Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, June 10, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ. 78(3) Karnataka Police Act.
ದಿನಾಂಕ:-09-06-2017 ರಂದು ರಾತ್ರಿ 7-30 ಗಂಟೆಗೆ ಕಾರಟಗಿ ಎ.ಪಿ.ಎಮ್.ಸಿ 2 ನೇ ಗೇಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಮೋನಯ್ಯ ಎ.ಎಸ್.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹಿಡಿಯಲು 2 ಜನ  ಆರೋಪಿತರು ಸಿಕ್ಕಿ ಬಿದ್ದಿದ್ದು, ಆರೋಪಿತರಿಂದ ರೂ. 1350=00 ಗಳನ್ನು ಹಾಗೂ ಮಟಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಮಟ್ಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 2 ಇತನು ತಾವೇ ಇಟ್ಟುಕೊಳ್ಳುವುದಾಗಿ ತಿಳಿಸಿರುತ್ತಾರೆ ಅಂತಾ ಇದ್ದ ಆರೋಪಿತರ ಸಮೇತ ಠಾಣೆಯಲ್ಲಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.   
2]  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ. 78(3) Karnataka Police Act.
ದಿನಾಂಕ:-09-06-2017 ರಂದು ರಾತ್ರಿ 7-45 ಗಂಟೆಗೆ ಯರಡೋಣ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮೂದು ಮಾಡಿದ ಆರೋಪಿತರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಎ.ಎಸ್.ಐ ಮಲ್ಲಪ್ಪ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ನಂ 1 ನೆದ್ದವನಿಂದ ರೂ. 1145=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ನಂತರ ಮಟ್ಕಾ ಪಟ್ಟಿ ಮತ್ತು ಹಣವನ್ನು ಯಾರಿಗೆ ಕೊಡುತ್ತಿರಿ ಅಂತಾ ವಿಚಾರಿಸಲಾಗಿ  ಮಟ್ಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 2 ಇತನಿಗೆ ಕೊಡುವುದಾಗಿ ತಿಳಿಸಿರುತ್ತಾರೆ ಅಂತಾ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3]  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 107/2017 ಕಲಂ. 78(3) Karnataka Police Act.
ದಿನಾಂಕ:-09-06-2017 ರಂದು ರಾತ್ರಿ 8-30 ಗಂಟೆಗೆ ಹೊಸ ಸೋಮನಾಳ ಗ್ರಾಮದ ಬಸವಣ್ಣ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಶ್ರೀ ಧೀಪಕ್ ಆರ್ ಬೂಸರಡ್ಡಿ ಸಿಪಿಐ ಗಂಗಾವತಿ ಗ್ರಾಮೀಣ ವೃತ್ತರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹಿಡಿಯಲು ಒಬ್ಬನು ಸಿಕ್ಕಿ ಬಿದ್ದಿದ್ದು, ಆರೋಪಿತನ ಕಡೆಯಿಂದ ರೂ. 4740=00 ಗಳನ್ನು ಹಾಗೂ 3 ಮೋಬೈಲ್ ಫೊನ್ ಮತ್ತು ಮಟಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಆರೋಪಿತನಿಗೆ ಮಟ್ಕಾ ಪಟ್ಟಿ ಮತ್ತು ಹಣವನ್ನು ಯಾರಿಗೆ ಕೊಡುತ್ತಿರಿ ಅಂತಾ ವಿಚಾರಿಸಲಾಗಿ  ಸದರ್ ಮಟಕಾ ಪಟ್ಟಿಯನ್ನು  ಅಮರೇಶ ಬಂಗಾರಟ್ಟಿ ಮೋ ನಂ 9481442758 ಈತನಿಗೆ ಕೊಡುವುದಾಗಿ ತಿಳಿಸಿರುತ್ತಾನೆ ಅಂತಾ ಆರೋಪಿತನ ಸಮೇತ ಠಾಣೆಯಲ್ಲಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆಕೈಗೊಂಡಿದ್ದುಇರುತ್ತದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 137/2017 ಕಲಂ. 78(3) Karnataka Police Act.
ದಿನಾಂಕ:- 09-06-2017 ರಂದು ಸಂಜೆ 5:30 ಗಂಟೆಯ ಸುಮಾರಿಗೆ ನಾನು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಬರುವ ಹೊಸಕೇರಾ ಡಗ್ಗಿಯ ಬ್ರಿಡ್ಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದಿದ್ದು, ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಪಿ.ಸಿ. ನಂ: 363, 86 ಹಾಗೂ ಜೀಪ್ ಚಾಲಕ .ಹೆಚ್.ಸಿ. 17 ಇವರು ಮತ್ತು ಇಬ್ಬರು ಪಂಚರು ಕೂಡಿಕೊಂಡು ಹೊಸಕೇರಾ ಡಗ್ಗಿಗೆ ಹೋಗಿ  ಬ್ರಿಡ್ಜನಿಂದ ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಬ್ರಿಡ್ಜ್ ಹತ್ತಿರ  ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಅಂಬರೇಶ ತಂದೆ ಬಸಪ್ಪ ಉರುಕುಂದಿ, ವಯಸ್ಸು 36 ವರ್ಷ, ಜಾತಿ: ನಾಯಕ : ಕೂಲಿ ಕೆಲಸ ಸಾ: ಹೊಸಕೇರಾ ಡಗ್ಗಿ ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 210/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
5]  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 52/2017 ಕಲಂ. 32, 34 Karnataka Excise Act.
ದಿನಾಂಕ: 09-06-2017 ರಂದು ಸಾಯಮಕಾಲ 18-10 ಗಂಟೆಗೆ ಒಬ್ಬ ಆರೋಪಿ ಹಾಗೂ ಅನಧೀಕೃತ ಮಧ್ಯ ಮಾರಾಟ ದಾಳಿ ಪಂಚನಾಮೆ ಹಾಗೂ ಮುದ್ದೆ ಮಾಲು ಸಮೇತ ಠಾಣೆಗೆ ಹಾಜರಾಗಿ ವರದಿ ನೀಡಿದ್ದರ ಸಾರಾಂಸ ವೇನೆಂದರೆ ದಿನಾಂಕ: 09-06-2017 ರಂದು ಸಾಯಮಕಾಲ 3-50 ಗಂಟೆಗೆ ಠಾಣೆಯಲ್ಲಿದ್ದಾಗ ಯಲಬುಣಚಿ ಕ್ರಾಸ್ ಹತ್ತಿರ ಸಾರ್ವ ಜನಿಕ ಸ್ಥಳದಲ್ಲಿ ಮದ್ಯದ ಮಾರಟ ಮಾಡುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಕೂಡಲೆ ಸಿ.ಪಿ.ಐ ಸಾಹೇಬರ ನೇತ್ರತ್ವದಲ್ಲಿ ಪಿ.ಎಸ್.ಐ ರವರು ಹಾಗೂ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-11, 210 ಪಿ.ಸಿ-168, 208 ರವರೊಂದಿಗೆ ಯಲಬುಣಚಿ ಕ್ರಾಹತ್ತಿರ ಹೋಗಿ ಒಬ್ಬ ವೈಕ್ತಿ ಬಸ ನಿಲ್ದಾಣದ ಹತ್ತಿರ ಮದ್ಯದ ಟಿಟ್ರಾ ಪಾಕೇಟಗಳನ್ನು ಮಾರಾಟ ಮಾಡುವದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿಮಾಡಿ ಆರೋಪಿನ ವಶದಲ್ಲಿದ್ದ 170-00 ನಗದು ಹಣ 180 ml HAYWARDS Whisky ಒಟ್ಟು 21 ಪಾಕೇಟ ಪ್ರತಿಯೊಂದಕ್ಕೆ ರೂ 60-00 ರಂತೆ ಒಟ್ಟು ಒಟ್ಟು 1,260-00/- ಹಾಗೂ 180 ml 8 PM Whiskjy ಟೆಟ್ರಾ ಒಟ್ಟು 13 ಪಾಕೇಟಗಳು ಪ್ರತಿಯೊಂದಕ್ಕೆ ರೂ 75-00 ರೂಪಾಯಿಗಳಂತೆ ಒಟ್ಟು 975-00 ಹಿಗೇ ಎಲ್ಲಾ ಪೌಚಗಳಿಗೆ ಕರ್ನಾಟಕ ಅಬಕಾರಿ ಕಮಿಷನರ್ ಲೆಬರ ಅಂಟಿಸಿದ್ದು ಇರುತ್ತದೆ. ಹಾಗೂ ಈ ಬಗ್ಗೆ ಆರೋಪಿತನಿಗೆ ಮಾರಾಟ ಮಾಡಲು ಪರವಾನಿಗೆ ಬಗ್ಗೆ ವಿಚಾರಿಸಲು ಯಾವುದೆ ಪರವಾನಿಗೆ ಇರುವದಿಲ್ಲಾ ಅನಧಿಕೃತವಾಗಿ ಮಾರಾಟ ಮಾಡಿದ್ದು ಅಂತಾ ಹೇಳಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
6] ವಿಷೇಶ ಪೊಲೀಸ್ ಠಾಣೆ , ಜಿಲ್ಲಾ  ಅಪರಾದ ವಿಭಾಗ ಕೊಪ್ಪಳ ಗುನ್ನೆ ನಂ. 07/2017 ಕಲಂ. 32, 34,  38(A) Karnataka Excise Act.

ದಿ:09-06-2017 ರಂದು ಸಾಯಂಕಾಲ 5:00 ಗಂಟೆಗೆ ಗಂಗಾವತಿ ತಾಲೂಕಿನ ಕಾರಟಗಿ ಪಟ್ಟಣದ ನವಲಿ ರಸ್ತೆಯಲ್ಲಿರುವ ರಾಜಧಾನಿ ರೆಸ್ಟೊರೆಂಟ ಡಾಭಾದ ಮೇಲೆ ಫಿಯರ್ಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಡಾಭಾದಲ್ಲಿ ಜನರಿಗೆ ಮಧ್ಯ ಮಾರಾಟ ಮಾಡುತ್ತಿದ್ದ ಡಾಭಾದ ಮಾಲೀಕ ನಾಗರಾಜ ಇತನನ್ನು ವಶಕ್ಕೆ ಪಡೆದು ಢಾಭಾದಲ್ಲಿದ್ದ 11 ವಿವಿಧ ನಮೂನೆಯ ಒಟ್ಟು 74 ಮಧ್ಯದ ಬಾಟಲಿಗಳು/ಟೆಟ್ರಾ ಪಾಕೀಟಗಳು ಒಟ್ಟು ಅಂ.ಕಿ.ರೂ: 9,576-36 ಬೆಲೆಯುಳ್ಳದ್ದವುಗಳನ್ನು ಜಫ್ತು ಮಾಡಿಕೊಂಡು ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಿ ಅಂತಾ ಫಿಯರ್ಾದಿ ಸಲ್ಲಿಸಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008