Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, June 15, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 135/2017 ಕಲಂ. 87 Karnataka Police Act.
ದಿನಾಂಕ 14-06-2017 ರಂದು 4-10 ಪಿ.ಎಂ.ಕ್ಕೆ ಆರೋಪಿತರು ಹುಲಗಿ ಗ್ರಾಮದ ಸೂರ್ಯನಾರಾಯಣ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಜಯಪ್ರಕಾಶ ಪಿ.ಎಸ್.ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಆ ಕಾಲಕ್ಕೆ 5 ಜನ ಆರೋಪಿತರು ಸಿಕ್ಕಿದ್ದು, ಸದರಿಯವರಿಂದ 52 ಇಸ್ಪೇಟ ಎಲೆಗಳು, 1 ಹಳೆ ಟಾವೆಲ್ ಹಾಗೂ 2570-00 ರೂ. ನಗದು ಹಣ  ಸಿಕ್ಕಿರುತ್ತವೆ.  ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2]  ನಗರ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 115/2017 ಕಲಂ. 78(3) Karnataka Police Act.
ದಿನಾಂಕ 14-06-2017 ರಂದು 8-00 ಪಿ.ಎಮ್ ಗಂಟೆಯ ಸುಮಾರಿಗೆ ಆರೋಪಿತನಾದ ಲಕ್ಷ್ಮಣ ಕಬ್ಬೇರ ತಂದೆ ನಂದಪ್ಪ ಕಬ್ಬೇರ ವಯಾ: 35 ವರ್ಷ ಜಾ: ಕಬ್ಬೇರ ಉ:ಹಮಾಲಿ ಕೆಲಸ ಸಾ: ಹಮಾಲರ ಕಾಲೋನಿ, ಗಂಗಾವತಿ ಈತನು   ಗಂಗಾವತಿ ನಗರದ ಹಮಾಲರ ಕಾಲೋನಿಯಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವ ಮೇಲೆ ಶ್ರೀ. ರಾಮಣ್ಣ ಪಿ.ಎಸ್.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟಕಾ ಜೂಜಾಟದ ಹಣ ನಗದು ರೂ. 600-00  02] ಮಟಕಾ ನಂಬರ ಬರೆದ 01 ಚೀಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಆರೋಪಿತನಿಂದ ಜಪ್ತಿ ಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3]  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 80/2017 ಕಲಂ. 32, 34 Karnataka Excise Act.
ದಿ: 14-06-2017 ರಂದು 04-00 ಪಿ.ಎಂ ಕ್ಕೆ ಫಿರ್ಯಾದಿದರರಾದ  ಶ್ರೀಮತಿ ಫಕೀರಮ್ಮ. ಪಿ.ಎಸ್.. ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿ: 14-06-17 ರಂದು ಮದ್ಯಾಹ್ನ 02-00 ಗಂಟೆಗೆ ಕೊಪ್ಪಳ ಭಾಗ್ಯನಗರದ ಓಜನಹಳ್ಳಿ ರಸ್ತೆಯಲ್ಲಿ ಆರೋಪಿತನು ಅನಧೀಕೃತವಾಗಿ ಯಾವುದೇ ಲೈಸನ್ಸ ವಗೈರೆ ಇಲ್ಲದೇ ಅಕ್ರಮವಾಗಿ ಸುಮಾರು 1919=68 ರೂ. ಬೆಲೆಬಾಳುವ 8 ಪಿ.ಎಮ್. ಮಧ್ಯದ 28 ಟೆಟ್ರಾ ಪಾಕೇಟಗಳ ಮಧ್ಯವನ್ನು ಸಂಗ್ರಹಿಸಿಕೊಂಡು  ಸಾಗಾಟ ಮಾಡುತ್ತಿದ್ಧಾಗ ದಾಳಿ ಕಾಲಕ್ಕೆ ಸಿಕ್ಕಿದ್ದು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 133/2017 ಕಲಂ. 34 Karnataka Excise Act.
ದಿ:14-06-2017 ರಂದು ಸಂಜೆ 07.30 ಗಂಟೆಗೆ ಠಾಣಾ ವ್ಯಾಪ್ತಿಯ ಹಲಗೇರಿ ಗ್ರಾಮದ ಪಂಚಾಯತಿ ಕಚೇರಿಯ ಹತ್ತಿರ ಓರ್ವ ವ್ಯಕ್ತಿಯು ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದರಿಂದ ಶ್ರೀ. ಗುರುರಾಜ ಪಿ.ಎಸ್.ಐ. ರವರಿಗೆ ಬಂದಿದ್ದು, ಫಿರ್ಯಾದಿದಾರರು ಸಿಬ್ಬಂದಿ ಸಂಗಡ ಕರೆದುಕೊಂಡು ಸಂಜೆ 07.30 ಗಂಟೆಗೆ ದಾಳಿ ಮಾಡಿ ಆರೋಪಿತನಿಗೆ ವಶಕ್ಕೆ ತೆಗೆದುಕೊಂಡು, ಹಾಯವಾಡ್ರ್ಸ ಚೀಯರ್ಸ ವಿಸ್ಕಿ. 180 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂ.ಕಿ. 56=27. ರೂ. ಹೀಗೆ ಒಟ್ಟು 31 ಟೆಟ್ರಾಪಾಕೇಟ್ಗಳು. ಅಂಕಿ. 1744.37 ರೂ. ಬೆಲೆಬಾಳುವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅಂತಾ ಫಿರ್ಯಾದಿ ನೀಡಿದ್ದು ಇರುತ್ತದೆ. 
5] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 57/2017 ಕಲಂ: 379 ಐ.ಪಿ.ಸಿ ಹಾಗೂ 4(1), 4(1A) 21 ಕರ್ನಾಟಕ ಮೈನರ  ಮಿನರಲ್ ಕನ್ಸಿಸ್ಟೆಂಟ ರೂಲ್ 1994 ಮತ್ತು [ಮೈನ್ಸ್ ಮತ್ತು ಮಿನೆರಲ್ಸ ರೆಗ್ಯೂಲೆಶನ ಆಪ್ ಡೆವಲಪ್ ಮೆಂಟ್ ] ಕಾಯ್ದೆ 1957 ಮತ್ತು 43, 44 ಕೆ.ಎಂ.ಎಂ. ರೂಲ್ಸ:.
ದಿನಾಂಕ: 14-06-2017 ರಂದು ಮುಂಜಾನೆ 11-00 ಗಂಟೆಗೆ ಪಿ.ಎಸ್.ಯ. ರವರು ಠಾಣೆಯಲ್ಲಿದ್ದಾಗ ಸೇಬಿನಕಟ್ಟಿ ಸೀಮಾದಲ್ಲಿ ಆರೋಪಿ ಗ್ಯಾನಪ್ಪ ಬಯ್ಯಾಪೂರ ಈತನು ತನ್ನ ಹೊಲದಲ್ಲಿದ್ದ ಮರಳನ್ನು  ಕಳ್ಳತನದಿಂದ ಒಂದು ಟ್ರ್ಯಾಕ್ಟರದಲ್ಲಿ ತುಂಬುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1] ಮಂಜುನಾಥ ತಂದೆ ಬಸವಂತಪ್ಪ ಶಿರೋಳ [2] ಮಂಜುನಾಥ ತಂದೆ ಪರಶುರಾಮ ಬನ್ನಿಗಿಡ ಇಬ್ಬರು ಸಾ: ಹನಮಸಾಗರ ಹಾಗೂ ಸಿಬ್ಬಂದಿಯವರಾದ ಹೆಚ.ಸಿ 83, ಪಿಸಿ 168, 208 ರವರನ್ನು ಸಂಗಡ ಕರೆದುಕೊಂಡು ಸಂಗಡ ಮುಂಜಾನೆ 11-30 ಗಂಟೆಗೆ ಹೊರಟು ಸೇಬಿನಕಟ್ಟಿ ಸೀಮಾಧಲ್ಲಿ ಖಚಿತ ಭಾತ್ಮಿ ಇದ್ದ ಕಡೆಗೆ ಹೋಗಲಾಗಿ ಆರೋಪಿತನು ತನ್ನ ಟ್ರ್ಯಾಕ್ಟರದಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಸಿಬ್ಬಂದಿಯವರು ಟ್ರ್ಯಾಕ್ಟರನ್ನು ನಿಲ್ಲಿಸಲು ಕೈ ಮಾಡಿದಾಗ ಆರೋಪಿತನು ತನ್ನ ಟ್ರ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸಿದಾಗ ಸಿಬ್ಬಂದಿಯವರು ಬೆನ್ನು ಹತ್ತಿ ಹಿಡಿದಿದ್ದು, ವಿಚಾರಿಸಲಾಗಿ  ಅವನು ತನ್ನ ಹೆಸರು ಗ್ಯಾನಪ್ಪ ತಂದೆ ಹನುಮಪ್ಪ ಬಯ್ಯಾಪೂರ ವಯಾ 37 ವರ್ಷ ಜಾ: ಕುರುಬರ ಉ: ಟ್ರ್ಯಾಕ್ಟರ್ ಚಾಲಕ/ಮಾಲಿಕ ಸಾ: ಸೇಬಿನಕಟ್ಟಿ ತಾ: ಕುಷ್ಟಗಿ ಅಂತಾ ತಿಳಿಸಿದ್ದು ನಂತರ ಟ್ರ್ಯಾಕ್ಟರನ್ನು ಪರಿಶೀಲಿಸಲಾಗಿ ನ್ಯೂ ಹಾಲೆಂಡ ಕಂಪನಿಯ ನೀಲಿಬಣ್ಣದ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿ ನೊಂದಣಿ ಸಂಖ್ಯೆ KA 37/TB-0961 ಅಂತಾ ಇದ್ದು, ಚಾಸಿ ನಂ: 82822691 130708 ಹಾಗೂ ಇಂಜಿನ ನಂ : S325F26956 ಅಂತಾ ಇದ್ದು, ಟ್ರ್ಯಾಲಿಯಲ್ಲಿ 2.5 ಕ್ಯೂಬಿಕ ಮರಳು ಅಂ.ಕಿ.ರೂ: 3,000=00 ಹಾಗೂ ಟ್ರ್ಯಾಕ್ಟರ್ ಅಂ.ಕಿ.ರೂ: 4,00,000=00 ಇದ್ದು, ಸದರಿ ಟ್ರ್ಯಾಕ್ಟರ ಚಾಲಕ/ಮಾಲಿಕ ಗ್ಯಾನಪ್ಪ ತಂದೆ ಹನುಮಪ್ಪ ಬಯ್ಯಾಪೂರ ತನು ತನ್ನ ಹೊಲದಲ್ಲಿದ್ದ ಮರಳನ್ನು ಅನಧಿಕೃತವಾಗಿ, ಅಕ್ರಮವಾಗಿ ಯಾವುದೇ ಪರವಾನಿಗೆಯನ್ನು ಹೊಂದದೇ ಹಾಗೂ ಸರಕಾರಕ್ಕೆ ಯಾವುದೇ ರಾಜಧನವನ್ನು ಭರಿಸದೆ ಕಳ್ಳತನದಿಂದ ತನ್ನ ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಇರುವ ಫಿರ್ಯಾದಿ ಸಾರಾಂಶದ ಮೇಲಿಂದ ಮೇಲಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.  
6] ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 27/2017 ಕಲಂ. 279, 338 ಐ.ಪಿ.ಸಿ:.
ದಿನಾಂಕ. 14-06-2017 ರಂದು ರಾತ್ರಿ 8-23 ಗಂಟೆಗೆ ಕೊಪ್ಪಳದ ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ಮಹಿಳಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿಯ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ. 14-06-2017 ರಂದು ಫಿರ್ಯಾದಿಯ ಅಜ್ಜಿ ನೀಲಮ್ಮ ಇವರು ಕೊಪ್ಪಳ ನಗರದ ಈಶ್ವರ ದೇವಸ್ಥಾನದ ಹತ್ತಿರ ಇರುವ ಓಂಶಾಂತಿ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಾಸ ಮನೆಗೆ ಬರಲು ನಡೆದುಕೊಂಡು ಹಳೇ ಡಿ.ಕ್ರಾಸ್ ದಲ್ಲಿ ಕೊಪ್ಪಳ ನಗರದ ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯನ್ನು ದಾಟುತ್ತಿರುವಾಗ ಅಶೋಕ ಸರ್ಕಲ್ ಕಡೆಯಿಂದ ಲಾರಿ ನಂಬರ. KA-09/A-2474 ನೆದ್ದರ ಚಾಲಕ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನೀಲಮ್ಮ ಇವರಿಗೆ ಟಕ್ಕರಮಾಡಿ ಅಪಘಾತಮಾಡಿದದ್ದರಿಂದ ಇವರ ಎಡಕೈಗೆ ಭಾರಿ ಒಳಪೆಟ್ಟು, ಎಡಕಣ್ಣಿನ ಕೆಳಗೆ ರಕ್ತಗಾಯ, ಎರಡೂ ಮೋಣಕಾಲಿಗೆ ರಕ್ತಗಾಯ, ಎದೆಗೆ ಒಳಪೆಟ್ಟು ಆಗಿರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
7] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ  ಗುನ್ನೆ ನಂ. 134/2017 ಕಲಂ. 279, 338 ಐ.ಪಿ.ಸಿ:.
ದಿ:14-06-2017 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತನ್ನ ಸ್ನೇಹಿತ ಚಂದ್ರು ಸಜ್ಜನ್ ಇವರ ಸಂಗಡ ಅವರ ಮೋಟಾರ ಸೈಕಲ್ ನಂ:ಕೆಎ-26/ಡಬ್ಲ್ಯೂ-2550 ನೇದ್ದರ ಹಿಂದೆ ಕುಳಿತುಕೊಂಡು ಹಲಿಗೇರಿಯಿಂದ ಕೊಪ್ಪಳಕ್ಕೆ ಅಂತಾ ಗುಳಗಣ್ಣವರ ಕಾಲೇಜ ಸಮೀಪ ಎನ್.ಹೆಚ್-63 ರಸ್ತೆಯಲ್ಲಿ ಬರುತ್ತಿದ್ದಾಗ ಚಂದ್ರು ಇತನು ತನ್ನ ಗಾಡಿಯನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ತನ್ನ ವಾಹನ ನಿಯಂತ್ರಿಸದೇ ಪಲ್ಟಿ ಮಾಡಿ ಅಪಘಾತ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಆರೋಪಿ ಚಂದ್ರು ಇವರಿಗೆ ಭಾರಿ ಪೆಟ್ಟುಗಳಾಗಿದ್ದು ಇರುತ್ತದೆ. ಕಾರಣ ಸದರಿ ಮೋಟಾರ ಸೈಕಲ್ ಸವಾರ ಚಂದ್ರು ಸಜ್ಜನ ಸಾ: ತಳಕಲ್ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಡವಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
8] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ  ಗುನ್ನೆ ನಂ. 135/2017 ಕಲಂ. 279, 337, 338 ಐ.ಪಿ.ಸಿ:.

ದಿ:15-06-2017 ರಂದು 04-30 ಎ.ಎಮ್ ಕ್ಕೆ ಫಿರ್ಯಾದಿದಾರರಾದ ರಮೇಶ ಗೋರಿ ಸಾ: ತಳಕಲ್. ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿ:15-06-2017 ರಂದು 00-30 ,ಎಮ್ ಸುಮಾರಿಗೆ ಫಿರ್ಯಾದಿದಾರರು ತನ್ನ ಸ್ನೇಹಿತ ಚಂದ್ರು ಇತನು ಗುಳಗಣ್ಣವರ ಕಾಲೇಜ ಹತ್ತಿರ ವಾಹನ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರಿಂದ ಸ್ಥಳಕ್ಕೆ ಅಂತಾ ರವಿ ತೆಗೆದುಕೊಂಡು ಬಂದಿದ್ದ ಚಂದ್ರು ಇವರ ಮೋಟಾರ ಸೈಕಲ್ ನಂ: ಕೆಎ-26/ಡಬ್ಲ್ಯೂ-2550 ನೇದ್ದರ ಹಿಂದೆ ತನಗೆ ಮತ್ತು ರವಿ ಇಬ್ಬರಿಗೆ ಇನ್ನೊಬ್ಬ ಸ್ನೇಹಿತ ಸೋಮಪ್ಪನು ಓಡಿಸಿಕೊಂಡು ಮಿಲೇನಿಯಮ್ ಸ್ಕೂಲ್ ಹತ್ತಿರ ನ್,ಹೆಚ್-63 ರಸ್ತೆಯಲ್ಲಿ ಹೋಗುವಾಗ ಅದೇ ಸಮಯಕ್ಕೆ ತಮ್ಮ ಹಿಂದೆ ಹಲಿಗೇರಿ ಕಡೆಯಿಂದ ಬೊಲೆರೋ ಪಿಕಪ್ ನಂ: ಕೆಎ-37/ಎ-3633 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಮುಂದೆ ಹೊರಟಿದ್ದ ಫಿರ್ಯಾದಿದಾರರ ಮೋಟಾರ ಸೈಕಲ್ ಗೆ ನಿಗದಿತ ಅಂತರ ಕಾಯ್ದುಕೊಳ್ಳದೇ ಬಂದು ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಗಾಡಿ ಸಮೇತ ರಸ್ತೆಯ ಬಲತಗ್ಗಿನಲ್ಲಿ ಬಿದ್ದಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಫಿರ್ಯಾದಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಮೋಟಾರ ಸೈಕಲ್ ಸವಾರ ಸೋಮಪ್ಪನಿಗೆ ಸಾದಾಗಾಯಗಳಾಗಿದ್ದು, ಮತ್ತು ರವಿ ಇತನ ಎಡಕಾಲ ಮೊಣಕಾಲ ಕೆಳಗಡೆ ಭಾರಿ ರಕ್ತಗಾಯವಾಗಿ ಮೂಳೆ ಮುರಿದಿರುತ್ತದೆ. ಮತ್ತು ಬಲಗೈ ಮುಂಗೈಗೆ ತೆರೆಚಿದ ರಕ್ತಗಾಯವಾಗಿರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008