1] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 90/2017 ಕಲಂ. 143, 147, 148, 341, 323, 324,
326, 504 ಸಹಿತ 149 ಐ.ಪಿ.ಸಿ ಹಾಗೂ ಕಲಂ. 3(1)(10) 3(2), (5) /ಎಸ್.ಸಿ/ಎಸ್.ಟಿ ಪಿ.ಎ. ಕಾಯ್ದೆ.
ದಿನಾಂಕ: 25-07-2017 ರಂದು ಮಧ್ಯಾನ್ಹ 1 ಗಂಟೆಯ ಸುಮಾರಿಗೆ ಪಿರ್ಯಾದಿ ಹಾಗೂ ಗಾಯಾಳು ಆನಂದ
ವಡ್ಡರ ಇವರು ಬೈರನಾಯಕನಹಳ್ಳಿಯಲ್ಲಿ ``ನಮ್ಮ ಹೊಲ ನಮ್ಮ ದಾರಿ'' ಎಂಬ ಯೋಜನೆಯ ಅಡಿಯಲ್ಲಿ ರಸ್ತೆ ಕಾಮಗಾರಿ
ಕೆಲಸಕ್ಕೆ ಕುದ್ರಿಮೋತಿ ಸೀಮಾದಿಂದ ಮರಮನ್ನು ಟ್ರಾಕ್ಟರ ಇಂಜನ್ ನಂ ಕೆ.ಎ-37/ಟಿಎ-7982 ಹಾಗೂ ಟ್ರಾಲಿ
ನಂ: ಕೆ.ಎ-37/ಟಿ.ಎ-8033 ನೇದ್ದರಲ್ಲಿ ತೆಗೆದುಕೊಂಡು ಬರುವ ಕುರಿತು ನೆಲಜೇರಿ ಸೀಮಾದಲ್ಲಿ ಬರುವ
ಬಸಪ್ಪ ದನದಮನಿ ಇವರ ಹೊಲದ ಹತ್ತಿರ ಬಂಡಿ ರಸ್ತೆಯ ಮೇಲೆ ಟ್ರ್ಯಾಕ್ಟರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ
ಆರೋಪಿತರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ಟ್ರ್ಯಾಕ್ಟರನ್ನು ತಡೆದು ನಿಲ್ಲಿಸಿ ''ನಿಮಗೆ ಇಲ್ಲಿ
ರಸ್ತೆ ಇರುವದಿಲ್ಲ ಯಾಕೇ ನಮ್ಮ ಹೊಲದ ಹತ್ತಿರ ಹೊಡೆಯುತ್ತಿರಿ ವಡ್ಡ ಸೂಳ್ಳೆ ಮಕ್ಕಳೆ'' ಅಂತಾ ಎಲ್ಲರೂ
ಅವಾಚ್ಯ ಶಬ್ದಗಳಿಂದ ಬೈದಾಡಿ ಜಾತಿ ನಿಂದನೆ ಮಾಡಿ ನಂತರ ಎಲ್ಲರೂ ಅವರಿಬ್ಬರನ್ನು ಟ್ರಾಕ್ಟರದಿಂದ ಕೆಳಗೆ
ಇಳಿಸಿ ಆರೋಪಿ ನಂ: 1 ಈತನು ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆ ಬಡಿಗೆಯನ್ನು ತೆಗೆದುಕೊಂಡು ಆನಂದ
ವಡ್ಡರ ಇತನ ತಲೆಯ ಮೇಲೆ ಹೊಡೆದಿದ್ದರಿಂದ ಭಾರಿ ಸ್ವರೂಪದ ಒಳಪೆಟ್ಟಾಗಿ ಬಾವು ಬಂದಿದ್ದು ಮತ್ತು ಅವನ
ಎಡಗಣ್ಣಿನ ಹುಬ್ಬಿನ ಹತ್ತಿರ, ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು ಆರೋಪಿ ನಂ: 3 ರಿಂದ 5 ಇವರೆಲ್ಲರೂ
ಆನಂದ ಇತನಿಗೆ ಕೈಗಳಿಂದ ಹೊಡೆ ಬಡೆ ಮಾಡಿ ಕಾಲಿನಿಂದ ಮನಬಂದಂತೆ ಒದ್ದಿದ್ದು ಇರುತ್ತದೆ. ಆರೋಪಿ ನಂ:
2 ಈತನು ಒಂದು ಕಟ್ಟಿಗೆ ಬಡಿಗೆಯನ್ನು ತೆಗೆದುಕೊಂಡು ಪಿರ್ಯಾದಿಯ ತಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದ್ದು,
ಆರೋಪಿ ನಂ: 6 ಮತ್ತು 7 ನೇದ್ದವರು ಪಿರ್ಯಾದಿದಾರನಿಗೆ ಕೈಗಳಿಂದ ಮೈಕೈಗೆ ಹೊಡೆ ಬಡೆ ಮಾಡಿ ಕಾಲಿನಿಂದ
ಮನಬಂದಂತೆ ಒದ್ದಿದ್ದು ಇರುತ್ತದೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ. 279, 337, 338 ಐ.ಪಿ.ಸಿ:
ದಿನಾಂಕ: 25/07/2017 ರಂದು ಬೆಳಿಗ್ಗೆ 8:00 ಗಂಟೆಗೆ
ಫಿರ್ಯಾಧಿ ಮತ್ತು ಚರಣಕುಮಾರ ತಂದೆ ರಂಗನಾಥ ಸಾ:ಬಳ್ಳಾರಿ ಇಬ್ಬರೂ ಕೂಡಿ ಫಿರ್ಯಾಧಿ ಮೊಟರ್ ಸೈಕಲ್
ನಂ: ಕೆ.ಎ-37/ಇ.ಸಿ-0820 ನೇದ್ದನ್ನು ತಗೆದುಕೊಂಡು ಫಿರ್ಯಾಧಿರಾನು ನಡೆಸುತ್ತಾ ಗಂಗಾವತಿ
ಯಿಂದ ಹೊರಟಿದ್ದು. ಹಿರೇಮಾದಿನಾಳ ಗ್ರಾಮದ ದಾಟಿ ಮುಸಲಾಪೂರ ಕಡೆ ನಿಧಾವಾಗಿ ಹೋಗುತ್ತಿದ್ದಾಗ ಹಿರೇಮಾದಿನಾಳ-ಚಿಕ್ಕಮಾದಿನಾಳ
ರಸ್ತಯ ಮೇಲೆ ತಿರುವಿನಲ್ಲಿ ಮುಸಲಾಪೂರ ಕಡೆಯಿಂದ ಒಬ್ಬ ಮೋಟರ್ ಸೈಕಲ್ ಸವಾರನು ತನ್ನ ಮೋಟರ್
ಸೈಕಲನ್ನು ಅತಿಜೋರಾಗಿ ಹಾಗೂ ಅಲಕ್ಷತನದಿಂದ ನಡೆಸುಕೊಂಡು ಬಂದು ಫಿರ್ಯಾಧಿಯ ಮೊಟರ್ ಸೈಕಲ್
ಗೆ ಬೆಳಿಗ್ಗೆ ಸುಮಾರು 9:00 ಸುಮಾರಿಗೆ ಜೋರಾಗಿ ಟಕ್ಕರ್ ಕೊಟ್ಟು ಅಪಘಾತ ಪಡಿಸಿದ್ದು ಇದರಿಂದ
ಎರಡೂ ಮೋಟರ್ ಸೈಕಲ್ ನವರು ನೆಲಕ್ಕೆ ಬಿದ್ದಿದೇವು ಇದರಿಂದ ಫಿರ್ಯಾಧಿಯ ನಡಕ್ಕೆ ಗದ್ದಕ್ಕೆ ತಲೆಗೆ
ಹಾಗೂ ಎಡಗೈಗೆ ಒಳಪೆಟ್ಟು ಉಂಟಾಗಿದ್ದು ಇಂದೆ ಕುಳಿತ ಚರಣಕುಮಾರನಿಗೆ ಎಡಗೈ ಮುರಿದು ತಲೆ ಹೊಡೆದು ಭಾರಿ
ರಕ್ತಗಾಯವಾಗಿದ್ದು. ಅಲ್ಲದೆ ಬಾಯಿಗೆ ಗಾಯವಾಗಿದ್ದು , ಇರುತ್ತದೆ ನಂತರ ಟಕ್ಕರ್ ಕೊಟ್ಟ ಮೋಟರ್ ಸೈಕಲ್
ನೋಡಲು ಅದರ ನಂಬರ್ ಕೆ.ಎ-36/ಯು.3076 ಅಂತಾ ಇದ್ದು ಅದನ್ನು ನಡೆಸುತ್ತಿದ್ದವನ ಹೆಸರು ಹನುಮೇಶ
ತಂದೆ ದುರುಗಪ್ಪ ನಾಯಕ ವಯಾ:25 ವರ್ಷ ಸಾ: ಒಬಳಬಂಡಿ ಅಂತಲು ಹಾಗೂ ಅವನ ಹಿಂದೆ ಕುಳಿತವನ ಹೆಸರು ಮುಕ್ಕಾಲಗೌಡ
ತಂದೆ ರಾಮನಗೌಡ ಸಾ: ಹಿರೇಮಾದಿನಾಳ ಅಂತಾ ತಿಳಿದಿದ್ದು ಇವರಿಬ್ಬರಿಗೂ ಸಹ ಸಾಧ ಸ್ವರೂಪದ ಗಾಯಗಳಾಗಿದ್ದು
ಇರುತ್ತದೆ. ಪ್ರಕರಣದಾಖಲಿಸಿಕೊಂಡು ತನಿಖೆಯನ್ನು ಕೈಗೊಂದಿದ್ದು ಇರುತ್ತದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 102/2017 ಕಲಂ. 279, 338 ಐ.ಪಿ.ಸಿ ಹಾಗೂ 187 ಐ.ಎಂ.ವಿ.
ಕಾಯ್ದೆ:
ದಿನಾಂಕ: 25-07-2017 ರಂದು ಮುಂಜಾನೆ 08 ಗಂಟೆ ಸುಮಾರಿಗೆ
ಆರೋಪಿ ನಂ. 02 ನೇದವನು ಟ್ರ್ಯಾಕ್ಟರ್ ನಂ. ಕೆಎ-37/ಟಿ-8893 ನೇದ್ದನ್ನು ತಳಕಲ್ ಕಡೆಯಿಂದ ತಳಬಾಳ
ಕಡೆಗೆ ಅತಿಜೋರು & ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ, ಎನ್.ಹೆಚ್-63 ರಸ್ತೆಯನ್ನು ದಾಟುತ್ತಿರುವಾಗ
ಅದೇಸಮಯಕ್ಕೆ ಆರೋಪಿ ನಂ. 01 ನೇದವನು ಲಾರಿ ನಂ. ಕೆಎ-51/ಬಿ-7681 ನೇದ್ದನ್ನು ಗದಗ ಕಡೆಯಿಂದ ಕೊಪ್ಪಳ
ಕಡೆಗೆ ಅತಿಜೋರು & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟ್ರ್ಯಾಕ್ಟರಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿ
ಎನ್.ಹೆಚ್-63 ರಸ್ತೆಯ ಪಕ್ಕದಲ್ಲಿದ್ದ ಪಿರ್ಯಾದಿದಾರನ ಎಗರೈಸ್ ಹೊಟೇಲ್ ಗೆ ಗುದ್ದಿಕೊಂಡು ಹೋಗಿ ಪಲ್ಟಿಯಾಗಿ
ಬಿದ್ದಿದ್ದು ಇರುತ್ತದೆ. ಇದರಿಂದಾಗಿ ಆರೋಪಿ ನಂ. 02 ನೇದವನ ತಲೆಯ ಹಿಂಭಾಗ ರಕ್ತಗಾಯ, ಎಡಪಕ್ಕಡಿಗೆ
ತೆರಚಿ ಭಾರಿ ಒಳಪೆಟ್ಟಾಗಿರುತ್ತದೆ. ಆರೋಪಿ ನಂ. 01 ನೇದವ ಹಾಗೂ ಲಾರಿಯ ಕ್ಲೀನರ್ ಓಡಿ ಹೋಗಿರುತ್ತಾರೆ.
ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
0 comments:
Post a Comment