Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, April 14, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 63/2017 ಕಲಂ:341, 342, 353 ಸಹಿತ 34 ಐ.ಪಿ.ಸಿ.
ದಿನಾಂಕ 13-04-2017 ರಂದು ಮದ್ಯಹ್ನ 2-00 ಗಂಟೆಗೆ ಪಿರ್ಯಾಧಿ ಆಂಜನೇಯಲು ಮುಖ್ಯ ಇಂಜನಿಯರ್ ನೀರಾವರಿ ಕೇಂದ್ರ ವಲಯ ಮುನಿರಾಬಾದ ಇವರು ಠಾಣೆಗೆ ಬಂದು ಗಣಕಿಕೃತ ಪಿರ್ಯಾದಿಯನ್ನು ನೀಡಿದ್ದು ಅದರ ಸಾರಾಣಶವೇನೆಂದರೆ,ದಿನಾಂಕ 17-03-2017 ರಂದು ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಬೇಡಿಕೆಯನ್ನು ಮುಂದಿಟ್ಟು ಅನಿರ್ದಿಷ್ಟಾವದಿ ಮುಷ್ಕರವನ್ನು ತುಂಗಭದ್ರ ನೀರಾವರಿ ಯೋಜನ ವಲಯ ಹಂಗಾಮಿ ಕಾರ್ಮಿಕರ ಸಂಘ ಯರಮರಸ್ ಸಂಘದ ಅಧ್ಯಕ್ಷರಾದ ಶ್ರೀ ಮಾನಸಯ್ಯ ಮತ್ತು ಉಪಾಧ್ಯಕ್ಷರಾದ ಶ್ರೀ ಅಡವಿರಾವ್ ಮತ್ತಿತರು ಸೇರಿಕೊಂಡು ಹಮ್ಮಿಕೊಂಡಿರುತ್ತಾರೆ, ಆದರೆ ಸದರಿ ಹಾಂಗಾಮಿ ಕಾರ್ಮಿಕರು ದಿನಾಂಕ 27-03-2017 ರಂದು ನೀರಾವರಿ ಕೇಂದ್ರ ವಲಯ ಮುನಿರಾಬಾದ್ ಕಛೇರಿಗೆ ಯಾವುದೇ ಮುನ್ಸೂಚನೆಯನ್ನು ನೀಡದೇ ಆಡಳಿತ ಕಛೇರಿಗಳ ಮೇನ್ ಗೇಟ್ ಗಳಿಗೆ ಬೀಗ ಮುದ್ದರೆಯನ್ನು ಹಾಕಿಯಾವುದೇ ಅಧಿಕಾರಿಗಳು ಕಚೇರಿಯಿಂದ ಳಗೆ ಮತ್ತು ಹೊರಗೆ ಹೋಗದಂತೆ ಕೂಡಿ ಹಾಕಿ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಅಡ್ಡಿ ಪಡಿಸಿರುತ್ತರೆ,ಸದರಿಯವರ ಬೇಡಿಕೆಗಳು ಈಡೇರದೇ ಇದ್ದಲ್ಲಿ ಮತ್ತೆ ಮುಷ್ಕರ ಮುಂದುವರೆಸುವ ಸಾದ್ಯತೆ ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 26/2017 ಕಲಂ: 379 ಐ.ಪಿ.ಸಿ.
ದಿನಾಂಕ: 13-04-2017 ರಂದು ಸಾಯಂಕಾಲ 6-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಉಮೇಶಗೌಡ ಮಾಲಿಪಾಟೀಲ್ ಕಂದಾಯ ನೀರಿಕ್ಷಕರು ಅಳವಂಡಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಪಿರ್ಯಾದಿಯನ್ನು ಹಾಜರು ಪಡಿಸಿದ್ದು, ಸಾರಾಂಶ ಏನಂದರೆ, ಇಂದು ದಿನಾಂಕ: 13-04-2017 ರಂದು ಮಧ್ಯಾಹ್ನ 1-15 ಗಂಟೆ ಸುಮಾರಿಗೆ ಪಿರ್ಯಾದಿದಾರು ಹಾಗೂ ಅವರ ಮೇಲಾಧಿಕಾರಿಗಳಾದ ಶ್ರೀ ಗುರುದತ್ತ ಹೆಗಡೆ ಉಪ-ವಿಭಾಗಾಧಿಕಾರಿಗಳು ಕೊಪ್ಪಳ, ಶ್ರೀ ಗುರುಬಸವರಾಜ ಕೆ.ಎಂ ತಹಶೀಲ್ದಾರರು ಕೊಪ್ಪಳ, ಶ್ರೀಮತಿ ಕೃಷ್ಣವೇಣಿ ಭೂವಿಜ್ಞಾನಿಗಳು, ಗಣಿ ಮತ್ತು ಬೂ ವಿಜ್ಞಾನ ಲಾಖೆ ಕೊಪ್ಪಳ ಇರೆಲ್ಲರೂ ಸೇರಿ ಕೂಡಿಕೊಂಡು ಅಳವಂಡಿ ಗ್ರಾಮದಿಂದ  ನಿಲೋಗಿಪುರ ಗ್ರಾಮದ ಕಡೆಗೆ ಅಕ್ರಮ ಮರಳು ಸಾಗಾಣಿಕೆ ಕುರಿತು ಅಳವಂಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ  ಹೋಗುತ್ತಿದ್ದಾಗ ಶಾಲೆಯ ಆವರಣದಲ್ಲಿ ಕೆಎ-29,ಎ-8541 ನಂಬರಿನ ಟಿಪ್ಪರ್ ನಿಂತ್ತಿದ್ದು, ನಾವು ಎಲ್ಲರೂ ನಮ್ಮ ವಾಹನ ನಿಲ್ಲಿಸಿ, ಸದರ ಟಿಪ್ಪರ ಹತ್ತಿರ ಬಂದು ನೋಡಲು ಟಿಪ್ಪರ್ ಲಾರಿಯಲ್ಲಿ ಅಂದಾಜು 8 ಕ್ಯೂಬಿಕ್ ಮೀಟರ ಮರಳು ತುಂಬಿದ್ದು, ಟಿಪ್ಪರ ಹತ್ತಿರ ಟಿಪ್ಪರಿಗೆ ಸಂಬಂಧಿಸಿದವರು ಯಾರು ಇರಲಿಲ್ಲ. ಸದರ ಮರಳಿನ ಅಂ.ಕಿ-10,000=00 ರೂ ಹಾಗೂ ಟಿಪ್ಪರ್ ಲಾರಿ ಅಂ.ಕಿ- 5,00,000=00 ರೂ ಗಳು ಇರಬಹುದು. ಸದರ ಟಿಪ್ಪರ್ ಲಾರಿ ಚಾಲಕ ಮತ್ತು ಮಾಲಿಕರಿಗೆ ಎಲ್ಲಾ ಖನಿಜಗಳು ಸರ್ಕಾರಿ ಸ್ವತ್ತೆಂದು ಗೊತ್ತಿದ್ದರೂ ಸಹಿತ ಸರಕಾರದಿಂದ ಮತ್ತು ಸಂಬಂಧಪಟ್ಟ ಲಾಖೆಯಿಂದ ಯಾವುದೇ ಪಾಸ್ ಅಥವಾ ಪರವಾನಿಗೆ ಪತ್ರವನ್ನು ಪಡೆಯದೇ ಸರ್ಕಾರ ಸ್ವತ್ತಾದ ಮರಳನ್ನು ಯಾವುದೋ ಹಳ್ಳದಿಂದ ಅಥವಾ ನದಿಯಿಂದ ಕಳ್ಳತನದಿಂದ ಮರಳನ್ನು ಲಾರಿಯಲ್ಲಿ ತುಂಬಿಕೊಂಡು ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಲಾರಿಯಲ್ಲಿ ಮರಳನ್ನು ತುಂಬಿ ನಿಲ್ಲಿಸಿದ್ದು  ಇರುತ್ತದೆ. ಅಕ್ರಮ ಮರಳು ಸಾಗಾಣಿಕೆಯಲ್ಲಿ ತೋಡಗಿದ್ದ ಲಾರಿಯನ್ನು ವಶಪಡಿಸಿಕೊಂಡು ತಂದು ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದು ಇರುತ್ತದೆ. ಕಾರಣ ಸದರ ಟಿಪ್ಪರ ಲಾರಿ ಚಾಲಕ ಹಾಗೂ ಮಾಲಿಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಂತಾಗಿ ಇದ್ದ   ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ. 80/2017 ಕಲಂ 306 ರೆಡ್ ವಿತ್ 34 ಐ.ಪಿ.ಸಿ. ಮತ್ತು ಕಲಂ 3(2)(v) ಎಸ್.ಸಿ/ಎಸ್.ಟಿ. ಪಿ.ಎ. ಆಕ್ಟ್ 1989.
ದಿನಾಂಕ:- 05-04-2017 ರಂದು ಸಂಜೆ 4:00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಯಶೋಧ ಗಂಡ ಕುಮಾರ ಸ್ವಾಮಿ ಆರ್.ಕೆ., ವಯಸ್ಸು 28 ವರ್ಷ, ಜಾತಿ: ಬೋವಿ ಉ: ಮನೆಗೆಲಸ ಸಾ: ಬಂಡಿಬಸಪ್ಪ ಕ್ಯಾಂಪ್ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. “ನನ್ನ ತವರುಮನೆ ಹೈದ್ರಾಬಾದ್ ಇದ್ದು, ಈಗ್ಗೆ 6 ವರ್ಷಗಳ ಹಿಂದೆ ಬಂಡಿಬಸಪ್ಪ ಕ್ಯಾಂಪಿನ ಕುಮಾರಸ್ವಾಮಿ. ಆರ್.ಕೆ. ತಂದೆ ಕೃಷ್ಣಪ್ಪ-35 ವರ್ಷ ಈತನೊಂದಿಗೆ ಮದುವೆಯಾಗಿದ್ದು ಇರುತ್ತದೆ. ನನ್ನ ಗಂಡನ ಸಹೋದರಿಯಾದ ಲಕ್ಷ್ಮೀ ಈಕೆಯು ತನ್ನ ಗಂಡನ ಜೊತೆ ಸೇರಿಕೊಂಡು ನಮ್ಮ ಮನೆಯನ್ನು ನನಗಾಗಲೀ, ನನ್ನ ಗಂಡನಿಗಾಗಲೀ ತಿಳಿಸದೇ ತಮ್ಮ ಹೆಸರಿಗೆ ಮಾಡಿಕೊಂಡ ನಂತರ ದಿನಗಳಿಂದ ನನ್ನ ಗಂಡನಿಗೆ ಆತನ ಅಕ್ಕ ಲಕ್ಷ್ಮೀ ಮತ್ತು ಆಕೆಯ ಗಂಡನಾದ ಯಮನೂರಪ್ಪ ತಂದೆ ಈರಪ್ಪ ಇವರು ಆಸ್ಥಿಯ ವಿಷಯದಲ್ಲಿ ಕಿರುಕುಳ ನೀಡಿದರೆ ಮನೆ ಬಿಟ್ಟು ಹೋಗುತ್ತಾನೆ ಅಂತಾ ಆಗಾಗ್ಗೆ ನನ್ನ ಗಂಡನಿಗೆ ತೊಂದರೆ ಮಾಡುತ್ತಿದ್ದರಿಂದ ಹಾಗೂ ಆತನ ಪಾಲಿಗೆ ಬರುವ ಜಮೀನು ಸಹ ತಮ್ಮ ಹೆಸರಿಗೆ ಮಾಡಿಕೊಳ್ಳುವ ಉದ್ದೇಶದಿಂದ ತೊಂದರೆ ಕೊಟ್ಟಿದ್ದರಿಂದಲೇ ನನ್ನ ಗಂಡನು ಅವರ ಕಿರುಕುಳ ತಾಳಲಾರದೇ ದಿನಾಂಕ:- 05-04-2017 ರಂದು ಬೆಳಗಿನಜಾವ 05:00 ಗಂಟೆಯಿಂದ ಮಧ್ಯಾಹ್ನ 12:30 ಗಂಟೆಯ ಅವಧಿಯಲ್ಲಿ ವಾಸದ ಮನೆಯಲ್ಲಿ ತನ್ನ ಲುಂಗಿಯಿಂದ ಕಬ್ಬಿಣದ ಯಾಂಗ್ಲರಿಗೆ ಬಿಗಿದು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನಾನು ಗರ್ಭವತಿ ಇದ್ದುದರಿಂದ ಮುನಿರಾಬಾದನಲ್ಲಿ ನನ್ನ ಚಿಕ್ಕಪ್ಪನ ಮನೆಯಲ್ಲಿ ಇದ್ದು, ವಿಷಯ ತಿಳಿದು ಬಂದು ನೋಡಿ ದೂರು ನೀಡಿರುತ್ತೇನೆ.  ಕಾರಣ ನನ್ನ ಗಂಡನ ಅಕ್ಕ ಲಕ್ಷ್ಮೀ ಮತ್ತು ಅವಳ ಗಂಡ ಯಮನೂರಪ್ಪ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ.” ಅಂತಾ ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 80/2017 ಕಲಂ 306 ರೆಡ್ ವಿತ್ 34 ಐ.ಪಿ.ಸಿ. ಅಡಿ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ. 67/2017 ಕಲಂ. 379 ಐ.ಪಿ.ಸಿ.

ದಿ:13-04-2017 ರಂದು ರಾತ್ರಿ 9-30 ಗಂಟೆಗೆ ಫಿರ್ಯಾದಿದಾರರಾದ, ಶ್ರೀ ಸೋಮಶೇಖರ ಪಾಟೀಲ. ಸೆಕ್ಯೂರಿಟಿ ಆಫೀಸರ್ ಎಕ್ಸ-ಇಂಡಿಯಾ ಸ್ಟೀಲ್ಸ ಕಂಪನಿ ಕುಣಿಕೇರಿ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ಇಂದು ದಿ:13-04-2017 ರಂದು ಸಂಜೆ 5-00 ಗಂಟೆಯ ಸುಮಾರಿಗೆ ತಮ್ಮ ಕಂಪನಿಯ ಜಾಗೆಯಲ್ಲಿ ಆರೋಪಿತರಾದ ಸುರೇಶ ಕಾರಬಾರಿ ಹಾಗೂ ರಾಜೇಶ ಬಾಳಮ್ಮನವರ ಇವರು ತಮ್ಮ ಟಾಟಾ ಎಸಿ ನಂ: ಕೆಎ-37/ಎ-2497 ನೇದ್ದನ್ನು ತೆಗೆದುಕೊಂಡು ಬಂದು ಕಂಪನಿಯ ಜಾಗೆಯಲ್ಲಿದ್ದ ಸುಮಾರು 200 ಕೆ.ಜಿ ಕಬ್ಬಿಣದ ರಾಡ [ಸ್ಕ್ರ್ಯಾಪ್] ಗಳು. ಅಂಕಿ. ರೂ. 5,000=00. ಬೆಲೆಬಾಳುವುದನ್ನು ಕಳ್ಳತನ ಮಾಡಿಕೊಂಡು ತಮ್ಮ ವಾಹನದಲ್ಲಿ ಹಾಕಿಕೊಂಡು ಕುಣಿಕೇರಿ ತಾಂಡಾ ಕಡೆಗೆ ಹೋಗಿದ್ದು ಇರುತ್ತದೆ. ಕಾರಣ ಕಳ್ಳತನವಾದ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಡವಾಗಿ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008