1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 91/2017 ಕಲಂ:
279, 304(ಎ) ಐ.ಪಿ.ಸಿ
ಫಿರ್ಯಾದಿದಾರರಾದ ಶ್ರೀ ಅಗರೆಪ್ಪ ತಂದೆ ಗೋವಿಂದಪ್ಪ ಕಟಗಿ ವಯ 42 ವರ್ಷ ಜಾತಿ ಕುರುಬರ ಉ. ಒಕ್ಕಲುತನ ಸಾ. ಕೊಟ್ನೇಕಲ್ ತಾ. ಗಂಗಾವತಿ ರವರು ಫಿರ್ಯಾದಿ ನೀಡಿದ್ದು ತಮ್ಮ ಅಳಿಯನಾದ ಸಣ್ಣರುದ್ರಪ್ಪ ತಂದೆ ಭೀಮಪ್ಪ ಸಿದ್ರಾಂಪುರ ಈತನದು ಒಂದು ಟ್ರ್ಯಾಕ್ಟರ್ ನಂ ಕೆಎ-37/ಟಿಬಿ-1697 ಅಂತಾ ಇದ್ದು ಇದಕ್ಕೆ ಗೋವಿಂದಪ್ಪ ತಂದೆ ಲಿಂಗಪ್ಪ ಕುಂಟೋಜಿ ಸಾ. ಕೊಟ್ನೇಕಲ್ ಈತನು ಚಾಲಕ ಅಂತಾ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ 22-05-2017 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ನಾನು ನಮ್ಮೂರಿನ ಬಸವಣ್ಣ ಕಟ್ಟೆಯ ಹತ್ತಿರ ರುವ ಹೋಟೆಲ್ ಗೆ ಚಹ ಕುಡಿಯಲೆಂದು ಹೋರಟಿದ್ದಾಗ ನಮ್ಮ ಅಳಿಯನಾದ ಸಣ್ಣ ರುದ್ರಪ್ಪೀತನ ಮಗಳಾದ ಕುಮಾರಿ ಭೀಮಮ್ಮ ವಯ 14 ವರ್ಷ ಕೆಯು ತಮ್ಮ ಮನೆಯಿಂದ ಕಿರಾಣಿ ಅಂಗಡಿಗೆ ಬರುತ್ತಿದ್ದು ಅದೇ ವೇಳೆಗೆ ಸಣ್ಣ ರುದ್ರಪ್ಪನ ಟ್ರ್ಯಾಕ್ಟರ್ ಚಾಲಕ ಮನೆಯಿಂದ ಟ್ರ್ಯಾಕ್ಟರ್ ಚಾಲುವು ಮಾಡಿಕೊಂಡು ನಿರ್ಲಕ್ಷತನದಿಂದ ಓಣಿಯ ರಸ್ತೆ ಇರುವುದನ್ನು ಗಮನಿಸದೇ ಮತ್ತು ಮುಂದೆ ನಡೆದುಕೊಂಡು ಹೊರಟಿದ್ದ ಭೀಮಮ್ಮಳನ್ನು ಗಮನಿಸದೇ ಅಜಾಗರೂಕತೆಯಿಂದ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಮದು ಭಿಮಮ್ಮ ಈಕೆಗೆ ಠಕ್ಕರ್ ಮಾಡಿ ಅಪಘಾತಪಡಿಸಿದ್ದರಿಂದ ಟ್ರ್ಯಾಕ್ಟರ್ ಇಂಜಿನಿನ ಮುಂದಿನ ಗಾಲಿ ಆಕೆಯ ತಲೆಯ ಮೇಲೆ ಹಾಯ್ದು ಹೋಗಿ ಆಕೆಗ ತಲೆಗೆ ಗಂಭಿರಗಾಯವಾಗಿದ್ದು ಅಲ್ಲಿಯೇ ಇದ್ದ ನಾನು ಆಕೆಯನ್ನು ಎತ್ತಿಕೊಂಡು ನೋಡಲು ಆಕೆ ಮಾತನಾಡುವ ಸ್ಥಿತಿಯಲ್ಲಿ ಇದ್ದಿಲ್ಲ, ಅಪಘಾತವನ್ನು ನೋಡಿದ ಮನೆಯ ಮುಂದೆ ಇದ್ದ ಸಣ್ಣ ರುದ್ರಪ್ಪ ಮತ್ತು ನಾನು ಕೂಡಿಕೊಂಡು ಭೀಮಮ್ಮಳನ್ನು ಚಿಕಿತ್ಸೆ ಕುರಿತು ಗಂಗಾವತಿ ಮಲ್ಲನಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಅಣ್ಣಿಗೇರಿ ಹತ್ತಿರ ಮದ್ಯಾಹ್ನ 1-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 111/2017 ಕಲಂ:
302, 324, 504 ಸಹಿತ 34 ಐ.ಪಿ.ಸಿ:
ದಿ:22-05-2017 ರಂದು ರಾತ್ರಿ 7-40 ಗಂಟೆಯ ಸುಮಾರಿಗೆ ತನ್ನ ಗಂಡ ಯಂಕನಗೌಡ ಇತನು ತಮ್ಮ ಮನೆಯಿಂದ ಬೀಡಿ
ತರಲು ಅಂತಾ ಹೋಗಿ ವಾಪಾಸ್ ಮನೆಗೆ ಅಂತಾ ನಡೆದುಕೊಂಡು ಶ್ರೀ ಹನಮಂತ ದೇವರ ಗುಡಿಯ ಸಮೀಪ
ಬರುತ್ತಿದ್ದಾಗ, ಆರೋಪಿತರು ಹಿಂದಿನಿಂದ
ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಬಂದು ಯಂಕನಗೌಡನಿಗೆ ಆರೋಪಿ ಕಲ್ಲಪ್ಪನು ಹಿಡಿದುಕೊಂಡು ಕೆಳಗಡೆ
ಕೆಡವಿ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ತಲೆಗೆ ಹೊಡೆದಿದ್ದು, ಆಗ ಫಿರ್ಯಾದಿದಾರರು ನೋಡಿ ತನ್ನ ಸಂಗಡ ಅಲ್ಲಿಯೇ ಇದ್ದ ತಮ್ಮ ಚಿಗವ್ವ
ಶ್ಯಾವಂತ್ರೆಮ್ಮಳಿಗೆ ಕರೆದುಕೊಂಡು ಹತ್ತಿರ ಬಿಡಿಸಿಕೊಳ್ಳಲು ಹೋದಾಗ ಆರೋಪಿ ಕಲ್ಲಪ್ಪನು ಲೇ
ಸೂಳೇಯರೇ ಈ ಸೂಳೇಮಗ ನನ್ನ ಹೆಂಡತಿ ದ್ರಾಕ್ಷಾಯಣಿಗೆ ನೋಡುತ್ತಾನೆ. ಅದಕ್ಕೆ ಈ ಸೂಳೇಮಗನಿಗೆ
ಹೊಡೆದು ಸಾಯಿಸುತ್ತೇವೆ. ಎಂದು ಜಗಳ ತೆಗೆದು ಆರೋಪಿ ವಿರೇಶನು ಕೂಡಾ ಅದೇ ಸಿಟ್ಟಿನಿಂದ ತನ್ನ
ಕೈಯಲ್ಲಿದ್ದ ಕಟ್ಟಿಗೆಯಿಂದ ಮೃತ ಯಂಕನಗೌಡನ ಎರಡು ಕಾಲುಗಳಿಗೆ ಜೋರಾಗಿ ಹೊಡೆದಿದ್ದು ಅಲ್ಲದೇ
ಆರೋಪಿ ದ್ರಾಕ್ಷಾಯಣಿ ಇವಳು ಕೂಡಾ ತನ್ನ ಗಂಡನ ಕೈಯಲ್ಲಿದ್ದ ಕಟ್ಟಿಗೆ ಕಸಿದುಕೊಂಡು ಮೃತ ಯಂಕನಗೌಡನ
ಬಲಗೈ ತೋಳಿಗೆ ಹೊಡಿದಿರುತ್ತಾಳೆ. ಬಿಡಿಸಲು ಹೋದ ಶ್ಯಾವಂತ್ರಮ್ಮಳಿಗೆ ಆರೋಪಿ ದ್ರಾಕ್ಷಾಯಣಿ ಇವಳು
ಅದೇ ಕಟ್ಟಿಗೆಯಿಂದ ಎಡಗೈ ಮುಂಗೈಗೆ ಹೊಡೆದಿರುತ್ತಾಳೆ. ಮತ್ತು ಮೃತ ಯಂಕನಗೌಡನಿಗೆ 03 ಜನ ಆರೋಪಿತರು ದರದರನೇ ಎಳೆದುಕೊಂಡು ತಮ್ಮ ಮನೆಯ ಸಮೀಪದ ಅಂಗಳದ ವರೆಗೆ
ಎಳೆದು ಹಾಕಿದಾಗ ಆರೋಪಿ ಕಲ್ಲಪ್ಪನು ಈ ಸೂಳೇಮಗ ಯಂಕನಗೌಡ ನನ್ನ ಹೆಂಡತಿ ಜೊತೆ ಅದಾನ ಬಿಡಬಾರದು
ಇವನಿಗೆ ಎಂದವನೇ ತನ್ನ ಹೆಂಡತಿ ದ್ರಾಕ್ಷಾಯಣಮ್ಮ ಳ ಕೈಯಲ್ಲಿದ್ದ ಕಟ್ಟಿಗೆ ಕಸಿದುಕೊಂಡು
ಯಂಕನಗೌಡನ ತಲೆಗೆ ಜೋರಾಗಿ ಹೊಡೆದಿದ್ದರಿಂದ ಅವನ ತಲೆಯಲ್ಲಿ ರಕ್ತ ಬಂದಿರುತ್ತದೆ. ಮತ್ತು ಆರೋಪಿ
ವಿರೇಶನು ಕೂಡಾ ತನ್ನ ಕೈಯಲ್ಲಿದ್ದ ಅದೇ ಕಟ್ಟಿಗೆಯಿಂದ ಪುನಃ ಯಂಕನಗೌಡನ ಕಾಲುಗಳಿಗೆ ಜೋರಾಗಿ
ಹೊಡೆದು ಇವನನ್ನು ಇವತ್ತು ಸಾಯಿಸಬೇಕು ಎಂದಾಗ ಫಿರ್ಯಾದಿ ಮತ್ತು ಓಣಿಯ ಜನರು ಬಂದು
ಬಿಡಿಸಿಕೊಂಡಿರುತ್ತಾರೆ. ಸದರಿ ಜಗಳದಲ್ಲಿ ತೀವ್ರ ಹಲ್ಲೆಗೊಳಗಾದ ಯಂಕನಗೌಡನಿಗೆ 108 ಅಂಬುಲೆನ್ಸ ದಲ್ಲಿ ಕೊಪ್ಪಳದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದು
ಚಿಕಿತ್ಸೆ ಕೊಡಿಸಿದ್ದು, ನಂತರ ಇಂದು ದಿ: 23-05-17 ರಂದು 00-15 ಎ,ಎಮ್ ಕ್ಕೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ
ಕೈಗೊಂಡಿದ್ದು ಅದೆ.
0 comments:
Post a Comment