Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, April 4, 2017

1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 19/2017 ಕಲಂ: 143, 147, 504, 323, 506 ಸಹಿತ 149 .ಪಿ.ಸಿ ಹಾಗೂ 3(1)(R)(S) ಕಲಂ 3(2)(V)(a) SC/ST Act.:.
ದಿನಾಂಕ: 03-04-2017 ರಂದು ಸಂಜೆ 7-30 ಗಂಟೆಗೆ ಫಿಯರ್ಾದಿದಾರರು ಠಾಣೆಗೆ ಹಾಜರಾಗಿ, ಕನ್ನಡದಲ್ಲಿ ಗಣಕೀಕಕರಣ ಮಾಡಿದ ಫಿಯರ್ಾದಿಯನ್ನು ನೀಡಿದ್ದು, ಅದರ ಸಾರಾಂಶವೆನೆಚಿದರೆ, ದಿನಾಂಕ: 01-04-2017 ರಂದು ಬೆಳಗ್ಗೆ 7-30 ಗಂಟೆಗೆ ಫಿರ್ಯಾದಿಯದಾರರ ಮನೆಯ ಹತ್ತಿರ ಮಾದಿಗ ಜನಾಂಗದ ಪಾಂಡುರಂಗ ಹಾಗೂ ವಾಲ್ಮೀಕಿ ಜನಾಂಗದ ನಾಯ್ಕ್ಪ್ಪ ಇವರ ನಡುವೆ ಜಗಳವಾಗಿದ್ದು, ಸದರಿ ಜಗಳವನ್ನು ಫಿಯರ್ಾದಿದಾರರು ಹಾಗೂ ಇತರರು ಸೇರಿ ಬೀಡಿಸಿದ್ದು ಇರುತ್ತದೆ. ನಂತರ ಬೆಳಗ್ಗೆ 08-30 ಗಂಟೆಗೆ ಫಿಯರ್ಾದಿದಾರರ ಸಮಾಜದ ಜನರು ತಮ್ಮ ಗುಡಿಯಲ್ಲಿ ಇದೇ ಜಗಳದ ವಿಷಯವಾಗಿ ಮಾತನಾಡುತ್ತಾ ಕುಳಿತುಕೊಂಡಿದ್ದಾಗ, ಆರೋಪಿತರೆಲ್ಲರೂ ಅಕ್ರಮ ಗುಂಪು ಕಟ್ಟಿಕೊಂಡು ಹರಿಜನ ಕಾಲೋನಿಗೆ ನುಗ್ಗಿ ಬಂದು, ಸಿಕ್ಕ ಸಿಕ್ಕವರಿಗೆ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಹೊಡೆ-ಬಡೆ ಮಾಡಿ ತೊಂದರೆ ಕೊಟ್ಟಿರುತ್ತಾರೆ, ಅಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ನಮಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿನಿಂದನೆ ಮಾಡಿ, ಹೊಡೆ ಬಡೆ ಮಾಡಿ, ಜೀವದ ಬೆದರಿಕೆ ಹಾಕಿದ ಮೇಲ್ಕಂಡ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 20/2017 ಕಲಂ: 279,  304[] .ಪಿ.ಸಿ:.
ದಿನಾಂಕ: 03-04-2017 ರಂದು ಸಂಜೆ 6-30 ಗಂಟೆಯ ಸುಮಾರಿಗೆ ಮೃತ ಮಹಾಂತೇಶ ತಂದೆ ಕಾಳಪ್ಪ ಮಂಡಲಗೇರಿ, ವಯ: 26 ವರ್ಷ ಜಾತಿ: ಗೊಲ್ಲರ್, ಉ: ಮಂಜುನಾಥ ಗುಂಪಿನಲ್ಲಿ ಕೆಲಸ ಸಾ: ಅಳವಂಡಿ ಈತನು ಶ್ರೀ ಸಿದ್ಧೇಶ್ವರ ನಗರದ ತಮ್ಮ ಮನೆಯಿಂದ ಅಳವಂಡಿ ಬಸ್ ಬಸ್ಟ್ಯಾಂಡ ಕಡೆಗೆ ನಡೆದುಕೊಂಡು ಶ್ರೀ ಸಿದ್ಧೇಶ್ವರ ಶಾಲೆಯ ಹತ್ತಿರ ರಸ್ತೆಯ ಎಡ ಬದಿಗೆ ಬರುತ್ತಿದ್ದಾಗ ಹಿಂದಿನಿಂದ ಅಂದರೆ ಮುಂಡರಗಿ ಕಡೆಯಿಂದ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ: ಕೆಎ-37 ಇಸಿ-3905 ನೇದ್ದರ ಮೇಲೆ ವಸಂತ ಶಿಳ್ಳಿಕ್ಯಾತರ ಈತನನ್ನು ಕೂಡಿಸಿಕೊಂಡು ಮೋಟಾರ್ ಸೈಕಲ್ ನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯ ಮಾಡುವ ರೀತಿಯಲ್ಲಿ ನಡೆಸಿಕೊಂಡು ಬಂದು ಮಹಾಂತೇಶನಿಗೆ ಟಕ್ಕರ್ ಕೊಟ್ಟು ಅಫಘಾತ ಮಾಡಿದ್ದರಿಂದ ಮಹಾಂತೇಶನಿಗೆ ತಲೆಗೆ, ಹಣೆಯ ಮೇಲೆ, ಬಾಯಿ ಹತ್ತಿರ ಭಾರಿ ಸ್ವರೂಪ ಗಾಯಗಳಾಗಿದ್ದು, ಅಲ್ಲದೇ ಬಲಗಾಲ ಮೋಣಕಾಲ ಕೆಳಗೆ ಭಾರಿ ಸ್ವರೂಪದ ಗಾಯವಾಗಿ ಕಾಲು ಮುರಿದ್ದಂತೆ ಕಂಡು ಬರುತ್ತದೆ. ಅಲ್ಲದೇ ಮೂಗಿನಲ್ಲಿ ರಕ್ತ ಬಂದಿದ್ದು ಇರುತ್ತದೆ. ನಂತರ ಮಹಾಂತೇಶನಿಗೆ ಚಿಕಿತ್ಸೆ ಕುರಿತು ಅಳವಂಡಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ, ಇತನಿಗೆ ಪರೀಕ್ಷಿಸಿದ ವೈಧ್ಯರು ಮಾರ್ಗಮಧ್ಯದಲ್ಲಿ ಮೃತ ಪಟ್ಟಿರುವುದಾಗಿ ತಿಳಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 76/2017 ಕಲಂ: 279, 338, 304(ಎ) .ಪಿ.ಸಿ:.
ದಿನಾಂಕ:03-04-2017 ರಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಗ್ರಾಮದ ಇಂದ್ರೆಪ್ಪ ತಂದೆ ಯಮನಪ್ಪ ಕೊಳ್ಳಿ, 55 ವರ್ಷ, ನಿಂಗಪ್ಪ ತಂದೆ ಬುಡ್ಡಪ್ಪ ಓಲೇಕಾರ 35 ವರ್ಷ, ಹನುಮಂತ ತಂದೆ ಲಕ್ಷಮಪ್ಪ ಉಪ್ಪಾರ, ವಯಸ್ಸು: 48 ವರ್ಷ ನಾಲ್ಕು ಜನರು ಕೂಡಿ ಕೂಲಿಕೆಲಸಕ್ಕೆಂದು ವೆಂಕಟಗಿರಿಯಿಂದ ಚಿಕ್ಕಬೆಣಕಲ್ ಕಡೆಗೆ ಗಾಳಿ ದುರುಗಮ್ಮ ಗುಡಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ನಮ್ಮ ಹಿಂಭಾಗದಿಂದ ಅಂದರೆ ವೆಂಕಟಗಿರಿ ಕಡೆಯಿಂದ ಒಬ್ಬ ಟ್ರಾಕ್ಟರ ಹಾಗೂ ಟ್ರಾಲಿ ಚಾಲಕನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಮಗೆ ಟಕ್ಕರು ಕೊಟ್ಟು ಅಪಘಾತ ಪಡಿಸಿ ಪಲ್ಟಿ ಮಾಡಿದ್ದರಿಂದ ನಾವುಗಳು ಪುಟಿದು ರಸ್ತೆಯ ಪಕ್ಕ ಹೊಲದಲ್ಲಿ ಹೋಗಿ ಬಿದ್ದಾಗ ನನಗೆ ಎಡಗಾಲು ಮೊಣಕಾಲು ಕೆಳಗೆ ಹಾಗೂ ಬಲ ಮಲಕಿನ ಹತ್ತಿರ ಗಾಯವಾಗಿ, ಇಂದ್ರೆಪ್ಪನು ಈತನು ಟ್ರಾಕ್ಟರ್ ಇಂಜಿನನ ಕೆಳಗಡೆ ಸಿಕ್ಕು ತಲೆಗೆ ತೀವ್ರ ರಕ್ತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಜೊತೆಗೆ ಇದ್ದ ನಿಂಗಪ್ಪ ಹಾಗೂ ಹನಮಂತಪ್ಪ ಇಬ್ಬರಿಗೂ ತೆರಚಿದ ಗಾಯ ಹಾಗೂ ತೀವ್ರ ಒಳಪೆಟ್ಟಾಗಿದ್ದು ಇತ್ತು. ಆಗ ಸಮಯ ಮಧ್ಯಾಹ್ನ 1:30 ಗಂಟೆಯಾಗಿತ್ತು. ಅಪಘಾತದ ನಂತರ ಟ್ರಾಕ್ಟರ್ ನಂಬರ್ ನೋಡಲು ಕೆ.ಎ-37/ಟಿ.ಎ- 2296 ಟ್ರಾಲಿ ನಂ- ಕೆ.ಎ-37/ಟಿ.ಬಿ-4081 ಅಂತಾ ಇದ್ದು ಅದರ ಚಾಲಕನ ಹೆಸರು ವಿಚಾರಿಸಲು ಹನುಮಂತಪ್ಪ ಹೆಚ್. ತಂದೆ ಕನಕಪ್ಪ ಸಾ: ಗಂಗಾವತಿ ಅಂತಾ ತಿಳಿಸಿದನು. ನಂತರ ಸ್ಥಳಕ್ಕೆ ಬಂದ ನಮ್ಮೂರ ಜನರು ಇಂಜಿನ ಕೆಳಗೆ ಸಿಕ್ಕಿಹಾಕಿಕೊಂಡಿದ್ದ ಇಂದ್ರೆಪ್ಪನ್ನು ಹೊರಗಡೆ ತಗೆದಿದ್ದು ಇರುತ್ತದೆ. ಗಾಯಗೊಂಡ ನಾವು ಮೂರು ಜನರು ಅಲ್ಲಿಂದ ಒಂದು ಅಟೋದಲ್ಲಿ ಚಿಕಿತ್ಸೆ ಕುರಿತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಗಂಗಾವತಿಯ ಡಾ: ಚಿನಿವಾಲರ್ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ನಂತರ ತಡವಾಗಿ ಹೇಳಿ ಬರೆಯಿಸಿದ ದೂರನ್ನು ಕೊಟ್ಟಿರುತ್ತೇನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.


0 comments:

 
Will Smith Visitors
Since 01/02/2008