Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, May 1, 2017

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 103/2017 ಕಲಂ: 87 Karnataka Police Act.
ದಿನಾಂಕ : 30-04-2017 ರಂದು ಸಾಯಂಕಾಲ 4-00 ಗಂಟೆಗೆ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆ ರವರಿಗೆ ಬಿಜಕಲ್ ಗ್ರಾಮದ ಶ್ರೀ ಮಾರುತೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಂಚರು ಹಾಗೂ ಸಿಬ್ಬಂದಿ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ ಆರೋಪಿ 1] ರಾಚಪ್ಪ ತಂದೆ ನಿಂಗಪ್ಪ ಕೂಡ್ಲೂರ ವಯಾ: 32 ವರ್ಷ  ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಶಿರಗುಂಪಿ ಇತರೇ 5 ಜನರು ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 6240=00 ರೂ, ನಗದು ಹಣ ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 104/2017 ಕಲಂ: 87 Karnataka Police Act.
ದಿನಾಂಕ : 30-04-2017 ರಂದು ರಾತ್ರಿ 7-00 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರಿಗೆ ಹಿರೇಮನ್ನಾಪೂರ ಗ್ರಾಮದ ಚಾಕರಿ ಹಳ್ಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಸಿಬ್ಬಂದಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ ಆರೋಪಿ 1] ರೆವಣೆಪ್ಪ ತಂದೆ ಚನ್ನಪ್ಪ ಬ್ಯಾಳಿ ವಯಾ: 34 ವರ್ಷ ಜಾತಿ: ಲಿಂಗಾಯತ ಉ: ವ್ಯಾಪಾರ ಸಾ: ನವಲಹಳ್ಳಿ ಹಾಲಿ ವಸ್ತಿ ಹಿರೇಮನ್ನಾಪೂರ ಹಾಗೂ ಇತರೇ  5 ಜನ ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 1520=00 ರೂ, ನಗದು ಹಣ ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 59/2017 ಕಲಂ:  504, 341, 323, 355, 354, 506 ಸಹಿತ 34 ಐ.ಪಿ.ಸಿ.
ದಿನಾಂಕ: 30-04-2017 ರಂದು ರಾತ್ರಿ 8-30 ಗಂಟೆಗೆ ಫೀರ್ಯಾದಿ ಶ್ರೀ ಈರಪ್ಪ ತಂದೆ ಪದ್ಮಪ್ಪ ಪೂಜಾರ, ವಯ: 44 ವರ್ಷ ಜಾತಿ: ಕುರುಬರ ಉ: ಒಕ್ಕಲುತನ ಸಾ: ಹಿರೇಸಿಂಧೊಗಿ ಇವರು ಠಾಣೆಗೆ ಹಾಜರಾಗಿ, ಫಿರ್ಯಾಧಿ ನೀಡಿದ್ದು ಸಾರಾಂಶವೆನಂದರೆ, ಫಿರ್ಯಾಧಿದಾರರು ಹಾಗೂ ಆರೋಪಿತರು ಸೇರಿ ಒಟ್ಟು 9 ಎಕರೆ ಹೊಲವನ್ನು ಖರೀದಿಸಿದ್ದು, ಅದರಲ್ಲಿ ಫಿರ್ಯಾದಿದಾರು 2 ಎಕರೆ ಹೊಲವನ್ನು ಹಾಗೂ ಆರೋಪಿತರು 7 ಎಕರೆ ಹೊಲವನ್ನು ಸಾಗುವಳಿ ಮಾಡುತ್ತಾ ಬಂದಿದ್ದು ಇರುತ್ತದೆ. ನಿನ್ನೆ ದಿನಾಂಕ: 29-04-2017 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಆರೋಪಿತರು ತಮ್ಮ ಹೊಲದಲ್ಲಿ ಬೋರ್ ಹಾಕಿಸಿದ್ದು, ಅದು ಫೇಲ್ ಆಗಿದ್ದು, ನಂತರ ಫಿರ್ಯಾಧಿದಾರರ ಸಾಗುವಳಿ ಮಾಡುತ್ತಿದ್ದ ಹೊಲದಲ್ಲಿ ಬಂದು ಬೋರ ಹಾಕಿಸಲು ಹೋದಾಗ ಫಿರ್ಯಾಧಿದಾರರು, ಅವರ ತಂದೆ ಪದ್ಮಪ್ಪ, ತಮ್ಮ ಸಿದ್ಧಪ್ಪ, ಸೊಸೆ ಹುಲಿಗೇಮ್ಮ ಇವರು ನಮ್ಮ ಹೊಲದಲ್ಲಿ ಯಾಕೆ ಬೋರ್ ಹಾಕಿಸುತ್ತಿರಾ, ನಮ್ಮ ಹೊಲದಲ್ಲಿ ಬೋರ್ ಹಾಕಬೇಡಿ ಅಂತಾ ಹೇಳಿದ್ದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಫಿಯರ್ಾದಿದಾರರೊಂದಿಗೆ ಜಗಳ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಫಿರ್ಯಾಧಿದಾರರ ತಂದೆಗೆ ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು, ಚಪ್ಪಲಿಯಿಂದ ಹೊಡೆದಿದ್ದು, ಇದನ್ನು ನೋಡಿ ಬಿಡಿಸಲು ಹೋದ, ಫಿರ್ಯಾಧಿದಾರಿಗೆ ಹಾಗೂ ಆತನ ತಮ್ಮ ಸಿದ್ಧಪ್ಪನಿಗೆ ಆರೋಪಿತರೆಲ್ಲರೂ ಕೂಡಿಕೊಂಡು ಕೈಯಿಂದ ಮೈಕೈಗೆ ಹೊಡೆ ಬಡೆ ಮಾಡಿದ್ದು, ನಂತರ ಫಿರ್ಯಾಧಿದಾರರ ಸೊಸೆ ಹುಲಿಗೇಮ್ಮಳು ಜಗಳ ಬಿಡಿಸಲು ಬಂದಾಗ ಅವಳಿಗೂ ಸಹ ಅವಾಚ್ಯ ಶಬ್ದಗಳಿಂದ ಬೈದು, ಮೈ ಕೈ ಮುಟ್ಟಿ ಎಳೆದಾಡಿ ಅವಮಾನ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದು ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 86/2017 ಕಲಂ: 457, 380 ಐ.ಪಿ.ಸಿ.
ದಿನಾಂಕ 30-04-2017ರಂದು ರಾತ್ರಿ 7-30 ಗಂಟೆಗೆ ಪಿರ್ಯಾದಿದಾರರಾದ ಕೆ.ಜಯಣ್ಣ ತಂದೆ ಕೆ.ದೊಡ್ಡಬಸಪ್ಪ ಕೂನಾ ಸಾ: ನೇಕಾರ ಕಾಲೋನಿ ಹೊಸಪೇಟೆ ಹಾ:ವ: ಕೆ.ಇ.ಬಿ.ಕ್ವಾಟರ್ಸ ಮುನಿರಾಬಾದ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿದ ಪಿರ್ಯಾದಿ ನೀಡಿದ್ದು ಸಾರಾಂಶ ತಾವು 15 ದಿವಸಗಳ ಹಿಂದೆ ತಮ್ಮ ಹೆಂಡತಿಯೊಂದಿಗೆ ಶಕ್ತಿನಗರಕ್ಕೆ ತಮ್ಮ ದೊಡ್ಡಮಗನ ಹತ್ತಿರ ಹೋಗಿದ್ದು ದಿನಾಂಕ 28-04-2017 ರಂದು ತಮ್ಮ ಮಗಳು ಸಣ್ಣಮಗ ಮತ್ತು ಸೊಸೆ ಸಾಯಂಕಾಲ 6-30 ಗಂಟೆಗೆ ಕೆ.ಇ.ಬಿ.ಕ್ವಾಟರ್ಸಗೆ ಬೀಗ ಹಾಕಿಕೊಂಡು ಶಕ್ತಿನಗರಕ್ಕೆ ಹೋದಾಗ ದಿನಾಂಕ 29-04-2017 ರ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕ್ವಾಟರ್ಸಗೆ ಹಾಕಿದ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಅಲಮಾರಾಗಳಲ್ಲಿದ್ದ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿ ಅಲಮಾರಾಗಳಲ್ಲಿದ್ದ ಬಂಗಾರದ ಆಭರಣಗಳು ಅ.ತೂ.152.5 ಗ್ರಾಂ ಅ.ಕಿ.1,22,000=00 ರೂ ಹಾಗೂ ಬೆಳ್ಳಿ ಆಭರಣಗಳು ಅ.ತೂ.272 ಗ್ರಾಂ ಅ.ಕಿ.27,100=00 ರೂ ಒಟ್ಟು 1,49,100=00 ರೂ ಬೆಲೆ ಬಾಳುವ ಬೆಳ್ಳಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 38/2017 ಕಲಂ: 279, 337, 338 ಐಪಿಸಿ & 187 ಐ.ಎಂ.ವಿ. ಕಾಯ್ದೆ.
ದಿನಾಂಕ: 30-04-2017 ರಂದು ಮುಂಜಾನೆ 11 ಗಂಟೆ ಸುಮಾರಿಗೆ ಪಿರ್ಯಾದಿ ಪಾಲಾಕ್ಷಗೌಡ ತಂದೆ ವೀರನಗೌಡ ಅಯ್ಯನಗೌಡ್ರ ವ: 53 ವರ್ಷ ಜಾ: ಲಿಂಗಾಯತ   ಉ: ಒಕ್ಕಲುತನ ಸಾ: ಕೋಚಲಾಪುರ ತಾ: ರೋಣ ಜಿ: ಗದಗ ಇವರ ಅಣ್ಣನ ಮಗನಾದ ಶಿವನಗೌಡನು ಕೊಪ್ಪಳ ತಾಲೂಕಿನ ಷಾಪುರ ಗ್ರಾಮದಲ್ಲಿಯ ತನ್ನ ಅಕ್ಕಳನ್ನು ಮಾತನಾಡಿಸಿಕೊಂಡು ಬರುವ ಸಲುವಾಗಿ ಮೋಟಾರ್ ಸೈಕಲ್ ನಂ. ಕೆಎ-26/ಡಬ್ಲ್ಯೂ-2705 ನೇದ್ದರ ಮೇಲೆ ತನ್ನ ಅಳಿಯನಾದ ಸಚಿನ್ ನೊಂದಿಗೆ ತೊಂಡಿಹಾಳ-ಕುಕನೂರು ರಸ್ತೆಯ ಮೇಲೆ ಹೋಗುವಾಗ ಕುಕನೂರು ಇನ್ನೂ 07 ಕಿ.ಮೀ. ಅಂತರದಲ್ಲಿ ಇರುವಾಗ ತೊಂಡಿಹಾಳ ಸೀಮಾದಲ್ಲಿ ಕಾರ್ ನಂ. ಕೆಎ-53/ಎಂ-4294 ನೇದ್ದರ ಚಾಲಕ ಹೆಸರು ವಿಳಾಸ ಗೊತ್ತಾಗಿರುವದಿಲ್ಲ, ಇವನು ಸದರಿ ಕಾರನ್ನು ಅತೀಜೋರಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದುಗಡೆಯಿಂದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿರುತ್ತಾನೆ. ನಂತರ ಆರೋಪಿತನು ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಈ ಅಪಘಾತದಲ್ಲಿ ಗಾಯಾಳುಗಳಿಗೆ ಸಾದಾ & ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ಕಾರ್ ನಂ. ಕೆಎ-53/ಎಂ-4294 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
6] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 41/2017 ಕಲಂ: 87 Karnataka Police Act.
ಶ್ರೀ ವಿನಾಯಕ ಪಿ.ಎಸ್.ಐ. ಯಲಬುರ್ಗಾ ರವರು ದಿನಾಂಕ: 30-04-2017 ರಂದು ಮಧ್ಯಾನ್ಹ 3-20 ಗಂಟೆಯ ಸುಮಾರಿಗೆ ಯಲಬುರ್ಗಾ ಪಟ್ಣದಲ್ಲಿ ಬರುವ ಶ್ರೀ ಮೊಗ್ಗಿಬಸವೇಶ್ವರ ದೇವಸ್ಥಾನದ ಹಿಂದೆಗಡೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆದ ಬಗ್ಗೆ ಮಾಹಿತಿ ಪಡೆದು ದಾಳಿ ಮಾಡಿದಾಗ 1] ಬುಡನ್ ಸಾಬ ತಂದೆ ಮರ್ದಾನಸಾಬ ಕಲ್ಲೂರ ವಯ: 40 ವರ್ಷ ಜಾತಿ: ಮುಸ್ಲೀಂ ಉ: ಹೋಟಲ್ ಕೆಲಸ ಸಾ: ಯಲಬುರ್ಗಾ 2] ಶೇಖಪ್ಪ ತಂದೆ ರಂಗಪ್ಪ ಸಿಮೇರ ವಯ:48 ವರ್ಷ ಜಾತಿ : ರಡ್ಡಿ, ಉ: ಒಕ್ಕಲುತನ ಸಾ: ಮೀಟ್ಲಕೋಡ ತಾ: ಕುಷ್ಟಗಿ 3] ಪ್ರಕಾಶ ತಂದೆ ಗಾಳೇಪ್ಪ ಪೂಜಾರ ವಯ: 32 ವರ್ಷ ಜಾತಿ : ಮಾದರ ಉ: ಕೂಲಿಕೆಲಸ ಸಾ: ಬಿಸರಳ್ಳಿ 4] ಭೀಮಯ್ಯ ತಂದೆ ಚನ್ನಯ್ಯ ಪುರಾಣಿಮಠ ವಯ: 22 ವರ್ಷ ಜಾತಿ : ಜಂಗಮ ಉ: ಗೌಂಡಿಕೆಲಸ ಸಾ: ಯಲಬುರ್ಗಾ 5] ಮುಂಜುನಾಥ ತಂದೆ ರಾಮಪ್ಪ ನಡುವಲಮನಿ ವಯ: 26 ವರ್ಷ ಜಾತಿ : ಹರಿಜನ ಉ: ಪಾನ್ ಶಾಪ ಅಂಗಡಿ ಸಾ: ಯಲಬುರ್ಗಾ ಇವರು ಸಿಕ್ಕಿ ಬಿದ್ದಿದ್ದು. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 640=00 ರೂಪಾಯಿ ನಗದು ಹಣ,52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಬರ್ಕಾ ಸಿಕ್ಕಿದ್ದು ಇರುತ್ತದೆ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008