1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 57/2017 ಕಲಂ: 379 IPC and KMMCR 1994 Rule 44(1).
ದಿನಾಂಕ: 26-04-2017
ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಶ್ರೀ ಶಂಕರಪ್ಪ ಎಲ್. ಪಿ.ಎಸ್.ಐ. ಹಾಗೂ ಅವರ ಸಿಬ್ಬಂದಿಗಳಾದ
ಶ್ರೀ ರಾಘವೇಂದ್ರ ಹಕಾರಿ ಸಿಪಿಸಿ-427, ಆನಂದ ಹೆಚ್.ಜಿ-342 ಇವರೆಲ್ಲರೂ ಸೇರಿ ಕೂಡಿಕೊಂಡು ಠಾಣಾ ವ್ಯಾಪ್ತಿಯ ಕೇಸಲಾಪುರ ಕ್ರಾಸ್ ಹತ್ತಿರ ಹಾಲಿನ ಡೈರಿ
ಮುಂದುಗಡೆ ಅಕ್ರಮ ಮರಳು ಸಾಗಾಣಿಕೆ ಪತ್ತೆ ಕುರಿತು ನಿಂತುಕೊಂಡಿದ್ದಾಗ, ಲಾರಿ ನಂ: ಕೆಎ-25/ಸಿ-1121
ನೇದ್ದರಲ್ಲಿ ಆರೋಪಿ ನಂ; 01 ಮತ್ತು 02
ಇವರಿಬ್ಬರು ಕೂಡಿಕೊಂಡು ಸರ್ಕಾರಕ್ಕೆ ಸೇರಿದ ತುಂಗಭದ್ರ ನದಿಯಲ್ಲಿಯ
ಮರಳನ್ನು ಸರ್ಕಾರದಿಂದ ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪಾಸ್ ಅಥವಾ ಪರ್ಮೀಟ್ ಪಡೆಯದೇ
ಅಂದಾಜು
10,000-00 ರೂ. ಬೆಲೆ ಬಾಳುವ ಮರಳನ್ನು ಕಳ್ಳತನ ಮಾಡಿ, ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಮೇಲ್ಕಂಡ ತಮ್ಮ ಲಾರಿಯಲ್ಲಿ ತುಂಬಿಕೊಂಡು ಹೋರಾಟಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ, ಮರಳು ತುಂಬಿದ ಲಾರಿಯನ್ನು ಪಂಚರ ಸಮಕ್ಷಮ ವಶ ಪಡಿಸಿಕೊಂಡು ತಂದು ಠಾಣೆಯ ಆವರಣದಲ್ಲಿ
ನಿಲ್ಲಿಸಿದ್ದು ಇರುತ್ತದೆ. ಲಾರಿಯ ಚಾಲಕನು ಮರಳು
ತುಂಬಿದ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 68/2017 ಕಲಂ: 323, 324, 353 ,307,504,
506 IPC
ದಿನಾಂಕ :
26-04-2017 ರಂದು ಸಂಜೆ 5-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಹಾಂತಗೌಡ ತಂದಿ ಶಿವನಗೌಡ ಪಾಟೀಲ್
ಪಿ.ಡಿ.ಓ ಗ್ರಾಮ ಪಂಚಾಯತ್ ಕಾರ್ಯಾಲಯ ಬೇವಿನಾಳ ತಾ- ಗಂಗಾವತಿ ಇವರು ಠಾಣೆಗೆ ಹಾಜರಾಗಿ
ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೇನೆಂದರೆ, ನಾನು ಬೇವಿನಾಳ ಗ್ರಾಮ
ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಂತಾ ಕಾರ್ಯ ನಿರ್ವಹಿಸುತ್ತಿದ್ದು, ಇಂದು ದಿನಾಂಕ
26-04-2017 ರಂದು ಮದ್ಯಾಹ್ನ 2-00 ಗಂಟೆಗೆ ಕುಡಿಯುವ ನೀರಿನ ವಿಷಯದಲ್ಲಿ ದೂರವಾಣಿ ಮುಖಾಂತರ
ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಶಾರಮ್ಮ ಗದ್ದಿ ಇವರ ಪತಿಯಾದ ದ್ಯಾವಣ್ಣ ತಂದೆ ಹನುಮಂತಪ್ಪ ಗದ್ದಿ
ಅವಾಚ್ಯ ಪದಗಳಿಂದ ಬೈದಾಡಿದ್ದು ಅಲ್ಲದೆ ಜೀವದ ಬೇದರಿಕೆ ಹಾಕಿದ್ದು ನಂತರ ಇದೇ ದಿನ ಮದ್ಯಾಹ್ನ
3-30 ಗಂಟೆ ಸುಮಾರಿಗೆ ನಾನು ಬೇವಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ವಿಕ್ಷಣೆಗೆ
ತೆರಳಿದ ಸಂದರ್ಭದಲ್ಲಿ ದ್ಯಾವಣ್ಣ ಗದ್ದಿ ಈತನು ತನ್ನ ಮೋಟಾರ್ ಸೈಕಲ್ ಮೇಲೆ ಬಂದು ನನಗೆ ತೀವ್ರವಾದ
ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸುತ್ತಾರೆ. ನನಗೆ ಬಡಿದು ಕಾಲಿನಿಂದ ಒದ್ದು, ಅವಾಚ್ಯ
ಶಬ್ದದಿಂದ ಹಿನಾಯವಾಗಿ ನಿಂಧಿಸಿ ಸೂಳೇ ಮಗ ಡಾಣಿ ಮಗ ಅಂತಾ ಬೈದು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.
ಯಾವುದೇ ತರನಾದ ಪೊಲೀಸ್ ದೂರನ್ನು ಕೊಟ್ಟರೆ, ನಿನಗೆ ಕೊಲೆ ಮಾಡುತ್ತಿನೆಂದು ಹಾಗೂ ಯಾವುದೇ ಪೊಲೀಸರು
ನನಗೆ ಏನು ಮಾಡಲು ಆಗುವುದಿಲ್ಲ ಅಂತಾ ಕೂಗಾಡಿರುತ್ತಾನೆ. ದ್ಯಾವಣ್ಣ ತಂದೆ ಹನುಮಂತಪ್ಪ ತನು ನನ್ನ
ಮೇಲೆ ತೀವ್ರ ತರನಾದ ಹಲ್ಲೆ ಮಾಡಿ ಕೊಲೆ ಮಾಡಿ ಯತ್ನಿಸುತ್ತಿದ್ದಾಗ ಗ್ರಾಮ ಪಂಚಾಯತಿ ಸಿಬ್ಬಂದಿಯವರಾದ
ಯಮನೂರಪ್ಪ ತಂದೆ ಸೋಮಪ್ಪ, ಕರವಸೂಲಿಗಾರ, ಹನುಮಂತಪ್ಪ ತಂದೆ ಬಸಪ್ಪ ಮೂಲಿಮನಿ ವಾಟರ್ ಮ್ಯಾನ್ ಇವರು
ನನ್ನನ್ನು ರಕ್ಷಿಸಿದರು. ತದನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಬೇವಿನಾಳ ಗ್ರಾಂ ಪಂ ಅದ್ಯಕ್ಷರಾದ ಶ್ರೀ
ಯಮನಪ್ಪ ತಂದೆ ಲಿಂಗಪ್ಪ ಸಾ. ಪನ್ನಾಪೂರ ಇವರಿಗೂ ಹಲ್ಲೆ ಮಾಡಿರುತ್ತಾರೆ ನನ್ನ ಮೇಲೆ ಹಲ್ಲೆ ಮಾಡಿದ
ಸಂದರ್ಭದಲ್ಲಿ ದ್ಯಾವಣ್ಣ ತಂದೆ ಹನುಮಂತಪ್ಪ ಇವರು ಪೂರ್ತಿ ಪಾನಮತ್ತಾರಾಗಿದ್ದರು. ಈತನ ವಿರುದ್ದ ಸೂಕ್ತ
ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು
ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 69/2017 ಕಲಂ: 323, 354 ,307,504, 506 R/w
34 IPC.
ದಿನಾಂಕ :
26-04-2017 ರಂದು ರಾತ್ರಿ 8-15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶಾರದಮ್ಮ ಗಂಡ ದ್ಯಾವಣ್ಣ
ಗದ್ದಿ ವಯ 35 ವರ್ಷ ಜಾತಿ ಕುರುಬರ ಮನೆಗೆಲಸ ಮತ್ತು 3 ನೇ ವಾರ್ಡ ಗ್ರಾಮ ಪಂಚಾಯತ ನಾಗನಕಲ್ ಸದಸ್ಯರು
ಸಾ. ನಾಗನಕಲ್ ತಾ- ಗಂಗಾವತಿ.ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು
ಕೊಟ್ಟಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ಬೇವಿನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ
ನಾಗನಕಲ್ ಗ್ರಾಮದ 3 ನೇ ವಾರ್ಡದ ಗ್ರಾಮ ಪಂಚಾಯತಿ ಹಾಲಿ ಸದಸ್ಯಳಿರುತ್ತಾರೆ. ಈ ದಿನ ದಿನಾಂಕ
26-04-2017 ರಂದು ಮದ್ಯಾಹ್ನ 4-50 ಗಂಟೆ ಸುಮಾರಿಗೆ ಫಿರ್ಯಾದಿದಾರರು ಮತ್ತು ಅದೇ ಗ್ರಾಮದ ಗ್ರಾಮ
ಪಂಚಾಯತ ಸದಸ್ಯರಾದ ಪಂಪಾಪತಿ ತಂದೆ ಹನುಮಂತಪ್ಪ ಇಬ್ಬರು ಕೂಡಿಕೊಂಡು ಗ್ರಾಮದ ಅಭಿವೃದ್ದಿ ವಿಚಾರವಾಗಿ
ಮತ್ತು ನೀರಿನ ಕಾಂಗಾರಿ ವಿಷಯವಾಗಿ ಮಾತನಾಡು ಕುರಿತು ಬೇವಿನಾಳ ಗ್ರಾಮದ ಕೆರೆ ಒಡ್ಡಿ ಹತ್ತಿರ ಬರುತ್ತಿದ್ದಾಗ
ನಮೂದು ಮಾಡಿದ ಆರೋಪಿತರು ಕೂಡಿ ಫಿರ್ಯಾದಿದಾರರಿಗೆ ಪಿಡಿಓ ಮಹಾಂತಗೌಡ ಪಾಟೀಲ್ ಈತನು ಫಿರ್ಯಾದಿದಾರರಿಗೆ
ನಿನೇನು ಕೇಳಾಕ ಬಂದಿ ಹೆಂಗಸಾಗಿ ನಿನಗೇನು ಗೊತ್ತಿದೆ ಅಂತಾ ನಿನ್ನನ್ನು ಸದಸ್ಯಳಾಗಿ ಮಾಡಿದ್ದಾರೆ
ಹೋಗಲೇ ಎಂದು ಅವಾಚ್ಯವಾಗಿ ಬೈದಾಡಿದ್ದು ಅಲ್ಲದೆ ಅಲ್ಲಿಗೆ ಬಂದ ಫಿರ್ಯಾದಿದಾರರ ಗಂಡನಿಗೂ ಕೂಡ ಅವಾಚ್ಯವಾಗಿ
ಲೇ ಸೂಳೇ ಮಗನೇ ನಿನ್ನ ಹೆಂಡತಿ ಸರಿಯಾಗಿ ನೋಡಿಕೋ ಇಲ್ಲದಿದ್ದರೆ ನಾನು ಆಕೆಗೆ ನೋಡಿಕೊಳ್ಳುತ್ತೇನೆ
ಆಕೆಯನ್ನು ನನ್ನ ಹತ್ತಿರ ಕಳಿಸು ಅಂತಾ ಬೈದಾಡಿದ್ದು ಆಗ ಫಿರ್ಯಾದಿ ಮತ್ತು ಪಂಪಾಪತಿ ಇವರು ಆತನಿಗೆ
ಈ ರೀತಿಯಾಗಿ ಮಾತನಾಡುವುದು ಸರಿ ಅಲ್ಲ ಅಂದಿದ್ದಕ್ಕೆ ಸದರಿ ಫಿಡಿಓ ಈತನು ಒಮ್ಮಿಂದೊಮ್ಮಲೆ ಸಿಟ್ಟಿಗೆ
ಬಂದು ಲೇ ಸೂಳೇ ಮಗನೇ ನಿನ್ನ ಹೆಂಡತಿ ಮೇಂಬರ್ ಅದಾಳ ನಿನೇನು ಕೇಳತಿಲೇ ಅಂತಾ ಅಂದು ನನ್ನ ಗಂಡನನ್ನು
ಕೊಲೆ ಮಾಡುವ ಉದ್ದೇಶದಿಂದ ಆತನ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆ ಇಸುಕಲು ಹತ್ತಿದ್ದು ಆಗ ಅಲ್ಲಿಯೇ
ಇದ್ದ ನಾನು ಮತ್ತು ಪಂಪಾಪತಿ ಕೂಡಿ ಬಿಡಿಸಿಕೊಂಡೆವು ಮತ್ತು ಸದರಿ ಮಹಾಂತಗೌಡ ಈತನು ಫಿರ್ಯಾದಿದಾರರಿಗೆ
ಮರ್ಯಾದೆ ಕೊಡದೇ ಅವರ ಸೀರೆಯ ಸೆರಗು ಹಿಡಿದು ಜಗ್ಗಾಡಿ ಅವಮಾನಗೊಳಿಸಿ ಫಿರ್ಯಾದಿದಾರರ ಗಂಡನಿಗೆ
ಕಪಾಳಕ್ಕೆ ಹೊಡೆದಿದ್ದು ಅಲ್ಲದೆ ಹನುಮಂತಪ್ಪ ವಾಟರ್ ಮೆನ್ ಮತ್ತು ಯಮನೂರಪ್ಪ ಈಡಿಗೇರ ಬಿಲ್ ಕಲೆಕ್ಟರರ್
ಮತ್ತು ಇಬ್ಬರೂ ಕೂಡಿ ಫಿರ್ಯಾದಿಗೆ ಮತ್ತು ಫಿರ್ಯಾದಿ ಗಂಡನಿಗೆ ಅವಾಚ್ಯವಾಗಿ ಬೈದು ಕೈಯಿಂದ
ಹೊಡೆದು ಕಾಲಿನಿಂದ ಒದ್ದಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ ಮೂರು ಜನರ ವಿರುದ್ದ ಸೂಕ್ತ
ಕಾನೂನು ಕ್ರಮಕ್ಕೆ ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 82/2017 ಕಲಂ. 143,147,341,323,504,506 ಸಹಿತ 149 ಐ.ಪಿ.ಸಿ.
ಫಿರ್ಯಾದಿ ವೀರಯ್ಯ ಕಾತರಕಿ ಸಾ:
ಹೊರತಟ್ನಾಳ ಇವರು ನೀಡಿದ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:25-04-2017 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತನ್ನ ತಂದೆ, ತಾಯಿ, ಅಣ್ಣ, ಅತ್ತಿಗೆ ಇವರ ಸಂಗಡ ಇರುವಾಗ
ಶಿವಮೂರ್ತೆಯ್ಯ ಆಡೂರ ಇತನು ಅಕ್ರಮ ಗುಂಪು ಕಟ್ಟಿಕೊಂಡು ಬಂದು ತನ್ನ ತಂದೆ ಚಿದಾನಂದಯ್ಯನಿಗೆ ಲೇ
ಸೂಳೆಮಗನೇ ಈಗ ಹೊಲಗಳಲ್ಲಿ ಎನ್.ಹೆಚ್ ಕೆಲಸ ನಡೆದಿದೆ ಬಂದಷ್ಟು ಹಣ ತೆಗೆದುಕೋ ಕೋರ್ಟಿನಲ್ಲಿ
ತಕರಾರು ಮಾಡಿದ ಕೇಸು ವಾಪಾಸ್ ತೆಗೆದುಕೊ ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಗಳಿಂದ ಆರೋಪಿತರು ಫಿರ್ಯಾದಿಗೆ ಮತ್ತು ಫಿರ್ಯಾದಿಯ ತಂದೆ, ಅಣ್ಣ ಇವರಿಗೆ ಹಲ್ಲೆ ಮಾಡಿದ್ದು ಅಲ್ಲದೇ ಕೋರ್ಟಿನಲ್ಲಿನ ಕೇಸ್ ವಾಪಸ್
ತೆಗೆದುಕೊಳ್ಳಿರಿ ಇಲ್ಲದಿದ್ದರೆ ನಿಮಗೆಲ್ಲಾ ಹೊಡೆದು ಸಾಯಿಸುತ್ತೇವೆ. ಎಂದು ಪ್ರಾಣದ ಬೆದರಿಕೆ
ಹಾಕಿದ್ದು ಇರುತ್ತದೆ. ಕಾರಣ ಸದರಿ ಶಿವಮೂರ್ತೆಯ್ಯ ಆಡೂರ ಹಾಗೂ ಇತರೆ 05 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 83/2017 ಕಲಂ. 143,147,341,323,504,506 ಸಹಿತ 149 ಐ.ಪಿ.ಸಿ.
ಫಿರ್ಯಾದಿ ಶಿವಮೂರ್ತೆಯ್ಯ
ಆಡೂರ. ಸಾ: ಹೊರತಟ್ನಾಳ ಇವರು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:25-04-2017 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ
ಫಿರ್ಯಾದಿದಾರರು ತನ್ನ ಹೆಂಡತಿ, ಮಗ, ಅಳಿಯಂದಿರು, ಹಾಗೂ ಅತ್ತೆ ಹೀಗೆ ಎಲ್ಲರೂ ನಡೆದುಕೊಂಡು ಅಳಿಯ ರಾಜಶೇಖರ ಮನೆಯಿಂದ
ತಮ್ಮ ಮನೆಗೆ ದಾರಿಯಲ್ಲಿ ಹೋಗುವಾಗ ಆರೋಪಿತರಾದ ಚಿದಾನಂದಯ್ಯ ಹಾಗೂ ಇತರರು ಅಕ್ರಮ ಗುಂಪು
ಕಟ್ಟಿಕೊಂಡು ಬಂದು ಮುಂದೆ ಹೋಗದಂತೆ ಅಡ್ಡಗಟ್ಟಿ ಹೊಲದ ವಿಚಾರವಾಗಿ ಸಿಟ್ಟು ಇಟ್ಟುಕೊಂಡು ಜಗಳ
ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಗಳಿಂದ ಆರೋಪಿತರು ಫಿರ್ಯಾದಿಗೆ ಹೊಡೆದು, ಮತ್ತು ಫಿರ್ಯಾದಿ ಅಳಿಯ ಮಂಜುನಾಥನಿಗೆ ಬಾಯಿಯಿಂದ ಕಚ್ಚಿದ್ದು ಅಲ್ಲದೇ ಫಿರ್ಯಾದಿ ಹೆಂಡತಿಗೆ
ಮಹಿಳೆಯರು ಹಲ್ಲೆ ಮಾಡಿದ್ದು, ಅಲ್ಲದೇ ಊರಿನ ಜನರು ಬಂದು ಬಿಡಿಸಿದ್ದಕ್ಕೆ ಉಳಿದುಕೊಂಡಿರಿ ಸೂಳೇ ಮಕ್ಕಳೇ ಇಲ್ಲದಿದ್ದರೆ
ನಿಮಗೆ ಹೊಡೆದು ಸಾಯಿಸುತ್ತಿದ್ದೆವು. ಎಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಸದರಿ
ಚಿದಾನಂದಯ್ಯ ಕಾತರಕಿ ಹಾಗೂ 04 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ಫಿರ್ಯಾಧಿಯ ಮೇಲಿಂದ
ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
6] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 72/2017 ಕಲಂ. 436 ಐ.ಪಿ.ಸಿ.
ದಿನಾಂಕ: 26-04-2017 ರಂದು
ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿ ಕೆ. ವೇಣು ಗೋಪಾಲ
ಕೃಷ್ಣ ತಂದೆ ಕೆ.ನಾಗರಾಜ ಬಾಬು, ಉ: ಹಿಂದುಸ್ತಾನ ಹೋಮ್ ನಿಡ್ಸ್ ಮಾಲಿಕ, ಸಾ: ಬಸ್ ಸ್ಟ್ಯಾಂಡ್ ರೋಡ್
ಗುಂಡಮ್ಮ ಕ್ಯಾಂಪ್ ಗಂಗಾವತಿ ಇವರು ಠಾಣೆಗೆ ಹಾಜರಾಗಿ ಒಂದು ಗಣೀಕೃತ ಫಿರ್ಯಾದಿಯನ್ನು ಹಾಜರ ಪಡಿಸಿದ್ದು
ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ದಿನಾಂಕ: 26-04-2017 ರಂದು ರಾತ್ರಿ 1-00 ಗಂಟೆ ಸುಮಾರಿಗೆ
ಫಿರ್ಯಾದಿಯು ಹೊರಗಡೆ ಬಂದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ್ದ ಓಮಿನಿ ವಾಹನ ನಂ ಕೆ.ಎ 37/ ಎಂ1164
ನೇದ್ದು ಬೆಂಕಿ ಹತ್ತಿ ಸುಡುತ್ತಿದ್ದು ಸದರಿ ವಾಹನವನ್ನು ಆರಿಸಲು ಅದು ಸಂಪೂರ್ಣವಾಗಿ ಸುಟ್ಟಿಹೋಗಿರುತ್ತದೆ.
ನಂತರ ಅಂಗಡಿಯ ಮುಂದೆ ಇಟ್ಟಿದ್ದ ಇತರೇ ಸಾಮನಾಗಳನ್ನು ನೋಡಲಾಗಿ 2 ಫ್ರಿಜ್ ಮತ್ತು 2 ವಾಷಿಂಗ್ ಮಷಿನ್
ಗಳನ್ನು ತೆಗೆದುಕೊಂಡು ಹೋಗಿ ತಮ್ಮ ಅಂಗಡಿಯ ಹಿಂದೆ ಇರುವ ಗುಂಡಮ್ಮ ಕ್ಯಾಂಪಿನ ಸಂತೆ ಬಯಲಿನಲ್ಲಿ ಸುಟ್ಟು
ಹಾಕಿರುತ್ತಾರೆ ಯಾರೋ ದುಷ್ಕರ್ಮಿಗಳು ನನ್ನ ಮೇಲೆ ಹಗೆ ಸಾದಿಸುವುದಕ್ಕಾಗಿ ಈ ರೀತಿ ಕೃತ್ಯವನ್ನು ಮಾಡಿರುತ್ತಾರೆ
ಇದರಿಂದ ನನಗೆ ತುಂಬಾ ಆರ್ಥಿಕ ನಷ್ಠವಾಗಿರುತ್ತದೆ ಎಂದು ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
7] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 96/2017 ಕಲಂ. 87 Karnataka Police Act.
ದಿನಾಂಕ :26-04-2017 ರಂದು ರಾತ್ರಿ 10-30 ಗಂಟೆಗೆ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ
ಠಾಣೆ ರವರಿಗೆ ಕುಷ್ಟಗಿ ಪಟ್ಟಣದ
ಸರಕಾರಿ ಡಿಪ್ಲೋಮೊ ಕಾಲೇಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ
ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಸಿಬ್ಬಂದಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ
ಹೋಗಿ ರೇಡ್ ಮಾಡಿ 7 ಜನ ಆರೋಪಿ 1] ರಾಜಶೇಖರ ತಂದೆ ಸಿದ್ದಲಿಂಗಪ್ಪ ಹೊಸಮನಿ ವಯಾ: 42 ವರ್ಷ ಜಾತಿ: ಲಿಂಗಾಯತ ಉ: ಕೂಲಿಕೆಲಸ
ಸಾ: ವಿಷ್ಣುತೀರ್ಥನಗರ ಕುಷ್ಟಗಿ 2] ಹುಲಗಪ್ಪ ತಂದೆ ಹನುಮಂತಪ್ಪ ಆಲೂರ ವಯಾ: 35 ವರ್ಷ ಜಾತಿ: ಹಿಂದೂ ಮಾದಿಗ ಉ: ಡ್ರೈವರ್
ಸಾ: ಬಿ.ಬಿ.ನಗರ ಕುಷ್ಟಗಿ 3] ಚನ್ನಬಸಯ್ಯ ತಂದೆ
ಗುರುಸಿದ್ದಯ್ಯ ಗಣವಾರಿ ವಯಾ: 36 ವರ್ಷ ಜಾತಿ: ಜಂಗಮ ಉ: ಒಕ್ಕಲುತನ ಸಾ: ಹಳೇಬಜಾರ ಕುಷ್ಟಗಿ
4] ಶ್ಯಾಮೀದ ತಂದೆ
ಖಾಸಿಂಸಾಬ ಕಲಾಲಬಂಡಿ ವಯಾ: 35 ವರ್ಷ ಜಾ:ಮುಸ್ಲಿಂ
ಉ:ಕೂಲಿಕೆಲಸ ಸಾ: ಮುಲ್ಲಾರ ಓಣಿ ಕುಷ್ಟಗಿ 5] ಸೈಯದ್ ಅನ್ವರ ತಂದೆ ದಾದೇಸಾಬ ಅತ್ತಾರ ವಯಾ: 50 ವರ್ಷ ಜಾತಿ: ಮುಸ್ಲಿಂ ಉ:ವ್ಯಾಪರ ಸಾ: ನಾಯಕವಾಡಿ ಓಣಿ ಕುಷ್ಟಗಿ
6) ಬಸವರಾಜ ತಂದೆ ತಿಪ್ಪಣ್ಣ ಬುಡಕುಂಟಿ ವಯಾ 42 ವರ್ಷ ಜಾ:ಲಿಂಗಾಯತ ಉ:ಒಕ್ಕಲುತನ ಸಾ:ಹಳೇಬಜಾರ ಕುಷ್ಟಗಿ
ಮತ್ತು 7) ಗೋಪರಪ್ಪ ತಂದೆ ಸಂಗನಬಸಪ್ಪ ಕುಡತನಿ ವಯಾ 55 ವರ್ಷ ಜಾ:ಲಿಂಗಾಯತ ಉ:ವ್ಯಾಪರ ಸಾ:ಬಿ.ಬಿ.ನಗರ
ಕುಷ್ಟಗಿ ಇವರು ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು
ಹಣ 6090=00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆ ನ್ಯೂಸ್
ಪೇಪರರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
8] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 38/2017 ಕಲಂ. 78(3) Karnataka Police Act.
ದಿನಾಂಕ: 26-04-2017
ರಂದು
ಸಾಯಾಂಕಾಲ 16-25
ಗಂಟೆ ಸುಮಾರಿಗೆ ಹೂಲಗೇರಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ
ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಶ್ರೀ ತಿಪ್ಪೇಸ್ವಾಮಿ ರವರು ಹಾಗೂ ಸಿಬ್ಬಂದಿ
ಹೋಗಿ ದಾಳಿ
ಮಾಡಲಾಗಿ ಮಟಕಾ ನಂಬರ ಬರೆದುಕೊಂಡು ಹಣ ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು ಅವರ ಹೆಸರು ವಿಳಾಸ ವಿಚಾರಿಸಲು
ತನ್ನ ಹೆಸರು ಈರಪ್ಪ ತಂದೆ ಬಸಪ್ಪ ಸಂಕನೂರು ವಯಾ: 50 ವರ್ಷ, ಜಾತಿ: ಪಂಚಮಸಾಲಿ, ಸಾ: ಹೂಲಗೇರಿ
ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಚೀಟಿ, 2350=00 ರೂಪಾಯಿ ನಗದು ಹಣ ಹಾಗೂ ಒಂದು
ಬಾಲಪೆನ್ನ ಜಪ್ತಮಾಡಿಕೊಂಡಿದ್ದು ನಂತರ ಸದರಿ ಆರೋಪಿ ಈರಪ್ಪನಿಗೆ ಈ ಮಟಕಾ ಚೀಟಿಯನ್ನು ಯಾರಿಗೆ ಕೊಡುವದಾಗಿ
ಕೇಳಿದಾಗ ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
9] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 94/2017 ಕಲಂ 279,
337, 338, 304(A) ಐ.ಪಿ.ಸಿ..
ಫಿರ್ಯಾದಿ
ಗಾಯಾಳು ಶಿವು ತಂದೆ ದುರುಗಪ್ಪ ವಯಸ್ಸು: 30 ವರ್ಷ ಜಾತಿ: ವಡ್ಡರ, ಉ: ಕಲ್ಲು ಒಡೆಯುವದು. ಸಾ: ಮಲ್ಲಾಪೂರ
ತಾ: ಗಂಗಾವತಿ ಈತನ ನುಡಿ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಅದರ ಸಾರಾಂಶ ಏನಂದರೆ, ದಿನಾಂಕ:-
26-04-2017 ರಂದು ವೈಯಕ್ತಿಕ ಕೆಲಸದ ನಿಮಿತ್ಯ ಜಂಬುನಾಥನ ಬಜಾಜ ಪಲ್ಸರ್ ಮೋಟಾರ ಸೈಕಲ್ ನಂ: ಕೆ.ಎ-37/
ಇ.ಸಿ-2267 ನೇದ್ದರಲ್ಲಿ ಮಲಕನಮರಡಿಗೆ ಹೋಗುತ್ತಿದ್ದಾಗ ಮೋಟಾರ ಸೈಕಲನ್ನು ಜಂಬುನಾಥನು ನಡೆಯಿಸುತ್ತಿದ್ದು,
ನಾನು ಮತ್ತು ಪರಶುರಾಮ ಹಿಂಭಾಗದಲ್ಲಿ ಕುಳಿತಿದ್ದೆವು. ರಾತ್ರಿ 8:15 ಗಂಟೆಯ ಸುಮಾರಿಗೆ ನಾವು
ಕೊಪ್ಪಳ-ಗಂಗಾವತಿ ಮುಖ್ಯ ರಸ್ತೆಯಲ್ಲಿ ಬಸಾಪಟ್ಟಣ ಊರ ಮುಂದೆ ರೈಸ್ ಮಿಲ್ ಹತ್ತಿರ ಕೊಪ್ಪಳ ಕಡೆಗೆ
ಹೋಗುತ್ತಿರುವಾಗ ಜಂಬುನಾಥನು ಮೋಟಾರ ಸೈಕಲನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು
ಹೊರಟಿದ್ದು, ಅದೇ ರೀತಿಯಾಗಿ ನಮ್ಮ ಎದುರುಗಡೆ ಕೊಪ್ಪಳ ಕಡೆಯಿಂದ ಸಹ ಒಬ್ಬ ಮೋಟಾರ ಸೈಕಲ್ ಚಾಲಕನು
ತನ್ನ ಮೋಟಾರ ಸೈಕಲನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು,
ಎರಡೂ ಮೋಟಾರ ಸೈಕಲ್ ಚಾಲಕರಿಗೆ ವೇಗವನ್ನು ನಿಯಂತ್ರಿಸಲು ಆಗದೇ ಒಬ್ಬರಿಗೊಬ್ಬರು ಟಕ್ಕರ್ ಕೊಟ್ಟು
ಅಪಘಾತ ಮಾಡಿದ್ದು, ಇದರಿಂದ ನಾವೆಲ್ಲರೂ ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದೆವು. ಇದರಿಂದ ನನಗೆ ಎಡ
ಮತ್ತು ಬಲಗಾಲಿಗೆ, ಕೆಳ ತುಟಿಗೆ ತೆರೆಚಿದ ಗಾಯಗಳಾಗಿದ್ದು, ಮೈಗೆ ಒಳಪೆಟ್ಟಾಯಿತು. ನೋಡಲಾಗಿ ಜಂಬುನಾಥನಿಗೆ
ತಲೆಯ ಹಿಂಭಾಗದಲ್ಲಿ ತೀವ್ರ ರಕ್ತಗಾಯವಾಗಿತ್ತು ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ.
ಪರಶುರಾಮನಿಗೆ ಬಲಗಣ್ಣಿನ ಹತ್ತಿರ ರಕ್ತಗಾಯವಾಗಿತ್ತು, ಬಲಗಣ್ಣಿಗೆ ಸಹ ಪೆಟ್ಟಾಗಿತ್ತು. ಇನ್ನೊಂದು
ಮೋಟಾರ ಸೈಕಲ ಚಾಲಕನಿಗೆ ನೋಡಲಾಗಿ ಆತನಿಗೆ ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು.
ಎಡಗೈಗೆ ಪೆಟ್ಟಾಗಿತ್ತು. ಅದೇ ವೇಳೆಗೆ ಅಲ್ಲಿಗೆ ಬಂದ ಬಸಾಪಟ್ಟಣ ಗ್ರಾಮದವರು ಮೃತಪಟ್ಟ ವ್ಯಕ್ತಿಯನ್ನು
ನೋಡಿ ಆತನ ಹೆಸರು ಅಂಜಿನಪ್ಪ ತಂದೆ ವಾಸನಗೌಡ ರಾವಣಕಿ, ವಯಸ್ಸು 50 ವರ್ಷ ಜಾತಿ: ದೇವಾಂಗ, ಉ: ಸ್ಟೇಷನರಿ
ಅಂಗಡಿ ಸಾ: ಬಸಾಪಟ್ಟಣ ಅಂತಾ ತಿಳಿಸಿದರು. ಆತನು ಚಲಾಯಿಸಿಕೊಂಡು ಬಂದ ಮೋಟಾರ ಸೈಕಲ್ ಹಿರೋ
ಹೋಂಡಾ ಸ್ಪ್ಲೆಂಡರ್ ನಂ: ಕೆ.ಎ-37/ ಆರ್-4963 ಅಂತಾ ಇತ್ತು ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ
ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ