Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, May 3, 2017

1] ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 21/2017 ಕಲಂ: 279, 338 ಐ.ಪಿ.ಸಿ.
ಫಿರ್ಯಾಧಿ ಕುಮಾರಿ ಸಲ್ಮಾನ ಬೇಗಂ ತಂದೆ ಮೌಲಾಸಾಬ ತಳಕಲ್ಲ ವಯ. 18 ಜಾತಿ. ಮುಸ್ಲಿಂ ಉ. ವಿದ್ಯಾರ್ಥಿ ಸಾ. ಸಿದ್ದಾಪುರ ತಾ. ಗಂಗಾವತಿ ಜಿ. ಕೊಪ್ಪಳ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ. 02-05-2017 ರಂದು ಸಂಜೆ ಫಿರ್ಯಾದಿದಾರರು ಅವರ ಅಣ್ಣ ಮರ್ದಾನ ಅಲಿ ಇತನ ಮೋಟಾರ್ ಸೈಕಲ್ ನಂಬರ. KA-37/Q-9344 ನೆದ್ದರ ಹಿಂದೆ ಕುಳಿತುಕೊಂಡು ಕೊಪ್ಪಳ ನಗರದ ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ನಗರ ಸಭೆಯ ಸಮೀಪ ಬಸ್ ನಿಲ್ದಾಣದ ಕಡೆಗೆ ಹೊಗುತ್ತಿರುವಾಗ ಹಿಂದಿನಿಂದ ಕಾರ್ ನಂ. AP-03/AK-7999 ನೆದ್ದರ ಚಾಲಕನು ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮಗೆ ಟಕ್ಕರಮಾಡಿ ಅಪಘಾತಮಾಡಿದನು ಇದರಿಂದ ನನಗೆ ಎಡಗಡೆ ಬುಜಕ್ಕೆ ಒಳಪೆಟ್ಟು, ಫಿರ್ಯಾದಿಯ ಅಣ್ಣನಿಗೆ ಎರಡೂ ಕೈಗಳಿಗೆ ರಕ್ತಗಾಯ, ಸೊಂಟಕ್ಕೆ ಮತ್ತು ಹೊಟ್ಟೆಗೆ ಒಳಪೆಟ್ಟು ಆಗಿರುತ್ತದೆ. ಚಾಲಕ ಹಮೀದ ಭಾಷಾ ಶೇಖ್ ಕಾರ್ ನಂಬರ. AP-03/AK-7999 ನೇದ್ದರ ಚಾಲಕ ಸಾ. ತಿರುಪತಿ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 89/2017 ಕಲಂ: 498(ಎ), 323, 504, 506 ಸಹಿತ 34 ಐ.ಪಿ.ಸಿ.
ದಿ:02-05-2017 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾದಿದಾರ ಮಂಜುಳಾ ಗಂಡ ಈರಣ್ಣ ಗುಡಿ ಸಾ: ಮೋಚಿ ಓನಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿದಾರರಿಗೆ ಕಳೆದ 05 ವರ್ಷಗಳಿಂದ ಕೊಪ್ಪಳದ ಈರಪ್ಪ ಗುಡಿ ಇವರೊಂದಿಗೆ ಮದುವೆಯಾಗಿದ್ದು, ಸದರಿ ಆರೋಪಿತನು ಫಿರ್ಯಾದಿದಾರಳಿಗೆ ನಿನ್ನೊಂದಿಗೆ ಸಂಸಾರ ಮಾಡಲು ಇಷ್ಟವಿಲ್ಲ  ಎಂದು ವಿನಾಕಾರಣ ಜಗಳ ತೆಗೆದು ದಿ: 15-12-2016 ರಂದು ಮದ್ಯಾಹ್ನ 12-30 ಗಂಟೆಗೆ ಟಣಕನಕಲ್ ಸೀಮಾದ ತಮ್ಮ ಹೊಲದ ಗುಡಿಸಲು ಮುಂದೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿದ್ದರಿಂದ ಫಿರ್ಯಾದಿದಾರಳು ಮಂಗಳೂರದಲ್ಲಿರುವ ತನ್ನ ತವರು ಮನೆಗೆ ಹೋಗಿದ್ದು, ನಂತರ ದಿ:30-04-2017 ರಂದು ಬೆಳಿಗ್ಗೆ 10-00 ಗಂಟೆಗೆ ಸಹ ಫಿರ್ಯಾದಿದಾರಳು ತನ್ನ ತಂದೆಯೊಂದಿಗೆ ಸದರಿ ಹೊಲದಲ್ಲಿ ಫಿರ್ಯಾಧಿದಾರಳಿಗೆ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಹೀಗೆ ದೈಹಿಕ ಮಾನಸಿಕ ಕಿರುಕುಳ ನೀಡಿದ್ದರಿಂದ ಸದರಿ 04 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 87/2017 ಕಲಂ: 279, 337 ಐ.ಪಿ.ಸಿ ಹಾಗೂ 187 ಐ.ಎಂ.ವಿ ಕಾಯ್ದೆ..
ದಿನಾಂಕ :02/05/2017 ರಂದು  2-30 ಪಿ ಎಂ ಕ್ಕೆ ಪಿರ್ಯಾದಿ ಅಮರೇಶ ತಂದೆ ಸಾದೇವಪ್ಪ ಉಜರತಿ ಸಾ: ಗುರಗುಂಟಾ ತಾ: ಲಿಂಗಸಗೂರು ಜಿ: ರಾಯಚೂರು ಠಾಣೇಗೆ ಹಾಜರಾಗಿ ನಿಡಿದ ಗಣಕಿಕೃತ ಪಿರ್ಯಾದಿಯ ಸಾರಾಂಶವೆನೆಂದರೆ, ದಿನಾಂಕ 01/05/2017 ರಂದು  ಪಿರ್ಯಾದಿದಾರರು ಹಾಗೂ ಅವರ ಸಂಬಂಧಿಕರು ಕುಡಿಕೊಂಡು ಟ್ರಾಕ್ಸ ನಂ: ಕೆಎ- 34 ಎ- 7417 ನೇದ್ದರಲ್ಲಿ ಅವರ ಮನೇದೆವರಾದ ಹುಲಗಿಯ ಶ್ರೀ ಹುಲಿಗೇಮ್ಮ ದೇವಿಯ ದರ್ಶನಕ್ಕೆಂದು  ಬರುತ್ತಿರುವಾಗ ರಾತ್ರಿ 11-30 ಗಂಟೆಯ ಸುಮಾರಿಗೆ   ಎನ್ ಎಚ್ -50 ಕುಷ್ಟಗಿ ಹೊಸಪೇಟೆ ಏಕಮುಖ ರಸ್ತೆಯ ಮೆಲೆ ದನಕನ ದೊಡ್ಡಿ ಕ್ರಾಸ್ ಹತ್ತೀರ ರೋಡ್ ಬ್ರೇಕರ್ ಇದ್ದುದರಿಂದ ಪಿರ್ಯಾದುದಾರರ ವಾಹನ ಚಾಲಕನು ಬ್ರೇಕ್ ಹಾಕಿ ನಿಧಾನವಾಗಿ ಚಲಾಯಿಸುತ್ತಿರುವಾಗ  ಅವರ ಹಿಂದಿನಿಂದ ಲಾರಿ ನಂ: ಎಪಿ-27 ಎಕ್ಷ್ - 3709 ನೇದ್ರ ಚಾಲಕನಿ ತನ್ನ ಗಾಡಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಪಿರ್ಯಾದಿದಾರರು ಹೊಗುತ್ತಿದ್ದ ವಾಹನಕ್ಕೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರರ ವಾಹನದಲ್ಲಿದ್ದವರಿಗೆ ಗಾಯಪೆಟ್ಟುಗಳಾಗಿದ್ದು ಅಪಘಾತ ಪಡಿಸಿದ ಲಾರಿ ಚಾಲಕನು ತನ್ನ ಲಾರಿಯನ್ನು ಬಿಟ್ಟು ಓಡಿ ಹೊಗಿರುತ್ತಾನೆ ಕಾರಣ ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 106/2017 ಕಲಂ: 109 ಸಿ.ಆರ್.ಪಿ.ಸಿ..
ದಿನಾಂಕ 02-05-2017 ರಂದು ಬೆಳಿಗ್ಗೆ 05:30 ಗಂಟೆಗೆ ಕುಷ್ಟಗಿ ಪಟ್ಟಣದಲ್ಲಿ ಪಿ.ಎಸ್.ಐ. ಶ್ರೀ ವಿಶ್ವನಾಥ ಹಿರೇಗೌಡರ್ ರವರು ಪೆಟ್ರೋಲಿಂಗ ಮಾಡುವ ಕುರಿತು ತಿರುಗಾಡುತ್ತಾ ಕುಷ್ಟಗಿ ಪಟ್ಟಣದ ಅಡವಿರಾಯ ದೇವಸ್ಥಾನದ ಹತ್ತಿರ ಬಂದಾಗ ಇಲ್ಲಿ ಒಬ್ಬ ವ್ಯಕ್ತಿ ಆ ಕಡೆ ಈ ಕಡೆ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಇದ್ದು ಆಗ ಅವರನ್ನು ನೋಡಿ ತನ್ನ ಇರುವಿಕೆಯನ್ನು ಬದಲಾಯಿಸಿದಾಗ ಅವನನ್ನು ಕೂಡಲೇ ಹೋಗಿ ಹಿಡಿದುಕೊಂಡು ವಿಚಾರಿಸಿದಾಗ ಸಮರ್ಪಕವಾದ ಉತ್ತರವನ್ನು ಕೊಡದೇ ಇದ್ದು ಪುನಃ ಪುನಃ ವಿಚಾರಿಸಿದಾಗ ತನ್ನ ಹೆಸರು ಮುತ್ತಪ್ಪ ತಂದೆ ಕರಿಯಪ್ಪ ದಮ್ಮೂರ ವಯ : 24 ವರ್ಷ ಜಾ : ಕುಂಚಿಕೊರವರ್  : ಕೂಲಿಕೆಲಸ ಸಾ : 3 ನೇ ವಾರ್ಡ ಯಲಬುರ್ಗಾ ತಾ : ಯಲಬುರ್ಗಾ. ಅಂತಾ ಹೇಳಿದ್ದು ಇಲ್ಲಿ ಬಂದ ಬಗ್ಗೆ ಸಮರ್ಪಕವಾದ ಉತ್ತರವನ್ನು ಕೊಡದೇ ಇದ್ದು, ಸದರಿಯವನು ಇಲ್ಲಿ ಯಾವದೇ ತನ್ನ ಸಂಬಂಧಿಕರಾಗಲಿ ತನ್ನ ಗೆಳಯರಾಗಲಿ ಯಾರು ಇಲ್ಲದೇ ಇದ್ದು ಮತ್ತು ಪರಸ್ಥಳಿಯವನಾಗಿದ್ದು ಹೀಗಾಗಿ ಸದರಿಯವನು ಯಾವುದೇ ಸ್ವತ್ತಿನ ಅಪರಾಧ ಮಾಡಲು ಬಂದಿರಬಹುದು ಅಂತಾ ಬಲವಾಗಿ ಸಂಶಯ ಬಂದಿದ್ದು ಅಲ್ಲದೇ ಅವನನ್ನು ಹಾಗೆಯೇ ಬಿಟ್ಟಲ್ಲಿ ಸ್ವತ್ತಿನ  ಅಪರಾಧ ಮಾಡಬಹುದು ಅಂತಾ ಕಂಡು ಬಂದ ಮೇರೆಗೆ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲು ಮಾಡಿ ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
5] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 42/2017 ಕಲಂ: 143, 147, 148, 504, 506, 307 ಸಹಿತ 149  ಐ.ಪಿ.ಸಿ.

ದಿನಾಂಕ: 02-05-2017 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ಬಂಡಿಹಾಳ ಗ್ರಾಮದ ಮಾಳಗೌಡರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರೆಲ್ಲರೂ 1] ಕರಿಬಸಪ್ಪ ತಂದೆ ಕಳಕಪ್ಪ ನಿಡಗುಂದಿ ಹಾಗೂ ಇತರೇ ಸುಮಾರು 27 ಜನರು ಕೂಡಿ ಕೈನಲ್ಲಿ ಬಡಿಗೆ, ಕೊಡಲಿ, ಕುಡಗೋಲು, ಒಡೆದ ಬಾಟಲಿ ಇವೆಲ್ಲವೂಗಳನ್ನು ಹಿಡಿದುಕೊಂಡು ಪಿರ್ಯಾದಿ ಶರಣು ತಂದೆ ಕರಿಬಸಪ್ಪ ಕಳಕಸಪ್ಪನವರ ಉ: ಸಮಾಜ ಸೇವಕ ಮತ್ತು ಆರ್.ಟಿ.ಐ. ಕಾರ್ಯಕರ್ತ ಸಾ: ಬಂಡಿಹಾಳ ಇವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ & ಗೂಳಪ್ಪ ದಿಂಡೂರು ಇವರಿಗೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಬಿಡಿಸಲು ಬಂದವರ ಮೇಲೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008