Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, May 2, 2017

1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 41/2017 ಕಲಂ: 323,324,307,504,506 ರೆ/ವಿ 34 ಐಪಿಸಿ.
ಫಿರ್ಯಾಧಿದಾರರಾದ ಶ್ರೀ ಪಂಪಯ್ಯ ತಂದೆ ಬಸಯ್ಯ ಪೊಲೀಸ್ ಪಾಟೀಲ. ವಯ : 50 ವರ್ಷ. ಜಾತಿ : ಲಿಂಗಾಯತ ಜಂಗಮ ಉ : ಒಕ್ಕಲುತನ. ಸಾ : ಬಚನಾಳ. ತಾ : ಕುಷ್ಟಗಿ. ರವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ದಿನಾಂಕ: 30-04-2017 ರಂದು ಆರೋಪಿ ಹಿರೇಹನುಮಂತನ ಮಗಳಾದ ಮೀನಾಕ್ಷೀ ಈಕೆಯು ತಮ್ಮ ತಂದೆಯ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಆಕೆ ನೇಣು ಹಾಕಿಕೊಂಡು ಸಾಯಲು ಫಿರ್ಯಾದಿದಾರರ ಸಂಬಂಧಿಕನಾದ ಮಹೇಶ, ಮತ್ತು ಮಹೇಶನೊಂದಿಗೆ ತಿರುಗಾಡುತ್ತಿದ್ದ ಫಿರ್ಯಾಧಿದಾರರ ಮಗ ಅಮರಯ್ಯ 30 ವರ್ಷ ಇವರು ಕಾರಣ ಅಂತಾ ಹಿರೇಹನುಮಂತನ ಕಡೆಯವರು ದ್ವೇಷ ಇಟ್ಟುಕೊಂಡಿದ್ದರು. ದಿನಾಂಕ: 01-05-2017 ರಂದು ಸೋಮವಾರ ಬೆಳಿಗ್ಗೆ 7-30 ಗಂಟೆ ಸುಮಾರಿಗೆ ಫಿರ್ಯಾಧಿದಾರರು ಮತ್ತು ಅವರ ಮಗ ಅಮರಯ್ಯ ಇಬ್ಬರೂ ಕೂಡಿ ಕೊಟ್ರಯ್ಯ ರವರ ಮನೆಯ ಮುಂದೆ ಕುಳಿತುಕೊಂಡಿದ್ದಾಗ ಅಲ್ಲಿಗೆ 4 ಜನ ಆರೋಪಿತರು ಕೂಡಿ ಬಂದು ಅಮರಯ್ಯನಿಗೆ  ಲೇ ಸೂಳೆ ಮಗನೇ ನೀನೆ ನಮ್ಮ ಮಗಳ ಸಾವಿಗೆ ಕಾರಣ ನೀನು ಮತ್ತು ಮಹೇಶನೊಂದಿಗೆ ಸೇರಿ ನಮ್ಮ ಮಗಳಿಗೆ ಪೋನ್ ಮಾಡಿ ಕೊಟ್ಟು ಅವಳ ಜೀವ ತೆಗೆದಿದ್ದೀಯಾ ಇವತ್ತು ನಿನ್ನ ಜೀವ ಸಹಿತ ಉಳಿಸುವುದಿಲ್ಲ ಅಂತಾ ಬೈದಾಡಿ ಕೊಲೆ ಮಾಡುವ ಉದ್ದೇಶದಿಂದ ಅಮರಯ್ಯನನ್ನು ಎತ್ತಿಕೊಂಡು ಹೋಗಿ ರಸ್ತೆಯಲ್ಲಿ ಹಾಕಿ, ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು ಆತನ ತಲೆಯ ಮೇಲೆ ಎತ್ತಿ ಎತ್ತಿ ಹಾಕಿದ್ದು, ಬೆನ್ನಿಗೂ ಕೂಡ ಹಾಕಿದ್ದು ಆತನ ತಲೆಗೆ ಭಾರಿ ರಕ್ತ ಗಾಯವಾಗಿದ್ದು ಆಗ ಫಿರ್ಯಾಧಿದಾರರನು ಮಗನನ್ನು ಬಿಡಿಸಿಕೊಳ್ಳಲು ಹೋಗಿದ್ದು ಆಗ ಆರೋಪಿ ಹಿರೇಹನಮಂತನು ಫಿರ್ಯಾಧಿದಾರರಿಗೂ ಕೂಡ ಬೆನ್ನಿನ ಎರಡೂ ಕಡೆ ಕಲ್ಲಿನಿಂದ ಹೋಡಿದಿದ್ದು ಗಾಯಗೊಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 87/2017 ಕಲಂ: 279, 337, 338 ಐ.ಪಿ.ಸಿ.
ಫಿರ್ಯಾಧಿ ಹನುಮಂತ ತಂದೆ ಮಲ್ಲಪ್ಪ ಲೇಬಗೇರಿ. ಸಾ: ದೇವಲಾಪೂರ. ಇವರ ಲಿಖಿತ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ಇಂದು ದಿ:01-05-2017 ರಂದು ಬೆಳಿಗ್ಗೆ 09-00 ಗಂಟೆಗೆ ಫಿರ್ಯಾದಿದಾರರು ತಮ್ಮ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಹೆಚ್.ಹೆಚ್.ಪಿ ಕೆನಾಲ್ ಹತ್ತಿರ ಬಂದಾಗ ಕೊಪ್ಪಳದ ಕಡೆಯಿಂದ ಬಂದ ಮೋಟಾರ ಸೈಕಲ್ ನಂ: ಕೆಎ-37/6700 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತನ್ನ ಮುಂದೆ ಹೊರಟಿದ್ದ ಯಾವುದೋ ಒಂದು ಆಟೋ ಓವರಟೇಕ್ ಮಾಡಿ ಎದುರುಗಡೆ ಬರುತ್ತಿದ್ದ ಮೋಟಾರ ಸೈಕಲ್ ನಂ: ಕೆಎ-37/ವಿ-3666 ನೇದ್ದಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಅಪಘಾತ ಮಾಡಿದ ಮೋ. ಸೈ ಸವಾರ ಗವಿಸಿದ್ದಪ್ಪ ಡಂಬಳ. ಹಾಗೂ ಎದುರುಗಡೆಯ ಮೋ. ಸೈ ಸವಾರ ಶೇಖರಪ್ಪ ಮತ್ತು ಹಿಂಬದಿ ಸವಾರ ಮಾರುತಿ ಇವರಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 42/2017 ಕಲಂ: 279, 338 ಐ.ಪಿ.ಸಿ.
ರಾಮಣ್ಣ ತಂದೆ ಪವಾಡೆಪ್ಪ ಅಗಡಿ ವಯ: 55 ವರ್ಷ ಜಾತಿ: ಕುರುಬರ ಉ: ಒಕ್ಕಲುತನ ಸಾ: ತುಮ್ಮರಗುದ್ದಿ ತಾ: ಯಲಬುರ್ಗಾ ಇವರು ಹೇಳಿಕೆ ಫಿರ್ಯಾಧಿ ನೀಡಿದ್ದು ಸಾರಾಂಶವೆನಂದರೆ ದಿನಾಂಕ: 01-05-2017 ರಂದು ಬೆಳಿಗ್ಗೆ 7-25 ಗಂಟೆ ಸುಮಾರಿಗೆ ಆರೋಪಿ ವೆಂಕಟೇಶ ತಂದೆ ನಿಂಗಪ್ಪ ಪಮ್ಮಾರ ಸಾ: ತುಮ್ಮರಗುದ್ದಿ ಇತನು ಮೋಟಾರ ಸೈಕಲ ನಂ ಕೆ.ಎ-26/ವಿ-6803 ನೇದ್ದರಲ್ಲಿ ಗಾಯಾಳುವಾದ ನೇತ್ರಾವತಿ ಈಕೆಯನ್ನು ಕೂಡಿಸಿಕೊಂಡು ತುಮ್ಮರಗುದ್ದಿ ಸೀಮಾದ ಕಳಕನಗೌಡ ಪಾಟೀಲ ರವರ ಹೊಲದ ಹತ್ತಿರ ತುಮ್ಮರಗುದ್ದಿ - ಯಲಬುರ್ಗಾ ರಸ್ತೆಯ ಮೇಲೆ ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮಿಂದೊಮ್ಮಲೆ ಬ್ರೇಕ್ ಹಾಕಿದ್ದರಿಂದ ಗಾಯಾಳು ನೇತ್ರಾವತಿಯ ತಲೆಗೆ ಭಾರಿ ಸ್ವರೂಪದ ಒಳಪೆಟ್ಟಾಗಿ ಬಲಗಿವಿಯಿಂದ ರಕ್ತಬಂದಿರುತ್ತದೆ. ಸದರಿ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 105/2017 ಕಲಂ: 87 Karnataka Police Act.
ದಿನಾಂಕ : 01-05-2017 ರಂದು ರಾತ್ರಿ 7-00 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆ ರವರಿಗೆ  ಕುಷ್ಟಗಿ ಪಟ್ಟಣದ ಸಂದೀಪ್ ನಗರದ ಜಾಲಿಯಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ಭಾತ್ಮೀ ತಿಳಿದು ಬಂದಿದ್ದು ಆಗ ಪಿ.ಎಸ್.ಐ. ರವರು ಮತ್ತು ಸಿಬ್ಬಂದಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 5 ಜನ ಆರೋಪಿತರು 1] ಮೌನೇಶ ತಂದೆ ಲಕ್ಷ್ಮಪ್ಪ ಹಳ್ಳಿ ವಯಾ: 28 ವರ್ಷ ಜಾತಿ: ಹಿಂದೂ ಮಾದರ ಉ: ಗೌಂಡಿ ಕೆಲಸ ಸಾ: ಸಂದೀಪ್ ನಗರ ಕುಷ್ಟಗಿ 2] ಶರಣಪ್ಪ ತಂದೆ ರಾಮಪ್ಪ ಭಜೇಂತ್ರಿ ವಯಾ: 30 ವರ್ಷ ಜಾತಿ: ಭಜೇಂತ್ರಿ ಉ: ವ್ಯಾಪಾರ ಸಾ: ಸಂದೀಪ್ ನಗರ ಕುಷ್ಟಗಿ 3] ಯಮನೂರಪ್ಪ ತಂದೆ ಹನಮಂತಪ್ಪ ಗೊಂದಳಿ ವಯಾ: 22 ವರ್ಷ ಜಾತಿ: ಗೊಂದಳಿ ಉ: ವ್ಯಾಪಾರ ಸಾ: ಸಂದೀಪ್ ನಗರ ಕುಷ್ಟಗಿ 4] ಭರಮಲಿಂಗಪ್ಪ ತಂದೆ ಹುಲಗಪ್ಪ ಗುಳಗುಳಿ ವಯಾ: 26 ವರ್ಷ ಜಾತಿ: ಹಿಂದೂ ಮಾದರ ಉ: ಕೂಲಿಕೆಲಸ ಸಾ: ಸಂದೀಪ್ ನಗರ ಕುಷ್ಟಗಿ ಹಾಗೂ 5] ವೆಂಕಟೇಶ ತಂದೆ ಮಲ್ಲಿಕಾರ್ಜುನ ಬಗಡೆಕಲ್ಲು ವಯಾ: 30 ವರ್ಷ ಜಾತಿ: ಲಿಂಗಾಯತ ಉ: ಖಾನಾವಳಿ ಸಾ: ಸಂದೀಪ್ ನಗರ ಕುಷ್ಟಗಿ ಇವರು ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 4430=00 ರೂ, ನಗದು ಹಣ ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 73/2017 ಕಲಂ: 429 ಐ.ಪಿ.ಸಿ.
ದಿನಾಂಕ:-01-05-2017 ರಂದು ಸಾಯಂಕಾಲ 6-10 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಷಣ್ಮುಖಪ್ಪ ತಂದಿ ದುರಗಪ್ಪ ಛಲವಾದಿ ವಯಾ-29 ವರ್ಷ ಜಾ. ಛಲವಾದಿ ಉ-ಒಕ್ಕಲುತನ ಸಾ. ಕುಂಟೋಜಿ ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ಇಂದು ದಿನಾಂಕ:-01-05-2017 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ತಮ್ಮ ಆಡು ಮತ್ತು ಹೋತುಗಳನ್ನು ಮೇಯಿಸಲೆಂದು ಊರಿನ ಪಕ್ಕದಲ್ಲಿ ಹೋಗಿದ್ದಾಗ್ಗೆ ಪಿರ್ಯಾದಿದಾರರ ಹೋತುಮರಿಯೊಂದು ನೀರು ಕುಡಿಯಲೆಂದು ಕುಂಟೋಜಿ ಗ್ರಾಮದ ಪಕ್ಕದಲ್ಲಿ ಸರ್ವೆ ನಂ 27 ನೆದ್ದರಲ್ಲಿರುವ ಬೊಕ್ಕಾ ವೆಂಕಟೇಶ್ವರರಾವ್ ತಂದಿ ನಾಗಣ್ಣ ಸಾ.ಅಂಜೂರಿ ಕ್ಯಾಂಪ್ ಹಾ.ವ ಶ್ರೀರಾಮನಗರ ಇವರ ಜಮೀನಿನಲ್ಲಿ ನೀರು ಕುಡಿಯಲು ಹೋಗಿದ್ದಾಗ್ಗೆ ಸದ್ರಿ ಜಮೀನಿನಲ್ಲಿ ಜಮೀನಿನ ಮಾಲೀಕರು ತಮ್ಮ ಜಮೀನಿನಲ್ಲಿ ಹಾಕಿಸಿದ್ದ ಹಳೆಯ ಬೋರವೇಲ್ ನ ಕೊಳವೆ ಬಾವಿಯಲ್ಲಿ ಹೊತು ಮರಿ ಬಿದ್ದಿದ್ದರಿಂದ ಪಿರ್ಯಾದಿದಾರರು ಮತ್ತು ಊರಿನವರು ಹೋಗಿ ಸದ್ರಿ ಕೋಳವೆ ಬಾವಿಯಿಂದ ಮರಿಯನ್ನು ಮೇಲೆತ್ತಿ ನೋಡಲು ಸದ್ರಿ ಪಿರ್ಯಾದಿದಾರರಿಗೆ ಸಂಬಂದಿಸಿದ ಅಂದಾಜು 4 ಸಾವಿರ ರೂ ಬೆಲೆಬಾಳುವ ಹೊತು ಮರಿಯು  ಸಂಪೂರ್ಣ ಅಂಗವಿಕಲಗೊಂಡಿರುತ್ತದೆ ಜಮೀನಿನ ಮಾಲೀಕರು ಬೊಕ್ಕ ವೆಂಕಟೇಶ್ವರರಾವ್ ತಂದಿ ನಾಗಣ್ಣ ಸಾ. ಅಂಜೂರಿ ಕ್ಯಾಂಪ್ ಹಾ.ವ ಶ್ರೀರಾಮನಗರ ತಾ. ಗಂಗಾವತಿ ಈತನು ನಿರ್ಲಕ್ಷತನದಿಂದ ತಮ್ಮ ಜಮೀನಿನಲ್ಲಿದ್ದ ಹಳೆಯ ಕೊಳವೆ ಬಾಯಿಯನ್ನು ಮುಚ್ಚದೆ ಹಾಗೆ ಬಿಟ್ಟು ನಿರ್ಲಕ್ಷತನ ವಹಿಸಿದ್ದರಿಂದ ಈ ಘಟನೆ ಜರುಗಿದ್ದು ಜಮೀನಿನ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಕೆ  ಕೈಗೊಂಡಿದ್ದು ಇರುತ್ತದೆ.
6] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಎಫ್.ಎ. ನಂ. 03/2017 ಕಲಂ: ಆಕಸ್ಮೀಕ ಬೆಂಕಿ ಅಪಘಾತ.
ದಿ: 01-05-2017 ರಂದು ಅರ್ಜಿದಾರರಾದ ಶ್ರೀ ವಿರುಪಾಕ್ಷಿ ತಂದೆ ಗೌಡಪ್ಪ ಯರಾಸಿ. ಸಾ: ಕವಲೂರ. ಇವರು ನೀಡಿದ ಅರ್ಜಿ ಸಾರಾಂಶವೆನೆಂದರೇ, ಇಂದು ದಿ:01-05-2017 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಬೆಂಗಳೂರ ದಿಂದಾ ಮುಂಡರಗಿ ಗೆ ಹೋಗುವ ಖಾಸಗಿ ಬಸ್ ನಂ: ಎಆರ್-01/ಹೆಚ್-0909 ನೇದ್ದರ ಚಾಲಕನು ವದಗನಹಾಳ ಸಮೀಪ ಮುಂಡರಗಿ ಕಡೆಗೆ ಹೋಗುವಾಗ ಬಸ್ಸಿನ ಹಿಂಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿ ಬಸ್ ಸಂಪೂರ್ಣ ಕರಕಲಾಗಿದ್ದು ಇರುತ್ತದೆ. ಸದರ ಬಸ್ ಸುಟ್ಟು ಸುಮಾರು 15 ಲಕ್ಷ. ರೂ. ಹಾಗೂ ಅರ್ಜಿದಾರರ ಸುಮಾರು 10 ಸಾವಿರ ರೂ. ಬೆಲೆಬಾಳುವಷ್ಟು ಹೊಸ ಬಟ್ಟೆಗಳು ಸುಟ್ಟು ಹಾನಿಯಾಗಿದ್ದು ಇರುತ್ತದೆ. ಈ ಘಟನೆ ಆಕಸ್ಮಿಕವಾಗಿ ಜರುಗಿದ್ದು ಯಾರ ಮೇಲೆ ಸಂಶಯ ವಗೈರೆ ಇರುವುದಿಲ್ಲ. ಅಂತಾ ಮುಂತಾಗಿ ಸಲ್ಲಿಸಿದ ಅರ್ಜಿ ಮೇಲಿಂದ ಠಾಣೆ ಯ ಎಫ್.ಎ ನಂ: 03/2017. ಆಕಸ್ಮಿಕ ಬೆಂಕಿ ಅಪಘಾತದ ಅಡಿಯಲ್ಲಿ ದಾಖಲಿಸಿ ತಪಾಸಣೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008