Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, June 30, 2017

1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 82/2017 ಕಲಂ. 78(3) Karnataka Police Act.


ದಿನಾಂಕ 29-06-2017 ರಂದು ಸಂಜೆ 6:30 ಗಂಟೆಗೆ ಠಾಣಾದಲ್ಲಿದ್ದಾಗ  ನವಲಿ ಗ್ರಾಮದ ಮೇಗಳ ಆಂಜನಯ್ಯ ಗುಡಿಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಓ.ಸಿ.ಮಟಕಾ ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಶ್ರೀ ವೀರಭದ್ರಪ್ಪ ಪಿ.ಎಸ್.ಐ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಇಂದು ದಿನಾಂಕ 29-06-2017 ರಂದು ಸಂಜೆ 7:30 ಗಂಟೆಗೆ ನವಲಿ ಗ್ರಾಮದ ಮೇಗಳ ಆಂಜನಯ್ಯ ಗುಡಿಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಹೋಗಿ ನೋಡಲಾಗಿ, ಸಾರ್ವಜನಿಕ ಸ್ಥಳದಲ್ಲಿ ಆರೋಪಿಯು ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ 01 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ನಗದು ಹಣ ರೂ.620/-00 ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Thursday, June 29, 2017

1] ಬೇವೂರು ಪೊಲೀಸ್ ಠಾಣೆ ಗುನ್ನೆ ನಂ. 68/2017 ಕಲಂ. 87 Karnataka Police Act.
ದಿನಾಂಕ:-27.06.2017 ರಂದು ಸಾಯಂಕಾಲ 4:45 ಗಂಟೆ ಸುಮಾರಿಗೆ ತರಲಕಟ್ಟಿ ಗ್ರಾಮದ ಸೀಮಾದಲ್ಲಿರುವ ಸಾರ್ವಜನಿಕ ಸ್ಥಳದ ಗಿಡ ಮರಗಳಿದ್ದ ನಾಲಾದ ಹತ್ತಿರ ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಬೇವೂರ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 04 ಜನ 1} ಮುರ್ತುಜಾ ತಂದೆ ದಿವಾನಸಾಬ ಮಕಾಂದರ ವಯ : 22 ವರ್ಷ ಜಾತಿ : ಮುಸ್ಲಿಂ ಉ : ಗೌಂಡಿಕೆಲಸ ಸಾ : ಕಂದಕೂರ ತಾ : ಕುಷ್ಟಗಿ 2} ಮಾಸಪ್ಪ ತಂದೆ ಶಂಕ್ರಪ್ಪ ಗುಗ್ಗರಿ ವಯ: 35 ವರ್ಷ ಜಾತಿ: ಕುರುಬರು ಉ: ಒಕ್ಕಲುತನ ಸಾ: ತೊಪಲಕಟ್ಟಿ ತಾ: ಕುಷ್ಟಗಿ 3} ಶಂಕ್ರಪ್ಪ ತಂದೆ ಶರಣಪ್ಪ ಹುಗ್ಗಿ ವಯ: 32 ವರ್ಷ ಜಾತಿ: ಗಾಣಿಗೇರ ಉ: ಒಕ್ಕಲುತನ ಸಾ: ಯಡ್ಡೋಣಿ 4} ಕಲ್ಲಪ್ಪ ತಂದೆ ಹನಮಪ್ಪ ಹಕಾರಿ ವಯ: 35 ವರ್ಷ ಜಾತಿ: ಗಾಣಿಗೇರ ಉ: ಒಕ್ಕಲುತನ ಸಾ: ಹಿರೇಬೊಮ್ಮನಾಳ ತಾ: ಕೊಪ್ಪಳ ಆರೋಪಿತರೆಲ್ಲರೂ ಸಿಕ್ಕಿ ಬಿದ್ದಿದ್ದು ಸದರಿ ಸಿಕ್ಕಿಬಿದ್ದ ಆರೋಪಿತರಿಂದ 7200=00 ರೂ ನಗದು ಹಣ ಹಾಗೂ ಇಸ್ಪೆಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆಯೊಂದಿಗೆ ತಮ್ಮ ವರದಿ ಸಲ್ಲಿಸಿದ್ದು ಇರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೂಕನೂರು ಪೊಲೀಸ್ ಠಾಣೆ ಗುನ್ನೆ ನಂ. 74/2017 ಕಲಂ. 379 ಐಪಿಸಿ  & 4(1), 4(1A) R/W 21, 22  MMDR Act.
ದಿನಾಂಕ: 28-06-2017 ರಂದು ಮುಂಜಾನೆ 07-15 ಗಂಟೆ ಸುಮಾರಿಗೆ ಕೂಕನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತಾಳ ಗ್ರಾಮದ ಊರಾಚೆ ಇರುವ ಮುತ್ತಾಳ ಸೀಮಾದಲ್ಲಿಯ ಸಾರ್ವಜನಿಕ ಹಳ್ಳದಲ್ಲಿ ಆರೋಪಿತರು ವಾಹನಗಳಲ್ಲಿ ಮರಳನ್ನು ಸಾಗಿಸಲು ಇಲಾಖೆಯಿಂದ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಕಳ್ಳತನದಿಂದ ಜೆ.ಸಿ.ಬಿ. ನಂ. ಕೆಎ-06/ಎನ್-3217 ನೇದ್ದರ ಮೂಲಕ ಟಿಪ್ಪರ್ ನಂ. ಕೆಎ-37/ಎ-6336 & ಕೆಎ-20/8685 ನೇದ್ದವುಗಳಲ್ಲಿ ಲೋಡ ಮಾಡುತಿದ್ದಾಗ ಕೂಕನೂರ ಪಿ.ಎಸ್.ಐ. ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಲು ಅಲ್ಲಿಂದ ಆರೋಪಿತರು ತಪ್ಪಿಸಿಕೊಂಡು ಓಡಿ ಹೋಗಿದ್ದು, ಆರೋಪಿ ಕೆ.ಎ37 ಎ-6336 ನೇದ್ದರ ಚಾಲಕ ಬಸವರಾಜ ತಂದೆ ದೇವಪ್ಪ ನಿಂಗರೆಡ್ಡಿ ಹಾಗೂ ಕೆ.ಎ. 20/8685 ನೇದ್ದರ ಚಾಲಕ ಮಂಜುನಾಥ ಇಂಗಳಹಳ್ಳಿ ಇವರು ಸಾ: ಹುಲಕೋಟಿ ಇವರನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಈ ಬಗ್ಗೆ ವಿವರವಾದ ದಾಳಿ ಪಂಚನಾಮೆಯನ್ನು ಮುಂಜಾನೆ 07-15 ಗಂಟೆಯಿಂದ 09-15 ಗಂಟೆವರೆಗೆ ಅನುಸರಿಸಿಕೊಂಡು, ವಾಪಸ್ ಠಾಣೆಗೆ ಆರೋಪಿತರು ಹಾಗೂ ವಾಹನದೊಂದಿಗೆ ಬಂದು ಮುಂಜಾನೆ 10-15 ಗಂಟೆಗೆ ಟಿಪ್ಪರ್ ವಾಹನಗಳ ಚಾಲಕರು & ಅದರ ಮಾಲೀಕರು, ಜೆ.ಸಿ.ಬಿ. ವಾಹನ ಚಾಲಕ & ಅದರ ಮಾಲೀಕರ ವಿರುದ್ದ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ.105/2017 ಕಲಂ: 323, 324, 354, 504 ಐ.ಪಿ.ಸಿ.
ದಿನಾಂಕ: 28-06-2017 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾಧಿ ಶ್ರೀಮತಿ ಹುಲಿಗೆವ್ವ ಗಂಡ ಮಲ್ಲೇಶಪ್ಪ ಕುಕನೂರು ವಯಸ್ಸು: 48 ವರ್ಷ ಜಾತಿ: ಮೋಚಿ. ಉ: ಹೊಲ ಮನೆಕೆಲಸ ಸಾ: ಕವಲೂರು ತಾ: ಕೊಪ್ಪಳ. ಇವರು ಠಾಣೆಗೆ ಹಾಜರಾಗಿ, ಹೇಳಿಕೆ ಫಿರ್ಯಾಧಿ ನೀಡಿದ್ದನ್ನು ಗಣಕೀಕರಣ ಮಾಡಿಕೊಂಡಿದ್ದು ಅದರ ಸಾರಾಂಶವೆನೆಂದರೆ, ಫಿರ್ಯಾದಿದಾರರು ತನ್ನ ಮನೆಯ ಮುಂಭಾಗ ಇರುವಾಗ ಈ ಹಿಂದೆ ತನ್ನ ತಂಗಿಯ ಗಂಡನಾದ ಆರೋಪಿ ಹನುಮಂತಪ್ಪನಿಗೆ ಸಂಸಾರದ ವಿಷಯದಲ್ಲಿ ಬುದ್ದಿವಾದ ಹೇಳಿದ್ದಕ್ಕೆ ಅದನ್ನೆ ಮನಸ್ಸಿನಲ್ಲಿಟ್ಟುಕೊಂಡು ಆರೋಪಿತನು ಇಂದು ದಿನಾಂಕ: 28-06-2017 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ಅವಾಚ್ಯವಾಗಿ ಬೈದು ಮೈಕೈ ಮುಟ್ಟಿ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದು ಆಗ ಬಿಡಿಸಲು ಬಂದ ಆತನ ಹೆಂಡತಿ ಅತ್ತೆಯವರಿಗೆ ಮೈಕೈ ಮುಟ್ಟಿ ಎಳೆದಾಡಿ ಅವಾಚ್ಯವಾಗಿ ಬೈದಾಡಿ ಕೈಗಳಿಂದ ಮತ್ತು ಕಟ್ಟಿಗೆಯಿಂದ ಹೊಡೆಬಡೆ ಮಾಡಿ ದು:ಖಪಾತಗೊಳಿಸಿದ್ದು ಆಗ ಅಲ್ಲಿಯೇ ಇದ್ದು ಗ್ರಾಮದ ಮಲೇಶಪ್ಪ ಹಾಗೂ ಹನಮಪ್ಪ ಎಂಬುವರು ಬುದ್ದಿವಾದ ಹೇಳಿ ಜಗಳ ಬಿಡಿಸಿದರು. ನಂತರ ಗಾಯಗೊಂಡ ಗಾಯಾಳುಗಳು ಎಲ್ಲರೂ ಪೊಲೀಸ್ ಠಾಣೆಗೆ ಬಂದು ಫಿರ್ಯಾದಿದಾರಳು ಹೇಳಿಕೆ ದೂರನ್ನು ಕೊಟ್ಟಿದ್ದು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕಳುಹಿಸಿ ಫಿರ್ಯಾದಿಗೆ ಪಿಯರ್ಾದಿ ತಂಗಿಗೆ, ತಾಯಿಗೆ ಮೈಕೈ ಮುಟ್ಟಿ ಎಳೆದಾಡಿ ಅವಾಚ್ಯವಾಗಿ ಬೈದು ಜಗಳ ತಗೆದು ಕೈಗಳಿಂದ ಕಲ್ಲಿನಿಂದ ಮತ್ತು ಕಟ್ಟಿಗೆಯಿಂದ ಹೊಡೆಬಡೆ ಮಾಡಿರುತ್ತಾನೆ ಕಾರಣ ಹನುಮಂತಪ್ಪನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾಧಿ ಸಾರಾಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ.83/2017 ಕಲಂ: 363 ಐ.ಪಿ.ಸಿ.
ದಿನಾಂಕ: 28-03-2017 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿದಾರರಾದ ಫಕ್ರುಧ್ಧೀನ್ ತಂದೆ ಗುಲಾಮ್ ಮೇಜದಾನಿ ವಣಗೇರಿ, ವಯ: 38 ವರ್ಷ ಜಾತಿ: ಮುಸ್ಲಿಂ ಉ: ಕೆ.ಎಸ್.ಆರ್.ಟಿ.ಸಿ. ಯಲಬುರ್ಗಾದಲ್ಲಿ ಕಂಡಕ್ಟರ್ ಸಾ: ಯಲಬುರ್ಗಾ ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಅದರ ಸಾರಾಂಶವೆನೆಂದರೆ, ಫಿರ್ಯಾದಿದಾರರ ಮಗಳಾದ ಹುಸ್ನಾನಾಜ್ ತಂದೆ ಫಕ್ರುಧ್ಧೀನ್ ವಣಗೇರಿ, ವಯ: 2 ವರ್ಷ, 6 ತಿಂಗಳು ಜಾತಿ: ಮುಸ್ಲಿಂ ಸಾ: ಯಲಬುರ್ಗಾ ಜಿ: ಕೊಪ್ಪಳ  ಇವಳು ದಿನಾಂಕ: 28-06-2017 ರಂದು ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ನಮ್ಮ ಕುಲಸ್ಥರಾದ  ಶೇಕಿಲಾ ಬೇಗಂ ಬುಲ್ಡಿಯಾರ್ ಇವರ ಮನೆಯಲ್ಲಿ ಮಲಗಿಕೊಂಡಿದ್ದವಳು. ಮನೆಯಿಂದ ಎದ್ದು ಬಂದವಳು. ನಮ್ಮ ಮನೆಗೆ ಬರದೇ ಎಲ್ಲಿಯೋ ಕಾಣೆಯಾಗಿರುತ್ತಾಳೋ ಅಥವಾ ಯಾರಾದರೂ ಯಾವುದಾದರು ಉದ್ಧೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾರೋ ಹೇಗೋ ತಿಳಿದಿರುವುದಿಲ್ಲ. ಕಾರಣ ನನ್ನ ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ.69/2017 ಕಲಂ. 273, 284, ಐ.ಪಿ.ಸಿ. ಹಾಗೂ 32, 34 ಕೆ.ಇ. ಕಾಯ್ದೆ.
ದಿನಾಂಕ: 28-06-2017 ರಂದು ಸಾಯಾಂಕಾಲ 4-45 ಗಂಟೆಗೆ ಹನಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಪರಮನಟ್ಟಿ ಸೀಮಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಳ್ಳಭಟ್ಟಿ ಸರಾಯಿ ಮಾರಟ ಮಾಡುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಕೂಡಲೆ ಸಿ.ಪಿ.ಐ ಕುಷ್ಟಗಿ ಇವರ ನೇತೃತ್ವದಲ್ಲಿ ಪಿ.ಎಸ್.ಐ ರವರು ಹಾಗೂ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-83, 210 ಪಿ.ಸಿ-168, 436, ಮ.ಪಿ.ಸಿ-211 ರವರೊಂದಿಗೆ ಪರಮನಟ್ಟಿ ಸೀಮಾದಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುವವರ ಮೇಲೆ ದಾಳಿ ಮಾಡಿದಾಗ ಕಳ್ಳಭಟ್ಟಿ ತೆಗೆದುಕೊಳ್ಳಲು ಬಂದವರು ಓಡಿ ಹೋಗಿದ್ದು, ಕಳ್ಳಭಟ್ಟಿ ಸರಾಯಿ ಮಾರುವ ಮಹಿಳೆ ಮಂಜುಳಾ ಸಿಕ್ಕಿಬಿದ್ದಿದ್ದು, ಆಕೆಯ ಹತ್ತಿರ 2 ಲೀಟರ್ ಬಾಟಲಿಯಲ್ಲಿ ಕಳ್ಳಭಟ್ಟಿ ಸರಾಯಿ ತುಂಬಿದ್ದು, ಇನ್ನೊಂದು 2 ಲೀಟರ್ ಪ್ಲಾಸ್ಟಿಕ್ ಬಾಟಲಿಯಲ್ಲಿ ಅರ್ಧ ಕಳ್ಳಭಟ್ಟಿ ಸರಾಯಿ ತುಂಬಿದ್ದು, ಹಾಗೂ ನಗದು 150/- ರೂ ಸಿಕ್ಕಿದ್ದು, ಕಳ್ಳಭಟ್ಟಿ ಸರಾಯಿ 3 ಲೀಟರ್ ಆಗುತ್ತಿದ್ದು, ಅದರ ಅಂ:ಕಿ: 600/- ರೂ ಆಗುತ್ತಿದ್ದು, ಸದರ ದಾಳಿ ಪಂಚನಾಮೆಯನ್ನು ಇಂದು ಸಾಯಂಕಾಲ 5-35 ಗಂಟೆಯಿಂದ 6-50 ಗಂಟೆಯವರಗೆ ನಿರ್ವಹಿಸಿ ಆರೋಪಿತಳು ಕಳ್ಳಭಟ್ಟಿ ಸರಾಯಿಯನ್ನು ಸರ್ಕಾರ ನಿಷೇಧಿಸಿದರೂ ಸಹಿತ ಇವಳು ತನ್ನ ಲಾಭಕ್ಕೋಸ್ಕರ ಮಾನವ ಜೀವಕ್ಕೆ ಅಪಾಯಕಾರಿಯಾಗುವಂತ ಅಪಾಯಕಾರಿ ರಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡಿ ಕಳ್ಳಭಟ್ಟಿ ಸರಾಯಿ ತಯಾರಿಸಿ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ: 11 ಮತ್ತು 14 ರ ಉಲ್ಲಂಘನೆ ಮಾಡಿ ಕಲಂ: 32, 34 ಶಿಕ್ಷಾರ್ಹ ಅಪರಾಧವೆಸಿದ್ದರಿಂದ ಸದರಿಯವಳನ್ನು ಮಹಿಳಾ ಪಿ.ಸಿ ರವರ ಸಹಾಯದಿಂದ ವಶಕ್ಕೆ ತೆಗೆದುಕೊಂಡು ಬಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Wednesday, June 28, 2017

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 80/2017 ಕಲಂ. 379 ಐ.ಪಿ.ಸಿ ಮತ್ತು ರೂಲ್ಸ್ -4, 4(ಎ) ಎಂ.ಎಂ.ಆರ್.ಡಿ. 1957
ದಿನಾಂಕ: 27-06-2017 ರಂದು 11-40 ಎ.ಎಂ.ಕ್ಕೆ ಪಿರ್ಯಾದಿದಾರರಾದ ಶ್ರೀ ವಿನಾಯಕ ಪಿ.ಎಸ್.ಐ. ರವರು ದಿನಾಂಕ: 27-06-2017 ರಂದು ಬೆಳಗ್ಗೆ 06-00 ಗಂಟೆಗೆ ಆರೋಪಿ ತಮ್ಮ ಟ್ರಾಕ್ಟರ್ ನಂ: KA-37  TA-9710 & ಟ್ರಾಲಿ ಚಾಸ್ಸಿ ನಂ: 000482 ನೇದ್ದರಲ್ಲಿ ಸರ್ಕಾರಕ್ಕೆ ಸೇರಿದ  ಮುಧೋಳ ಸೀಮಾದಲ್ಲಿರುವ ಕವಳಿಹಳ್ಳದಲ್ಲಿಯ ಮರಳನ್ನು ಸರ್ಕಾರದಿಂದ  ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪರವಾನಿಗೆ ಅಥವಾ ಪಾಸ್ ವ ಪರ್ಮೀಟ್ ಪಡೆಯದೇ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಲಾಭ ಗಳಿಸುವ ಉದ್ಧೇಶದಿಂದ ತುಂಬಿಕೊಂಡು ಗಜೇಂದ್ರಗಡ-ಮುಧೋಳ ರಸ್ತೆಯ ಮೇಲೆ ಮಧೋಳ ಗ್ರಾಮದ ಕಡೆಗೆ ಹೋಗುತ್ತಿದ್ದಾಗ, ಫಿರ್ಯಾದಿದಾರರು, ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿದ್ದು, ಆಗ ಆರೋಪಿ ನಂ: 01 ಈತನು ಟ್ರಾಕ್ಟರ್ ಬಿಟ್ಟು ಓಡಿ ಹೋಗಿದ್ದು, ಆರೋಪಿ ನಂ: 02 ಈತನು ಸಿಕ್ಕಿದ್ದು ಇರುತ್ತದೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 81/2017 ಕಲಂ. 379 ಐ.ಪಿ.ಸಿ ಮತ್ತು ರೂಲ್ಸ್ -4, 4(ಎ) ಎಂ.ಎಂ.ಆರ್.ಡಿ. 1957
ದಿನಾಂಕ: 27-06-2017 ರಂದು 3-10 ಪಿ.ಎಂ.ಕ್ಕೆ ಪಿರ್ಯಾದಿದಾರರಾದ ಶ್ರೀ ವಿನಾಯಕ ಪಿ.ಎಸ್.ಐ. ಯಲಬುರ್ಗಾ ಠಾಣೆರವರು ಬೆಳಗ್ಗೆ 10-00 ಗಂಟೆಗೆ ಆರೋಪಿ ನಂ: 01 ಈತನು ಆರೋಪಿ ನಂ: 02 ಇವರ ಮಾಲೀಕತ್ವದಲ್ಲಿರುವ ತಮ್ಮ ಟ್ರಾಕ್ಟರ್ KA-33/T-3490 & ಟ್ರಾಲಿ ನಂಬರ ಇಲ್ಲದ್ದು ನೇದ್ದರಲ್ಲಿ ಸರ್ಕಾರಕ್ಕೆ ಸೇರಿದ ಮಲಕಸಮುದ್ರ ಸೀಮಾದಲ್ಲಿರುವ ಹಳ್ಳದಲ್ಲಿಯ ಸರ್ಕಾರದಿಂದ ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪರವಾನಿಗೆ ಅಥವಾ ಪಾಸ್ ವ ಪರ್ಮೀಟ್ ಪಡೆಯದೇ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡಿ, ಲಾಭ ಗಳಿಸುವ ಉದ್ಧೇಶದಿಂದ ತುಂಬಿಕೊಂಡು ಮಾರಾಟ ಮಾಡುವ ಸಲುವಾಗಿ ಮಲಕಸಮುದ್ರ ಕಡೆಯಿಂದ ಯಲಬುರ್ಗಾ ನಗರಕ್ಕೆ ಬರುತ್ತಿದ್ದಾಗ, ಮಧ್ಯಾಹ್ನ 1-40 ಗಂಟೆಗೆ ಫಿರ್ಯಾದಿದಾರರು, ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿದಾಗ ಸಿಕ್ಕಿ ಬಿದ್ದಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


Tuesday, June 27, 2017

1]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 165/2017 ಕಲಂ. 279, 336 ಐ.ಪಿ.ಸಿ. .
ದಿನಾಂಕ : 26-06-2017 ರಂದು  ರಂಜಾನ್ ಹಬ್ಬದ ಬಂದೋ ಬಸ್ತ ಕುರಿತು ಪ್ರಕಾಶ ಮಾಳಿ ಪಿ.ಎಸ್.ಐ.  ರವರು ಹಳ್ಳಿಗಳಲ್ಲಿ ಪೆಟ್ರೋಲಿಂಗ್ ಕುರಿತು ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಹೆಚ್.ಸಿ- 173  ಹಾಗೂ ನಮ್ಮ ಜೀಪ್ ಚಾಲಕ ಕೂಡಿ ನಮ್ಮ ಸರಕಾರಿ ಜೀಪ್ ನಂಬರ್ : ಕೆ.ಎ- 37 / ಜಿ- 307 ನೇದ್ದರಲ್ಲಿ  ಬಸಾಪಟ್ಟಣದ, ದಾಸನಾಳ  ಗ್ರಾಮದಲ್ಲಿ ಪೆಟ್ರೋಲಿಂಗ ಮುಗಿಸಿಕೊಂಡು ಮುಕ್ಕುಂಪಿಯಲ್ಲಿ ಮದ್ಯಾಹ್ನ 1-00 ಗಂಟೆಯ ಸುಮಾರಿಗೆ  ಇದ್ದಾಗ್ಗೆ ಗಂಗಾವತಿ  ಕೊಪ್ಪಳ  ಮುಖ್ಯ ರಸ್ತೆಯ ಮೇಲೆ ಗಂಗಾವತಿ ಕಡೆಯಿಂದ  ಒಬ್ಬ ಟ್ರ್ಯಾಕ್ಸ ಚಾಲಕ  ತನ್ನ ಟ್ರ್ಯಾಕ್ಸನ್ನು ಅತೀ ವೇಗ ಹಾಗೂ ಅಲಕ್ಷತನದಿಂದ  ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ಇತರರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ  ಓಡಿಸಿಕೊಂಡು ಹೊರಿಟಿದ್ದಾಗ್ಗೆ  ಕರ್ತವ್ಯದ ಮೇಲಿದ್ದ ನಾವು ನೋಡಿ  ಮುಂದೆ ಆಗುವ ಅನಾಹುತ ತಪ್ಪಿಸುವ ಉದ್ದೇಶದಿಂದ  ಸದರ ಟ್ರ್ಯಾಕ್ಸ ವಾಹನ ಚಾಲಕನಿಗೆ ವಾಹನವನ್ನು ನಿಲ್ಲಿಸುವಂತೆ ಹೇಳಿದೇವು. ನಂತರ ಸದರ್ ಟ್ರ್ಯಾಕ್ಸ  ನಂಬರ್ ನೋಡಲು ಅದರ ನಂಬರ್ ಕೆ.ಎ- 37 / ಎ- 0294 ಅಂತಾ ಇದ್ದು ಚಾಲಕನ ಬಗ್ಗೆ ವಿಚಾರಿಸಲಾಗಿ  ನಾಗರಾಜ ತಂದಿ  ಹೊನ್ನಪ್ಪ ಕಬ್ಬೇರ  ವಯಾ- 25 ವರ್ಷ ಜಾ- ಕಬ್ಬೇರ ಉ- ಟ್ರ್ಯಾಕ್ಸ ಚಾಲಕ ಸಾ- ವಕೀಲ್ ಗೇಟ್ ಗಂಗಾವತಿ ಅಂತಾ ಹೇಳಿದನು. ಇವನನ್ನು ಹಾಗೆ ಬಿಟ್ಟಲ್ಲಿ ಮುಂದೆ ಹೊಗಿ ಯಾವುದಾದರು ಅಪಘಾತಮಾಡುವ ಸಂಭವ  ಹೆಚ್ಚಾಗಿ ಕಂಡುಬಂದಿದ್ದರಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 67/2017 ಕಲಂ. 341, 323, 324, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ: 26-06-2017 ರಂದು ಸಾಯಾಂಕಾಲ 18-30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಮಲ್ಲವ್ವ ಗಂಡ ದುರಗಪ್ಪ ದೊಡ್ಡಮನಿ, ಸಾ: ಹಿರೇಗೊಣ್ಣಾಗರ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ಹಾಜರಪಡಿಸಿದ್ದರ ಸಾರಾಂಶವೇನೆಂದರೆ. ಫಿರ್ಯಾದಿದಾರರು ಮತ್ತು ಆರೋಪಿತರ ಹೊಲಗಳು ಅಕ್ಕಪಕ್ಕದಲ್ಲಿದ್ದು, ಆರೋಪಿತರು ಫಿರ್ಯಾದಿದಾರರ ಹೊಲವನ್ನು ಒತ್ತುವರಿ ಮಾಡಿ ಕಲ್ಲು ಕಿತ್ತು ಹಾಕಿದ್ದು, ಬಗ್ಗೆ ಇಬ್ಬರಲ್ಲಿ ಬಾಯಿ ಮಾತಿನ ಜಗಳವಾಗಿ ವೈಷಮ್ಯ ಬೆಳೆದಿದ್ದು, ದಿನಾಂಕ: 25-6-2017 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರು ಫಿರ್ಯಾದಿ ಹಾಗೂ ಅವರ ಗಂಡ, ಮಗಳು ಮತ್ತು  ಫಿರ್ಯಾದಿಯ ತಂಗಿಯ ಮಗ ರಮೇಶ ರವರು ಕೂಡಿ ಹೊಲದಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಹೊಲದ ಬದುವಿನ ಹತ್ತಿರ ಬರುವಾಗ ಆರೋಪಿತರು ಕೈಯಲ್ಲಿ ಕಟ್ಟಿಗೆ ಹಾಗೂ ಕೊಡಲಿ ಕಾವು ಹಿಡಿದುಕೊಂಡು ಬಂದು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಆರೋಪಿ ಸೋಮಪ್ಪನು ಕಟ್ಟಿಗೆಯಿಂದ ಫಿರ್ಯಾದಿಯ ಗಂಡನ ದುಬ್ಬಕ್ಕೆ ಹೊಡೆದಿದ್ದು, ಆರೋಪಿ ಸುರೇಶನು ಫಿರ್ಯಾದಿಯ ಗಂಡನ ಬಲ ಕಿವಿಗೆ ಕೈಯಿಂದ ಗುದ್ದಿದ್ದು, ಆಗ ಬಿಡಿಸಲು ಹೋದ ಫಿರ್ಯಾದಿಗೆ ಆರೋಪಿ ಸೋಮಪ್ಪನು ಕೈಯಿಂದ ದೂಕಿ ನೆಲಕ್ಕೆ ಕೆಡವಿದ್ದು, ಆಗ ಫಿರ್ಯಾದಿಯ ಮಗಳು ಬಿಡಿಸಲು ಹೋದಾಗ ಆರೋಪಿ ವಿಠಲನು ಕೈಯಲ್ಲಿದ್ದ ಕೊಡಲಿ ಕಾವಿನಿಂದ ಫಿರ್ಯಾದಿಯ ಮಗಳ ಎಡಗಾಲಿಗೆ ಹೊಡೆದು ಗಾಯ ಮಾಡಿದ್ದು, ಸೋಮಪ್ಪನು ಫಿರ್ಯಾದಿದಾರರಿಗೆ ಅವಾಚ್ಯ ಬೈದು, ಜೀವ ಬೆದರಿಕೆ ಹಾಕಿದಾಗ ಅಲ್ಲೇ ಇದ್ದ ಬಸಪ್ಪ ಕೊಪ್ಪಳ, ಮತ್ತು ಮಲ್ಲಪ್ಪ ಕೊಪ್ಪಳ ಸಾ: ನರಸಾಪೂರ ರವರು ಜಗಳ ಬಿಡಿಸಿದ್ದು, ಜಗಳದಲ್ಲಿ ಫಿರ್ಯಾದಿಯ ಗಂಡ ದುರಗಪ್ಪನಿಗೆ ದುಬ್ಬಕ್ಕೆ ಗಾಯವಾಗಿ, ಬಲಕಿವಿಗೆ ಮೂಖ ಪೆಟ್ಟಾಗಿದ್ದು, ನಂತರ ನಿನ್ನೆ ಮನೆಯಲ್ಲಿಯೇ ಉಳಿದುಕೊಂಡು ಇಂದು ಹಿರಿಯರನ್ನು ವಿಚಾರಿಸಿ ತಡವಾಗಿ ಠಾಣೆಗೆ ಬಂದು ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
3]  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 103/2017 ಕಲಂ: 87 karnataka Police Act.
ದಿನಾಂಕ: 26-06-2017 ರಂದು ಮಧ್ಯಾಹ್ನ 5-30 ಗಂಟೆಗೆ ಪಿ.ಎಸ್.ಐ. ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ವಾಪಸ್ ಠಾಣೆ ಬಂದು, ಮೂಲ ವರದಿಯೊಂದಿಗೆ ಇಸ್ಪೀಟ್ ಜೂಜಾಟದಲ್ಲಿ ಜಪ್ತಿ ಮಾಡಿದ ಮುದೇಮಾಲುಗಳನ್ನು ಹಾಗೂ 04 ಜನ ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದು, ಸದರಿ ವರದಿಯನ್ನು ಪರಿಶೀಲಿಸಿ ನೋಡಲಾಗಿ ಫಿರ್ಯಾಧಿದಾರರಾದ ಶ್ರೀ ಶಂಕರಪ್ಪ ಎಲ್. ಪಿ.ಎಸ್.ಐ ಅಳವಂಡಿ ಪೊಲೀಸ್ ಠಾಣೆ ರವರು, ಹಾಗೂ ಸಿಬ್ಬಂದಿ, ಪಂಚರು ಕೂಡಿಕೊಂಡು ದಿನಾಂಕ:  26-06-2017 ರಂದು ಮಧ್ಯಾಹ್ನ 3-45 ಗಂಟೆಗೆ ಠಾಣಾ ವ್ಯಾಪ್ತಿಯ ಅಳವಂಡಿ ಗ್ರಾಮ ಸೀಮಾ ಘಟ್ಟರಡ್ಡಿಹಾಳ ಗ್ರಾಮ ಸೀಮಾ ಗೌಸಸಾಬ ಗಡಾದ ಎಂಬುವರ ಜಮೀನಿನ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ದಾಳಿ ಮಾಡಿದ್ದು, 04 ಜನ ಆರೋಪಿತರು ಸಿಕ್ಕಿದ್ದು, ಸಿಕ್ಕ ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 3,750=00 ಗಳನ್ನು, 52 ಇಸ್ಪೇಟ್ ಎಲೆಗಳನ್ನು, ಹಾಗೂ ಒಂದು ಪ್ಲಾಸ್ಟೀಕ್ ಬರ್ಕಾವನ್ನು ಜಪ್ತ ಮಾಡಿ ಸ್ಥಳದಲ್ಲಿ ಪಂಚನಾಮೆಯನ್ನು ತಯಾರಿಸಿ ವಾಪಾಸ್ ಠಾಣೆಗೆ ಬಂದು ಮೂಲ ಪಂಚನಾಮೆ ಮತ್ತು ಮುದ್ದೇಮಾಲನ್ನು ಹಾಗೂ ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.   
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 122/2017 ಕಲಂ. 32, 34 ಕೆ.ಇ. ಕಾಯ್ದೆ:
ದಿನಾಂಕಃ-26-06--2017 ರಂದು ಸಾಯಂಕಾಲ 6-45 ಗಂಟೆಯ ಸುಮಾರಿಗೆ ಹುಳ್ಕಿಹಾಳ ಗ್ರಾಮ ಆರೋಪಿ ರಾಜಕುಮಾರ ತಂದೆ ಭೀಮಯ್ಯ ಇತನು ಯಾವುದೇ ಅಧಿಕೃತವಾದ ದಾಖಲಾತಿಗಳನ್ನು ಇಟ್ಟುಕೊಳ್ಳದೇ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವಾಗ ಮಾನ್ಯ .ಎಸ್.ಐ.  ಸಾಹೇಬರು ಕಾರಟಗಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ರಾಜಕುಮಾರ ಈತನು ತನ್ನ ಮನೆಯಲ್ಲಿ ಯಾವುದೇ ಅಧಿಕೃತವಾದ ದಾಖಲಾತಿಗಳನ್ನು ಇಟ್ಟುಕೊಳ್ಳದೇ 1] 180 ಎಂ.ಎಲ್.ದ, 17 ಓಲ್ಡ್ ಟಾವರನ್ ಮದ್ಯದ ಬಾಟಲಿಗಳು ಅ.ಕಿ.ರೂ.1,165.52/- 2] 180 ಎಂ.ಎಲ್.ದ 14  8 ಪಿ.ಎಂ. ಮದ್ಯದ ಬಾಟಲಿಗಳು ಅ.ಕಿ.ರೂ. 959.84/- 3] 90 ಎಂ.ಎಲ್. 6 ಓರಿಜಿನಲ್ ಚ್ವಯಿಸ್ ಮದ್ಯದ ಬಾಟಲಿಗಳು ಅ.ಕಿ.ರೂ.168.78/- ಗಳು ಈಗ್ಗೆ ಒಟ್ಟು 37 ವಿವಿಧ ನಮೂನೆಯ ಮದ್ಯದ ಬಾಟಲಿಗಳು ಒಟ್ಟು ಅ.ಕಿ.ರೂ. 2294=14 ಗಳ ಬೆಲೆ ಬಾಳುವ ಮದ್ಯದ ಬಾಟಲಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 123/2017 ಕಲಂ. 143, 147, 148, 341, 323, 324, 395, 504, 506 ಸಹಿತ 149 ಐ.ಪಿ.ಸಿ:

ದಿನಾಂಕ:-26-06-2017 ರಂದು ರಾತ್ರಿ 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಸವರಾಜ ತಂದಿ ಲಕ್ಷ್ಮಣ ಬಿಳಗಿ ವಯಾ-25 ವರ್ಷ ಜಾ.ಲಿಂಗಾಯತ ಸಾ. ಗುಡೂರು ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ದಿನಾಂಕ:-26-06-2017 ರಂದು ಸಾಯಂಕಾಲ 6-40 ಗಂಟೆಯ ಸುಮಾರಿಗೆ ನಾನು ನನ್ನ ಸೋಮನಾಳ ಮೂಲಕ ನನ್ನ ಗದ್ದೆಗೆ ಹೋಗುವಾಗ ಮಾರ್ಗಮದ್ಯದಲ್ಲಿ ಸೊಮನಾಳ ಗ್ರಾಮದ ನಿವಾಸಿಗಳಾದ  1) ಪರಸಪ್ಪ ತಂದಿ ಹನುಮಂತ ಪಚ್ಚಿ ಜಾ. ನಾಯಕ ಸಾ. ಸೋಮನಾಳ 2) ಗಿರಯಪ್ಪ ತಂದಿ ಹನುಮಂತ ಪಚ್ಚಿ ಜಾ. ನಾಯಕ ಸಾ. ಸೋಮನಾಳ 3) ಭೀಮಪ್ಪ ತಂದಿ ಹನುಮಂತ ಪಚ್ಚಿ ಜಾ. ನಾಯಕ ಸಾ. ಸೋಮನಾಳ 4) ಲಚಮಪ್ಪ ತಂದಿ ಹನುಮಂತ ಪಚ್ಚಿ ಜಾ. ನಾಯಕ ಸಾ. ಸೋಮನಾಳ 5) ಯಮನೂರ ತಂದಿ ಹನುಮಂತ ಪಚ್ಚಿ ಜಾ. ನಾಯಕ ಸಾ. ಸೋಮನಾಳ 6) ಯಮನೂರ ತಂದಿ ಗಿರಿಯಪ್ಪ ಪಚ್ಚಿ ಜಾ. ನಾಯಕ ಸಾ. ಸೋಮನಾಳ, 7) ಬಸವರಾಜ ತಂದಿ ಗಿರಿಯಪ್ಪ ಪಚ್ಚಿ ಜಾ. ನಾಯಕ ಸಾ. ಸೋಮನಾಳ,  8) ಶಿವಪ್ಪ ತಂದಿ ಗಿರಿಯಪ್ಪ ಪಚ್ಚಿ ಜಾ. ನಾಯಕ ಸಾ. ಸೋಮನಾಳ, 9) ಆಂಜನೇಯ ತಂದಿ ಗಿರಿಯಪ್ಪ ಪಚ್ಚಿ ಜಾ. ನಾಯಕ ಸಾ. ಸೋಮನಾಳ, 10) ಶಿವಪ್ಪ ತಂದಿ ಹುಲಗಪ್ಪ ಪಚ್ಚಿ ಜಾ. ನಾಯಕ ಸಾ. ಸೋಮನಾಳ, 11) ಪರಸಪ್ಪ ತಂದಿ ಭೀಮಪ್ಪ ಪಚ್ಚಿ ಜಾ. ನಾಯಕ ಸಾ. ಸೋಮನಾಳ, 12) ಶರಣಬಸವ ಪಚ್ಚಿ ಜಾ. ನಾಯಕ ಸಾ. ಸೋಮನಾಳ ಮತ್ತು ಇತರರು ಬಂದು ನನ್ನ ಬೈಕ ನಿಲ್ಲಿಸಿ ಅವಾಚ್ಯ ಶಭ್ದಗಳಿಂದ ನಿಂದಿಸಿದ್ದಲ್ಲದೇ ನನ್ನನ್ನು ಹೊಡೆ ಬಡೆ ಮಾಡಿ ಮರಣಾಂತಿವಾಗಿ ಹಲ್ಲೆ ಮಾಡಿ ನನ್ನ ತೆಲೆಗೆ ಮಚ್ಚಿನಿಂದ ಹೊಡೆದು ಹಣೆಗೆ ಕೈಕಾಲುಗಳಿಗೆ ಗಾಯಗಳಾಗಿರುತ್ತವೆ ಹಾಗೂ ನನ್ನ ಜೇವಿನಲ್ಲಿದ್ದ ರೂ,30000=00 ಗಳನ್ನು ಮತ್ತು 20 ಗ್ರಾಂ ಚಿನ್ನದ ಸರವನ್ನು ದೋಚಿದ್ದಾರೆ ನನ್ನ ಮೇಲೆ ಮರಣಾಂತಿವಾಗಿ ಹಲ್ಲೆ ಮಾಡುವಾಗ ನಾನು ಚಿರಾಡುವುದನ್ನು ಗಮನಿಸಿ  ಶಿವಪ್ಪ ತಂದಿ ಪಂಪಾಪತೆಪ್ಪ ಜೀನೂರ ಅಮರೇಗೌಡ ತಂದಿ ಆದನಗೌಡ ಮಾಲೀಪಾಟೀಲ್, ಇವರಿಬ್ಬರು ಬಂದು ಅವರಿಂದ ರಕ್ಷಣೆ ಮಾಡಿದ್ದಾರೆ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು ಹೆಚ್ಚಿನ ಚಿಕಿತ್ಸೆ ಕುರಿತು ಹೋರಟಿದ್ದು ಮೇಲಿನವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Monday, June 26, 2017

1]  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 129/2017 ಕಲಂ. 304(ಎ) ಐ.ಪಿ.ಸಿ. .
ದಿನಾಂಕ 25-06-2017 ರಂದು ರಾತ್ರಿ 9-00 ಗಂಟೆಗೆ ಶ್ರೀ ಮಹ್ಮದ್ ಆರೀಫ್ ತಂದೆ ಖಾಜಾಹುಸೇನಸಾಬ, ವಯಸ್ಸು 65 ವರ್ಷ  ಇವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ನನ್ನ ಮಗಳಾದ ಜರೀನಾಬಾನು ಗಂಡ ಹೊನ್ನೂರಸಾಬ ಈಕೆಯು ಗರ್ಭಿಣಿಯಿದ್ದು, ಆಕೆಯ ಹೆರಿಗೆ ಕುರಿತು ಗಂಗಾವತಿಯ ಆನಂದ ನರ್ಸಿಂಗ್ ಹೋಮ್ ದಲ್ಲಿ ಇಂದು ದಿನಾಂಕ 25-06-2017 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಅಡ್ಮಿಟ್ ಮಾಡಿದ್ದು, ಅಲ್ಲಿನ ವೈದ್ಯರು ನಾರ್ಮಲ್ ಡಿಲೇವರಿ ಆಗುತ್ತದೆ ಅಂತಾ ಹೇಳಿದ್ದು ಮಧ್ಯಾಹ್ನ 3-30 ಗಂಟೆಗೆ ಹೆಚ್ಚಿನ ಚಿಕಿತ್ಸೆಗೆ ಎಮರ್ಜೆನ್ಸಿ ಕೊಠಡಿಗೆ ಕರೆದುಕೊಂಡು ಗ್ಲುಕೋಸ್ ಬಾಟಲಿಯನ್ನು ಏರಿಸಿ ಓವರ್ ಡೋಸ್ ನೀಡಿದ್ದು ಸಂಜೆ 4-00 ಗಂಟೆಗೆ ಸಾವಿನ ಸುದ್ಧಿ ಹೇಳಿರುತ್ತಾರೆ.  ವೈದ್ಯರ ಬೇಜವಾಬ್ದಾರಿಯಿಂದ ಗರ್ಭಿಣಿಯ ಪ್ರಾಣ ಹೋಗಿದ್ದು, ನನ್ನ ಮಗಳಿಗೆ 3 ನಾರ್ಮಲ್ ಡಿಲೇವರಿ ಆಗಿದ್ದು, 4ನೇ ಡಿಲೇವರಿ ಈ ರೀತಿ ವೈದ್ಯರ ನಿರ್ಲಕ್ಷ್ಯತನದಿಂದ ನಡೆದಿರುತ್ತದೆ.  ಕಾರಣ ಡಾ: ಶಶಿಧರ ಮತ್ತು  ಡಾ: ಅನಿತಾ ಹಾಗೂ ಸಿಬ್ಬಂದಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 144/2017 ಕಲಂ. 87 Karnataka Police Act.
ಶ್ರೀ ಜಯಪ್ರಕಾಶ ಪಿ.ಎಸ್. ರವರಿಗೆ ದಿನಾಂಕ 25-06-2017 ರಂದು 12-45 ಪಿ.ಎಂ.ಕ್ಕೆ ಕರ್ಕಿಹಳ್ಳಿ ಗ್ರಾಮದಲ್ಲಿ ಇಸ್ಪೇಟ್ ಜೂಜಾಟ ನಡೆದ ಬಗ್ಗೆ ಮಾಹಿತಿ ಬಂದಿದ್ದು ಹೋಗಿ ದಾಳಿ ಮಾಡಿದ್ದು ಆರೋಪಿತರು 1] ನಾಗಪ್ಪ ತಂದೆ ಬಸಪ್ಪ ಕಟ್ಟಿಮನಿ ವಯ: 38 ವರ್ಷ ಸಾ:ಕರ್ಕಿಹಳ್ಳಿ ಹಾಗೂ ಇತರೇ 7 ಜನರು ಗ್ರಾಮದ ಯಮನೂರಸಾಬ ಇವರ ಪ್ಲಾಟ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದಾಗ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಕಾಲಕ್ಕೆ ಮೇಲ್ಕಂಡ ಆರೋಪಿತರು ಸಿಕ್ಕಿದ್ದು, ಸದರಿಯವರಿಂದ 52 ಇಸ್ಪೇಟ ಎಲೆಗಳು, 1 ಹಳೆ ಬರಕಾ ಹಾಗೂ 4400-00 ರೂ. ನಗದು ಹಣ ಸಿಕ್ಕಿರುತ್ತವೆ ಎಂದು ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
3]  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 102/2017 ಕಲಂ: 379 IPC and MMRD 1957 Rule 4, 4(1),4(A)
ದಿನಾಂಕ: 25-06-2017 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಅಳವಂಡಿ ಠಾಣೆ ವ್ಯಾಪ್ತಿಯ ಚಿಕ್ಕಸಿಂದೋಗಿ ಕಡೆಯಿಂದ ಆರೋಪಿತರಾದ ಚಾಲಕ ಮತ್ತು ಮಾಲಿಕರು ತಮ್ಮ ನಂಬರ್ ಇರಲಾರದ ನೀಲಿ ಬಣ್ಣದ ನ್ಯೂಹಾಲೆಂಡ್ ಕಂಪನಿಯ ಟ್ರಾಕ್ಟರ್ ಚಾಸ್ಸಿ ನಂ: NH3317399L503 ಹಾಗೂ ನೊಂದಣಿ ಹಾಗೂ ಚಾಸ್ಸಿ ನಂಬರ್ ಇರಲಾರದ ಟ್ರಾಲಿ ನೇದ್ದರಲ್ಲಿ ಸರ್ಕಾರಕ್ಕೆ ಸೇರಿದ ಚಿಕ್ಕಸಿಂದೋಗಿ ಗ್ರಾಮದ ಹತ್ತಿರ ಹಳ್ಳದಿಂದ ಅಂದಾಜು 2,000-00 ರೂ. ಬೆಲೆ ಬಾಳುವ ಮರಳನ್ನು ಸರ್ಕಾರದಿಂದ ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪಾಸ್ ಅಥವಾ ಪರ್ಮೀಟ್ ಪಡೆಯದೇ ಕಳ್ಳತನ ಮಾಡಿಕೊಂಡು, ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಟ್ರಾಕ್ಟರ ಟ್ರಾಲಿಯಲ್ಲಿ ತುಂಬಿಕೊಂಡು ಬರುತ್ತಿರುವಾಗ ಹಿರೇಸಿಂದೋಗಿ ಕ್ರಾಸನಲ್ಲಿ ಶ್ರೀ ಶಂಕರಪ್ಪ ಎಲ್ ಪಿ.ಎಸ್.ಐ. ಅಳವಂಡಿ ಪೊಲೀಸ್ ಠಾಣೆ ರವರು ಸಿಬ್ಬಂದಿಯೊಂದಿಗೆ ಹಿಡಿದಿದ್ದು ಆಗ ಚಾಲಕನು ಟ್ರಾಕ್ಟರ್ ಹಾಗೂ ಟ್ರಾಲಿಯನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿದ್ದು ಈ ಬಗ್ಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಟ್ರಾಕ್ಟರ್ ಟ್ರಾಲಿಯನ್ನು ಮರಳ ಸಮೇತ ವಶಕ್ಕೆ ತಗೆದುಕೊಂಡು ಠಾಣೆಗೆ ಬಂದಿದ್ದು ಸದರಿ ಟ್ರಾಕ್ಟರ್ ಟ್ರಾಲಿ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸುವ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 148/2017 ಕಲಂ. 379 ಐ.ಪಿ.ಸಿ.
ದಿ:25-06-2017 ರಂದು ಮದ್ಯಾಹ್ನ 3-00 ಗಂಟೆಗೆ ಫಿರ್ಯಾದಿದಾರರಾದ ರಾಘವೇಂದ್ರ ಇಳಿಗೇರ. ಸಾ: ಸರ್ದಾರಗಲ್ಲಿ ಕೊಪ್ಪಳ. ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ಕೊಪ್ಪಳ ತಾಲ್ಲೂಕಾ ಚಿಲಕಮುಖಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ಗುಡಿಯ ಸಮೀಪದ ರಾಮಣ್ಣ ಇವರ ಪಾನಶಾಪ ಬಾಜು ಫಿರ್ಯಾದಿದಾರರ ಅಳಿಯ ಮಲ್ಲೇಶ ಗೋರೆ ಇವರು ದೇವಿ ದರ್ಶನಕ್ಕೆ ಅಂತಾ ತೆಗೆದುಕೊಂಡು ಹೋಗಿದ್ದ ಫಿರ್ಯಾದಿದಾರರ ಮಾಲೀಕತ್ವದ  ಮೋಟಾರ ಸೈಕಲ್ ನಂ: ಕೆಎ-37/ಇಸಿ-7839 ನೇದ್ದನ್ನು ಲಾಕ್ ಮಾಡಿ ಇಟ್ಟಿರುವಾಗ, ದಿ:09-06-2017 ರಂದು ಮದ್ಯಾಹ್ನ 12-30 ಗಂಟೆಯಿಂದ ಸಂಜೆ 4-00 ಗಂಟೆಯ ಅವಧಿಯಲ್ಲಿ ಸುಮಾರು 40,000=00 ರೂ ಬೆಲೆಬಾಳುವ ಸದರ ಗಾಡಿಯನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಮೋಟಾರ ಸೈಕಲ್ ಕಳುವು ಮಾಡಿದ ಕಳ್ಳರನ್ನು ಹಾಗೂ ಮಾಲನ್ನು ಪತ್ತೆ ಮಾಡಿ ಕೊಡಲು ವಿನಂತಿಸಲಾಗಿದೆ ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತಪಾಸಣೆ ಕೈಗೊಂಡಿದ್ದು ಇರುತ್ತದೆ.
5] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 66/2017 ಕಲಂ. 279, 338, 304[], .ಪಿ.ಸಿ.
ದಿನಾಂಕ: 04-6-2017 ರಂದು ಸಾಯಾಂಕಾಲ 19-30 ಗಂಟೆಯ ಸುಮಾರಿಗೆ ಮೋಟಾರ್ ಸೈಕಲ್ ನಂ: ಕೆ.-36/ಕ್ಯೂ-9879 ನೇದ್ದರ ಚಾಲಕ ಗೋಪಾಲ ತಂದೆ ಹನಮಪ್ಪ ಕೋಟಿಮ್ಯಾಗಿನ್ ವಯಾ: 35 ವರ್ಷ, ಜಾತಿ: ಉಪ್ಪಾರ, ಸಾ: ಪಟ್ಟಲಚಿಂತಿ ತಾ: ಕುಷ್ಟಗಿ ಇತನು ತನ್ನ ಮೋಟಾರ್ ಸೈಕಲ್ಲನ್ನು ಹನಮನಾಳ ಕಡೆಯಿಂದ ಪಟ್ಟಲಚಿಂತಿ ಕಡೆಗೆ ಸೋಮಣ್ಣ ಇಂಗಳದಾಳ ರವರ ತೋಟದ ಹತ್ತಿರ ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿ ಸ್ಕಿಡ್ ಮಾಡಿ ಕೆಡವಿ ಅಪಘಾತಪಡಿಸಿ ಅಪಘಾತದಲ್ಲಿ ಚಾಲಕ ಗೋಪಾಲನಿಗೆ ತಲೆಗೆ ಹಾಗೂ ಎಡಮಲಕು, ಕಿವಿಗೆ ಭಾರಿ ರಕ್ತಗಾಯವಾದಾಗ ಹಿಂದಿನಿಂದ ಬರುವ ಶ್ರೀನಿವಾಸ ತಂದೆ ಹನಮಪ್ಪ ಕೋಟಿಮ್ಯಾಗಿನ್ ಹಾಗೂ ಸೋಮಣ್ಣ ತಂದೆ ಬಸಪ್ಪ ಓಲೇಕಾರ ರವರು ನೋಡಿ ಗಾಯಾಳು ಗೋಪಾಲನನ್ನು 108 ಆಂಬ್ಯುಲೇನ್ಸದಲ್ಲಿ ಕುಮಾರೇಶ್ವರ ಆಸ್ಪತ್ರೆ ಬಾಗಲಕೋಟೆಗೆ ಹೋಗುವಾಗ ಫಿರ್ಯಾದಿ ಬಸವರಾಜ ತಂದೆ ಹನಮಪ್ಪ ಕೋಟಿಮ್ಯಾಗಿನ್ ವಯಾ: 32 ವರ್ಷ ಜಾ: ಉಪ್ಪಾರ, : ಒಕ್ಕಲುತನ, ಸಾ: ಪಟ್ಟಲಚಿಂತಿ, ತಾ: ಕುಷ್ಟಗಿ,  ಇವರಿಗೆ ಶ್ರೀನಿವಾಸ ರವರು ಫೋನ್ ಮಾಡಿ ತಿಳಿಸಿ ಗಾಯಾಳನ್ನು ಕುಮಾರೇಶ್ವರ ಆಸ್ಪತ್ರೆಗೆ ಉಪಚಾರ ಕುರಿತು ದಾಖಲು ಮಾಡಿದ್ದು, ಅಲ್ಲಿಗೆ ಫಿರ್ಯಾದಿದಾರರು ಕೂಡ ಹೋಗಿ ನೋಡಿದ್ದು, ವಿಷಯ ನಿಜವಿದ್ದು, ನಂತರ ದಿನಾಂಕ: 6-6-2017 ರಂದು ಮುಂಜಾನೆ 11-15 ಗಂಟೆಗೆ ಗಾಯಾಳು ಗೋಪಾಲನನ್ನು ಕೆರೂಡಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಅಪಘಾತದ ಬಗ್ಗೆ ವೈಧ್ಯಾಧಿಕಾರಿಗಳಿಗೆ ತಿಳಿಸಿರುವುದಿಲ್ಲ. ನಂತರ ಗೋಪಾಲ ಸ್ವಲ್ಪ ಗುಣಮುಖವಾದ ಮೇಲೆ ಫಿರ್ಯಾದಿದಾರರಿಗೆ ಗೋಪಾಲನನ್ನು ವಿಚಾರಿಸಲು ತಾನು ತನ್ನ ಮೋಟಾರ್ ಸೈಕಲ್ ನಂ: ಕೆ.-36/ಕ್ಯೂ-9879 ನೇದ್ದನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿಕೊಂಡು ಹೋಗಿ ಸ್ಕೀಡ್ ಮಾಡಿ ಅಪಘಾತಡಪಸಿದ್ದು ಅಂತಾ ತಿಳಿದಿದ್ದು ಇರುತ್ತದೆ. ಸದರಿ ಗೋಪಾಲನು ದಿನಾಂಕ: 24-6-2017 ರಂದು ಉಪಚಾರ ಫಲಿಸದೇ ರಾತ್ರಿ 10-50 ಗಂಟೆಗೆ ಮೃತಪಟ್ಟಿದ್ದು, ಈ ಬಗ್ಗೆ ಫಿರ್ಯಾದಿದಾರರು ಬಾಗಲಕೋಟೆಯಿಂದ ತಮ್ಮೂರ ಪಟ್ಟಲಚಿಂತಿಗೆ ಬಂದು ಹಿರಿಯರನ್ನು ವಿಚಾರಿಸಿ ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008