1] ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ. ನಂ: 59/2017, ಕಲಂ: 78(3) Karnataka Police Act.
ದಿನಾಂಕ:-
07-03-2017 ರಂದು ಸಂಜೆ 5:45 ಗಂಟೆಗೆ ನಾನು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿರುವಾಗ ಠಾಣಾ
ವ್ಯಾಪ್ತಿಯ ದಾಸನಾಳ ಬ್ರಿಡ್ಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ
ಖಚಿತವಾದ ಮಾಹಿತಿ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್.ಐ. ರವರಿಗೆ ಬಂದಿದ್ದು, ಠಾಣೆಯಲ್ಲಿ ಹಾಜರಿದ್ದ
ಸಿಬ್ಬಂದಿಯವರಾದ ಪಿ.ಸಿ. ನಂ: 361, 363 ಹೆಚ್.ಸಿ. 155, 173, ಮ.ಎ.ಎಸ್.ಐ. ಶ್ರೀಮತಿ ಶಾರವ್ವ ಇವರು
ಮತ್ತು ಇಬ್ಬರು ಪಂಚರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಠಾಣೆಯಿಂದ ಸಂಜೆ 6:00 ಗಂಟೆಗೆ ಹೊರಟು ಮಾಹಿತಿ ಇದ್ದ ಪ್ರಕಾರ
ದಾಸನಾಳ ಬ್ರಿಡ್ಜ್ನಿಂದ ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ಮರೆಯಲ್ಲಿ
ನಿಂತು ನೋಡಲಾಗಿ ಗಂಗಾವತಿ ಕೊಪ್ಪಳ ರಸ್ತೆಯ ಪಕ್ಕದಲ್ಲಿ ಬ್ರಿಡ್ಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಜನರು ಸೇರಿದ್ದು, ಅವರಲ್ಲಿ ಒಬ್ಬ ಹೆಣ್ಣುಮಗಳು 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇವೆ ಅದೃಷ್ಟದ
ಮಟಕಾ ಅಂಕಿಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗಿ ಜನರನ್ನು ಕರೆಯುತ್ತಿದ್ದು, ಮತ್ತು ಇನ್ನೊಬ್ಬಳು
ಜನರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು
ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ
ಅವರ ಮೇಲೆ ದಾಳಿ ಮಾಡಲಾಗಿ ಮ.ಎ.ಎಸ್.ಐ. ರವರು ಮಟಕಾ ಪಟ್ಟಿ ಬರೆಯುತ್ತಿದ್ದವರನ್ನು ಹಿಡಿದಿದ್ದು,
ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕವರ ಹೆಸರು ವಿಚಾರಿಸಲಾಗಿ ಕೂಗುತ್ತಿದ್ದವಳು ತನ್ನ ಹೆಸರು
(1) ಅಜೀಜ್ ಬೇಗಂ ಗಂಡ ಜಿಲಾನಿ ರೊಟ್ಟಿ, ವಯಸ್ಸು 45 ವರ್ಷ, ಜಾತಿ: ಮುಸ್ಲೀಂ ಉ: ರೊಟ್ಟಿ ಮಾರಾಟ
ಸಾ: ದಾಸನಾಳ ತಾ. ಗಂಗಾವತಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವಳು ತನ್ನ ಹೆಸರು (2) ಮೈಬೂಬಿ ಗಂಡ
ಜಲಾಲಸಾಬ, ವಯಸ್ಸು 45 ವರ್ಷ, ಜಾತಿ: ಮುಸ್ಲೀಂ ಉ: ರೊಟ್ಟಿ ಮಾರಾಟ ಸಾ: ದಾಸನಾಳ ಅಂತಾ ತಿಳಿಸಿದ್ದು,
ಅವಳ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 200/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು
ದೊರೆತಿದ್ದು ಇದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ. ನಂ: 21/2017,
ಕಲಂ: 78(3) Karnataka Police
Act.
ದಿನಾಂಕ 07-03-2017 ರಂದು
ಸಂಜೆ 5-45 ಗಂಟೆಯಿಂದ 6-45 ಗಂಟೆಯ ಅವಧಿಯಲ್ಲಿ ಠಾಣಾ ವ್ಯಾಪ್ತಿಯ ಚಿಕ್ಕ-ಮಾದಿನಾಳ ಗ್ರಾಮದ ಸುಂಕ್ಲಮ್ಮನ
ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಚೆನ್ನಪ್ಪ ಈತನು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ
ಮಟಕಾ ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಪಿ.ಎಸ್.ಐ. ಮತ್ತು ಪಂಚರ ಸಮೇತ ದಾಳಿ ಮಾಡಿ ಹಿಡಿದು ಅವನಿಂದ
ನಗದು ಹಣ ರೂ.310/-, 1 ಮಟಕಾ ಪಟ್ಟಿ, 1 ಬಾಲ್ ಪೆನ್ನು ಪಂಚರ ಸಮಕ್ಷಮ ಜಪ್ತ ಮಾಡಿದ್ದು, ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment