1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 128/2017 ಕಲಂ. 279, 304(ಎ) ಐ.ಪಿ.ಸಿ:.
ಫಿರ್ಯಾದಿದಾರರಾದ ದೇವಪ್ಪ ತಂದೆ ರಾಮಪ್ಪ ಗಂಗನಾಳ ಇಂದು ಮದ್ಯಾಹ್ನ 03-00 ಗಂಟೆಯ ಸುಮಾರಿಗೆ ಕುಷ್ಟಗಿಯ ಗಂಜಗೆ ಬಂದಿದ್ದೇನು. ಸಂಜೆ 05-15 ಗಂಟೆ ಸುಮಾರಿಗೆ
ಪಿರ್ಯಾದಿಗೆ ಪೋನ ಮೂಲಕ ತನ್ನ ಅಳಿಯನಾದ ರಾಮಪ್ಪ ಈತನಿಗೆ ಅಪಘಾತವಾಗಿದೆ ಅಂತಾ ಸುದ್ದಿ ಗೊತ್ತಾಗಿ. ಕೂಡಲೇ ತಾನು
ತಮ್ಮ ಸಂಬಂದಿಕನಾದ ಬಸವರಾಜ ನಾಯಕ ಈತನನ್ನು ಕರೆದುಕೊಂಡು ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ
ನಿಜವಿದ್ದು. ಆಗ ನಾನು ನಮ್ಮ
ಅಳಿಯ ರಾಮಪ್ಪ ಕಮತರ ಈತನನ್ನು ನೋಡಲಾಗಿ ಈತನ ತಲೆಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ, ನಂತರ ಅಪಘಾತವಾದ
ಮೋಟಾರ ಸೈಕಲ ನೋಡಲು ಅದರ ನಂಬರ ಕೆ.ಎ-37-ಇಬಿ-7727 ಅಂತಾ ಇದ್ದು ಅದರ ಸವಾರನ ಹೆಸರು ವಿಚಾರಿಸಲು ಲಕ್ಷ್ಮಣ ತಂದೆ ಮರಿಯಪ್ಪ ಬ್ಯಾಳಿ ವಯಾ
38 ವರ್ಷ ಜಾ:ಹಿಂದೂ ಲಿಂಗಾಯತ ಉ:ಒಕ್ಕಲುತನ ಸಾ:ತಾಳಕೇರಿ ಅಂತಾ ಗೊತ್ತಾಯಿತು, ಈತನಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲಾ.
ನಂತರ ವಿಚಾರಿಸಲಾಗಿ ಸದರಿ ಲಕ್ಷ್ಮಣ ಈತನು ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ
ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ರಸ್ತೆಯಲ್ಲಿನ ತೆಗ್ಗನ್ನು ನೋಡದೇ ಹಾಗೇಯೇ
ನಡೆಸಿದ್ದರಿಂದ ಹಿಂದೆ ಕುಳಿತ ನನ್ನ ಅಳಿಯನಾದ ರಾಮಪ್ಪನು ಪುಟಿದು ಕೆಳಗೆ ಬಿದ್ದು ಗಾಯಗೊಂಡಿರುವ
ಬಗ್ಗೆ ಗೊತ್ತಾಯಿತು. ನಂತರ ಕೂಡಲೇ 108 ಅಂಬುಲೆನ್ಸಗೆ
ಪೋನ ಮಾಡಿ ಅಂಬುಲೆನ್ಸ ಬಂದ ನಂತರ ಚಿಕತ್ಸೆಗಾಗಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ
ಅಲ್ಲಿ ವೈದ್ಯಾಧೀಕಾರಿಗಳು ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟ ಆಸ್ಪತ್ರೆಗೆ ಕರೆದುಕೊಂಡು ಹೋಗಲು
ತಿಳಿಸಿದ ಮೇರೆಗೆ ಅಂಬುಲೆನ್ಸದಲ್ಲಿ ಬಾಗಲಕೋಟಗೆ ಹೋಗುತ್ತಿದ್ದಾಗ ಹುನಗುಂದ ಹತ್ತಿರ ಮಾರ್ಗದಲ್ಲಿ
ಸದರಿ ರಾಮಪ್ಪ ಈತನು ಸಂಜೆ 06-30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 119/2017 ಕಲಂ.
279, 338 ಐ.ಪಿ.ಸಿ:.
ದಿ:28-05-2017 ರಂದು ರಾತ್ರಿ 9-30 ಗಂಟೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು
ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೈಕೆಯಲ್ಲಿದ್ದ ಹಾಗೂ ಪ್ರತ್ಯಕ್ಷ ಸಾಕ್ಷಿದಾರರಾದ, ಸೈಯದ ಸಾದಿಕಲಿ ಸಾ: ಕೊಪ್ಪಳ ಇವರ ಹೇಳಿಕೆ ಫಿರ್ಯಾದಿಯನ್ನು
ಪಡೆದುಕೊಂಡಿದ್ದು, ಸಾರಾಂಶವೆನೆಂದರೆ, ಇಂದು ದಿ:28-05-17 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ
ಫಿರ್ಯಾದಿದಾರು ಗಿಣಿಗೇರಿ ಕಡೆಯಿಂದ ಕೊಪ್ಪಳಕ್ಕೆ ತಮ್ಮ ಮೋಟಾರ ಸೈಕಲ್ ಓಡಿಸಿಕೊಂಡು ಬರುವಾಗ
ಕೊಪ್ಪಳ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಎಮ್.ಎಸ್.ಪಿ.ಎಲ್ ಕ್ರಾಸ್ ಹತ್ತಿರ ತನ್ನ ಮುಂದೆ ಸ್ಕೂಟಿ ನಂ: ಕೆಎ-37/ಇಬಿ-5645 ನೇದ್ದರ ಚಾಲಕ ಖಾಸಿಂ ಅಲಿ ಇತನು ತನ್ನ ವಾಹನದ ಹಿಂದೆ ಖಾಸೀಂಸಾಬ ಬಳ್ಳಾರಿ. ಇತನಿಗೆ
ಕೂಡ್ರಿಸಿಕೊಂಡು ಗಿಣಿಗೇರಿ ಕಡೆಯಿಂದ ಕೊಪ್ಪಳದ ಕಡೆಗೆ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ
ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸುತ್ತಾ ವಾಹನ ನಿಯಂತ್ರಿಸದೇ ಪಲ್ಟಿ
ಮಾಡಿದ್ದರಿಂದ ಸ್ಕೂಟಿ ಸವಾರ ಮತ್ತು ಹಿಂಬದಿ ಸವಾರನಿಗೆ ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ.
ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment