Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, June 25, 2017

1]  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 120/2017 ಕಲಂ. 87 Karnataka Police Act.
ದಿನಾಂಕ 24-06-2017 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಪನ್ನಾಪೂರ ಗ್ರಾಮದ ಎ.ಪಿ.ಎಂ.ಸಿ. ಗೋದಾಮಿನ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಶ್ರೀ ಮೊನಯ್ಯ ಎ.ಎಸ್.ಐ. ಹಾಗೂ  ಸಿಬ್ಬಂದಿಯವರು ಹಾಗೂ ಪಂಚರ ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ 8 ಆರೋಪಿ ಸಿಕ್ಕಿಬಿದ್ದಿದ್ದು ಸದರ್ ಸಿಕ್ಕಿಬಿದ್ದಿರುವ ಆರೋಪಿತರ ವಶದಿಂದ ರೂ. 6400/- ಹಾಗೂ  ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
2]  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 143/2017 ಕಲಂ. 87 Karnataka Police Act.
ದಿನಾಂಕ 24-06-2017 ರಂದು 4-45 ಪಿ.ಎಂ.ಕ್ಕೆ ಆರೋಪಿತರು ಬೂದಗುಂಪಾ (ಅಮರಾಪೂರ) ಗ್ರಾಮದ ಅಮರೇಶ್ವರ ಗುಡಿಯ ಹತ್ತಿರ ಗುಡ್ಡದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಜಯಪ್ರಕಾಶ ಪಿ.ಎಸ್.ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಆ ಕಾಲಕ್ಕೆ 9 ಆರೋಪಿತರು ಸಿಕ್ಕಿದ್ದು, ಸದರಿಯವರಿಂದ 52 ಇಸ್ಪೇಟ ಎಲೆಗಳು, 1 ಹಳೆ ಬರಕಾ ಹಾಗೂ 30350-00 ರೂ. ನಗದು ಹಣ ಮತ್ತು ಸಿಕ್ಕಿರುತ್ತವೆ ಎಂದು ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ. 
3]  ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 79/2017 ಕಲಂ. 87 Karnataka Police Act.
ದಿನಾಂಕ: 24-06-2017 ರಂದು ಸಾಯಂಕಾಲ 5-00 ಗಂಟೆಗೆ ಚಿಕ್ಕಮ್ಯಾಗೇರಿ ಗ್ರಾಮದ ಹುಚ್ಚಿರೇಶ್ವರ ಮಠ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 8 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 3,110=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು ಅಂ.ಕಿ. ಇಲ್ಲ ಮತ್ತು ಒಂದು ಹಳೆಯ ಪ್ಲಾಸ್ಟೀಕ ಬರ್ಕಾ ಅಂ.ಕಿ. ಇಲ್ಲ ಇವುಗಳು ಸಿಕ್ಕಿದ್ದು ಇರುತ್ತದೆ.  ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
4] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 73/2017 ಕಲಂ. 78(3) Karnataka Police Act.

ದಿನಾಂಕ: 23-06-2017 ರಂದು ರಾತ್ರಿ 7-45 ಗಂಟೆ ಸುಮಾರಿಗೆ ಕುಕನೂರು ಪಟ್ಟಣದ ಅಂಬೇಡ್ಕರ್ ಸರ್ಕಲ್ ಹತ್ತಿರ ಸಿಂಡಿಕೇಟ್ ಬ್ಯಾಂಕ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಾರ್ವಜನಿಕ ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಕರೆದು ಹಚ್ಚೋರು ಹಚ್ಚೀರಿ ನಸೀಬದಾಟ ನಂಬರ್ ಬಿದ್ದರೆ 1 ರೂ.ಗೆ 80 ರೂ.ಕೊಡುತ್ತೇವೆ ಅಂತಾ ಕೂಗಿ ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು, ಓ.ಸಿ. ಮಟಕಾ ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿಯಲು ಓ.ಸಿ. ಮಟಕಾ ನಂಬರಗಳನ್ನು ಬರೆಯಿಸಲು ಬಂದಿದ್ದ ಇನ್ನೂಳಿದ 8 ಆರೋಪಿಗಳನ್ನು ತೆಗೆದುಕೊಂಡಿದ್ದು, ದಾಳಿ ಕಾಲಕ್ಕೆ ಮಟಕಾ ಜೂಜಾಟದ ನಗದು ಹಣ 13,490/-ರೂ., ಹಾಗೂ ಜೂಜಾಟದ ಸಾಮಾಗ್ರಿಗಳಾದ ಓ.ಸಿ. ಮಟಕಾ ನಂಬರ್ ಬರೆದ 01 ಚೀಟಿ, ಓ.ಸಿ. ಮಟಕಾ ಚಾರ್ಟ ಅಂ.ಕಿ, ಇಲ್ಲಾ, ಒಂದು ಬಾಲ್ ಪೆನ್ ಅಂ.ಕಿ. ಇಲ್ಲಾ. ಇವುಗಳೊಂದಿಗೆ ಸಿಕ್ಕಿಬಿದ್ದಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.

0 comments:

 
Will Smith Visitors
Since 01/02/2008