Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, June 19, 2017

1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 60/2017 ಕಲಂ. 87 Karnataka Police Act.
ದಿನಾಂಕ: 18-06-2017 ರಂದು 1550 ಗಂಟೆಗೆ ಪಿ.ಎಸ್.. ಸಾಹೇಬರು ಹಾಗೂ ಸಿಬ್ಬಂದಿಯವರು ಇಂದು ಮಧ್ಯಾಹ್ನ 13-30 ಠಾಣೆಯಲ್ಲಿದ್ದಾಗ ಮಡಿಕೇರಿ ಸೀಮಾದ ಮಾಬುಸುಬಾನ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1] ಪ್ರಶಾಂತ ತಂದೆ ಮಲ್ಲಪ್ಪ ಸಜ್ಜನ 2] ಹುಸೇನಸಾಬ ತಂದೆ ದಾದೇಸಾಬ ಕಟಗಿ ಇಬ್ಬರು, ಸಾ: ಹನಮಸಾಗರ ಹಾಗೂ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ನೇದ್ದರಲ್ಲಿ ಹೊರಟು ಹನಮಸಾಗರ ಗಜೇಂದ್ರಗಡ ರಸ್ತೆಯಲ್ಲಿ ಹೊರಟು ರಾಮಣ್ಣ ಜಾಡರ ರವರ ಹೊಲದ ಹತ್ತಿರ 14-00 ಗಂಟೆಗೆ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಚಾಲಕನನ್ನು ಜೀಪ್ ಹತ್ತಿರ ಬಿಟ್ಟು 100 ಮೀಟರ್ ಕಾಲು ನಡೆಗೆಯಲ್ಲಿ ಹೋಗಿ ಅಲ್ಲಿ ಕಂಟಿ ಮರೆಯಾಗಿ ನಿಂತು ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 06 ಜನ ಆರೋಪಿತರು ಸಿಕ್ಕಿಬಿದ್ದಿದ್ದು, ಸದರಿ ಆಪಾದಿತರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 5,300/- ನಗದು, ಒಂದು ಬರ್ಕಾ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 84/2017 ಕಲಂ. 295(ಎ), 504 ಐ.ಪಿ.ಸಿ:.
ದಿನಾಂಕ: 18-06-2017 ರಂದು ರಾತ್ರಿ 07-00 ಗಂಟೆಗೆ ಫಿರ್ಯಾದಿ ಹನುಮೇಶ ಕಡೇಮನಿ ಸಾ: ಕೊಪ್ಪಳ. ಇವರು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ: 15-06-2017 ರಂದು ಮುಂಜಾನೆ 09-00 ಗಂಟೆಗೆ ನಾನು ನನ್ನ ಮೊಬೈಲ್ ನಲ್ಲಿ ಸಾಮಾಜಿಕ ಜಾಲ ತಾಣ ಫೇಸಬುಕ್ ನೋಡುತ್ತಿದ್ದಾಗ ಕೊಪ್ಪಳದ ಕಿಶೋರಿ ಬೂದನೂರು ಇವರು ತಮ್ಮ ಪೇಸ್ ಬುಕ್ಕಿನಲ್ಲಿ ರಾಜ್ಯಾದ್ಯಂತ ಬಾರಿ ಮಳೆ ಎಸ್.ಸಿ.ಎಸ್.ಟಿ. ಗಳಿಗೆ 02 ದಿನ ರಜೆ ಉಳಿದವರಿಗೆ 01 ದಿನ ರಜೆ ಸಿದ್ದರಾಮಯ್ಯ ಘೋಷಣೆ ಎಂದು ವಿಷಯವನ್ನು ಹರಿಬಿಟ್ಟಿದ್ದು, ನಾವು ವಾಪಸ್ ದಲಿತರೆಂದರೆ ಹಿಂದುಳಿದವರು ಶೋಷಿತರು ಮೀಸಲಾತಿ ಬಗ್ಗೆ ಗೇಲಿ ಮಾಡಿರುತ್ತಾರೆ ಅಂತಾ ಕಾಮೆಂಟ ಮಾಡಿದಾಗ ವಾಪಸ್ ಅವರು ದಲಿತರೆಂದರೆ ಎಲ್ಲಾ ಕಡೆ ಹೆದರಿಸಿಕೊಂಡು ಹಪ್ತಾ ವಸೂಲಿ ಮಾಡಿಕೊಂಡು ತಿರುಗಾಡುತ್ತೀರಿ ದಲಿತ ಅಧ್ಯಕ್ಷರು ಅಂತಾ ಬೆದರಿಸಲಿಕ್ಕೆ ಬರಬೇಡಾ ಅಂತ್ತೆಲ್ಲಾ ಕಾಮೆಂಟ್ ಮಾಡಿ ರೀತಿ ಅವಹೇಳನಕಾರಿ ಹೇಳಿಕೆಗಳನ್ನು ಪೇಸ್ ಬುಕ್ಕಿನಲ್ಲಿ ಹರಿಬಿಟ್ಟು ನಮ್ಮ ಸಮಾಜಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿದ್ದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
3]  ಗಂಗಾವತಿ  ಗ್ರಾಮೀಣ ಪೊಲೀಸ್ ಗುನ್ನೆ ನಂ. 151/2017 ಕಲಂ. 353, 323, 504, 506 ಐ.ಪಿ.ಸಿ:.

ದಿನಾಂಕ: 18-06-2017 ರಂದು ಮುಂಜಾನೆ 11:00 ಗಂಟೆಗೆ ಗಂಗಾವತಿ ನಗರ ಠಾಣೆ ಗುನ್ನೆ ನಂ: 67/2017 ನೇದ್ದು ಹದ್ದಿ ಪ್ರಯುಕ್ತ ಮಾನ್ಯ ಡಿ.ಎಸ್.ಪಿ. ಸಾಹೇಬರು ಮುಖಾಂತರ ವರ್ಗಾವಣೆಯಾಗಿ ಬಂದಿದ್ದು ಸದರಿ ದೂರನ್ನು ಶ್ರೀ ಸೋಮಶೇಖರ, ಹೆಡ್ ಕಾನ್ಸ್ ಟೇಬಲ್ ಸಂ. 199, ನಗರ ಪೊಲೀಸ್ ಠಾಣೆ, ಗಂಗಾವತಿ ರವರು ಒಂದು ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 19-04-2017 ರಂದು ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 2-00 ಗಂಟೆವರೆಗೆ ನಾನು ಠಾಣಾ ದಿನಚರಿ ಕರ್ತವ್ಯದಲ್ಲಿದ್ದೆನು. ನಾನು ಕರ್ತವ್ಯದಲ್ಲಿರುವಾಗ ಮಧ್ಯಾಹ್ನ 1-30 ಗಂಟೆಗೆ ಶ್ರೀ ತಿಮ್ಮನಾಯ್ಕ ಎಲ್. ಸಹಾಯಕ ನಿರ್ದೇಶಕರು, ತಾಲೂಕ ಪಂಚಾಯತಿ ಗಂಗಾವತಿ ಇವರು ಠಾಣೆಗೆ ಫೋನ್ ಮಾಡಿದ್ದು, ಅಲ್ಲದೇ ಅವರೇ ಖುದ್ದಾಗಿ ಬಂದು ಠಾಣೆಗೆ ಬಂದು ನನ್ನ ಮಗನಾದ ರಾಜವತ್ ಟಿ.ಕೆ. ಇವನು ಮನೆಯಲ್ಲಿ ತುಂಬಾ ಗಲಾಟೆ ಮಾಡುತ್ತಿದ್ದಾನೆ ನೀವು ಕೂಡಲೇ ಬಂದು ಬಿಡಿಸಬೇಕೆಂದು ತಿಳಿಸಿದರು. ನಾನು ಕೂಡಲೇ ಹಾಜರಿದ್ದ ನಮ್ಮ ಠಾಣೆಯ ಹೋಮ್ ಗಾರ್ಡ ರವರನ್ನು ಕರೆದುಕೊಂಡು ತಿಮ್ಮನಾಯ್ಕ ಇವರೊಂದಿಗೆ ಹೋಗಿದ್ದು, ಅವರ ಮನೆ ಹೊಸಳ್ಳಿ ಹತ್ತಿರದ ಭಾಗ್ಯನಗರದಲ್ಲಿ ಇದ್ದು, ಮನೆಯ ಮುಂದೆ ಅವರ ಮಗನು ಗಲಾಟೆ ಮಾಡುತ್ತಿದ್ದುದು ನಿಜವಿತ್ತು. ಕೂಡಲೇ ಗಲಾಟೆ ಮಾಡುತ್ತಿದ್ದವನನ್ನು ನಾನು ತಡೆಯಲು ಹೋಗಿದ್ದು ಆಗ ಅವನು ನನಗೆನೀನ್ಯಾವನಲೇ ನನ್ನ ಕೇಳಕ್ಕೆ, ನಮ್ಮಪ್ಪನೊಂದಿಗೆ ನಾನೇನಾದರೂ ಮಾಡಿಕೊಳ್ಳುತ್ತೇನೆ ಅಂತಾ ಅಂದಿದ್ದು, ಅವನಿಗೆ ತನ್ನ ತಂದೆಯೊಂದಿಗೆ ಗಲಾಟೆ ಮಾಡದಂತೆ ಬುದ್ಧಿವಾದ ಹೇಳಿದರೂ ಸಹಾ ಕೇಳದೇ ಕರ್ತವ್ಯದಲ್ಲಿದ್ದ ನನ್ನ ಮೇಲೆ ಏರಿ ಬಂದಿದ್ದು ಅಲ್ಲದೇ ಸಮವಸ್ತ್ರದಲ್ಲಿದ್ದ ನನ್ನ ಅಂಗಿಯ ಕಾಲರ್ ಹಿಡಿದು ಎಳೆದಾಡಿದ್ದು ಅಲ್ಲದೇ ಕೈಯಿಂದ ಕಪಾಳಕ್ಕೆ ಹೊಡೆದನು. ಅಲ್ಲದೇನೀನು ಪೊಲೀಸನಾದರೆ ನನಗೇನು, ಶೇಂಠಾ ನನ್ನ ತಂಟೆಗೆ ಬರಬೇಡ, ನಮ್ಮಪ್ಪಗ ಸಪೋರ್ಟ ಮಾಡಿದ್ರೆ ನಿನ್ನ ಕೊಲೆ ಮಾಡಿಬಿಡ್ತಿನಿ ಹುಷಾರ್ಅಂತಾ ಅಂದಿದ್ದು ಆಗ ಸಮಯ ಮಧ್ಯಾಹ್ನ 3-00 ಗಂಟೆಯಾಗಿರಬಹುದು. ನಂತರ ನನ್ನೊಂದಿಗೆ ಬಂದಿದ್ದ ಹೋಮ್ ಗಾರ್ಡಗಳಾದ ಮಾಳಪ್ಪ ಕರಡಿ ಹೆಚ್.ಜಿ. 729, ತಿಮ್ಮಣ್ಣ ನಾಯಕ ಹೆಚ್.ಜಿ. ನಂ. 404 ಮತ್ತು ತಿಮ್ಮನಾಯ್ಕ ಇವರೆಲ್ಲರೂ ಅವನನ್ನು ಹಿಡಿದುಕೊಂಡಿದ್ದು, ನಂತರ ವಿಷಯವನ್ನು ಪಿ.. ಸಾಹೇಬರಿಗೆ ತಿಳಿಸಿ ರಾಜವತ್ ಇವನನ್ನು ಕರೆದುಕೊಂಡು ಠಾಣೆಗೆ ಬಂದಿದ್ದು ಇರುತ್ತದೆ. ಕಾರಣ ನನಗೆ ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೇ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ನನ್ನ ಅಂಗಿಯ ಕಾಲರನ್ನು ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೊಡೆದು ಜೀವದ ಬೆದರಿಕೆ ಹಾಕಿದ ರಾಜವತ್ ಟಿ.ಕೆ. ತಂದೆ ತಿಮ್ಮನಾಯ್ಕ ಸಾ: ಭಾಗ್ಯನಗರ, ಹೊಸಳ್ಳಿ, ತಾ: ಗಂಗಾವತಿ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದು ಅದರ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008