1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 108/2017 ಕಲಂ:
279, 304(ಎ) ಐ.ಪಿ.ಸಿ.
ದಿನಾಂಕ :03-05-2017 ರಂದು ಮುಂಜಾನೆ 10-15 ಗಂಟೆಗೆ ಫಿರ್ಯಾದಿದಾರರಾದ
ಆನಂದ ತಂದೆ ಯಂಕಪ್ಪ ತಳವಾರ ವಯಾ: 34 ವರ್ಷ ಜಾತಿ: ವಾಲ್ಮೀಕಿ ಉ: ಒಕ್ಕಲುತನ ಸಾ: ಯಲಬಣಚಿ ತಾ: ಕುಷ್ಟಗಿ
ರವರು ಠಾಣೆಗೆ ಬಂದು ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ,
ದಿನಾಂಕ :02-05-2017 ರಂದು ಸಂಜೆ 04-15 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಗೋಪಾಲಕೃಷ್ಣ ಈತನು ನಮ್ಮ
ತಂಗಿಯಾದ ರೇಣುಕಾ ಈಕೆಯ ಮಗನಾದ ದೇವಪ್ಪ ತಲ್ಲೂರ ವಯಾ 11 ವರ್ಷ ಈತನನ್ನು ಕೊನಸಾಗರ ಗ್ರಾಮಕ್ಕೆ ಬಿಟ್ಟು
ಬರಲು ನಮ್ಮ ಬಜಾಜ ಡಿಸ್ಕವರಿ ಮೋಟಾರ ಸೈಕಲ್ ಚೆಸ್ಸಿ ನಂ :MD2A51BZ70WL20890 ನೇದ್ದನ್ನು ತೆಗೆದುಕೊಂಡು ಹೋಗಿ ಬಿಟ್ಟು ಬರಲು ಹೇಳಿ ಕಳಿಸಿದ್ದು
ಇರುತ್ತದೆ. ನಂತರ ನಮ್ಮ ತಮ್ಮನು ನಮ್ಮ ಮೋಟಾರ ಸೈಕಲ್ ತೆಗೆದುಕೊಂಡು ನಮ್ಮ ಅಳಿಯ ದೇವಪ್ಪನನ್ನು ಹಿಂದೆ
ಕೂಡ್ರಿಸಿಕೊಂಡು ಹೋದನು. ನಂತರ ಸಂಜೆ 04-30 ಗಂಟೆಯ ಸುಮಾರಿಗೆ ನಮ್ಮ ಅಳಿಯ ದೇವಪ್ಪನು ಪೋನ್
ಮಾಡಿ ಮಾಮ ಗೋಪಾಲಕೃಷ್ಣ ಈತನು ಸೈಕಲ್ ಮೋಟಾರ ಕೆಡವಿರುತ್ತಾನೆ ಅಂತಾ ಹೇಳಿದ್ದು, ನಾನು ಗಾಭರಿಯಾಗಿ
ನಾನು ಮತ್ತು ನಮ್ಮ ಮಾವ ಫಕೀರಪ್ಪ ತಂದೆ ಹನುಮಪ್ಪ ಈಳಗೇರ ಇಬ್ಬರೂ ಕೂಡಿ ಬಂದು ನೋಡಲಾಗಿ ವಿಷಯ ನಿಜವಿದ್ದು,
ನಮ್ಮ ತಮ್ಮನು ಬಜಾಬ ಡಿಸ್ಕವರಿ ಮೋಟಾರ ಸೈಕಲ್ ನೇದ್ದನ್ನು ಯಲಬಣಚಿ-ದೊಣ್ಣೆಗುಡ್ಡಾ ರಸ್ತೆಯ ಮೇಲೆ
ಉಮೇಶ ದೇಸಾಯಿ ರವರ ಹೊಲದ ಹತ್ತಿರ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಿಯಂತ್ರಣ
ತಪ್ಪಿ ಬ್ರಿಜ್ ಗೆ ಟಕ್ಕರಕೊಟ್ಟು ಅಪಘಾತವಾಗಿದ್ದು ಇರುತ್ತದೆ. ಸದರಿ ಅಪಘಾತದಿಂದ ನನ್ನತಮ್ಮನಾದ ಗೋಪಾಲಕೃಷ್ಣನಿಗೆ
ತಲೆಗೆ ಭಾರಿಪಟ್ಟಾಗಿ, ಗೆಜ್ಜೆಗೆ ಒಳಪೆಟ್ಟಾಗಿ, ಎಡಗಾಲು ತೊಡೆಯ ಹತ್ತಿರ ಮುರಿದಂತಾಗಿರುತ್ತದೆ. ನಮ್ಮ ಅಳಿಯ ದೇವಪ್ಪನಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲಾ.
ನಂತರ 108 ಅಂಬುಲೆನ್ಸಗೆ ಪೋನ ಮಾಡಿ ಅಂಬುಲೆನ್ಸ ಬಂದ ನಂತರ ಚಿಕಿತ್ಸೆಗಾಗಿ ಕಟ್ಟಿ ಆಸ್ಪತ್ರೆ ಬಾಗಲಕೋಟಗೆ
ಕರೆದುಕೊಂಡು ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು ಇರುತ್ತದೆ. ದಿನಾಂಕ :02-05-2017 ರಂದು ರಾತ್ರಿ
11-00 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 109/2017 ಕಲಂ: 457, 380 ಐ.ಪಿ.ಸಿ.
ಇಂದು ದಿನಾಂಕ:03-05-2017
ರಂದು ರಾತ್ರಿ 7-00 ಗಂಟೆಗೆ ಪಿರ್ಯಾದಿದಾರರಾದ ವೀರನಗೌಡ ತಂದೆ ಶಂಕರಗೌಡ ಪಾಟೀಲ ವಯಾ 55 ವರ್ಷ ಜಾ:ಲಿಂಗಾಯತ
ಉ:ಪ್ರಭಾರಿ ಉಗ್ರಾಣ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಕುಷ್ಟಗಿ ಸಾ.ದಾಸ್ತಿಕೊಪ್ಪ
ತಾ.ಕಲಘಟಗಿ ಜಿ.ಧಾರವಾಡ ಹಾ.ವ. ಕುಷ್ಟಗಿ. ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ನೀಡಿದ್ದು
ಸಾರಾಂಶವೇನೆಂದರೆ, ಕುಷ್ಟಗಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಮ್ಮ ಇಲಾಖೆಯ ಕಛೇರಿ ಮತ್ತು 3
ಉಗ್ರಾಣಗಳು ಇದ್ದು, ಸದರಿ ಉಗ್ರಾಣಗಳಲ್ಲಿ ಒಂದು ಉಗ್ರಾಣವನ್ನು ಕೆ.ಎಫ್.ಸಿ.ಎಸ್.ಸಿ. ರವರಿಗೆ ಬಾಡಿಗೆಗೆ
ಕೊಟ್ಟಿದ್ದು, ಉಳಿದ 2 ಉಗ್ರಾಣಗಳು ನಮ್ಮ ಇಲಾಖೆಯ ವಶದಲ್ಲಿರುತ್ತವೆ. ನಮ್ಮ ಇಲಾಖೆಯ ವಶದಲ್ಲಿರುವ
2 ಉಗ್ರಾಣಗಳಲ್ಲಿ ಉಗ್ರಾಣ ನಂ.1 ಮತ್ತು ಉಗ್ರಾಣ ನಂ. 3 ರಲ್ಲಿ ಸರಕಾರದ ಮತ್ತು ರೈತರ ಧ್ಯಾನ್ಯಗಳನ್ನು ಸಂಗ್ರಹಿಸಿಟ್ಟಿದ್ದು,
ಅದರಂತೆ ಉಗ್ರಾಣ ನಂ. 3 ರಲ್ಲಿ ದಿನಾಂಕ. 20-03-2017 ರಿಂದ ದಿನಾಂಕ. 15-04-2017 ರ ವರೆಗೆ ಕೇಂದ್ರ
ಸರಕಾರದಿಂದ ಖರೀದಿಸಿದ ತೊಗರಿಕಾಳುಗಳ ಚೀಲಗಳು ಒಟ್ಟು 14932 ಚೀಲಗಳನ್ನು ಸಂಗ್ರಹಿಸಿಟ್ಟಿದ್ದು, ಸದರಿ
ಉಗ್ರಾಣಗಳಿಗೆ ಕಾವಲುಗಾರರು ಇರುವದಿಲ್ಲ, ಪ್ರತಿ ದಿನ ನಾನು ಸಂಜೆ ಮನೆಗೆ ಹೋಗುವಾಗ ಉಗ್ರಾಣಗಳಿಗೆ
ಕೀಲಿ ಹಾಕಿಕೊಂಡು ಹೋಗತ್ತಿದ್ದೆನು. ಅದರಂತೆ ನಿನ್ನೆ ದಿವಸ ದಿನಾಂಕ. 02-05-2017 ರಂದು ಸಾಯಂಕಾಲ
5-00 ಗಂಟೆಗೆ ನಮ್ಮ ಇಲಾಖೆಯ ಉಗ್ರಾಣ ನಂ.1 ಮತ್ತು ಉಗ್ರಾಣ ನಂ.3 ನೇದ್ದವುಗಳನ್ನು ಚೆಕ್ ಮಾಡಿಕೊಂಡು
ಅವುಗಳಿಗೆ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು, ನಂತರ ಇಂದು ದಿನಾಂಕ. 03-05-2017 ರಂದು ಬೆಳಿಗ್ಗೆ
10-30 ಗಂಟೆಗೆ ನಮ್ಮ ಕಛೇರಿಗೆ ಬಂದು ಉಗ್ರಾಣಗಳನ್ನು ಸ್ವಚ್ಚ ಮಾಡಿಸುವ ಸಲುವಾಗಿ ಉಗ್ರಾಣ ನಂ.3 ನೇದ್ದರ
ಕೀಲಿ ತೆರೆದು ಒಳಗೆ ಹೋಗಿ ನೋಡಿದಾಗ ಸದರಿ ಉಗ್ರಾಣದಲ್ಲಿ ಹಚ್ಚಿದ್ದ ತೊಗರಿಕಾಳುಗಳ ನಿಟ್ಟುಗಳು ಚೆಲ್ಲಾಪಿಲ್ಲಿಯಾಗಿ
ಬಿದ್ದಿದ್ದು, ಆಗ ಸಂಶಯ ಬಂದು ತೊಗರಿಕಾಳುಗಳ ಚೀಲಗಳನ್ನು ಎಣಿಕೆ ಮಾಡಿ ನೋಡಿದಾಗ ಒಟ್ಟು 14932 ತೊಗರಿಕಾಳುಗಳ ಚೀಲಗಳಲ್ಲಿ ಒಟ್ಟು 140 ತೊಗರಿಕಾಳುಗಳ
ಚೀಲಗಳು ಇರಲಿಲ್ಲ, ಸದರಿ ತೊಗರಿಕಾಳುಗಳ ಒಂದು ಚೀಲದ ಬೆಲೆ 2,750=00ರೂ. ಇದ್ದು, ಒಟ್ಟು 140 ತೊಗರಿಕಾಳುಗಳ
ಚೀಲಗಳ ಬೆಲೆ ಒಟ್ಟು 3,85,000=00ರೂ. ಇರುತ್ತದೆ. ಸದರಿ 140 ತೊಗರಿಕಾಳುಗಳ ಚೀಲಗಳನ್ನು ದಿನಾಂಕ.
02-05-2017 ರಂದು ಸಂಜೆ 6-00 ಗಂಟೆ ಯಿಂದ ದಿನಾಂಕ. 03-05-2017 ರಂದು ಬೆಳಿಗ್ಗೆ 10-30 ಗಂಟೆಯ
ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಉಗ್ರಾಣಕ್ಕೆ ಹಾಕಿದ
ಕೀಲಿಯನ್ನು ನಕಲಿ ಕೀಲಿ ಬಳಸಿ ತೆಗೆದು ಉಗ್ರಾಣದ ಒಳಗೆ ಪ್ರವೇಶಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದು,
ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಕೊಂಡಿದ್ದು ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 43/2017 ಕಲಂ: 457, 380 ಐ.ಪಿ.ಸಿ.
ಫಿರ್ಯಾದಿ ಈರಪ್ಪ ತಂದೆ ಕಲ್ಲಪ್ಪ ಕೊಳೂರು ಸಾ: ತುಂಬ್ರಗುಂದಿ ತಾ: ಯಲಬುರ್ಗಾ ಇವರು ದಿನಾಂಕ;01-05-2017
ರಂದು ತಮ್ಮೂರಲ್ಲಿ ಶ್ರೀ ದುರ್ಗಾ ದೇವಿ ಜಾತ್ರೆನಿಮಿತ್ಯ ಗ್ರಾಮದಲ್ಲಿ ಮನರಂಜನೆಗಾಗಿ ನಾಟಕ ಪ್ರದರ್ಶನವಿದ್ದು,
ನಾಟಕ ನೋಡುವ ಸಲುವಾಗಿ ತನ್ನ ಸಂಗಡ ತನ್ನ ಮಗಳು, ಮೊಮ್ಮಗಳು, ಅಳಿಯ,ಸೋಸೆ ಎಲ್ಲರೂ ರಾತ್ತಿ ಊಟ ಮಾಡಿ
10-30 ಗಂಟಗೆ ಮನೆಗೆ ಬೀಗ ಹಾಕಿಕೊಂಡು ನಾಟಕ ನೋಡಲು ಹೋಗಿದ್ದು, ಮರುದಿನ ಬೆಳಿಗ್ಗೆ 05-30 ಗಂಟೆಗೆ
ವಾಪಸ ಫಿರ್ಯಾದಿದಾರರು ತಮ್ಮ ಮಗಳು, ಸೋಸೆಯೊಂದಿಗೆ ಮನೆಗೆ ಬಂದು ನೋಡಿದ್ದು, ಮನೆಯ ಬಾಗಿಲು ಸ್ವಲ್ಪ
ತೆರೆದಿದ್ದು, ಒಳಗಡೆ ಹೋಗಿ ನೋಡಿದ್ದು, ಪಡಶಾಲಿಯಲ್ಲಿನ ತೀಜೋರಿಯನ್ನು ಕುಡಗೋಲಿನಿಂದ ಮಿಟಿ ಬಾಗಿಲು ತೆರೆದು ಅದರಲ್ಲಿದ್ದ 1]
2 ಜೋತೆ ಬಂಗಾರದ ಕೀವಿಯಲ್ಲಿನ ಡ್ರಾಫ್ಸಗುಂಡು, ಅ.ಕೀ 9000/- 2] 2 ಬೆಳ್ಳಿಯ ಗುಂಡುಗಳಿಗೆ ಅ.ಕೀ
4000/- ರೂ 3] 1 ಜೊತೆ ಬೆಳ್ಳಿಯ ಪೆಂಡಾಲ ಗೆಜ್ಜೆ, ಅ.ಕೀ 3000/- 4] 1 ಜೋತೆ ಬೆಳ್ಳಿಯ ಮಾವಿನಕಾಯಿ
ಗೆಜ್ಜೆ ಅ.ಕೀ 3000/- ರೂ 5] MU Phone ಕಂಪನಿಯ 1 ಮೊಬೈಲ ಅ.ಕೀ 400/- ರೂ ಮತ್ತು 6] ನಗದು ಹಣ
5000/- ರೂ ಹೀಗೆ ಒಟ್ಟು 24,400/- ರೂಗಳ ವಸ್ತುಗಳನ್ನ ದಿನಾಂಕ:01-05-2017 ರ ರಾತ್ರಿ 10-30 ಗಂಟೆಯಿಂದ
ದಿನಾಂಕ:02-05-2017 ರ ಬೆಳಗಿನ ಜಾವ -05-30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ
ಮಾಡಿಕೊಂಡು ಹೋಗಿದ್ದು, ಕಳುವಾದ ಮಾಲು ಮತ್ತು ಆರೋಪಿತರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು
ವಿನಂತಿ ಅಂತಾ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment