1] ಕುಕನೂರ ಪೊಲೀಸ್ ಠಾಣೆ ಗುನ್ನೆ. ನಂ: 16/2017
ಕಲ0: 87 Karnataka Police Act.
ದಿನಾಂಕ:12-03-2017 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಆರೋಪಿತರು ಬಳಗೇರಿ ಗ್ರಾಮದ
ಎಸ್.ಸಿ. ಕಾಲೋನಿಯಲ್ಲಿಯ ಸಮುದಾಯ ಭವನದ ಮುಂದುಗಡೆ ಇರುವ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು
ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೋಡಗಿದ್ದಾಗ ಅವರ
ಮೇಲೆ ದಾಳಿ ಮಾಡಿದ್ದು, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಖಾಲಿ ಸಿಮೇಂಟ್ ಪ್ಲಾಸ್ಟೀಕ್ ಚೀಲ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 2,100=00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment