1] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 96/2017 ಕಲಂ. 279, 337,
338 ಐ.ಪಿ.ಸಿ:.
ದಿನಾಂಕ 10-08-2017 ರಂದು ಬೆಳಗಿನ ಜಾವ 05:00 ಗಂಟೆಯ ಸುಮಾರಿಗೆ ಫಿರ್ಯಾದಿದಾರನು
ತನ್ನ ಲಾರಿಯನ್ನು ಎಮ್.ಹೆಚ್.-12/ಎಫ್.ಡಿ-777 ನೇದ್ದನ್ನು ಬೆಂಗಳೂರಿನಿಂದ ಕೆಮಿಕಲ್ ಪೌಡರ್ ತುಂಬಿಕೊಂಡು
ಹೊಸಪೇಟೆ ಮಾರ್ಗವಾಗಿ ಪೂನಾಕ್ಕೆ ಉಪ್ಪಲದಿನ್ನಿ ಕ್ರಾಸ್ ಹತ್ತಿರ ಚಲಾಯಿಸಿಕೊಂಡು ಹೋಗುವಾಗ ರೋಡ್ ಹಂಪ್ಸ್
ಇರುವುದನ್ನು ಗಮನಿಸಿ ತನ್ನ ಲಾರಿಗೆ ಇಂಡಿಕೇಟರ್ ಹಾಕಿ ಕೈ ಸನ್ನೆಯನ್ನು ಮಾಡುತ್ತಾ ನಿಧಾನವಾಗಿ ಲಾರಿಯನ್ನು
ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಸದರಿ ಲಾರಿ ಹಿಂದುಗಡೆಯಿಂದ ಅಂದರೆ ಹೊಸಪೇಟೆ ಕಡೆಯಿಂದ
ಕುಷ್ಟಗಿ ಕಡೆಗೆ ಒಂದು ಕಂಟೇನರ್ ಲಾರಿ ನಂ ಆರ್.ಜೆ-14/ಜಿಜಿ-6792 ನೇದ್ದರ ಚಾಲಕನು ತನ್ನ ಲಾರಿಯ
ಅಂತರವನ್ನು ಕಾಯ್ದುಕೊಳ್ಳದೆ ಅತೀ ಜೋರಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ
ಚಲಾಯಿಸಿಕೊಂಡು ಬಂದವನೇ ಫಿರ್ಯಾದಿದಾರನ ಲಾರಿಯ ಹಿಂದಿನ ಎಡಭಾಗಕ್ಕೆ ಜೋರಾಗಿ ಠಕ್ಕರ್ ಕೊಟ್ಟು ಅಪಘಾತ
ಮಾಡಿದ್ದು ಇದರಿಂದ ಆರೋಪಿತನಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು ಇದೆ ಅಂತಾ ಮುಂತಾಗಿ ಹೇಳಿಕೆ ನುಡಿ
ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 121/2017 ಕಲಂ. ಮನುಷ್ಯ ಕಾಣೆ.
ಫಿರ್ಯಾಧಿದಾರರಾದ ಶ್ರೀಮತಿ ಅನಿತಾ ಗಂಡ ಉದಯಕುಮಾರ ಬಿಸೆ ಸಾ: ಕುವೆಂಪು ನಗರ ಕೊಪ್ಪಳ ಇವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 07-08-2017 ರಂದು ಬೆಳಿಗ್ಗೆ 09-45 ಗಂಟೆ
ಸುಮಾರಿಗೆ ನನ್ನ ಗಂಡ ಉದಯಕುಮಾರ ವಯ: 30 ವರ್ಷ, ಈತನು ಮನೆಯಿಂದ ತನ್ನ
ಸರ್ಟಿಫಿಕೇಟಗಳನ್ನು ತೆಗೆದುಕೊಂಡು ಶಾಲೆ ಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದು, ನಂತರ
ನಾನು ಪೋನ್ ಮಾಡಿದರೆ ಸ್ವಿಚ್ ಆಫ್ ಆಗಿದೆ ನಂತರ ನನ್ನ ಗಂಡನಿಗೆ ಪರಿಚಯದ ಶಕೀರಾ ಇವಳಿಗೆ ಪೋನ್
ಮಾಡಲು ಅವಳ ಪೋನ್ ಸ್ವಿಚ್ ಆಫ್ ಆಗಿರುತ್ತದೆ. ಕಾರಣ ನನ್ನ ಗಂಡ ಉದಯಕುಮಾರ ಈತನು ಎಲ್ಲಿಯೋ ಹೋಗಿ
ಕಾಣೆಯಾಗಿದ್ದು ಪತ್ತೇ ಮಾಡಿ ಕೊಡಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯ ಕೈಗೊಂಡಿದ್ದು ಅದೆ.
0 comments:
Post a Comment