Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, April 5, 2017

1] ಕೊಪ್ಪಳ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ: 08/2017 ಕಲಂ: 174 ಸಿ.ಆರ್.ಪಿ.ಸಿ:
ದಿನಾಂಕ: 04-04-2017 ರಂದು ಮಧ್ಯಾಹ್ನ 12-00 ಗಂಟೆಗೆ ಫಿರ್ಯಾಧಿ ಶ್ರೀಮತಿ ಸರೋಜಾ ಕರಿಗಾರ ಸಾ: ಇರಕಲಗಡಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಮತ್ತು ನನ್ನ ಗಂಡ ಯಮನೂರಪ್ಪ ಹಾಗೂ ನಮ್ಮ ಕುಟುಂಬ ಇರಕಲಗಡಾದಲ್ಲಿ ಖಾಯಂ ನಿವಾಸಿಗಳಾಗಿದ್ದು, ನನ್ನ ಗಂಡನ ತಂದೆಯ ಹೆಸರಿನಲ್ಲಿ ಇರಕಲಗಡಾದಲ್ಲಿ 2-36 -ಗು ಜಮೀನಿದ್ದು ಅದರಲ್ಲಿಯೇ ನನ್ನ ಗಂಡ ವ್ಯವಸಾಯ ಮಾಡಿ ನಮ್ಮ ಜೀವನ ಸಾಗಿಸುತ್ತಿದ್ದನು. ಕಳೆದ 3-4 ವರ್ಷಗಳಿಂದ ಸರಿಯಾಗಿ ಮಳೆ ಬಾರದೇ ಇದ್ದುದರಿಂದ ಬೆಳೆ ಸರಿಯಾಗಿ ಬಾರದೇ ನನ್ನ ಗಂಡ ವಿಪರಿತವಾಗಿ ಕೈಗಾಡ ಸಾಲ ಮಾಡಿಕೊಂಡು ಸಾಲ ತೀರಿಸುವುದು ಹೇಗೆ ಅಂತಾ ಚಿಂತಿ ಮಾಡುತ್ತಿದ್ದನು. ನಿನ್ನೆ ಇರಕಲ್ ಗಡಾದಿಂದ ಕೊಪ್ಪಳಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ತಾನು ಮಾಡಿದ ಸಾಲವನ್ನು ಹೇಗೆ ತೀರಿಸಬೇಕೆಂತಾ ಮನಸ್ಸಿಗೆ ಹಚ್ಚಿಕೊಂಡು ಮನನೊಂದು ಯಾವುದೋ ಕ್ರಿಮಿನಾಶಕ ವಿಷವನ್ನು ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 39/2017 ಕಲಂ: 363 .ಪಿ.ಸಿ:.
ದಿನಾಂಕ: 04-04-2017 ರಂದು 06-30 ಪಿ.ಎಮ್ ಕ್ಕೆ ಫಿರ್ಯಾದಿ ಶ್ರೀಮತಿ ರೋಹಿಣಿ. ಅಧೀಕ್ಷಕರು, ಬಾಲಕರ ಬಾಲಮಂದರ ಇವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ, ಬಾಲಕರ ಬಾಲಮಂದಿರದಲ್ಲಿ ಬಾಲಕ ವಯಾ: 13 ವರ್ಷ ಈತನು ತಾತ್ಕಾಲಿಕವಾಗಿ ದಾಖಲಿಸಿಕೊಂಡಿದ್ದೆವು. ನಂತರ ದಿ: 02-04-2017 ರಂದು ಬೆಳಗ್ಗೆ 9-30 ಗಂಟೆಯಿಂದ 10-00 ಗಂಟೆ ಅವಧಿಯಲ್ಲಿ ಸುಮಾರಿಗೆ ಕಿನ್ನಾಳ ರಸ್ತೆಯ ವಿಜಯನಗರ ಬಡಾವಣೆಯಲ್ಲಿರುವ ಸರ್ಕಾರಿ ಬಾಲಮಂದಿರದಿಂದ ಅಪ್ರಾಪ್ತ ಬಾಲಕ ವಯಾ: 13 ವರ್ಷ ಈತನು ಬಾಲಮಂದಿರದಿಂದ ಎಲ್ಲಿಯೋ ಹೋಗಿರುತ್ತಾನೆ. ನಾವು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಸದರಿ ಅಪ್ರಾಪ್ತ ಬಾಲಕನಿಗೆ ಯಾರೋ ಅಪರಿಚಿತರು ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ಸಂಶಯ ಬಂದಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 59/2017 ಕಲಂ: 420 .ಪಿ.ಸಿ:.

ದಿನಾಂಕ 03-04-2017 ರಂದು ಮದ್ಯಾನ 1-10 ಗಂಟೆ ಸುಮಾರಿಗೆ ಪಿರ್ಯಾದುದಾರಳು ಮುನಿರಾಬಾದ ಆರ್ ,ಎಸ್ ದಲ್ಲಿರುವ ಎಸ್.ಬಿ.ಐ.ಬ್ಯಾಂಕಿನಕಿನಲ್ಲಿ ತನ್ನ ಗಂಡನ ಮರಣದ ಪರಿಹಾರದ ಹಣ 02 ಲಕ್ಷ ರೂ.ಗಳನ್ನು ಆರೋಪಿತನ ಸಹಾಹದಿಂದ ಬ್ಯಾಂಕಿನಲ್ಲಿ ಡ್ರಾ ಮಾಡಿಕೊಂಡು ನಂತರ ಆರೋಪಿತನಿಗೆ ಹಣವನ್ನು ಎಣಿಸಲು ಕೊಟ್ಟಾಗ ಸದರಿ ಆರೋಪಿತನು 02 ಲಕ್ಷ ರೂ.ಗಳನ್ನು ಪೂರ್ಣ ಎಣಿಸಿ ಅದರಲ್ಲಿ ಪಿರ್ಯಾದುದಾರಳಿಗೆ ಗೊತ್ತಾಗದಂತೆ 48000-00 ರೂ ಗಳನ್ನುಬಚ್ಚಿಟ್ಟುಕೊಂಡು   ಮೋಸ ಮಾಡಿರುತ್ತಾನೆ ಅವನಿಗೆ ನಾನು ನೋಡಿದಲ್ಲಿ ಗುರುತಿಸುತ್ತೇನೆ ,ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008