Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, March 9, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ. ನಂ: 37/2017, ಕಲಂ: 87 Karnataka Police ACT
ದಿನಾಂಕ:-08-03-2017 ರಂದು ಸಾಯಂಕಲಾ 5-30 ಗಂಟೆಗೆ ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್.ಐ ಕಾರಟಗಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಇಸ್ಪೀಟ್ ಆಟದಲ್ಲಿತೊಡಗಿದ್ದ 1) ಹುಲಗಪ್ಪ ತಂದೆ ಶಂಕ್ರಪ್ಪ ಕಬ್ಬೇರ ವಯ 48 ವರ್ಷ ಜಾತಿ ಕಬ್ಬೇರ ಉ. ಒಕ್ಕಲುತನ ಸಾ. ಕಾರಟಗಿ  ತಾ.ಗಂಗಾವತಿ 2) ಹನುಮಂತಪ್ಪ ತಂದೆ ಬಸಪ್ಪ ಬಡಿಗೇರ ವಯ 45 ವರ್ಷ ಜಾತಿ ಬಡಿಗೇರ ಸಾ.ಪನ್ನಾಪೂರ ತಾ.ಗಂಗಾವತಿ 3) ಮರೇಶಪ್ಪ ತಂದೆ ಭೀಮನಗೌಡ ಪೊಲೀಸ್ ಪಾಟೀಲ್ ವಯ 42 ವರ್ಷ ಜಾತಿ ಲಿಂಗಾಯತ ಸಾ. ಕಾರಟಗಿ ತಾ.ಗಂಗಾವತಿ 4) ಯಮನಪ್ಪ ತಂದೆ ನಿಂಗಪ್ಪ ಹುವಪ್ಪನವರ್ ವಯ 50 ವರ್ಷ ಜಾತಿ ಕುರುಬರ ಸಾ. ಪನ್ನಾಪೂರ ತಾ.ಗಂಗಾವತಿ 5) ಹನುಮಂತಪ್ಪ ತಂದೆ ಭೀಮಪ್ಪ ಕುರುಬರ ವಯ 55 ವರ್ಷ ಜಾತಿ ಕುರುಬರ ಸಾ. ಪನ್ನಾಪುರ ತಾ.ಗಂಗಾವತಿ 6) ಬಸಪ್ಪ ತಂದೆ ಫಕೀರಪ್ಪ ವಾಲೀಕಾರ ವಯ 50 ವರ್ಷ ಜಾತಿ ಕುರುಬರ ಉ. ಒಕ್ಕಲುತನ ಸಾ. ಪನ್ನಾಪೂರ ಇವರನ್ನು ಹಿಡಿದುಕೊಂಡು ರೂ. 5300=00 ಗಳನ್ನು ಮತ್ತು ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಈ ಬಗ್ಗೆ ಪ್ರರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ. ನಂ: 22/2017, ಕಲಂ: 96(b) Karnataka Police Act.
ದಿನಾಂಕ 08-03-2017 ರಂದು ಬೆಳಗ್ಗೆ 4-30 ಗಂಟೆಗೆ ಫಿರ್ಯಾಧಿದಾರ ಶ್ರೀ ಬಸವರಾಜ ಹೆಚ್ಸಿ-186 ರವರು ಠಾಣೆಗೆ ಹಾಜರಾಗಿ ವರದಿ ಆರೋಪಿತನನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 08-03-2017 ರಂದು ಬೆಳಗಿನ ಜಾವ 04-00 ಗಂಟೆಯ ಸುಮಾರಿಗೆ ಆರೋಪಿ ಬಸವರಾಜನು ಕನಕಗಿರಿ ಗ್ರಾಮದ ಶ್ರೀ ಕನಕಾಚಲ ದೇವಸ್ಥಾನದ ಹತ್ತಿರ ಮರೆ ಮಾಚಿಕೊಂಡು ಕುಳಿತುಕೊಂಡಾಗ ರಾತ್ರಿ ಗಸ್ತು ಚೆಕ್ಕಿಂಗ್ ಮಾಡುತ್ತಾ ಇದ್ದ ಹೆಚ್ಸಿ-186 ಹೆಚ್ಜಿ-607 ರವರು ಕನಕಗಿರಿ ಗ್ರಾಮದಲ್ಲಿ  ಪೆಟ್ರೋಲಿಂಗ್ ಮಾಡುತ್ತಾ ತಿರುಗಾಡುವಾಗ ಪೊಲೀಸ್ರು ಸಮವಸ್ತ್ರ ಧರಿಸಿ ಬಂದಿರುವನ್ನು ನೋಡಿ ಗಾಬರಿಯಾಗಿ ಓಡಿ ಹೋಗುವಾಗ ಪೊಲೀಸ್ರು ಅವನನ್ನು ಬೆನ್ನಹತ್ತಿ ಹಿಡಿದು ಅವನನ್ನು ವಿಚಾರಿಸಿ ಮೊದ ಮೊದಲು ಹೆಸರನ್ನು ಬೇರೆ ಬೇರೆ ತಪ್ಪು ತಪ್ಪು ಹೇಳುತ್ತಾ ಪುನ : ಆಳವಾಗಿ ವಿಚಾರಿಸಲಾಗಿ ಮೇಲ್ಕಂಡ ಹೆಸರನ್ನು ಹೇಳಿದ್ದು, ಸದರಿಯವನು ರಾತ್ರಿ ಸಮಯದಲ್ಲಿ ತಾನು ನಿಂತ ಸ್ಥಳದ ಬಗ್ಗೆ ಸಮರ್ಪಕವಾದ ಉತ್ತರ ಕೊಡದಿದ್ದರಿಂದ ಇವನನ್ನು ಹಾಗೆಯೇ ಬಿಟ್ಟಲ್ಲಿ ಮುಂದೆ ಯಾವುದಾದರೂ ಸ್ವತ್ತಿನ ಅಪರಾಧ ಮಾಡುವ ಸಾದ್ಯತೆ ಕಂಡು ಬಂದಿದ್ದರಿಂದ  ಅವನನ್ನು ದಸ್ತಗಿರಿ ಮಾಡಿ ಅವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ವರದಿ ಆಧಾರದ ಮೇಲಿಂದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ. ನಂ: 23/2017, ಕಲಂ: 341, 323, 324, 504, 506 ಐ.ಪಿ.ಸಿ. 34 ಐ.ಪಿ.ಸಿ.
ದಿನಾಂಕ 08-03-2017 ರಂದು ಸಂಜೆ 6-00 ಗಂಟೆಗೆ ಫಿರ್ಯಾಧಿದಾರ ಶ್ರೀ ನಿಂಗಪ್ಪ ತಂದೆ ಯಮನಪ್ಪ ಬುರುಡಿ ವಯಾ 65 ವರ್ಷ ಜಾತಿ ಕುರುಬರು ಸಾ: ಬಂಕಾಪೂರ ರವರು ಠಾಣೆಗೆ ಹಾಜರಾಗಿ ಗಣಕಿಕೃತ ಮಾಡಿದ ಫಿರ್ಯಾಧಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ನನಗೆ ಒಟ್ಟು 3 ಜನ ಗಂಡು ಮಕ್ಕಳು ಇಬ್ಬರೂ ಹೆಣ್ಣು ಮಗಳಿದ್ದು, ಗಂಡು ಮಕ್ಕಳ ಪೈಕಿ 1] ಛಾಗಪ್ಪ 2] ಗೋವಿಂದಪ್ಪ 3] ತಿರುಪಾತೆಪ್ಪ ಅಂತಾ 3 ಜನ ಗಂಡು ಮಕ್ಕಳಿದ್ದು, ಎಲ್ಲರೂ ಬೇರೆ ಬೇರೆಯಾಗಿ ತನ್ನ ಹೆಂಡತಿ-ಮಕ್ಕಳೊಂದಿಗೆ ತಮ್ಮ ತಮ್ಮ ಮನೆಯಲ್ಲಿ ಜೀವನ ನಡೆಸುತ್ತಾರೆ. ನನ್ನ ಪಾಲಿಗೆ ಒಂದು ಮನೆ ಬಂದಿದ್ದು, ಆ ಮನೆಯಲ್ಲಿ ನನ್ನ ಹೆಂಡತಿ ನಿಂಗಮ್ಮ ನೊಂದಿಗೆ ಜೀವನ ನಡೆಸುತ್ತೇನೆ. ಈಗ್ಗೆ ಸುಮಾರು 8-10 ದಿವಸಗಳಿಂದ ನನ್ನ ಮಕ್ಕಳಾದ ಗೋವಿಂದಪ್ಪ ಹಾಗೂ ತಿರುಪಾತೆಪ್ಪ ರವರು ನಮ್ಮೊಂದಿಗೆ ಜಗಳ ಮಾಡುತ್ತಾ ನಾವು ಇದ್ದ ಮನೆಯನ್ನು ಖಾಲಿ ಮಾಡು ಆ ಮನೆ ನಮಗೆ ಸೇರಿದ್ದು ಅಂತಾ ನಮ್ಮೊಂದಿಗೆ ಜಗಳ ಮಾಡುತ್ತಾ ಇದ್ದರು. ದಿನಾಂಕ 02-03-2017 ರಂದು ಮುಂಜಾನೆ 9-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ನಿಂಗಮ್ಮ ರವರೊಂದಿಗೆ ನಮ್ಮ ಮಕ್ಕಳು ನಮಗೆ ಬೈಯುತ್ತೀರುವ ಬಗ್ಗೆ ದೈವದವರಿಗೆ ತಿಳಿಸಲು ಹೋಗುತ್ತಿದ್ದಾಗ ಆ ಸಮಯದಲ್ಲಿ ಆರೋಪಿತರಾದ ನಮ್ಮ ಮನೆಯ ಹತ್ತಿರ ಬಂದು ನಾವು ಹೋಗುವದನ್ನು ನೋಡಿ ನಮ್ಮನ್ನು ತಡೆದು ನಿಲ್ಲಿಸಿ ಏನಲೇ ಮುದಿಯಾ ನಮಗೆ ಮನೆ ಬಿಟ್ಟು ಅಂತಾ ಹೇಳಿದರೂ ಯಾಕೇ ಬಿಡುತ್ತೀಲ್ಲಾ ಅಂತಾ ಜಗಳ ತೆಗೆದು ಕಲ್ಲಿನಿಂದ ಹೊಡೆದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ  ಕೊಟ್ಟ ಲಿಖಿತ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಮುನಿರಾಬಾದ್ ಪೊಲೀಸ್ ಠಾಣೆ ಗುನ್ನೆ. ನಂ: 43/2017, ಕಲಂ: 454, 457 380 ಐ.ಪಿ.ಸಿ.
ಪಿರ್ಯಾದಿ ವಿಲಿಯಂ ಸ್ಯಾಂಸನ್ಪಾಲ್ ತಂದೆ ಪಿ. ಸ್ಯಾಮುವೆಲ್ ದೇವನಿಸನ್ ವಯ: 49, ಜಾತಿ:ಕ್ರೀಶ್ಚಿಯನ್ ಉ: ಎಸ್.ಡಿ.ಎ. ತುಂಗಭದ್ರಾ ಜಲಾಶಯ ವಿಭಾಗ ಮುನಿರಾಬಾಧ ರವರು ದಿನಾಂಕ: 04-03-2017 ರಂದು ತಮ್ಮ ಮನೆ ಬೀಗವನ್ನು ಹಾಕಿಕೊಂಡು ಊರಿಗೆ ಹೋಗಿದ್ದು, ದಿನಾಂಕ: 08-03-2017 ರಂದು ವಾಪಸ್ ಮುನಿರಾಬಾದಕ್ಕೆ ಬಂದು ನೋಡಲಾಗಿ ಅವರ ಮನೆಗೆ ಹಾಕಿದ ಬೀಗ ಮುರಿದಿದ್ದು, ಒಳಗೆ ಹೋಗಿ ನೋಡಲಾಗಿ ಅಲಮಾರನಲ್ಲಿಟ್ಟಿದ್ದ 26 ಗ್ರಾಂದ ಬಂಗಾರದ ನೆಕಲೆಸ್ ಅಂ.ಕಿ. 20 ಸಾವಿರ ರೂ. ಮತ್ತು 5 ಗ್ರಾಂ ನ ಬೆಂಡೋಲಿ ಜುಮಕಿ ಮಾಟೆಲ್ ಅಂ.ಕಿ. 4 ಸಾವಿರ ಒಟ್ಟು 24 ಸಾವಿರ ರೂ. ಮೌಲ್ಯದ ಬಂಗಾರದ ಸಾಮಾನುಗಳನ್ನು ದಿನಾಂಕ: 04-03-2017 ರಿಂದ ದಿನಾಂಕ 08-03-2017 ರಂದು 7-00 ಎ.ಎಂ. ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008