕರ್ತವ್ಯದಲ್ಲಿದ್ದಾಗ
ಅಲ್ಲಿಯೇ
ಗುಂಪು ಸೇರಿದ್ದ ಕೆಲವು ಜನರು ಒಮ್ಮೇಲೆ ಜಿಲ್ಲಾಧಿಕಾರಿಗಳ ಕಾರು ಮುಂದಕ್ಕೆ ಹೋಗದಂತೆ ರಸ್ತೆಗೆ ಅಡ್ಡವಾಗಿ ನಿಂತುಕೊಂಡು ಜಿಲ್ಲಾಧಿಕಾರಿಗಳು ಸರಿಯಾಗಿ ಕಾಮಗಾರಿ ಕೆಲಸ ಮಾಡುತ್ತಿಲ್ಲ ದಿಕ್ಕಾರ ಅಂತಾ ಕೂಗುತ್ತಾ ನಿಂತುಕೊಂಡರು. ಆಗ ಕರ್ತವ್ಯದಲ್ಲಿದ್ದ ನಾನು ಹಾಗೂ ಇತರೆ ಸಿಬ್ಬಂದಿಗಳು ಹಾಗೂ ಪಿ.ಎಸ್.ಐ. ರವರು ಹೋಗಿ ಅವರಿಗೆ ತಿಳುವಳಿಕೆ ಹೇಳಿದರೂ ಸಹ ಕೇಳದೇ ಗುಂಪುಗೂಡಿದ ಜನರಲ್ಲಿ ರಾಕೇಶ ಪಾನಗಂಟಿ ಎಂಬುವವರು ನನಗೆ ಕೈ ಹಿಡಿದು ಹಿಂದಕ್ಕೆ ನೂಕುತ್ತಿದ್ದಂತಯೇ ಅವರ ಸಂಗಡ ಇದ್ದ ಸುಮಾರು 20-25 ಜನರು ಒಮ್ಮೇಲೆ ನನ್ನ ಮೇಲೆ ಏರಿ ಬಂದು ಕರ್ತವ್ಯ ನಿರ್ವಹಿಸುತ್ತಿದ್ದ ನನಗೆ ಅಡತಡೆ ಮಾಡಿ ತಮ್ಮ ಕೂಗಾಟ ಮುಂದುವರೆಸಿದ್ದರಿಂದ ಆಗ ಪಿ.ಎಸ್.ಐ. ರವರು ಸದರಿ ಜನರಿಗೆ ತಿಳುವಳಿಕೆ ನೀಡಿ ಜಿಲ್ಲಾಧಿಕಾರಿಗಳ ಕಾರು ಹೋಗಲು ಅನುವು ಮಾಡಿಕೊಟ್ಟರು. ಆಗ ಸಮಯ ಸುಮಾರು ಸಾಯಂಕಾಲ 4-45 ಗಂಟೆಯಾಗಿತ್ತು. ಕಾರಣ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಭಾಗ್ಯನಗರದ ರೈಲ್ವೆ ಗೇಟ್ ಮೇಲ್ ಸೇತುವೆ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಕಾಲಕ್ಕೆ ಮಾನ್ಯ ಜಿಲ್ಲಾಧಿಕಾರಿಗಳ ಕಾರಿಗೆ ಹೋಗದಂತೆ ಅಡ್ಡಗಟ್ಟಿ, ಬಂದೋಬಸ್ತ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ ರಾಕೇಶ ಪಾನಗಂಟಿ ಸಾ: ಭಾಗ್ಯನಗರ ಹಾಗೂ ಇತರೆ 20-25 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಖೆ ಕೈಗೊಂಡಿದ್ದು ಅದೆ.
2] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 20/2017 ಕಲಂ: 323, 354, 504, 506 ಸಹಿತ 34 ಐ.ಪಿ.ಸಿ.
ದಿನಾಂಕ:
06-03-2017 ರಂದು
ರಾತ್ರಿ 9-30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಗಂಗಮ್ಮ ಬಕ್ಕಂಡಿ
ಸಾ: ಹೊಸಳ್ಳಿ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು
ಹಾಜರಪಡಿಸಿದ್ದರ ಸಾರಾಂಶವೇನೆಂದರೆ. ಫಿರ್ಯಾದಿದಾರರು ಮತ್ತು ಅವರ ಮಗಳು ಮನೆಯಲ್ಲಿದ್ದಾಗ, ಆರೋಪಿ ಸೋಮಪ್ಪ ಈತನು ಫಿರ್ಯಾದಿದಾರರ ಮನೆಯ ಹತ್ತಿರ
ಬಂದು ಲೇ ಬಕ್ಕಂಡಿ ಸೂಳೆರ ಅವಾಚ್ಯವಾಗಿ ಬೈದಾಡಿತ್ತಿರುವಾಗ ಫಿರ್ಯಾದಿದಾರರು ಈ ರೀತಿ ಯಾಕ
ಮಾತನಾಡುತ್ತಿ ಅಂತಾ ಕೇಳಿದಾಗ ಆರೋಪಿ ಸೋಮಪ್ಪನು ಏಕಾ ಏಕಿ ಬಂದವೆನ ಫಿರ್ಯಾದಿಯ ಸೀರೆ ಸೆರಗು
ಹಿಡಿದು ಎಳೆದು ಕೆಳಗೆ ಕೆಡವಿದಾಗ ಫಿರ್ಯಾದಿದಾರರು ಮೇಲೆಳುವಷ್ಟರಲ್ಲಿ ಆರೋಪಿ ಹನಮಪ್ಪ ಮತ್ತು ನಾಗವ್ವ ಬಂದವರೆ
ಫಿರ್ಯಾದಿದಾರರಿಗೆ ಕೈಯಿಂದ ಹೊಡೆಯ ಹತ್ತಿದ್ದು, ಆಗ ಫಿರ್ಯಾದಿದಾರರು ಗಾಭರಿಯಾಗಿ ಯಾಕ ಹೊಡಿತೀರಿ ಅಂತಾ
ಕೇಳಿದಾಗ ನೀನು ಪಂಚಾಯತಿ ಅಧ್ಯಕ್ಷಳಾಗಿ ನಮಗೆ ಏನು ಮಾಡಿಯಲೇ ಬೋಸುಡಿ ಅಂತಾ ಬೈದಾಡಿ ಪುನಃ ಆರೋಪಿ
ಸೋಮಪ್ಪನು ಫಿರ್ಯಾದಿದಾರರ ಜಂಪರ ಹಿಡಿದು ಎಳೆದಾಗ ಜಂಪರ ಹರಿದು, ಕೊರಳಲ್ಲಿಯ ತಾಳಿ ಹರಿದು ಹೋಗಿದ್ದು, ಆಗ ಅಲ್ಲಿಯೇ ಇದ್ದ ಫಿರ್ಯಾದಿದಾರರ ಮಗಳು ರೇಣುಕಾ
ಮತ್ತು ಅಲ್ಲಿಗೆ ಬಂದು ಫಿರ್ಯಾದಿಯ ಮಗ ಬಸವರಾಜ ಮತ್ತು ಶರಣಪ್ಪ ಬಾಲಪ್ಪನವರ, ಯಮನಪ್ಪ
ಅಗಸಿ ರವರು ಜಗಳ ಬಿಡಿಸಿ ಕಳಿಸುವಾಗ ಆರೋಪಿ ಸೋಮಪ್ಪನು ಲೇ ಗಂಗವ್ವ ನಿನ್ನ ಇವತ್ತು ಉಳಿಸಿನಿ
ಮುಂದೆ ನಿನ್ನ ಜೀವ ತೆಗಿತಿನಿ ಅಂತಾ ಜೀವದ ಬೆದರಿಕೆ ಹಾಕಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈ ಗೊಂಡಿರುತ್ತಾರೆ.
3] ಕನಕಗಿರ ಪೊಲೀಸ್ ಠಾಣೆ ಗುನ್ನೆ ನಂ:
20/2017 ಕಲಂ:
279, 304(ಎ) ಐ.ಪಿ.ಸಿ:
ದಿನಾಂಕ 06-03-2017 ರಂದು
ಮುಂಜಾನೆ 10-30 ಗಂಟೆಗೆ ಫಿರ್ಯಾಧಿದಾರ ಶ್ರೀ ಭೋಜರಾಜ ತಂದೆ ಹಿರೇ ಲಿಂಗಪ್ಪ ಏಳಬೆಂಚಿ ಸಾ : ಕೆ.ಮಲ್ಲಾಪುರ
ರವರು ಫಿರ್ಯಾಧಿಯನ್ನು ನೀಡಿದ್ದು, ದಿನಾಂಕ 05-03-2017 ರಂದು ಮುಂಜಾನೆ 9-00 ಗಂಟೆಯ ಸುಮಾರಿಗೆ
ನಾನು ಮುಂಡರಗಿ ಗ್ರಾಮಕ್ಕೆ ನನ್ನ ವೈಯಕ್ತಿಕ ಕೆಲಸಕ್ಕೆ ಹೋಗಿ ವಾಪಸ ನಮ್ಮೂರಿಗೆ ಬಂದು ರಾತ್ರಿ ವಸ್ತಿ
ಇದ್ದೆನು. ಈ ದಿವಸ 06-03-2017 ರಂದು ಮದ್ಯರಾತ್ರಿ 1-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ
ನನ್ನ ತಮ್ಮ ಏಕಲವ್ಯ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ರಾತ್ರಿ 12-30 ಗಂಟೆಯ ಸುಮಾರಿಗೆ
ನಮ್ಮ ಅಪ್ಪ ಹಿರೇ ಲಿಂಗಪ್ಪನು ಕೆ.ಮಲ್ಲಾಪೂರ ಸೀಮಾದ ತನ್ನ ಗೆಳೆಯ ಹನುಮಪ್ಪ ತಂದೆ ನಾಗಪ್ಪ ಕುರುಬರ
ರವರ ಹೊಲದಲ್ಲಿ ಕೃಷಿ ಹೊಂಡಾ ತೆಗೆಯಿಸಲು ಹೋಗಿ ಅಲ್ಲಿಯೇ ರಾತ್ರಿ ಬಂಡಿ ರಸ್ತೆಯ ಪಕ್ಕದಲ್ಲಿ ಮಲಗಿಕೊಂಡಾಗ
ಜೆ.ಸಿ.ಬಿ. ನಂ.ಕೆಎ-35/ಎ-9397 ರ ಚಾಲಕ ಕರಡೋಣ ಗ್ರಾಮದ ಹೊಳಿಯಪ್ಪ ತಂದೆ ಪಾಮಣ್ಣ ತೇಜಮನಿ ಈತನು
ಕೃಷ್ಟಿ ಹೊಂಡಾ ತೆಗೆಯಲು ಬಂದ ತನ್ನ ಜೆ.ಸಿ.ಬಿ. ಯಿಂದ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು
ನಮ್ಮ ತಂದೆ ಹಿರೇ ಲಿಂಗಪ್ಪನ ತೊಡೆಯ ಮೇಲೆ ಗಾಲಿ ಹಾಯಿಸಿಕೊಂಡ ಹೋಗಿದ್ದು, ಇದರಿಂದ ನನ್ನ ತಂದೆಗೆ
ಭಾರಿ ರಕ್ತ ಗಾಯವಾಗಿರುತ್ತದೆ ಅವನನ್ನು ಚಿಕಿತ್ಸೆಗಾಗಿ ಗಂಗಾವತಿಗೆ ಕರೆದುಕೊಂಡು ಹೋಗಿದ್ದು, ನನ್ನ
ತಂದೆ ಹಿರೇಲಿಂಗಪ್ಪನು ಗಂಗಾವತಿಯ ಮಲ್ಲನಗೌಡ ಸರಕಾರಿ
ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಪಲಿಸದೇ ಈ ದಿವಸ
06-03-2017 ರಂದು ಬೆಳಗಿನ ಜಾವ 6-00 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
4] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 18/2017 ಕಲಂ: 307, 392 ಸಹಿತ 34 ಐ.ಪಿ.ಸಿ:
ದಿನಾಂಕ:
06-03-2017 ರಂದು
ಮಧ್ಯಾಹ್ನ 12-00
ಗಂಟೆಗೆ
ಭಾಗಮ್ಮ ಪಾಟೀಲ್ (ಕಾರ್ಲಕೊಪ್ಪ) ಸಾ: ಬೆನಕಟ್ಟಿ
ರವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ಫಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿದಾರರು
ಆರೋಪಿ ಲಕ್ಷ್ಮೀಬಾಯಿಗೆ ಆಗಾಗ ಒಟ್ಟು 2,70,000/- ರೂ ಕೊಟ್ಟಿದ್ದು, ಹಣವನ್ನು
ವಾಪಸ್ ಕೊಡಲು ಕೇಳಿದಾಗ ಇವತ್ತ ಕೊಡುತೀನಿ, ನಾಳೆ ಕೊಡುತೀನಿ ಅಂತಾ
ಹೇಳುತ್ತಾ ಸಮಾಧಾನ ಮಾಡಿ ಕಳುಹಿಸುತ್ತಿದ್ದು, ಮೊನ್ನೆ ದಿನಾಂಕ:
04-03-2017 ರಂದು
ಫಿರ್ಯಾದಿದಾರರು ಆರೋಪಿ ಲಕ್ಷ್ಮೀಬಾಯಿಗೆ ಹಣ ಕೇಳಿದಾಗ ನಾಳೆ ಬಾ ಲೆಕ್ಕ ಮಾಡಿ ಹಣ ಕೊಡುತ್ತೇನೆ
ಅಂತಾ ಹೇಳಿದ್ದು,
ಫಿರ್ಯಾದಿದಾರರು
ನಿನ್ನೆ ದಿನಾಂಕ:
05-03-2017 ರಂದು
ಮುಂಜಾನೆ 10-00
ಗಂಟೆಗೆ
ಆರೋಪಿ ಲಕ್ಷ್ಮೀಬಾಯಿಯ ಮನೆಗೆ ಹೋಗಿದ್ದು, ಲೆಕ್ಕ ಮಾಡಲಾಗಿ 2,70,00=00 ರೂ ಆಗಿದ್ದು, ನಂತರ ಆರೋಪಿ
ಲಕ್ಷ್ಮೀಬಾಯಿಯು ಫಿರ್ಯಾದಿದಾರರನ್ನು ರಮಿಸಿ ನಿನ್ನನ್ನು ಹನಮಸಾಗರ ಹತ್ತಿರ ಚಂದಾಲಿಂಗ ದೇವಸ್ಥಾನ
ತೋರಿಸಿ ನಿನಗೆ ಹಣ ಕೊಡುತ್ತೇನೆ ಅಂತಾ ಹೇಳಿ ತನ್ನ ಸೀರೆ ಕೊಟ್ಟಿದ್ದು, ಅಲ್ಲಿಯೇ
ಬಟ್ಟೆ ಬದಲಾಯಿಸಿಕೊಂಡು, ಫಿರ್ಯಾದಿದಾರು ಮತ್ತು ಆರೋಪಿ ಲಕ್ಷ್ಮೀಬಾಯಿ ರವರು
ಕೂಡಿ ಅಲ್ಲಿಂದ ಅಮೀನಗಡಕ್ಕೆ ಬಸ್ಸಿಗೆ ಬಂದು ಅಲ್ಲಿಂದ ಒಂದು ಕಾರಿನಲ್ಲಿ ಆರೋಪಿ ಹೇಮಣ್ಣ ಮತ್ತು
ಇನ್ನೊಬ್ಬ ಆರೋಪಿ ಕಾರಿನಲ್ಲಿ ಚಂದಾಲಿಂಗಕ್ಕೆ ಬಂದು ರಾತ್ರಿ 8-00 ಗಂಟೆಯವರೆಗೆ
ಇದ್ದು ಊರಿಗೆ ಹೊಗೋಣ ಅಂತಾ ಹೇಳಿದಾಗ ಮೂವರು ಸೇರಿ ಫಿರ್ಯಾದಿಗೆ ಕೈಯಿಂದ ಹೊಡೆಬಡೆ ಮಾಡಿದಾಗ
ಚೀರಲು,
ಆರೋಪಿ
ಲಕ್ಷ್ಮೀಬಾಯಿ ಬಾಯಿಗೆ ಬಟ್ಟೆ ತುರುಕಿ ಹೊಡೆಬಡೆ, ಕುತ್ತಿಗೆ
ಹಿಚುಕಿ,
ಫಿರ್ಯಾದಿದಾರರು
ಮೂರ್ಛೆ ಹೋದಾಗ ಫಿರ್ಯಾದಿದಾರರು ಮೈಮೇಲಿದ್ದ ಬಂಗಾರದ ಆಭರಣ, ನಗದು ಹಣ 1000=00, ಒಂದು
ಮೋಬೈಲ್ ದೋಚಿಕೊಂಡು ಒಂದು ನೀರಲ್ಲದ ಹೌಜಿನಲ್ಲಿ ಹಾಕಿ ಹೋಗಿದ್ದು, ನಂತರ
ಬೆಳಗ್ಗೆ 6-00
ಗಂಟೆಗೆ
ಮೇಲತ್ತಿ ಕೂಗಿದಾಗ ಚಂದಾಲಿಂಗ ದೇವಸ್ಥಾನದಲ್ಲಿದ್ದ 1] ಭರಮಜ್ಜ
ಅಳವಂಡಿ,
2] ಈರನಗೌಡ
ಮಾಲಿಪಾಟೀಲ್,
3] ನಾಗನಗೌಡ
ಮಾಲಿಪಾಟೀಲ್ ಕರೆದುಕೊಂಡು ಬಂದು ಉಪಚಾರ ಪಡೆದುಕೊಂಡು ತಡವಾಗಿ ಠಾಣೆಗೆ ಬಂದಿದ್ದು, ತನಗೆ ಕೊಲೆ
ಮಾಡುವ ಉದ್ದೇಶದಿಂದ ಹಲ್ಲೆ ಮಾಡಿ, ಮೈಮೇಲಿದ್ದ ಬಂಗಾರದ ಆಭರಣ ಮತ್ತು ನಗದು ಹಣ, ಮೋಬೈಲ್
ಇವುಗಳನ್ನು ದೋಚಿದ ಲಕ್ಷ್ಮೀಬಾಯಿ, ಹೇಮಣ್ಣ ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿಯ
ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
0 comments:
Post a Comment