Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, June 7, 2017

1]  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ 06-06-2017 ರಂದು ಪಿರ್ಯಾದುದಾರರು ಮತ್ತು ಮೃತ ಮಣಿ ವಣ್ಣನ್ ಇಬ್ಬರು ಗುಜರಾತದಿಂದ ಟೈಲ್ಸ್ ಲೋಡ ಮಾಡಿಕೊಂಡು ತಮಿಳುನಾಡಿನ ಹೋಸೂರಿಗೆ ಹೋಗುತ್ತಿರುವಾಗ ಕುಷ್ಟಗಿ-ಹೊಸಪೇಟೆ ಎನ್,ಹೆಚ್ 50 ರಸ್ತೆಯ ಮೇಲೆ ಕೆರೆಹಳ್ಳಿ ಹತ್ತಿರ ಆರ್.ಟಿ.ಓ.ಚೆಕ್ ಪಾಯಿಂಟ್ ಹತ್ತಿರ ಪಿರ್ಯಾದುಆರರು ಲಾರಿನಂ ಟಿ.ಎನ್.52/ಹೆಚ್.9524 ನೇದ್ದನ್ನು ಸೈಡಿನಲ್ಲಿ ನಿಲ್ಲಿಸಿ ಟಪಾಲನ್ನು ಆರ್.ಟಿ.ಓ.ಗೆ ತೋರಿಸಿಕೊಂಡು ಬರುತ್ತಿರುವಾಗ ಕುಷ್ಟಗಿ ಕಡೆಯಿಂದ ಲಾರಿ ನಂ.ಹೆಚ್,ಆರ್.55/ಕೆ-4318 ನೇದ್ದರ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ಲಾರಿಯನ್ನು ಚಲಾಯಿಸಿಕೊಂಡು ಬಂದು ಮಣಿ ವಣ್ಣನ್ ಇತನಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿ ಲಾರಿ ಬಿಟ್ಟು ಓಡಿ ಹೋಗಿದ್ದು ಸದರ ಅಪಗಾತದಲ್ಲಿ ಮಣಿವನ್ಣನ್ ಇತನಿಗೆ ಗಾಯ ಪೆಟ್ಟುಗಳಾಗಿದ್ದು ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು, ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟಿರುತ್ತಾನೆ.
2] ಹನುಮಸಾರ ಪೊಲೀಸ್ ಠಾಣೆ ಗುನ್ನೆ ನಂ. 49/2017 ಕಲಂ. 379 ಐ.ಪಿ.ಸಿ:.
ದಿನಾಂಕ: 06-06-2017 ರಂದು ಮಧ್ಯಾಹ್ನ 13-30 ಹಾಜರಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಪಿ.ಎಸ್.ಐ ರವರು ದಿನಾಂಕ: 06-06-2017 ರಂದು ಬೆಳಿಗ್ಗೆ 10-20 ಗಂಟೆಗೆ ಠಾಣೆಯಲ್ಲಿದ್ದಾಗ ಶ್ಯಾಡಲಗೇರಿ ಕಡೆಯಿಂದ ಹನಮನಾಳ ಕಡೆಗೆ ಟ್ರ್ಯಾಕ್ಟರದಲ್ಲಿ ಉಸುಕು ತುಂಬಿಕೊಂಡು ಸಾಗಾಣಿಕ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರವರು ಇಬ್ಬರು ಪಂಚರ 1] ಮಲ್ಲಪ್ಪ ಗೊಲ್ಲರ ಸಾ: ಮನ್ನೇರಾಳ 2] ಹನಮಂತ ಗೊಲ್ಲರ ಸಾ: ಮನ್ನೇರಾಳ ಸಿಬ್ಬಂದಿಯಾದ ಹೆಚ್.ಸಿ-83, ಪಿ.ಸಿ-126, 208 ರವರೊಂದಿಗೆ ಸರ್ಕಾರಿ ಜೀಪನಲ್ಲಿ ಠಾಣೆಯಿಂದ ಬೆಳಿಗ್ಗೆ 10-40 ಗಂಟೆಗೆ ಹೊರಟು ಬಾದಿಮನಾಳ, ಹನಮನಾಳ ದಾಟಿ ರಂಗಾಪೂರ ಕ್ರಾಸ್ ಹತ್ತಿರ ಹೊರಟಾಗ ಶ್ಯಾಡಲಗೇರಿ ಕಡೆಯಿಂದ ಒಬ್ಬ ಟ್ರ್ಯಾಕ್ಟರ್ ಚಾಲಕನು ಅದರಲ್ಲಿ ಕಳ್ಳತನದಿಂದ ಉಸುಕು ತುಂಬಿಕೊಂಡು ಮಾರಾಟ ಮಾಡಲು ಹನಮನಾಳ ಕಡೆಗೆ ಹೊರಟಿದ್ದು, ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋಗಿದ್ದು, ಆತನ ಹೆಸರು ವಿಳಾಸವನ್ನು ಅಲ್ಲೇ ಇದ್ದ ಡಾಬಾದ ಮಾಲೀಕನಾದ ಲಾಲಸಾಬ ನದಾಫ್ ಸಾ: ಶ್ಯಾಡಲಗೇರಿ, ಹಾ/ವ: ರಂಗಾಪೂರ ಕ್ರಾಸ್ ಈತನನ್ನು ವಿಚಾರಿಸಲು ಆತನ ಹೆಸರು ಸುರೇಶ ತಂದೆ ನರಸಪ್ಪ ಬನ್ನಟ್ಟಿ ಸಾ: ಶ್ಯಾಡಲಗೇರಿ ಅಂತಾ ಹೇಳಿದ್ದು, ಸ್ಥಳದಲ್ಲಿದ್ದ ಟ್ರ್ಯಾಕ್ಟರನ್ನು ಪಿ.ಎಸ್.ಐ. ಹಾಗೂ ಪಂಚರು ಪರಿಶೀಲಿಸಲಾಗಿ ಸೋನಾಲಿಕ ಕಂಪನಿ ಟ್ಯ್ಯಾಕ್ರರ್ ಬಿಡಿ ನಂ: JZYSUS12237S3 ಅಂ:ಕಿ: 2 ಲಕ್ಷ ಆಗುತಿದ್ದು, ಸದರಿ ಟ್ರ್ಯಾಕ್ಟರ್ ಮಾಲೀಕ/ಚಾಲಕ ಸುರೇಶ ಬನ್ನಟ್ಟಿ ಈತನು ಎಲ್ಲಿಯೋ ಉಸುಕನ್ನು ಅಕ್ರಮವಾಗಿ ಕಳ್ಳತನದಿಂದ ಉಸುಕು ಸಾಗಾಣಿಕೆ ಮಾಡಿದ್ದು, ಸದರ ಉಸುಕಿನ ಅಂ:ಕಿ: 1600-00 ರೂ/- ಆಗಬಹುದು. ಸದರಿ ಆಪಾದಿತನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 134/2017 ಕಲಂ. 379 ಐ.ಪಿ.ಸಿ ಮತ್ತು 3, 36, 42 ಸಹಿತ 44 ಕೆ.ಎಂ.ಎಂ.ಸಿ. ರೂಲ್ 1994 ಮತ್ತು 4, 4(1),4(ಎ) ಸಹಿತ 21(4), 21(4)(ಎ) ಎಂ.ಎಂ.ಆರ್.ಡಿ. 1957:.
ದಿನಾಂಕ:- 06-06-2017 ರಂದು ಬೆಳಿಗ್ಗೆ ನಾನು ಠಾಣೆಯಲ್ಲಿರುವಾಗ ಠಾಣೆ ವ್ಯಾಪ್ತಿಯಲ್ಲಿ ಬರುವ ಮರಳಿ ಗ್ರಾಮ ಸೀಮಾದ ತಾಯಮ್ಮ ಗುಡಿಯ ಹತ್ತಿರದ ಹಳ್ಳದಲ್ಲಿ ಅನಧಿಕೃತವಾಗಿ ಜೆ.ಸಿ.ಬಿ ಮೂಲಕ ಟ್ರಾಕ್ಟರ್/ಟ್ರಾಲಿಯಲ್ಲಿ ಮರಳು (ಉಸುಗು) ನ್ನು ತುಂಬಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಶ್ರೀ ಪ್ರಕಾಶ ಮಾಳಿ ಪಿ.ಎಸ್.. ರವರಿಗೆ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಬೆಳಿಗ್ಗೆ 09:30 ಗಂಟೆಗೆ ದಾಳಿ ಮಾಡಲಾಗಿ ಜೆ.ಸಿ.ಬಿ ಮೂಲಕ ಟ್ರಾಕ್ಟರ್ ಟ್ರಾಲಿಯಲ್ಲಿ ಮರಳು (ಉಸುಗು)ನ್ನು ತುಂಬಲಾಗುತ್ತಿದ್ದು, ಟ್ರಾಕ್ಟರ್ ನಂ: ಕೆ.-37/ ಟಿ.-9745, ಟ್ರಾಲಿ ನಂ: ಕೆ.-37/ ಟಿ..3390 ನೇದ್ದರ ಚಾಲಕ ಓಡಿ ಹೋಗಿದ್ದು, ಜೆ.ಸಿ.ಬಿ. 3ಡಿಎಕ್ಸ್ ನಂ: ಕೆ.-28/ ಎನ್-8219 ನೇದ್ದರ ಚಾಲಕ ರಮೇಶ ತಂದೆ ಶಿವಲಾಲ್ ರಾಠೋಡ್, 23 ವರ್ಷ, ಜಾತಿ: ಲಂಬಾಣಿ ಸಾ: ರಾಮನ್ ತಾಂಡಾ, ಪೋಸ್ಟ್: ಜಿಗಜಣಗಿ ತಾ: ಇಂಡಿ ಜಿ: ವಿಜಯಪುರ ಎಂಬಾತನು ಸಿಕ್ಕ ಬಿದ್ದಿದ್ದು, ಸದರಿ ಇಬ್ಬರು ಯಾವುದೇ ಸರಕಾರಿ ಇಲಾಖೆಯಿಂದ ಅಧಿಕೃತವಾಗಿ ಪರವಾನಿಗೆಯನ್ನು ಪಡೆದುಕೊಳ್ಳದೇ, ಯಾವುದೆ ಅಧಿಕೃತ ದಾಖಲೆ ಇಲ್ಲದೇ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡಲು ಜೆ.ಸಿ.ಬಿ.ಯಿಂದ ಟ್ರಾಕ್ಟರ್/ಟ್ರಾಲಿಯಲ್ಲಿ ತುಂಬುತ್ತಿದ್ದು, ಕಾರಣ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ."  ಅಂತಾ ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 66/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ:
ದಿನಾಂಕ : 06-06-2017 ರಂದು ಮದ್ಯಾಹ್ನ 3-45 ಗಂಟೆ ಸುಮಾರಿಗೆ ಆರೋಪಿತನು ಹಿರೇಅರಳಿಹಳ್ಳಿ ಗ್ರಾಮದ ಕುಷ್ಟಗಿ- ಕೊಪ್ಪಳ ರಸ್ತೆಯ ಮೇಲೆ  ಮಾನಪ್ಪ ದೇವಣದಾರ ಇವರ ನಿರ್ಮಾಣ ಹಂತದಲ್ಲಿರುವ ಮನೆ ಮುಂದೆ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಮಧ್ಯಪಾನ  ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಯಲಬುರ್ಗಾರವರು  ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಲಾಗಿ ಸದರಿ ಆರೋಪಿತನ ಹತ್ತಿರ 1] 90 ML ನ HAYWARDS CHEERS WHISKY - ಒಟ್ಟು 90 (ತೊಂಬತ್ತು) ಟೇಟ್ರಾ ಪಾಕೀಟಗಳು. ಪ್ರತಿಯೊಂದಕ್ಕೆ -28.13 ರೂಗಳಂತೆ ಒಟ್ಟು 2531.7 ರೂ.  2] 180 ML ನ  OLD TAVERN  WHISKY - ಒಟ್ಟು 45 (ನಲವತ್ತೈದು) ಟೇಟ್ರಾ ಪಾಕೀಟಗಳು. ಪ್ರತಿಯೊಂದಕ್ಕೆ 68.56 ರೂಗಳಂತೆ ಒಟ್ಟು 3085.2 ರೂ. 3] ಒಂದು ಪ್ಲಾಸ್ಟೀಕ ಗೊಬ್ಬರ ಚೀಲ ಅ.ಕಿ.ಇಲ್ಲ  4] 20 ಖಾಲಿ ಪ್ಲಾಸ್ಟೀಕ ಗ್ಲಾಸು ಅ.ಕಿ 5/- ರೂ 5] ಮದ್ಯ ಮಾರಾಟದ ನಗದು ಹಣ : 520 ರೂಗಳು. ಹೀಗೆ ಎಲ್ಲಾ ಸೇರಿ ಒಟ್ಟು ಅ.ಕಿ 6141/- ರೂ ಸಿಕ್ಕಿದ್ದು ಇರುತ್ತದೆ, ಅಂತಾ ಇದ್ದ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂ 66/2017 ಕಲಂ 32, 34 ಕೆ.ಇ.ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 103/2017 ಕಲಂ. 379 ಐ.ಪಿ.ಸಿ:.

ದಿನಾಂಕ 06-06-2017 ರಂದು ಮಧ್ಯಾಹ್ನ 12-30  ಪಿ ಎಮ್ ಗಂಟೆಗೆ ಇಸಾಕ್ ತಂದೆ ಅಬ್ದುಲ್ ಗಪೂರ ವಯಾ: 32 ವರ್ಷ ಜಾ: ಮುಸ್ಲಿಂ ಉ: ಮೇಷನ್ ಕೆಲಸ ಸಾ: ವಾರ್ಡ ನಂ 28 ಹಿರೇಜಂತಕಲ್ ಗಂಗಾವತಿ. ರವರು ಠಾಣೆಗೆ ಬಂದು ತಮ್ಮದೊಂದು ಗಣಕಿಕೃತ ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿ: 22-05-2017  ರಂದು ರಾತ್ರಿ 9-00  ಗಂಟೆಯಿಂದ 11-30 ಗಂಟೆಯ ಮಧ್ಯದ ಅವಧಿಯಲ್ಲಿ   ಯಾರೋ ಕಳ್ಳರು   ಗಂಗಾವತಿ ನಗರದ ಶಿವೇ ಟಾಕಿಸಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ  ಪಿರ್ಯಾಧಿದಾರರ ಹಿರೋ ಕಂಪನಿಯ ಸ್ಪ್ಲೆಂಡರ್ ಪ್ರೋ ಸೈಕಲ್ ಸೈಕಲ್ ಮೋಟಾರ ಟೆಂಪ್ರರಿ ಪಾಸಿಂಗ್ ನಂ ಕೆ,ಎ 15/TZ002046 ಚಾಸ್ಸಿ ನಂ MBLHA10A3EHF71861 ಇಂಜಿನ್ ನಂ  HA10ELEHF07386 ಇದ್ದು ಸಿಲ್ವರ್   ಬಣ್ಣದ್ದು ಅಂ.ಕಿ 35,000-00. ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಗಣಕಿಕೃತ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008