Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow on FACEBOOK
Koppal District Police
As per SO 1017 New beat system is introduced in Koppal District. Click on Links to know your area in charge officers ASI/HC/PC

Thursday, April 20, 2017

1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 40/2017 ಕಲಂ: 78(3) Karnataka Police Act..
ದಿನಾಂಕ 19-04-2017  ರಂದು ಸಂಜೆ 07-15 ಗಂಟೆಯ ಸುಮಾರಿಗೆ ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಸನಹಟ್ಟಿ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಾಗರಾಜ ತಂದೆ ದುರುಗಪ್ಪ ಅಕ್ಕಿ, ವಯಾ 32 ವರ್ಷ ಜಾತಿ ನಾಯಕ್. ಉ: ಒಕ್ಕಲುತನ ಸಾ: ಹುಲಸನಹಟ್ಟಿ ಇತನು ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತದೇ ಬನ್ನೀ ನಸೀಬ ಜೂಜಾಟದ ಅಂತಾ ಕೂಗುತ್ತಾ ಅವರಿಂದ ಹಣ ಪಡೆದು ಅವರಿಗೆ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಶ್ರೀ ಶಾಂತಪ್ಪ ಎ.ಎಸ್.ಐ. ಕನಕಗಿರಿ ಠಾಣೆ ರವರು ತಮ್ಮ ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ  1 ಮಟಕಾ ಪಟ್ಟಿ ಮತ್ತು 1 ಬಾಲ್ ಪೆನ್ನು ಹಾಗೂ ನಗದು ಹಣ ರೂ.480/- ಗಳನ್ನು ಸಂಜೆ 07-15 ಗಂಟೆಯಿಂದ 8-30 ಗಂಟೆಯವರೆಗೆ ಲೈಟಿನ ಬೆಳಕಿನಲ್ಲಿ ಪಂಚರ ಸಮಕ್ಷಮ ಆರೋಪಿತನಿಂದ ಜಪ್ತ ಮಾಡಿ ಆರೋಪಿತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 81/2017 ಕಲಂ.279, 337, 304(ಎ) ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ.
ದಿನಾಂಕ 19-04-2017 ರಂದು 08-30 ಪಿ.ಎಂ.ಕ್ಕೆ ಪಿರ್ಯಾದು ಮಂಜುನಾಥ ತಂದೆ ಜಡಿಯಪ್ಪ ಬಂಗಾಳಿ ಸಾ: ಚಿಕ್ಕಬಗನಾಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕಿಕರತ ದೂರಿನ ಸಾರಾಂಶವೇನೆಂದರೆ, ದಿನಾಂಕ 19-04-2017 ರಂದು ಸಾಯಂಕಾಲ 04-30 ಪಿಎಂ ಸುಮಾರಿಗೆ ಮೃತಳು ಯಲ್ಲಪ್ಪ ಗಂಡ ಇಂದ್ರಪ್ಪ ಗಬ್ಬೂರು ವಯ: 50 ವರ್ಷ ಹೊಲದ ಕೆಲಸ ಮುಗಿಸಿಕೊಂಡು ಆಟೋ   .ಕೆ..34 /.4993 ನೇದ್ದರಲ್ಲಿ ಗಬ್ಬೂರಿನಿಂದ ಗಿಣಿಗೇರಾಕ್ಕೆ ಹೋಗುತ್ತಿರುವಾಗ ಆಟೋ ಚಾಲಕನು ಆಟೋವನ್ನು ಗಬ್ಬೂರು-ಗಿಣಿಗೇರಾ ರಸ್ತೆಯ ಮೇಲೆ ಅತೀ ವೇಗ ಮತ್ತು ಅಲಕ್ತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿನ ತೆಗ್ಗಿನಲ್ಲಿ ಕೆಡವಿ ಆಟೋ ಚಾಲಕನು ಓಡಿಹೋಗಿದ್ದು ಆಟೋ ಬಿದ್ದಿದ್ದರಿಂದ ಆಟೋದಲ್ಲಿದ್ದವರಿಗೆ ಗಾಯ ಪೆಟ್ಟುಗಳಾಗಿದ್ದು ಆಟೋ ಹಿಂದೆ ಹೋಗುತ್ತಿದ್ದ ಪಿರ್ಯಾದುದಾರರು ನೋಡಿ ಆಟೋದಲ್ಲಿದ್ದವರಿಗೆ 108 ವಾಹನದಲ್ಲಿ ಚಿಕಿತ್ಸೆ ಕುರಿತು ಜಿಲ್ಲಾ ಆಸ್ಪತ್ರಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಿಸದೇ ಯಲ್ಲಮ್ಮ ಗಂ/ ಇಂದ್ರಪ್ಪ ಗಬ್ಬೂರ ಸಾ: ಬೂದಗುಂಪಾ ಇವರು ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 67/2017 ಕಲಂ: 323, 353, 504, 506 ಐ.ಪಿ.ಸಿ.
ಶ್ರೀ ಸೋಮಶೇಖರ, ಹೆಡ್ ಕಾನ್ಸ್ ಟೇಬಲ್ ಸಂ. 199, ನಗರ ಪೊಲೀಸ್ ಠಾಣೆ, ಗಂಗಾವತಿ ರವರು ಒಂದು ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 19-04-2017 ರಂದು ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 2-00 ಗಂಟೆವರೆಗೆ ನಾನು ಠಾಣಾ ದಿನಚರಿ ಕರ್ತವ್ಯದಲ್ಲಿದ್ದೆನು.  ನಾನು ಕರ್ತವ್ಯದಲ್ಲಿರುವಾಗ ಮಧ್ಯಾಹ್ನ  1-30 ಗಂಟೆಗೆ ಶ್ರೀ ತಿಮ್ಮನಾಯ್ಕ ಎಲ್.  ಸಹಾಯಕ ನಿರ್ದೇಶಕರು, ತಾಲೂಕ ಪಂಚಾಯತಿ ಗಂಗಾವತಿ ಇವರು ಠಾಣೆಗೆ ಫೋನ್ ಮಾಡಿದ್ದು, ಅಲ್ಲದೇ ಅವರೇ ಖುದ್ದಾಗಿ ಬಂದು ಠಾಣೆಗೆ ಬಂದು ನನ್ನ ಮಗನಾದ ರಾಜವತ್ ಟಿ.ಕೆ. ಇವನು ಮನೆಯಲ್ಲಿ ತುಂಬಾ ಗಲಾಟೆ ಮಾಡುತ್ತಿದ್ದಾನೆ ನೀವು ಕೂಡಲೇ ಬಂದು ಬಿಡಿಸಬೇಕೆಂದು ತಿಳಿಸಿದರು.   ನಾನು ಕೂಡಲೇ ಹಾಜರಿದ್ದ ನಮ್ಮ ಠಾಣೆಯ ಹೋಮ್ ಗಾರ್ಡ ರವರನ್ನು ಕರೆದುಕೊಂಡು ತಿಮ್ಮನಾಯ್ಕ ಇವರೊಂದಿಗೆ ಹೋಗಿದ್ದು, ಅವರ ಮನೆ ಹೊಸಳ್ಳಿ ಹತ್ತಿರದ ಭಾಗ್ಯನಗರದಲ್ಲಿ ಇದ್ದು, ಮನೆಯ ಮುಂದೆ ಅವರ ಮಗನು ಗಲಾಟೆ ಮಾಡುತ್ತಿದ್ದುದು ನಿಜವಿತ್ತು.  ಕೂಡಲೇ ಗಲಾಟೆ ಮಾಡುತ್ತಿದ್ದವನನ್ನು ನಾನು ತಡೆಯಲು ಹೋಗಿದ್ದು ಆಗ ಅವನು ನನಗೆ “ನೀನ್ಯಾವನಲೇ ನನ್ನ ಕೇಳಕ್ಕೆ, ನಮ್ಮಪ್ಪನೊಂದಿಗೆ ನಾನೇನಾದರೂ ಮಾಡಿಕೊಳ್ಳುತ್ತೇನೆ” ಅಂತಾ ಅಂದಿದ್ದು, ಅವನಿಗೆ ತನ್ನ ತಂದೆಯೊಂದಿಗೆ ಗಲಾಟೆ ಮಾಡದಂತೆ ಬುದ್ಧಿವಾದ ಹೇಳಿದರೂ ಸಹಾ ಕೇಳದೇ ಕರ್ತವ್ಯದಲ್ಲಿದ್ದ ನನ್ನ ಮೇಲೆ ಏರಿ ಬಂದಿದ್ದು ಅಲ್ಲದೇ ಸಮವಸ್ತ್ರದಲ್ಲಿದ್ದ ನನ್ನ ಅಂಗಿಯ ಕಾಲರ್ ಹಿಡಿದು ಎಳೆದಾಡಿದ್ದು ಅಲ್ಲದೇ ಕೈಯಿಂದ ಕಪಾಳಕ್ಕೆ ಹೊಡೆದನು. ಅಲ್ಲದೇ “ನೀನು ಪೊಲೀಸನಾದರೆ ನನಗೇನು, ಶೇಂಠಾ ಅಂತಾ ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೇ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ನನ್ನ ಅಂಗಿಯ ಕಾಲರನ್ನು ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೊಡೆದು ಜೀವದ ಬೆದರಿಕೆ ಹಾಕಿದ ರಾಜವತ್ ಟಿ.ಕೆ. ತಂದೆ ತಿಮ್ಮನಾಯ್ಕ ಸಾ: ಭಾಗ್ಯನಗರ, ಹೊಸಳ್ಳಿ, ತಾ: ಗಂಗಾವತಿ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 81, 82, 83, 84, 85, /2017 ಕಲಂ: 107 ಸಿ.ಆರ್.ಪಿ.ಸಿ.

ದಿನಾಂಕ: 19-04-2017 ರಂದು ಶ್ರೀ ವಿಶ್ವನಾಥ ಹೆಚ್  ಪಿ.ಎಸ್.ಐ ಕುಷ್ಠಗಿ ಠಾಣೆ ರವರು ಠಾಣಾ ವ್ಯಾಪ್ತಿಯಲ್ಲಿ ಬರುವ ರೌಡಿ ಶೀಟ್ ದಾರರಾದ 1]  ಭೀಮನಗೌಡ  ತಂದಿ ಗುಡಿಯಪ್ಪ ಹಿರೇಗೌಡರ ವಯ:37 ವರ್ಷ ಉ: ಕೂಲಿ ಕೆಲಸ ಸಾ: ಕುಷ್ಟಗಿ ತಾ: ಕುಷ್ಟಗಿ 2] ರಮೇಶ @ ಭೀಮಶೇನಾಚಾರ್ ತಂದಿ ರಾಮಾಚಾರ್ ದೇಸಾಯಿ ವಯ:34 ವರ್ಷ ಉ: ಒಕ್ಕಲುತನ  ಸಾ: ಕುಷ್ಟಗಿ ತಾ: ಕುಷ್ಟಗಿ 3] ಹನುಮಪ್ಪ ತಂದಿ ಮಲ್ಲಪ್ಪ ರಾಂಪೂರ ವಯ:29 ವರ್ಷ ಉ: ಒಕ್ಕಲುತನ ಸಾ: ಬೆಂಚಮಟ್ಟಿ ತಾ: ಕುಷ್ಟಗಿ. 4] ಶರಣಪ್ಪ ತಂದಿ ಬಸಪ್ಪ ಗೋಗೇರಿ ವಯ:24 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ಯಲಬುರ್ತಿ ತಾ: ಕುಷ್ಟಗಿ. 5] ಪರಸಪ್ಪ ತಂದಿ ಹನುಮಪ್ಪ ಬಿಂಜವಾಡಗಿ  ವಯ: 38 ವರ್ಷ ಉ: ಒಕ್ಕಲುತನ ಸಾ: ಮೆಣಸಗೇರಿ  ತಾ: ಕುಷ್ಟಗಿ. ಸದರಿಯವರು ಸಾಮಾಜಿಕ ಶಾಂತಿ ಕದಡುವ, ಗ್ರಾಮಗಳಲ್ಲಿ ಜಗಳ ಮಾಡುವದು, ಗಲಭೇ ಮಾಡುವದು, ಸಮಸ್ಯೆಗಳನ್ನು ಉದ್ಭವಿಸುವ ಹಾಗೂ ಹಬ್ಬ ಹರಿದಿನಗಳಲ್ಲಿ ಯಾವುದಾದರೂ ಸಾರ್ವಜನಿಕ ಶಾಂತಿ ಭಗವನ್ನುಂಟು ಮಾಡುವ ಮತ್ತು ಶಾಂತವಿದ್ದ ವಾತಾವರಣವನ್ನು ಕದಡುವ ಕೃತ್ಯೆವೆಸಗುವ ಸಂಭವಕಂಡುಬಂದಿದ್ದರಿಂದ ಸದರಿಯವರ ವಿರುದ್ದ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕ್ರಮ ಕೈಕೊಂಡಿದೆ.

0 comments:

 
Will Smith Visitors
Since 01/02/2008