1] ಮುನಿರಾಬಾದ್ ಪೊಲೀಸ್ ಠಾಣೆ
ಗುನ್ನೆ. ನಂ: 44/2017 ಕಲ0: 143, 147, 148, 447, 323, 324, 307, 504 ಸಹಿತ
149 ಐಪಿಸಿ.
ದಿನಾಂಕ: 09-03-2017 ರಂದು ರಾತ್ರಿ 9-30 ಗಂಟೆಗೆ
ಪಿರ್ಯಾಧಿದಾರರಾದ ಶ್ರೀ ರಾಮಣ್ಣ ತಂದೆ ಫಕೀರಪ್ಪ ರಾಠೋಡ ವಯ: 37 ವರ್ಷ, ಜಾತಿ: ಲಮಾಣಿ, ಉ: ಒಕ್ಕಲುತನ
ಸಾ: ಶಿವನತಾಂಡಾ ಕೊಪ್ಪಳ ತಾಲೂಕ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರ ಪಡಿಸಿದ್ದು
ಅದರ ಸಾರಾಂಶವೇನಂದರೆ, ಈಗ್ಗೆ ಸುಮಾರು ತಿಂಗಳಗಳ ಹಿಂದೆ ಆರೋಪಿತರು ತಿರುಪತಿ ತಂದೆ ಶಿವಪ್ಪ ರಾಠೋಡ, ರಂಗನಾಥ ತಂದೆ ಹನಮಪ್ಪ ರಾಠೋಡ, ಇತರೇ ಜನರು ಶಿವನತಾಂಡಾದಲ್ಲಿ ಪಿರ್ಯಾದಿದಾರರಿಗೆ
ಸಂಬಂಧಪಟ್ಟ ಖಾಲಿ ಜಾಗೆಯ ಬಗ್ಗೆ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡಿದ್ದರಿಂದ ಗುನ್ನೆ ಪ್ರತಿ ಗುನ್ನೆಗಳು
ದಾಖಲಾಗಿರುತ್ತವೆ. ದಿನಾಂಕ: 09-03-2017 ರಂದು ಸಾಯಂಕಾಲ
5-00 ಗಂಟೆ ಸುಮಾರಿಗೆ ಪಿರ್ಯಾದಿದಾರರು ಮತ್ತು ಗಾಯಾಳುಗಳು ತಮ್ಮ ಹೊಲದಲ್ಲಿ ಟಿ.ಸಿ. ಹಾಕಿಸುವ ಸಲುವಾಗಿ
ಕಾಯುತ್ತಾ ಕುಳಿತುಕೊಂಡಿದ್ದು, ಆ ಸಮಯದಲ್ಲಿ ಆರೋಪಿತರೆಲ್ಲರೂ ಅಕ್ರಮ ಗುಂಪು ಕಟ್ಟಿಕೊಂಡು ಕೈಯಿಂದ
ಕಬ್ಬಿಣದ ರಾಡು, ಬಡಿಗೆ ಹಾಗೂ ಕಲ್ಲುಗಳನ್ನು ಹಿಡಿದುಕೊಂಡು
ಪಿರ್ಯಾದಿದಾರರ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿ ಮತ್ತು ಗಾಯಾಳು ಶಿವನಪ್ಪ ಇವರನ್ನು ಕೊಲೆ
ಮಾಡುವ ಉದ್ದೇಶದಿಂದ ಅವರ ತಲೆಗೆ ರಾಡು ಮತ್ತು ಬಡಿಗೆ ಹಾಗೂ ಕಲ್ಲಿನಿಂದ ತಲೆಗೆ ಹೊಡೆದು ಬಲವಾದ ರಕ್ತಗಾಯ
ಪಡಿಸಿದ್ದು ಅಲ್ಲದೇ ಇನ್ನುಳಿದ ಗಾಯಾಳುಗಳಿಗೆ ಬಡಿಗೆಯಿಂದ, ಕಲ್ಲುಗಳಿಂದ ಮತ್ತು ಕೈಯಿಂದ ಹೊಡಿ-ಬಡಿ
ಮಾಡಿರುತ್ತಾರೆ ಎಂದು ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ. ನಂ: 38/2017, ಕಲಂ:
78(3) Karnataka Police Act.
ದಿನಾಂಕ:-09-03-2017
ರಂದು ಬೆಳಿಗ್ಗೆ 11-45 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯ ದಾರಿಯಲ್ಲಿ ಆರೋಪಿ ಅಮರೇಶ ತಂದಿ ಬಸಪ್ಪ
ಹಡಪದ ವಯಾ-43ವರ್ಷ್ ಜಾ. ಹಡಪದ ಸಾ. ಇಂದಿರಾನಗರ ಕಾರಟಗಿ ಇತನು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ
ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಮಲ್ಲಪ್ಪ ಎ.ಎಸ್.ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹಿಡಿದುಕೊಂಡು
ಆರೋಪಿತನಿಂದು ರೂ. 390=00 ಗಳನ್ನು ಮತ್ತು ಸಾಮಾಗ್ರಿಗಳನ್ನು
ಜಪ್ತ ಮಾಡಿಕೊಂಡಿದ್ದು ಆರೋಪಿ 1 ಇತನು ಮಟ್ಕಾ ಪಟ್ಟಿ
ಮತ್ತು ಹಣವನ್ನು ಮಟ್ಕಾ ಬುಕ್ಕಿಯಾದ ಜೂರಟಗಿ ಗ್ರಾಮದ ರಮೇಶ ಸಿದ್ದಾಪೂರ ಇತನಿಗೆ ಕೊಡುವುದಾಗಿ ತಿಳಿಸಿರುತ್ತಾನೆ
ಅಂತಾ ಆರೋಪಿ ಸಮೇತ ಠಾಣೆಯಲ್ಲಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ
ಗುನ್ನೆ. ನಂ: 16/2017,
ಕಲಂ: 279, 337, 338 ಐ.ಪಿ.ಸಿ.
ದಿನಾಂಕ:09-03-2017 ರಂದು ಸಂಜೆ
7-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತನ್ನ ಅಣ್ಣನಾದ ಗವಿಸಿದ್ದಪ್ಪ ಕಂಬಳಿ ಮತ್ತು ಆತನ ಹೆಂಡತಿಯಾದ
ನೀಲವ್ವ ಕಂಬಳ್ಳಿ ಮೂರು ಜನರು ತಮ್ಮ ತೋಟದ ಹೊಲದಲ್ಲಿ ಕೆಲಸ ಮುಗಿಸಿಕೊಂಡು ವಾಪಸ ಮನೆಗೆ ಯಲಬುರ್ಗಾ
ತುಮ್ಮರಗುದ್ದಿ ರಸ್ತೆಯ ಮೇಲೆ ತುಮ್ಮರಗುದ್ದಿ ಸೀಮಾದಲ್ಲಿ ಬರುವ ಬಾಳಪ್ಪ ಕತ್ತಿ ಇವರ ಹೊಲದ ಹತ್ತಿರ
ರಸ್ತೆಯ ಎಡಮಗ್ಗಲು ನಡೆದುಕೊಂಡು ತುಮ್ಮರಗುದ್ದಿ ಗ್ರಾಮದ ಕಡೆಗೆ ಹೋಗುತ್ತಿದ್ಧಾಗ ಅದೇ ಸಮಯಕ್ಕೆ ಯಲಬುರ್ಗಾ
ಕಡೆಯಿಂದ ತುಮ್ಮರಗುದ್ದಿ ಗ್ರಾಮದ ಕಡೆಗೆ ಮೋ.ಸೈಕಲ ಸವಾರನಾದ ನೀಲಕಂಠಪ್ಪ ತಂದೆ ಶಿದ್ಲಿಂಗಪ್ಪ ರೊಡ್ಡರ ಈತನು ತಾನು ನಡೆಸುತ್ತಿದ್ದ
ಮೋ.ಸೈಕಲ ನಂಬರ ಕೆ.ಎ-37/ಕ್ಯೂ-1690 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು
ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಯ ಅಣ್ಣನಿಗೆ ಜೋರಾಗಿ ಟಕ್ಕರಕೊಟ್ಟು ಅಪಘಾತಪಡಿಸಿದ್ದರಿಂದ ಫಿರ್ಯಾದಿದಾರನ
ಅಣ್ಣನಿಗೆ ತಲೆಗೆ ಭಾರಿ ಸ್ವರೂಪದ ಗಾಯ ಮತ್ತು ಆರೋಪಿ ನೀಲಕಂಠಪ್ಪ ತಂದೆ ಶಿದ್ಲಿಲಿಂಗಪ್ಪ ರೊಡ್ಡರ
ಈತನಿಗೆ ಭಾರಿ ಮತ್ತು ಸಾದ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಕಾರಣ ಮೋ.ಸೈಕಲ ಸವಾರನ ವಿರುದ್ದ ಕಾನೂನು
ಕ್ರಮ ಜರುಗಿಸಲು ವಿನಂತಿ ಅಂತಾ ಫಿರ್ಯದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment