1] ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ. ನಂ: 60/2017 ಕಲ0: 143, 147, 447, 379, 506 ಸಹಿತ 149 ಐಪಿಸಿ.
ದಿನಾಂಕ:- 11-03-2017 ರಂದು ಬೆಳಿಗ್ಗೆ 11:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸೈಯ್ಯದ್
ಖಾಜಾಪೀರ್ ತಂದೆ ಸೈಯ್ಯದ್ ಉಸ್ಮಾನ್, 40 ವರ್ಷ ಸಾ: ಚಿಕ್ಕಜಂತಕಲ್ ತಾ: ಗಂಗಾವತಿ. ಇವರು ಫಿರ್ಯಾದಿಯನ್ನು
ನೀಡಿದ್ದು, ಚಿಕ್ಕಜಂತಕಲ್ ಗ್ರಾಮದ ಸರ್ವೆನಂ: 259, 255/1, 255/2 ಭೂಮಿಗಳು ನನ್ನ ಹಾಗೂನಮ್ಮ ಕುಟುಂಬದ
ಭೂಮಿಗಳಾಗಿದ್ದು, ನಮ್ಮ ಖಬ್ಜಾ ಹಾಗೂ ಸ್ವಾಧೀನಾನುಭವನದಲ್ಲಿರುತ್ತದೆ. ಸನ್ 2012 ನೇ ಇಸ್ವಿಯಲ್ಲಿ
ಸೈಯ್ಯದ್ ಅಲಿ ಮತ್ತು ಸೈಯ್ಯದ್ ಗೌಸಪೀರ್ ಇವರು ನನ್ನ ಸ್ವಾಧೀನಕ್ಕೆ ಅಡ್ಡಿಪಡಿಸಿದ್ದರಿಂದ ನಾನು ಮತ್ತು
ನಮ್ಮ ಕುಟುಂಬದವರು ಸೇರಿಕೊಂಡು ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಗಂಗಾವತಿಯಲ್ಲಿ ಮೂಲದಾವೆ ಸಂಖ್ಯೆ:
374/2012 ರನ್ವಯ ದಾವೆ ಹೂಡಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯವು ಮಧ್ಯಂತರ ನಿಷೇಧಾಜ್ಞೆಯ ಆದೇಶ
ಮಾಡಿದ್ದು ಇರುತ್ತದೆ. ಆದರೆ (1) ಸೈಯ್ಯದ್ ಅಲಿ ತಂದೆ ದಿ: ಸೈಯ್ಯದ್ ಅಬ್ದುಲ್ ರೌಫ್ ಸಾಬ
(2) ಸೈಯ್ಯದ್ ಗೌಸ್ ಪೀರ್ ತಂದೆ ಸೈಯ್ಯದ್ ಅಬ್ದುಲ್ ರೌಫ್ (3) ಸೈಯ್ಯದ್ ಖಾಜಾ ಮೈನುದ್ದೀನ್ @ ಮುದಸರ್
ತಂದೆ ಸೈಯ್ಯದ್ ಗೌಸ್ ಪೀರ್ (4) ಸೈಯ್ಯದ್ ಖಾಲೀದ್ ತಂದೆ ಸೈಯ್ಯದ್ ಗೌಸ್ ಪೀರ್. (5) ಸೈಯ್ಯದ್ ಖಾಜಿಂ
ತಂದೆ ಸೈಯ್ಯದ್ ಅಲಿ ಸಾ: ಗಂಗಾವತಿ (6) ಗೆಜ್ಜಳ್ಳಿ ಬಾಷಾ ಸಾ:ಕಂಪ್ಲಿ-ಕೋಟೆ ಇವರುಗಳು ಕಾನೂನು ಬಾಹೀರವಾಗಿ
ದಿನಾಂಕ:- 28-01-2017 ಮತ್ತು 29-01-2017 ರಂದು ರಾತ್ರಿ ವೇಳೆಯಲ್ಲಿ ನಮ್ಮ ಸ್ವಾಧೀನದಲ್ಲಿರುವ
ಸರ್ವೆ ನಂಬರ್ ಭೂಮಿನಲ್ಲಿ ನಾವು ಕಬ್ಬಿನ ಬೆಳೆ ಬೆಳೆದು ಕಟಾವು ಮಾಡಿ ಇಟ್ಟಿದ್ದ ಸುಮಾರು
4,00,000-00 ರೂ. ಬೆಲೆಯ ಕಬ್ಬನ್ನು 1) ದಾಸನೂರು ಹುಸೇನಿ (2) ಶಿವಲಿಂಗ ಸ್ವಾಮಿ (3) ವೀರೇಶ ತಂದೆ
ಸೋಮಪ್ಪ ಇವರುಗಳ ಟ್ರ್ಯಾಕ್ಟರಗಳಿಂದ ಕಳವು ಮಾಡಿಕೊಂಡು ಸಾಗಿಸಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 44/2017, ಕಲಂ:
379 ಐ.ಪಿ.ಸಿ:.
ದಿ:11-01-2017 ರಂದು 12-15
ಪಿ.ಎಮ್ ಕ್ಕೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ
ದೂರಿನ ಸಾರಾಂಶವೇನೆಂದರೇ, ದಿ: 06-01-2017 ರಂದು 06-00 ಎ.ಎಮ್ ಕ್ಕೆ ಲೇಬಗೇರಿ ಸೀಮಾದಲ್ಲಿರುವ ಫಿರ್ಯಾದಿದಾರರ ತೋಟದಲ್ಲಿದ್ದ, 1] 5 ಹೆಚ್.ಪಿ ಯ ಒಂದು ರಿಗ್ ಬೋರ ಮೋಟರ. ಅಂಕಿ. 8000=00. ರೂ. 2] 2 ಹೆಚ್.ಪಿ ಯ 02 ರಿಗ್ ಬೋರ ಮೋಟರಗಳು. ಅಂಕಿ. 10,000=00. ರೂ. 3] 20 ಅಡಿ ಉದ್ದದ 07 ಪೈಪುಗಳು. [ಜಿ.ಐ ಟಾಟಾ]
ಅಂಕಿ. 7,000=00. ರೂ. 4] ಒಂದು ಸ್ಟಾಟರ್ ಬಾಕ್ಸ ಅಂಕಿ. 500=00. ರೂ. 5] 02 ಕೇಬಲ್ ವೈಯರ ಅಂಕಿ. 5,000=00. ರೂ. ಒಟ್ಟು 30,500=00 ರೂ. ಬೆಲೆಬಾಳುವ ಮೋಟರ ಮತ್ತು
ಸಾಮಾನುಗಳು ಕಳ್ಳತನವಾಗಿದ್ದು, ರಿಯಾಜ ಅಹ್ಮದ್ ಮೇಸ್ತ್ರಿ ಸಾ: ಕೊಪ್ಪಳ ಇತನ ಮೇಲೆ ಸಂಶಯ ವಿರುತ್ತದೆ. ಪ್ರಕರಣವನ್ನು
ದಾಖಲಿಸಿ ತಪಾಸಣೆ ಕೈಗೊಂಡಿದ್ದು ಅದೆ.
3] ಮಹಿಳಾ ಪೊಲೀಸ್ ಠಾಣೆ ಕೊಪ್ಪಳ
ಗುನ್ನೆ. ನಂ: 1/2017,
ಕಲಂ: 498(ಎ), 324, 504, 506 ಸಹಿತ 34 ಐ.ಪಿ.ಸಿ.
ದಿನಾಂಕ 22-01-2017 ರಂದು ಪಿರ್ಯಾಧಿ ಶಾಂತಮ್ಮ ಇವರು ನೀಡಿದ ದೂರಿನ ಸಾರಾಂಶವೇನೆಂದರೆ, ನನಗೆ ಕಳೆದ 03 ವರ್ಷಗಳ ಹಿಂದೆ ಮುಂಡರಗಿಯ ನಾಗರಾಜ ಈತನೊಂದಿಗೆ ಮದುವೆ ಮಾಡಿದ್ದು ನನ್ನ ಗಂಡ ನನಗೆ ತವರು ಮನೆಗೆ ಕಳುಹಿಸದೆ ನನ್ನ ಮೇಲೆ ಸಂಶಯ ಮಾಡಿ ಕಿರುಕುಳ ನೀಡಲು ಪ್ರಾರಂಭಿಸಿದನು ಕಳೆದ 15 ದಿನಗಳ ಹಿಂದೆ ನನಗೆ ನನ್ನ ತವರು ಮನೆಯವರು ಕೊಪ್ಪಳ ಕರೆದು ಕೊಂಡು ಬಂದಿದ್ದು, ನನಗೆ ಡೆಲೆವರಿ ಆಗಿದ್ದು ವಿಶ್ರಾಂತಿಯಲ್ಲಿದ್ದೆನು. ದಿನಾಂಕ: 21-01-2017 ರಂದು ಬೆಳಗ್ಗೆ 11-30 ಗಂಟೆಗೆ ನನ್ನ ಗಂಡ ನಾಗರಾಜ ಮತ್ತು ನನ್ನ ಅತ್ತೆ ಗಂಗಮ್ಮ ಇವರು ಕೊಪ್ಪಳದ ನಮ್ಮ ತಂದೆಯ ಮನೆಗೆ ಬಂದು ನನಗೆ ಏನೂ ವಿಚಾರಿಸದೇ, ಏಕಾಏಕೀ ಲೇ ಸೂಳೆ ಬೋಸೂಡಿ, ನೀನು ಇನ್ನು ಎಷ್ಟು ದಿನ ತವರು ಮನೆಯಲ್ಲಿ ಇರುತ್ತೀ ನಮ್ಮ ಸಂಗಡ ಬಾ ಅಂತಾ ಒತ್ತಾಯ ಮಾಡಿದ್ದರು. ಆಗ ನಾನು ಕೂಡು ಸತ್ತಿದೆ ದುಖ:ದಲ್ಲಿದ್ದೇನೆ. ತಡವಾಗಿ ತಡವಾಗಿ ಬರುತ್ತೇನೆ ಅಂತಾ ಹೇಳಿದರೂ ಕೇಳದೇ ನನ್ನ ಗಂಡ ತನ್ನ ಲೆಟ್ಟಿನಿಂದ ನನ್ನ ಮೈ ಕೈಗೆ ಮನಬಂದಂತೆ ಬಡಿದಿದ್ದಾನೆ. ಸ್ಥಳದಲ್ಲಿದ್ದವರು ಬಿಡಿಸಿಕೊಳ್ಳಲು ಲೇಸೂಳೆ ನೀನು ಇಷ್ಟು ಜನರಿಗೆ ರಾದ್ದಾಂತ ಮಾಡಿಯಂದರ ನಮ್ಮ ಊರಿಗೆ ಬಂದರೆ ನಿನಗೆ ಹೊಡೆದು ಸಾಯಿಸುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು, ನನ್ನ ಗಂಡ ನಾಗರಾ ಮತ್ತು ಅತ್ತೆ ಗಂಗಮ್ಮ ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನಲ್ಲಿ ಗಂಡ ಹೆಂಡತಿಯ ಕೌಟುಂಬಿಕ ಸಮಸ್ಯೆ ಇದುದ್ದರಿಂದ ಪರಿಹರಿಸುವಂತೆ ಕೊಪ್ಪಳ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿದ್ದು, ಆದರೆ ಸಮಸ್ಯ ಬಗೆಹರಿದಿರುವದಿಲ್ಲವೆಂದು ಮಧ್ಯಸ್ಥಿಕೆ ಕೇಂದ್ರದವರು ವಾಪಸ್ ದೂರನ್ನು ಠಾಣೆಗೆ ಕಳಿಸಿದ್ದರಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಕನೂರ ಪೊಲೀಸ್ ಠಾಣೆ ಗುನ್ನೆ. ನಂ: 15/2017, ಕಲಂ:
379 ಐ.ಪಿ.ಸಿ.
ದಿನಾಂಕ: 11-03-2017 ರಂದು ಮಧ‍್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರನಾದ
ಸುಭಾಸರೆಡ್ಡಿ ತಂದೆ ಪುಂಡರಡ್ಡೆಪ್ಪ ಮಾದಿನೂರು ಸಾ: ಶಿರೂರು ಇವರು ದೂರನ್ನು ನೀಡಿದ್ದು ದಿನಾಂಕ:
01-03-2017 ರಂದು ರಾತ್ರಿ 11 ಗಂಟೆ ಸುಮಾರು ಪಿರ್ಯಾದಿದಾರನು ತನ್ನ ಮೋಟಾರ್ ಸೈಕಲ್ ನಂ. ಕೆಎ-37/ಯು-8859
ನೇದ್ದನ್ನು ತನ್ನ ಮನೆಯ ಬಾಜು ಇರುವ ತನ್ನ ಖಾಲಿ ಜಾಗೆಯಲ್ಲಿ ನಿಲ್ಲಿಸಿದ್ದು, ನಂತರ ದಿನಾಂಕ:
02-03-2016 ರಂದು ಮುಂಜಾನೆ 06 ಗಂಟೆ ಸುಮಾರಿಗೆ ಪಿರ್ಯಾದಿದಾರನು ಎದ್ದು ತನ್ನ ಮೋಟಾರ ಸೈಕಲ್ ನೋಡಲು
ಕಂಡುಬಂದಿರುವದಿಲ್ಲ. ಸದರಿ ಮೋಟಾರ್ ಸೈಕಲ್‍್ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು,
ಮೋಟಾರ್ ಸೈಕಲ್‍್ನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಇದ್ದ
ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 15/2017 ಕಲಂ: 379 ಐ.ಪಿ.ಸಿ. ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment