Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, June 18, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 112/2017 ಕಲಂ. 87 Karnataka Police Act.
ದಿನಾಂಕ:-17-06-2017 ರಂದು ಮದ್ಯಾಹ್ನ 04-40 ಗಂಟೆಗೆ ಶ್ರೀ ಮೋನಯ್ಯ ಎ.ಎಸ್.ಐ ಕಾರಟಗಿ ಠಾಣೆ ರವರು ಇಸ್ಪೀಟ್ ದಾಳಿ ಮೂಲ ಪಂಚನಾಮೆ ಮುದ್ದೆಮಾಲು ಆರೋಪಿತರೊಂದಿಗೆ ವರದಿಯನ್ನು ಹಾಜರುಪಡಿಸಿದ್ದು ಸದ್ರಿ ವರದಿಯಲ್ಲಿ ಇಂದು ದಿನಾಂಕ:-17-06-2017 ರಂದು ಸಂಜೆ 3-15 ಗಂಟೆಯ ಸುಮಾರಿಗೆ ತಿಮ್ಮಾಪೂರ, ಹಾಲಸಮುದ್ರ ರಸ್ತೆಯ  ಪಕ್ಕದಲ್ಲಿ ತಿಮ್ಮಾಪುರ ಗ್ರಾಮದ ಸುಕ್ಲಮ್ಮದೇವಿ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ದಾಳಿ ಮಾಡಲು 08 ಜನರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದವರ ಕಡೆಯಿಂದ ರೂ.3620=00 ನಗದು ಹಣ ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದ ಜಪ್ತ ಮಾಡಿಕೊಂಡಿದ್ದು ಇದೆ ಅಂತಾ ಮುಂತಾಗಿ ಇದ್ದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
2]  ಗಂಗಾವತಿ  ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 148/2017 ಕಲಂ. 279, 304(ಎ) ಐ.ಪಿ.ಸಿ:.
ದಿನಾಂಕ: 17-06-2017 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಚಂದ್ರಶೇಖರ ತಂದೆ ಮಲ್ಲಪ್ಪ ಕೊಲ್ಕಾರ ಇವರ ಅಣ್ಣನಾದ ಸೋಮಶೇಖರ ಈತನು ಹೊಲ ಮನೆಗೆಲಸದ ಉಪಯೋಗಕ್ಕಾಗಿ ತಿರುಗಾಡಲು ಒಂದು ಮೋಟಾರ ಸೈಕಲ ಖರೀದಿ ಮಾಡಿಕೊಂಡು ಬರುವ ಸಲುವಾಗಿ ಹೊಂಡಾ ಡ್ರೀಮ್ ಮೋಟಾರ ಸೈಕಲ ನಂ: ಕೆ.ಎ-37/ಎಕ್-1896 ನೇದ್ದರಲ್ಲಿ ಬಳ್ಳಾರಿಗೆ ಬಂದಿದ್ದನು. ನಂತರ ಸಾಯಂಕಾಲ 4:30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿರುವಾಗ ನನ್ನ ಅಣ್ಣನ ಮೊಬೈಲ್ ನಂಬರದಿಂದ ಗಂಗಪ್ಪ ತಂದೆ ಮುದಿಯಪ್ಪ ಸಾ: ದೇವಿನಗರ ಎಂಬುವರು ಪೋನ್ ಮಾಡಿ “ ಈ ಮೊಬೈಲ ನಂಬರಿನ ವ್ಯಕ್ತಿಯು ರಸ್ತೆ ಅಪಘಾತದಿಂದ ಮೃತಪಟ್ಟಿರುತ್ತಾನೆ ” ಅಂತಾ ತಿಳಿಸಿದ್ದು ಕೂಡಲೇ ನಾನು ಮತ್ತು ನನ್ನ ಚಿಕ್ಕಪ್ಪನಾದ ಶಂಕರಪ್ಪ ತಂದೆ ಗುಂಡಪ್ಪ ಕೋಲ್ಕಾರ 52 ವರ್ಷ ಹಾಗೂ ಅಣ್ಣನಾದ ಮುದಿಯಪ್ಪ ತಂದೆ ಮಲ್ಲಪ್ಪ ಕೋಲ್ಕಾರ ವಯಸ್ಸು: 35 ವರ್ಷ ಎಲ್ಲರೂ ಕೂಡಿ ಸ್ಥಳಕ್ಕೆ ಹೋಗಿ ನನ್ನ ಅಣ್ಣನ ಮೃತ ದೇಹವನ್ನು ನೋಡಿ ಗುರುತಿಸಿದ್ದು ನಂತರ ಸ್ಥಳದಲ್ಲಿದ್ದ ಗಂಗಪ್ಪ ಇವರು ತಿಳಿಸಿದ್ದೇನಂದರೆ, “ ಸಂಜೆ 3:30 ಗಂಟೆಯ ಸುಮಾರಿಗೆ ನಿಮ್ಮ ಅಣ್ಣನು ಕಂಪ್ಲಿ ಕಡೆಯಿಂದ ತನ್ನ ಮೋಟಾರ ಸೈಕಲ ಮೇಲೆ ಗಂಗಾವತಿ ಕಡೆಗೆ ಬರುತ್ತಿರುವಾಗ ನಮ್ಮ ಮನೆ ಮುಂದೆ ಗಂಗಾವತಿ-ಕಂಪ್ಲಿ ಮುಖ್ಯ ರಸ್ತೆಯಲ್ಲಿ ಒಬ್ಬ ಲಾರಿ ಚಾಲಕನು ಗಂಗಾವತಿ ಕಡೆಯಿಂದ ಲಾರಿಯನ್ನು ಅತೀವೇಗವಾಗಿ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಿಮ್ಮ ಅಣ್ಣನಿಗೆ ಟಕ್ಕರು ಕೊಟ್ಟು ಅಪಘಾತ ಪಡಿಸಿದ್ದರಿಂದ ಆತನ ತೆಲೆಗೆ ತೀವ್ರ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ” ಅಂತಾ ತಿಳಿಸಿದನು. ನಂತರ ಸ್ಥಳದಲ್ಲಿದ್ದ ಅಪಘಾತ ಮಾಡಿದ ಲಾರಿ ನಂಬರ್ ನೋಡಲಾಗಿ ಟಿ.ಎನ್.-56/ಬಿ-8889 ಅಂತಾ ಇದ್ದು ಅದರ ಚಾಲಕನ ಹೆಸರು ವೆಂಕಟಾಸಲಂ ತಂದೆ ಅನ್ನೂಸ್ವಾಮಿ ಸಾ: ವಿ. ಮೆಟ್ಟೂರ ಪಾಳ್ಯಂ-ತಮಿಳನಾಡ ಅಂತಾ ತಿಳಿಸಿದನು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ.
3]  ಗಂಗಾವತಿ  ಗ್ರಾಮೀಣ ಪೊಲೀಸ್ ಗುನ್ನೆ ನಂ. 149/2017 ಕಲಂ. 34 ಕರ್ನಾಟಕ ಅಬಕಾರಿ ಕಾಯ್ದೆ:.
ದಿನಾಂಕ:-17-06-2017 ರಂದು ಮಧ್ಯಾಹ್ನ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ.  ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಜೀರಾಳ ಕಲ್ಗುಡಿ ಗ್ರಾಮದಲ್ಲಿ ಮಸೀದಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರ ಸಮೇತ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲಾಗಿ ಅಲ್ಲಿ ಮಸೀದಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಜನರು ಬಂದು ಅವನ ಹತ್ತಿರ ಇದ್ದ ಮಧ್ಯದ ಬಾಟಲಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದು ಕಂಡು ಬಂದಿತು. ಕೂಡಲೇ ಸದರಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲಾಗಿ ಸಾರ್ವಜನಿಕರು ಓಡಿ ಹೋಗಿದ್ದು, ಮಧ್ಯ ಮಾರಾಟ ಮಾಡುತ್ತಿದ್ದವನು ಸಿಕ್ಕಿಬಿದ್ದಿದ್ದು, ವಿಚಾರಿಸಲು ಅವನು ತನ್ನ ಹೆಸರು ಲಕ್ಕಣ್ಣ ತಂದೆ ಹೇಮೇಶಪ್ಪ, ವಯಸ್ಸು 30 ವರ್ಷ, ಜಾತಿ: ಈಡಿಗರು : ಮಧ್ಯ ಮಾರಾಟ ಸಾ: ಜೀರಾಳ ಕಲ್ಗುಡಿ. ತಾ: ಗಂಗಾವತಿ ಅಂತಾ ತಿಳಿಸಿದನು. ಅವನಿಗೆ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಯಾವುದಾದರೂ ಅಧಿಕೃತ ಪರವಾನಿಗೆ/ ಲೈಸೆನ್ಸ್ ಇದೆಯೇ ? ಅಂತಾ ವಿಚಾರಿಸಲು ಅವನು ತನ್ನ ಹತ್ತಿರ ಯಾವುದೇ ಅಧಿಕೃತ ಪರವಾನಿಗೆ ಇರುವುದಿಲ್ಲಾ. ತಾನು ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡನು. ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿದ್ದ ಅಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ ಮಧ್ಯದ ಬಾಟಲ್ಗಳನ್ನು ಪರಿಶೀಲಿಸಲಾಗಿ ಅದರಲ್ಲಿ 1] 180 ml. 8 PM Whisky ಒಟ್ಟು 11 ಟೆಟ್ರಾ ಪಾಕೀಟಗಳು ( ಪ್ರತಿಯೊಂದರ ಬೆಲೆ ರೂ. 68.56 ) ಒಟ್ಟು ಅಂದಾಜು ಕಿಮ್ಮತ್ತು  ರೂ. 754.16/- [2] 90 ml. ನ Original Choise Whisky  ಒಟ್ಟು 87 ಟೆಟ್ರಾ ಪಾಕೀಟ್ ಗಳು ( ಪ್ರತಿಯೊಂದರ ಬೆಲೆ ರೂ. 28.13) ಒಟ್ಟು ಅಂದಾಜು ಕಿಮ್ಮತ್ತು  ರೂ. 2,450.79/- ಹೀಗೆ ಒಟ್ಟು ರೂ. 3,204.95/- ಬೆಲೆ ಬಾಳುವ ಮಧ್ಯದ ಬಾಟಲಿಗಳು ಸಿಕ್ಕಿದ್ದು ಸದರಿ ಮಧ್ಯದ ಬಾಟಲಗಳು ಅಸಲಿಯೋ ಅಥವಾ ನಕಲಿಯೋ ಎಂಬ ಬಗ್ಗೆ ರಸಾಯನಿಕ ಪರೀಕ್ಷೆ ಮಾಡಿಸುವ ಕುರಿತು ಅದೇ ಪ್ಲಾಸ್ಟಿಕ್ ಚೀಲದಲ್ಲಿ ಎಲ್ಲಾ ಮಧ್ಯದ ಬಾಟಲಗಳನ್ನು ಹಾಕಿ ಚೀಲದ ಬಾಯಿಯನ್ನು ಕಟ್ಟಿ VB ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಲಾಯಿತು. ಲಕ್ಕಣ್ಣನ ಹತ್ತಿರ ಪರಿಶೀಲಿಸಲಾಗಿ ಮಧ್ಯ ಮಾರಾಟ ಮಾಡಿದ ಹಣ ರೂ. 225-00 ಗಳು ದೊರೆತವು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 83/2017 ಕಲಂ. 143, 147, 324, 323, 427, 448, 504, 506 ಸಹಿತ 149 ಐ.ಪಿ.ಸಿ:.

ದಿನಾಂಕ: 17-06-2017 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿ ಸಂಕೇತ ಓಜನಹಳ್ಳಿ ಸಾ: ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿನಾಂಕ: 17-06-2017 ರಂದು ಸಂಜೆ 06-00 ಗಂಟೆಗೆ ಕೊಪ್ಪಳದ ಬಿ.ಟಿ.ಪಾಟೀಲ ನಗರದ ನಮ್ಮ ಮನೆಯ ಹತ್ತಿರ ವಿರೇಶ ಮಹಾಂತಯ್ಯನಮಠ ರವರ ಶಾಲೆ ಇದ್ದು, ವಿರೇಶ ಇವರು ಆ ಶಾಲೆಯ ಶೌಚಾಲಯದ ನೀರನ್ನು ನಮ್ಮ ಮನೆಯ ಮುಂದಿನ ಡ್ರೈನೇಜಗೆ ಬಿಟ್ಟಿದ್ದರಿಂದ ಇಲ್ಲಿ ಯಾಕೆ ಬಿಟ್ಟಿರುತ್ತೀರಿ ಅಂತಾ ಕೇಳಿದ್ದಕ್ಕೆ ವಿರೇಶ ಈತನು ತನ್ನ ಸಂಗಡ ತನ್ನ ಸಹೋದರರೊಂದಿಗೆ 6-7 ಜನ ಕೂಡಿಕೊಂಡು ಬಂದು ನಮ್ಮ ಮನೆಯನ್ನು ಅಕ್ರಮ ಪ್ರವೇಶ ಮಾಡಿ ನನಗೆ ಕೈಯಿಂದ ಹೊಡಿಬಡಿ ಮಾಡಿ ಅವಾಚ್ಯವಾಗಿ ಬೈದಾಡಿದ್ದು ಅಲ್ಲದೆ ನಮ್ಮ ಮನೆಯ ಗೋಡೆ ಕಿಡಕಿ ಸರ್ಜಾ ಬಿಳುವಂತೆ ಗುದ್ದಲಿಯಿಂದ ಹೊಡೆದು ನನಗೆ ನಮ್ಮ ಮನೆಯವರಿಗೆ ಜೀವದ ದಮಕಿ ಹಾಕಿ ಹೋಗಿರುತ್ತಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008