Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, April 15, 2017

1] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 31/2017 ಕಲಂ: 323, 326, 354, 504,506 ಸಹಿತ 34 .ಪಿ.ಸಿ.
ದಿನಾಂಕ: 14-04-2017 ರಂದು ರಾತ್ರಿ 20-30 ಗಂಟೆಗೆ ಫಿರ್ಯಾದಿದಾರರಾದ ಈರಪ್ಪ ತಂದೆ ಸಂಗಪ್ಪ ಹೊಸಗೌಡ್ರ ಸಾ: ಹುಚನೂರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿ ಫಿರ್ಯಾದಿಯನ್ನು ಹಾಜರಪಡಿಸಿದ್ದರ ಸಾರಾಂಶವೇನೆಂದರೆ. ದಿನಾಂಕ: 13-04-2017 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿ ಹಾಗೂ ಅವರ ಮಾವ ಶಂಕ್ರಪ್ಪ, ಬಸವಣ್ಣ ದೇವರ ಗುಡಿಯ ಹತ್ತಿರ ಇದ್ದಾಗ ರಮೇಶ ತುರಮರಿ ಅವಾಚ್ಯ ಬೈದಾಡಿದಾಗ ಫಿರ್ಯಾದಿ ಹಾಗೂ ಅವರ ಮಾವ ಎದ್ದು ಮನೆಯ ಕಡೆಗೆ ಹೋಗಿ ಊಟ ಮಾಡಿ ಮಾತನಾಡುತ್ತಾ ಕುಳಿತಾಗ ರಾತ್ರಿ 10-30 ಗಂಟೆಗೆ ಆರೋಪಿತರೆಲ್ಲರೂ ಕೂಡಿ ಫಿರ್ಯಾದಿಯ ಮನೆಯ ಕಡೆಗೆ ಬಂದು ಲೇ ಶಂಕ್ರ ಮುದಿ ಸೂಳೆ ಮಗನೆ ಬಾರಲೇ ಹೊರಗೆ ಅಂತಾ ಅಂದಾಗ ಫಿರ್ಯಾದಿ ಮತ್ತು ಅವರ ಶಂಕ್ರಪ್ಪ ಮನೆಯಿಂದ ಹೊರಗೆ ಬಂದು ಯಾಕ ರಮೇಶ ಯಂಗ ಮಾತಾಡ್ತಿ ಇದು ಸರಿಯಲ್ಲ ಅಂತಾ ಅಂದಾಗ ರಮೇಶನು ಫಿರ್ಯಾದಿಗೆ  ಭೀಮನಗೌಡ ಶಂಕ್ರಪ್ಪನ ತೆಕ್ಕೆಗೆ ಬಿದ್ದಾಗ ಯಲ್ಲಮ್ಮಳು ಬಿಡಿಸಲು ಬಂದಾಗ ಪರಮ್ಮ ಹಾಗೂ ಚೈತ್ರಾ ತೆಕ್ಕೆಗೆ ಬಿದ್ದಾಗ, ರಮೇಶನು ಅಲ್ಲಿಯೇ ಮನೆಯ ಹತ್ತಿರ ಇದ್ದ ಅಡಿಕೆ ಹೊಡೆಯುವ ಗುಂಡಿನಿಂದ ಯಲ್ಲಮ್ಮಳ ಬಲಗೈ ಮುಂಗೈಗೆ ಗುದ್ದಿ ಭಾರಿ ಒಳಪೆಟ್ಟು ಮಾಡಿದ್ದು, ಬಾವು ಬಂದು ಚೀರಿದಾಗ ಭೀಮನಗೌಡ ಯಲ್ಲಮ್ಮಳ ಎದೆಯ ಮೇಲಿನ ಜಂಪರ್ ಹಿಡಿದು ಎಳೆದು ಅವಮಾನಿಸಿದಾಗ ಜಂಪರಿನ ಎಡಗಡೆ ತೋಳು ಹರಿಯಿತು. ಲೇ ಶಂಕ್ರ ಇವತ್ತ ನಿನ್ನ ತಾಯಿ ಹೊಟ್ಟಿ ತಣ್ಣಗೈತಿ ಉಳಕಂಡಿಯಲೇ ಸೂಳೆ ಮಗನೆ ಅಂತಾ ಜೀವ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ .
2] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 28/2017 ಕಲಂ: 379 ಐ.ಪಿ.ಸಿ.
ಶ್ರೀ ಶಂಕರಪ್ಪ ಲ್. ಪಿ.ಎಸ್.ಐ. ಅಳವಂಡಿ ಪೊಲೀಸ್ ಠಾಣೆ ದಿನಾಂಕ: 14-04-2017 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ತಾವುಗಳು ಹಾಗೂ ಅವರ ತಮ್ಮ ಸಿಬ್ಬಂದಿಯವರೊಂದಿಗೆ ಹಿರೇಸಿಂಧೋಗಿ-ಚಿಕ್ಕಸಿಂಧೋಗಿ ರಸ್ತೆಯ ಮೇಲೆ ಕಾಟ್ರಳ್ಳಿ ಕ್ರಾಸ್ ಹತ್ತಿರ ಅಕ್ರಮ ಮರಳು ಸಾಗಾಣಿಕೆ ಪತ್ತೆ ಕುರಿತು ನಿಂತುಕೊಂಡಿದ್ದಾಗ, ಟ್ರಾಕ್ಟರ್ ನಂ: ಕೆಎ-35/ಟಿಎ-6494 ಹಾಗೂ ನಂಬರ್ ಇಲ್ಲದ ಟ್ರಾಲಿಯಲ್ಲಿ  ಆರೋಪಿ ನಂ; 01 ಮತ್ತು 02 ಇವರಿಬ್ಬರು ಕೂಡಿಕೊಂಡು ಸರ್ಕಾರಕ್ಕೆ ಸೇರಿದ ಹಿರೇಹಳ್ಳದಿಂದ ಸರ್ಕಾರದಿಂದ ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪಾಸ್ ಅಥವಾ ಪರ್ಮೀಟ್ ಪಡೆಯದೇ ಅಂದಾಜು 5,000-00 ರೂ. ಬೆಲೆ ಬಾಳುವ ಮರಳನ್ನು ಕಳ್ಳತನ ಮಾಡಿ, ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಮೇಲ್ಕಂಡ ತಮ್ಮ ಟ್ರಾಕ್ಟರ್ ನಲ್ಲಿ ತುಂಬಿಕೊಂಡು ಹೋರಾಟಾಗ ಫಿರ್ಯಾದಿದಾರರು, ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ, ಮರಳು ತುಂಬಿದ ಟ್ರಾಕ್ಟರ್ ನ್ನು ಪಂಚರ ಸಮಕ್ಷಮ ವಶ ಪಡಿಸಿಕೊಂಡು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ತಾವರಗೇರಾ ಪೊಲೀಸ್ ಠಾಣೆ ಗುನ್ನೆ. ನಂ. 35/2017 ಕಲಂ. 279, 304(ಎ) ಐ.ಪಿ.ಸಿ..
ದಿನಾಂಕ: 14-04-2017 ರಂದು ಫಿರ್ಯಾಧಿದಾರರಾದ ಹುಸೇನಸಾಬ ತಂದೆ ರಸೂಲಸಾಬ ಬಳೋಟಗಿ ವಯ: 56 ವರ್ಷ, ಜಾತಿ: ಮುಸ್ಲಿಂ, ಉ: ಕೂಲಿಕೆಲಸ. ಸಾ: ಕೆ.ಹೋಸುರು ಹಾ.ವಸ್ತಿ: ಹಿರೇವಂಕಲಕುಂಟಾ ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾಧಿಯನ್ನು ಸಲ್ಲಿಸದ್ದು ಸಾರಾಂಶವೆನೆಂದರೆ ದಿನಾಂಕ: 14-04-2017 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಕೆ.ಹೋಸುರು ಗ್ರಾಮದಿಂದ ಹುಸೇನಸಾಬ ವಾಲೀಕಾರ ಈತನು ಪೋನ್ ಮಾಡಿ ನನ್ನ ಅಣ್ಣ ದಾವಲಸಾಬ ಈತನು ಕೆ.ಹೋಸುರು ಗ್ರಾಮದಿಂದ ಟೆಂಗುಂಟಿ ರಸ್ತೆಯಲ್ಲಿರುವ ತಮ್ಮ ಹೊಲಕ್ಕೆ ರಸ್ತೆಯಲ್ಲಿ ನಡೆದುಕೊಂಡು ಹೊಲಕ್ಕೆ ಹೋಗುತ್ತಿರುವಾಗ ಹುಸೇನಸಾಬ ಟೆಂಗುಂಟಿ ರವರ ಹೊಲದ ಹತ್ತಿರ ಇಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ಎಂ. ಬಸಾಪುರ ಗ್ರಾಮದ ಕಲ್ಲಯ್ಯ ಪೊಲೀಸ್ ಪಾಟೀಲ್ ಈತನು ತನ್ನ ಹೊಂಡಾ ಸೈನ್ ಮೋಟರು ಸೈಕಲ್ ನಂ: ಕೆ.ಎ-37/ಇಸಿ5970 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಟಕ್ಕರು ಮಾಡಿ ಕೆಡವಿದ್ದು ಇದರಿಂದ ನಮ್ಮ ಅಣ್ಣನಿಗೆ ತಲೆಯ ಬಲಭಾಗಕ್ಕೆ ಭಾರಿ ಒಳಪೆಟ್ಟು ಮತ್ತು ಬಲಗಡೆ ಮೋಣಕಾಲಿಗೆ ಒಳಪೆಟ್ಟು, ಮತ್ತು ಬೆನ್ನಿಗೆ ಬಲಬಡೆ ಭುಜದ ಮೇಲೆ ತೆರಚಿದ ಗಾಯಗಳಾಗಿದ್ದು ಹೆಚ್ಚಿನ ಇಲಾಜು ಕುರಿತು ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ನಮ್ಮ ಅಣ್ಣ ಇಲಾಜು ಪಡೆಯುತ್ತಿದ್ದಾಗ ಇಲಾಜು ಫಲಿಸದೇ ದಿನಾಂಕ: 14-04-2017 ರಂದು 12-50 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಗಣಕೀಕೃತ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಮುನಿರಾಬಾದ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ. 67/2017 ಕಲಂ. 31(ಒ) ಕೆ.ಪಿ. ಕಾಯ್ದೆ.
ದಿನಾಂಕ: 14-04-2017 ರಂದು 11-00 ಎಎಂ ಕ್ಕೆ  ಶ್ರೀ ಜಯಪ್ರಕಾಶ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ  ಲಿಖಿತ ವರದಿಯನ್ನು ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದುಸದರಿ ದೂರಿನ ಸಾರಾಂಶವೇನೆಂದರೆ  ದಿನಾಂಕ:05-04-2017 ರಂದು 11-00 ಎ.ಎಂ ದಿಂದ 3 ತಾಸಿನ ವರೆಗೆ ವರೆಗೆ ಅಡವಿರಾವ್ ಮತ್ತು ಮಾನಸಯ್ಯ ನೇತೃತ್ವದಲ್ಲಿ ಸುಮಾರು ಜನರು ಯಾರಿಗೂ ಯಾವುದೇ ರೀತಿಯ ಮಾಹಿತಿ ತಿಳಿಸದೆ ಅಥವಾ ಮೇಲಾಧಿಕಾರಿಗಳ ಪರವಾನಿಗೆ ಪಡೆಯದೆ ಮುನಿರಾಬಾದದಿಂದ ಬೆಂಗಳೂರಿಗೆ ಪಾದಯಾತ್ರೆ ಹೋರಟಾಗ NH50 Road ಮೇಲೆ ಅಡತಡೆ ಉಂಟುಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿರುತ್ತಾರೆ  ಎಂದು ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ದಿನಾಂಕ: 14-04-2017 ರಂದು 08-30 Pm ಕ್ಕೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008