1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 92/2017 ಕಲಂ:
04 ಕರ್ನಾಟಕ ಮೀತಿ ಮಿರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ 2004 ಮತ್ತು ಕಲಂ. 343, 323,
504, 506 ಐ.ಪಿ.ಸಿ:
ದಿನಾಂಕ:-23-05-2017 ರಂದು ರಾತ್ರಿ 9-30 ಗಂಟೆಗೆ
ಪಿರ್ಯಾದಿದಾರರಾದ ಶ್ರೀಮತಿ ಶಶಿಕಲಾ ಗಂಡ ತಿರುಪತಿ ಚಕೋಟಿ ವಯಾ-28ವರ್ಷ ಜಾ.ನಾಯಕ ಸಾ. ಹೊಸಜೂರಟಗಿ ತಾ.ಗಂಗಾವತಿ ರವರು ಠಾಣೆಗೆ ಹಾಜರಾಗಿ
ಒಂದು ಲಿಖಿತ ದೂರು ಕೊಟ್ಟಿದ್ದು ಸದ್ರಿ ದೂರಿನ ಸಾರಾಂಶವೆನಂದರೆ ನನ್ನ ಗಂಡ ನಾನು ಸಂಸಾರ ಸಮೇತ
ಹೊಸಜೂರಟಗಿ ಗ್ರಾಮದಲ್ಲಿ ವಾಸವಾಗಿದ್ದು ಮಾಹೇ2016
ನೇ ಸೆಪ್ಟಂಬರ್ ತಿಂಗಳಿನಲ್ಲಿ ನನ್ನ ಗಂಡನು ನಮಗೆ ಹಣದ ಅಡಚಣೆ
ಇದ್ದುದರಿಂದ ನಮ್ಮ ಸಂಬಂದಿಕನಾಗುವ ನಮ್ಮ ಜನಾಂಗದ ಶಿವಪ್ಪ ತಂದಿ ಕಾಳಿಂಗಪ್ಪ ಹತ್ತಿಮರದ ಸಾ.
ವಡ್ಡರಹಟ್ಟಿ (ಉಳ್ಳಿಡಗ್ಗಿ) ಇತನ ಕಡೆ ಹಣ ಕೇಳಿದ್ದಕ್ಕೆ ಆತನು ನನ್ನ ಗಂಡನಿಗೆ 30,000=00 ರೂ. ಕೊಡುವ
ಸಲುವಾಗಿ 100 ರೂಪಾಯಿಗೆ 4=00 ರೂ.ಬಡ್ಡಿಯೆಂತೆ
ಕೊಡುತ್ತೇನೆ ಅಂತಾ ಕೇಳಿದ್ದರಿಂದ ನಮಗೆ ತುಂಬಾ ಹಣದ ಅಡಚಣೆಯಾಗಿದ್ದರಿಂದ ನನ್ನ ಗಂಡನು ಆತನ
ಕಡೆಯಿಂದ 100=00 ಗೆ 4 ರೂ ಬಡ್ಡಿಯೆಂತೆ
ದಿನಾಂಕ:-12-09-2016 ರಂದು ಒಟ್ಟು 30,000=00 ಸಾಲ
ತೆಗದುಕೊಂಡಿದ್ದನು ಇದಕ್ಕೆ ತನೆ ಗ್ಯಾರಂಟ್ ಬೇಕು ಅಂತಾ ನನ್ನ ಗಂಡನ ಎಸ್.ಬಿ.ಎಮ್ ಬ್ಯಾಂಕಿನ ಸಹಿ
ಮಾಡಿದ ಖಾಲಿ ಚೆಕ್ ನಂ 243833, 243834 ನೆದ್ದವುಗಳನ್ನು ಮತ್ತು ಒಂದು ಖಾಲಿ ಪ್ರಾಮೀಸರಿ ನೋಟ್ ಮೇಲೆ ಸಹಿ
ಮಾಡಿಸಿಕೊಂಡಿದ್ದನು. ನಂತರ ನನ್ನ ಗಂಡನಿಗೆ ಹಣದ ಅಡಚಣೆ ಮತ್ತು ಬರಗಾರದ ಪರಸ್ಥಿತಿಯಲ್ಲಿ
ಕೆಲಸ ಸಿಗದೇ ಕಾರಣ ಬಡ್ಡಿ ಕಟ್ಟಲು ಆಗದೇ ಇದ್ದುದರಿಂದ ನನ್ನ ಗಂಡನಿಗೆ ಶಿವಪ್ಪ ಈತನು ಪ್ರತಿ ದಿನ
ಸಾಲ ಮರಪಾವತಿಯ ಸಲುವಾಗಿ ಕಿರುಕುಳ ಕೊಟ್ಟು ಮನೆಗೆ ಬಂದು ನನ್ನ ಗಂಡನಿಗೆ ಅಸ್ಲೀಲವಾಗಿ ಮಾತನಾಡಿ, ಕೈಯಿಂದ ಹೊಡೆದು
ಜೀವ ಬೇದರಿಕೆ ಹಾಕಿ ಹೋಗಿದ್ದು ಅಲ್ಲದೇ ನನ್ನ ಗಂಡನಿಂದ ಪಡೆದುಕೊಂಡಿದ್ದ ಚೆಕ್ ಗಳ ಮೇಲೆ
ಕೊರ್ಟಿನಲ್ಲಿ ಚೆಕ್ ಭೊನ್ಸ್ ಕೇಸ್ ಮಾಡಿ ನನ್ನ ಗಂಡನಿಗೆ ಪ್ರತಿದಿನ ಪೋನ ಮಾಡಿ ಸಾಲದ ಹಣ ಕಟ್ಟು
ಇಲ್ಲವಾದ ನಿನ್ನನ್ನು ಕೊಂದು ಆದರೂ ನನ್ನ ಸಾಲದ ಹಣ ತೆಗದುಕೊಳ್ಳುತ್ತೇನೆ ಅಂತಾ ಜೀವದ ಬೇದರಿಕೆ
ಹಾಕುತ್ತಿದ್ದಾನೆ ಮತ್ತು ನನ್ನ ಗಂಡನು ಮನೆಯಲ್ಲಿ ಇಲ್ಲದಾಗ ಮನೆಗೆ ಬಂದು ನನ್ನಿಂದ 10 ಸಾವಿರ
ರೂ.ಗಳನ್ನು ಪಡೆದುಕೊಂಡಿದ್ದು ಇದೆ. ನನ್ನ ಗಂಡನು ಇತರ ಚಿತ್ರಹಿಂಸೆ ತಾಳದೇ ಮನೆಗೆ ಸರಿಯಾಗಿ
ಬರದೇ ಊಟ ಸರಿಯಾಗಿ ಮಾಡದೇ ತಿರುಗುತ್ತಿದ್ದಾನೆ ಕಾರಣ ನಮಗೆ ಹಣದ ಅವಶ್ಯಕತೆಯನ್ನು ನೋಡಿ ಶಿವಪ್ಪ
ಈತನು ಹೆಚ್ಚಿನ ಬಡ್ಡಿಗೆ ಸಾಲ ಕೊಟ್ಟು ಸಾಲದ ಮರುಪಾವತಿಗೆ ಕಿರುಕುಳ ಕೊಟ್ಟಿದ್ದು ಈತನು ಮೇಲೆ
ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 116/2017 ಕಲಂ:
323, 324, 353, 333, 504, 506 ಸಹಿತ 34 ಐ.ಪಿ.ಸಿ:
ದಿನಾಂಕ: 23-05-2017
ರಂದು 1345 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಶ್ರೀ ಯಮನೂರಪ್ಪ ಸಿ.ಪಿ.ಸಿ-294 ಕಾರಟಗಿ ಪೊಲೀಸ್
ಠಾಣೆ ರವರು ಇತರ ಸಿಬ್ಬಂದಿಯರೊಂದಿಗೆ ಹುಲಗಿ ಗ್ರಾಮದ ಶ್ರೀ ಹುಲಿಗೇಮ್ಮ ದೇವಿಯ ಜಾತ್ರಾ ಬಂದೋಬಸ್ತ
ಕರ್ತವ್ಯದ ಮೇಲೆ ನಂದಿ ವೃತ್ತದ ಬ್ಯಾರಕೇಡ ಹತ್ತಿರ ರಸ್ತೆಯ ಮೇಲೆ ಸಮವಸ್ತ್ರದಲ್ಲಿ ಬಂದೋಬಸ್ತ ಕರ್ತವ್ಯ
ನಿರ್ವಹಿಸುವ ಸಮಯದಲ್ಲಿ ಆರೋಪಿತರಾದ 1. ಬಸವರಾಜ ತಂದೆ ಇಂದ್ರಪ್ಪ ವಕೀಲರು
2. ಮಂಜುನಾಥ ತಂದೆ ತಿರುಪತೆಪ್ಪ ಕನಕಗಿರಿ ತಮ್ಮ ಮೋಟಾರ ಸೈಕಲ ನಂ: ಕೆ.ಎ-37/8418 ನೇದ್ದರ ಮೇಲೆ
ಬಂದು ತಮ್ಮನ್ನು ದೇವಸ್ಥಾನದ ಒಳಗಡೆ ಹೋಗಲು ಬ್ಯಾರಕೇಡ ತೆಗೆಯಬೇಕು ತೆಗೆಯಬೇಕು ಅಂತಾ ಹೇಳಿದಾಗ ಪಿರ್ಯಾದಿದಾರರು
ಆರೋಪಿ ನಂ: 1 ಈತನಿಗೆ ಯಾವದೇ ವಾಹನಗಳನ್ನು ಒಳಗಡೆ ಹೋಗಲು ಬಿಡುವದಿಲ್ಲ ಅಂತಾ ಹೇಳಿದ್ದು ಆಗ ಸದ್ರಿ
ಆರೋಪಿತನು ತನ್ನ ಮೋಟಾರ ಸೈಕಲನಿಂದ ಕೆಳಗೆ ಇಳಿದು ಬಂದು ಪಿರ್ಯಾದಿದಾರರಿಗೆ ನಾನು ವಕೀಲನಿದ್ದರು ಕೂಡಾ
ನೀನು ನನಗೆ ಒಳಗಡೆ ಹೋಗಲು ಏಕೆ ಬಿಡುವದಿಲ್ಲ ನಿಮ್ಮಂತ ಪೊಲೀಸರನ್ನು ನಾನು ಬಹಳ ನೋಡಿದ್ದೇನೆ ಬ್ಯಾರಕೇಡ
ತೆಗೆಯಿರಿ ಅಂತಾ ಅಂದಾಗ ಪಿರ್ಯಾದಿದಾರರು ಸದ್ರಿ ಆರೋಪಿತನಿಗೆ ಬ್ಯಾರಕೇಡ ತೆಗೆಯುವದಿಲ್ಲ ಅಂತಾ ಅಂದಾಗ
ಆರೋಪಿ ನಂ: 1 ಮತ್ತು 2 ಇಬ್ಬರೂ ಕೂಡಿಕೊಂಡು ಪಿರ್ಯಾದಿದಾರರಿಗೆ `` ನಿಮ್ಮ ಪೊಲೀಸ್ ಸೂಳೇ ಮಕ್ಕಳದು
ಸೊಕ್ಕು ಜಾಸ್ತಿಯಾಗಿದೆ ಸೂಳೇ ಮಗನೆ’’ ಅಂತಾ ಆವಾಚ್ಛ ಶಬ್ದಗಳಿಂದ ಬೈಯ್ದು ಆರೋಪಿ ನಂ: 1 ಈತನು ಪಿರ್ಯಾದಿದಾರರ
ಸಮವಸ್ತ್ರದ ಎದೆಯ ಮೇಲಿನ ಅಂಗಿಯನ್ನು ಹಿಡಿದು ಜಗ್ಗಾಡಿ ಕೈಯಿಂದ ಮುಖಕ್ಕೆ ಹೊಡೆದು ಸಮವಸ್ತ್ರದ ಅಂಗಿ
ಹಿಡಿದು ಎಳದಾಡಿ ಶರ್ಟಿನ ಜೇಬನ್ನು ಹರಿದಿದ್ದು ಇರುತ್ತದೆ. ಆರೋಪಿ ನಂ: 2 ಈತನು ಕಟ್ಟಿಗೆಯ ಬಡಿಗೆಯಿಂದ
ಪಿರ್ಯಾದಿದಾರರ ಬಲಗೈ ಹೆಬ್ಬರಳಿಗೆ ಜೋರಾಗಿ ಹೊಡೆದು ಒಳಪೆಟ್ಟು ಹಾಗೂ ಗಾಯವನ್ನುಂಟು ಮಾಡಿ ಕರ್ತ್ಯವ್ಯಕ್ಕೆ
ಅಡ್ಡಿಯನ್ನುಂಟು ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment