Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, June 17, 2017

1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 59/2017 ಕಲಂ. 87 Karnataka Police Act.
ದಿನಾಂಕ: 16-06-2017 ರಂದು 1900 ಗಂಟೆಗೆ ಪಿ.ಎಸ್.. ಸಾಹೇಬರು ಠಾಣೆಗೆ ಹಾಜರಾಗಿ ಇಸ್ಪೀಟ್ ದಾಳಿ ಪಂಚನಾಮೆ ಹಾಗೂ 12 ಜನ ಆರೋಪಿತರನ್ನು ಮತ್ತು ಮುದ್ದೆಮಾಲು ಸಮೇತ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಸಾರಾಂಶವೇನೆಂದರೆ, ಪಿ.ಎಸ್.. ಹಾಗೂ ಸಿಬ್ಬಂದಿಯವರು ಇಂದು ಸಾಯಾಂಕಾಲ 16-10 ಗಂಟೆಗೆ ಠಾಣೆಯಲ್ಲಿದ್ದಾಗ ಪುರ್ತಗೇರಿ ಸ್ಥಳಾಂತರ ಜನತಾ ಕಾಲೋನಿಯಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಅಲ್ಲೇ ಹಾಜರಿದ್ದ ಇಬ್ಬರು ಪಂಚರಾದ 1] ಅಬ್ದುಲಕರೀಮ್ ತಂದೆ ರಾಜೇಸಾಬ ಬಸರಕೋಡ 2] ಅರುಣಕುಮಾರ ತಂದೆ ಶರಣಯ್ಯ ಸೊಪ್ಪಿಮಠ ಇಬ್ಬರು, ಸಾ: ಹನಮಸಾಗರ ಹಾಗೂ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ಮತ್ತು ಮೋಟಾರ್ ಸೈಕಲ್ ಮೇಲೆ ಹೊರಟು ಹೂಲಗೇರಿ ದಾಟಿ ಪುರ್ತಗೇರಿ ಸ್ಥಳಾಂತರ ಜನತಾ ಕಾಲೋನಿಯ ಪ್ರಾರಂಭದಲ್ಲಿ 16-50 ಗಂಟೆಗೆ ಜೀಪ್ ಮತ್ತು ಮೋಟಾರ್ ಸೈಕಲ್ ನಿಲ್ಲಿಸಿ ಎಲ್ಲರೂ ಕೆಳಗೆ ಚಾಲಕನನ್ನು ಜೀಪ್ ಹತ್ತಿರ ಬಿಟ್ಟು 100 ಮೀಟರ್ ಕಾಲು ನಡೆಗೆಯಲ್ಲಿ ಹೋಗಿ ಅಲ್ಲಿ ಜನತಾ ಕಾಲೋನಿಯ ಬೀಗ ಹಾಕಿದ ಮನೆಯ ಮರೆಯಾಗಿ ನಿಂತು ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 12 ಜನ ಆರೋಪಿತರು ಸಿಕ್ಕಿಬಿದ್ದಿದ್ದು, ಸದರಿ ಆಪಾದಿತರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 29,000/- ನಗದು, ಒಂದು ಬರ್ಕಾ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಗಂಗಾವತಿ  ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 147/2017 ಕಲಂ. 87 Karnataka Police Act.
ದಿನಾಂಕ:- 16-06-2017 ರಂದು ಮಧ್ಯಾಹ್ನ ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗಡ್ಡಿ ಸೀಮಾ ಮಲಿಯಮ್ಮ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಹೆಚ್.ಸಿ. 173 ಪಿ.ಸಿ. ನಂ: 110, 363, 180, 237  ಹಾಗೂ ಚೀಪ ಚಾಲಕ ಎ.ಹೆಚ್.ಸಿ 17 ಕನಕಪ್ಪ ರವರೊಂದಿಗೆ ಹೋಗಿ ಭಾತ್ಮೀ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಮಲಿಯಮ್ಮ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 06 ಜನರು ಸಿಕ್ಕಿಬಿದ್ದಿದ್ದು, ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 7405/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಹಳೆಯ ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು ಇರುತ್ತವೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
3]  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 92/2017 ಕಲಂ. 87 Karnataka Police Act.
ದಿನಾಂಕ: 16-06-2017 ರಂದು ಸಂಜೆ 7-30 ಗಂಟೆಗೆ ಪಿ.ಎಸ್.ಐ. ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ವಾಪಸ್ ಠಾಣೆ ಬಂದು, ಜೂಜಾಟದಲ್ಲಿ ಜಪ್ತಿ ಮಾಡಿದ ಮುದೇಮಾಲುಗಳನ್ನು ಹಾಗೂ 07 ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದು, ಸದರಿ ವರದಿಯನ್ನು ಪರಿಶೀಲಿಸಿ ನೋಡಲಾಗಿ ಫಿರ್ಯಾಧಿದಾರರಾದ ಶ್ರೀ ಶಂಕರಪ್ಪ ಎಲ್. ಪಿ.ಎಸ್.ಐ ಅಳವಂಡಿ ಪೊಲೀಸ್ ಠಾಣೆ ರವರು, ಹಾಗೂ ಸಿಬ್ಬಂದಿ, ಪಂಚರು ಕೂಡಿಕೊಂಡು ಇಂದು
ದಿನಾಂಕ: 16-06-2017 ರಂದು ಸಾಯಂಕಾಲ 5-30 ಗಂಟೆಗೆ ಠಾಣಾ ವ್ಯಾಪ್ತಿಯ ಬಿಸರಳ್ಳಿ ಗ್ರಾಮದ ಬಸ್ಟ್ಯಾಂಡ ಹತ್ತಿರ ಇರುವ ಹೊಸ ಗುಡಾನ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ಶ್ರೀ ಶಂಕರಪ್ಪ ಎಲ್. ಪಿ.ಎಸ್.ಐ ಅಳವಂಡಿ ಪೊಲೀಸ್ ಠಾಣೆ ರವರು, ಹಾಗೂ ಸಿಬ್ಬಂದಿ, ರವರು ದಾಳಿ ಮಾಡಿದ್ದು, 07 ಜನ ಆರೋಪಿತರು ಸಿಕ್ಕಿದ್ದು, ಸಿಕ್ಕ ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 4,030=00 ಗಳನ್ನು, 52 ಇಸ್ಪೇಟ್ ಎಲೆಗಳನ್ನು, ಹಾಗೂ ಒಂದು ಪ್ಲಾಸ್ಟೀಕ್ ಬರ್ಕವನ್ನು ಜಪ್ತ ಮಾಡಿದ್ದು  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
4] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 68/2017 ಕಲಂ. 87 Karnataka Police Act.
ದಿನಾಂಕ:16-06-2017 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಆರೋಪಿತರು ಬನ್ನಿಕೊಪ್ಪ ಗ್ರಾಮದ ಗ್ರಾ.ಪಂ. ಮಾರಾಟ ಮಳಿಗೆ ಮುಂದುಗಡೆ ಇರುವ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೋಡಗಿದ್ದಾಗ ಅವರ ಮೇಲೆ ದಾಳಿ ಮಾಡಿದ್ದು, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಖಾಲಿ ಸಿಮೇಂಟ್ ಪ್ಲಾಸ್ಟೀಕ್ ಚೀಲ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 670=00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 82/2017 ಕಲಂ. 457, 380 ಐ.ಪಿ.ಸಿ:.

 ದಿನಾಂಕ: 16-06-2017 ರಂದು ಸಾಂಯಂಕಾಲ 05-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ರಾಜಶೇಖರ ತಂಧೆ ವೀರಸಂಗಯ್ಯ ಮಠದ ಸಾ: ಬಿ.ಟಿ ಪಾಟೀಲ್ ನಗರ ಕೊಪ್ಪಳರವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶ ಏನೆಂದರೆ, ಸದರಿ ವಿಳಾಸದಲ್ಲಿ ತಾನು ಮತ್ತು ತನ್ನ ಹೆಂಡತಿ ಹಾಗೂ ತಮ್ಮ ಎರಡನೇ ಮಗಳು ವಾಸವಾಗಿರುತ್ತಾರೆಫಿರ್ಯಾದಿದಾರರು ತಮ್ಮ ಹೆಂಡತಿ ಹಾಗೂ ಮಗಳೊಂದಿಗೆ ರಾತ್ರಿ ಊಟ ಮಾಡಿ ರಾತ್ರಿ 11-00 ಗಂಟೆಯ ಸುಮಾರಿಗೆ ಮಲಗಿಕೊಂಡಿದ್ದಾಗ, ದಿನಾಂಕ: 15-06-2017 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 16-06-2017 ರಂದು ಬೆಳಿಗ್ಗೆ 6-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿದಾರರ ಮನೆಯ ಹಿಂದಿನ ಬಾಗಿಲಿನ ಕೆಳಗಡೆಯ ಕಟ್ಟಿಗೆಯನ್ನು ಮುರಿದು ಮತ್ತು ಕಿಟಕಿಗಳ ಜಾಲರಿಯನ್ನು ಕಟ್ಟ ಮಾಡಿ ಮನೆಯ ಬೆಡ್ ರೂಮ್ನಲ್ಲಿದ್ದ ಅಲ್ಮಾರವನ್ನು ತೆರೆದು ಅಲ್ಮಾರದ ಸೇಪ್ಟಿ ಲಾಕರ್ನಲ್ಲಿದ್ದ 1] ನಾಲ್ಕುವರೆ ತೋಲೆಯ ತಾಳಿ ಚೈನ್ 2] ಒಂದೊಂದು ತೋಲೆಯ ಎರಡು ಬಿಲ್ವಾರಗಳು 3] ಅರ್ಧ ತೋಲೆಯ ಎರಡು ಚಿಕ್ಕ ಮಕ್ಕಳ ಬಳೆಗಳು, 4] ಅರ್ಧ ತೋಲೆಯ  ಎರಡು ಉಂಗುರಗಳು, 5] ಒಂದು ತೋಲೆ ಬಿಳಿ ಹಳ್ಳಿನ ಉಂಗುರ, 6] ಅರ್ಧ ತೋಲೆಯ ಒಂದು ಜೋತೆ ಮಾಟಿಲ್, 7] ಒಂದು ತೋಲೆಯ ಒಂಧು ಜೋತೆ ಜುಮಕಿ, 8] ಅರ್ಧ ತೋಲೆಯ ಲಕ್ಷ್ಮೀ ಬೆಂಡೋಲೆ 9] ಅರ್ಧ ತೋಲೆ ಒಂದು ಜೋತೆ ಗುಂಡು ಬೆಂಡೋಲೆ, 10] ಅರ್ಧ ತೊಲೆಯ ಒಂದು ಜೊತೆ ಕಿವಿಯೋಲೆ (ಪ್ಯಾಷನೇಬಲ್) 11] ಅರ್ಧ ತೊಲೆಯ ಮಕ್ಕಳ ಎರಡು ನೆಕ್ ಚೈನ್ಗಳು, 12] ಒಂದು ತೊಲೆ ನೆಕ್ ಚೈನ್, 13] ಅರ್ಧ ತೊಲೆ ಒಂದು ಜೊತೆ ಕಿವಿಯೋಲೆ 14] ಎರಡು ತೊಲೆಯ ಒಂದು ಜೊತೆ ಕಂಗನ್ ಬಳೆಗಳು ಎಲ್ಲಾ ಸೇರಿ ಒಟ್ಟು ಅಂ.ಕಿ.ರೂ: 4,50,000=00 ಬೆಲೆಬಾಳುವುಗಳು ಮತ್ತು ನಗದು ಹಣ ರೂ 19,000=00 ಗಳನ್ನ ಹಾಗೂ ತಮ್ಮ ಕಕ್ಷಿದಾರರ ಒಂದು ಆರ್.ಸಿ ಕಾರ್ಡ ಮತ್ತು ಒಂದು ಆಧಾರ ಕಾರ್ಡಗಳನ್ನ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೇನೆ.

0 comments:

 
Will Smith Visitors
Since 01/02/2008