Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, August 12, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 180/2017 ಕಲಂ. 379 IPC & KMMC Role 3, 36 & 42 R/w 44 ºÁUÀÆ MMRD Act 1957 Role 4, 4(1), 4(a) R/w 21(4), 21:.
ಶ್ರೀ ಎಂ. ಶಿವಕುಮಾರ ಪಿ.ಎಸ್.ಐ ಕಾರಟಗಿ ಠಾಣೆ ರವರು ದಿನಾಂಕ 11-08-2017 ರಂದು ಬೆಳಗಿನ ಜಾವ 5-35 ಗಂಟೆಗೆ ತಮ್ಮ ಠಾಣಾ ವ್ಯಾಪ್ತಿಯ 5 ಟ್ರ್ಯಾಕ್ಟರ್ ಚಾಲಕರು ಮರಳನ್ನು ಕಳ್ಳತನ ಮಾಡಿಕೊಂಡು ತಮ್ಮ ಟ್ರ್ಯಾಕ್ಟರ್ ದಲ್ಲಿ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೇ ಪರವಾನಿಗೆಯನ್ನು ಪಡೆದುಕೊಳ್ಳದೇ ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ 5 ಟ್ರ್ಯಾಕ್ಟರ್ ಟ್ರೇಲರ್ ಮತ್ತು ಅದರಲ್ಲಿ ಒಟ್ಟು 7,500=00 ಬೆಲೆಬಾಳವು ಮರಳನ್ನು ಜಪ್ತುಪಡಿಸಿಕೊಂಡು ಠಾಣೆಗೆ ತಂದು ಟ್ರ್ಯಾಕ್ಟರ್ ಮಾಲೀಕರು ಮತ್ತು ಚಾಲಕರುಗಳ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
2]  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 214/2017 ಕಲಂ. 420 ಐ.ಪಿ.ಸಿ.
ದಿನಾಂಕ 11-08-2017 ರಂದು 08-00 ಪಿ.ಎಂ.ಕ್ಕೆ ಪಿರ್ಯಾದು ವೆಂಕಟೇಶ ತಂದೆ ಲಚ್ಚಪ್ಪ ವಯ: 35 ವರ್ಷ ಜಾ: ವಾಲ್ಮೀಕಿ ಉ: ಚಾಲಕ ಸಾ: 4 ನೇ ವಾರ್ಡ ಮುನಿರಾಬಾದ  ಇವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿಯ ಸಾರಾಂಶವೆನೆಂದರೆ , ದಿನಾಂಕ 09-08-2017 ರಂದು ಮದ್ಯಾನ 3-10 ಗಂಟೆಗೆ ಯಾರೋ ಅಪರಿಚಿತರು ಪಿರ್ಯಾದಿಗೆ ಕರೆಮಾಡಿ ಅವರಿಗೆ .ಟಿ.ಎಂ. ಲಾಕ್ ಆಗಿದ್ದು ಅದನ್ನು ತೆಗೆದುಕೊಡುತ್ತೇವೆ ಎಂದು ಹೇಳಿದ್ದು ಪಿರ್ಯಾದುದಾರರು ಹೊಸಪೇಟೆಗೆ ಹೋಗಿದ್ದು ಅವರು ವಾಪಾಸ್ ಮನೆಗೆ ಬಂದ ಮೇಲೆ ರಾತ್ರಿ 9-10  ಗಂಟೆ ಸುಮಾರಿಗೆ ಅವರ ಮೋಬೈಲ್ ಪೋನ್ ಗೆ ಕರೆ ಮಾಡಿದ್ದು ಪಿರ್ಯಾದುದಾರರು ಅವರ .ಟಿ.ಎಂ. ಮೇಲೆ ಇರುವ ಸಂಖ್ಯೆಗಲನ್ನು ಅಪರಿಚಿತ ವ್ಯಕ್ತಿಗೆ ತಿಳಿಸಿದ್ದು ಕೂಡಲೆ ಅವರ ಬ್ಯಾಂಕ ಖಾತೆಯಲ್ಲಿದ್ದ ಹಣವನ್ನು ಮೋಸ ಮಾಡಿ ಡ್ರಾ ಮಾಡಿಕೊಂಡಿರುತ್ತಾರೆ ಎಂದು ಮುಂತಾಗಿದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ,
3]  ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 107/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ.  
ದಿನಾಂಕ: 11-08-2017 ರಂದು ರಾತ್ರಿ 9-10 ಗಂಟೆ ಸುಮಾರಿಗೆ ಆರೋಪಿ ಶರಣಯ್ಯ ತಂದೆ ಸಿದ್ದರಾಮಯ್ಯ ಸಸಿಮಠ ವ;28 ವರ್ಷ ಜಾ;ಜಂಗಮ ಉ;ಒಕ್ಕಲುತನ ಸಾ|| ಚಿಕ್ಕಮ್ಯಾಗೇರಿ ತಾ: ಯಲಬುರ್ಗಾ ಇತನು ಯಾವುದೇ ಪರವಾನಿಗೆ ಇಲ್ಲದೇ  ಮಧ್ಯಸಾರ ಟೆಟ್ರಾ ಪಾಕೀಟಗಳನ್ನು ತಮ್ಮ ಗ್ರಾಮದಲ್ಲಿ ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಒಂದು ಪ್ಲಾಸ್ಟೀಕ ಚೀಲ [ಕ್ಯಾರಿ] ಬ್ಯಾಗ ಚೀಲದಲ್ಲಿ ಮಧ್ಯದ ಟೆಟ್ರಾ ಪಾಕೀಟುಗಳನ್ನು ಹಾಕಿಕೊಂಡು ಯಲಬುರ್ಗಾ –ಮಲಕಸಮುದ್ರ ರಸ್ತೆಯ ಮೇಲೆ ಯಲಬುರ್ಗಾ ಪಟ್ಟಣದ ಶ್ರೀ ಭಗೀರಥ ಸರ್ಕಲ ಹತ್ತಿರ  ಹೋಗುತ್ತಿದ್ದಾಗ ಪಿ.ಎಸ್.ಐ. ಯಲಬುರ್ಗಾ ಹಾಗೂ ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ, ಸದರಿ ಆರೋಪಿತನಿಂದ 90 ML ನ HAYWARDS CHEERS WHISKY- ಒಟ್ಟು 60 (ಅರವತ್ತು) ಟೇಟ್ರಾ ಪಾಕೀಟಗಳು ಇದ್ದು. ಪ್ರತಿಯೊಂದಕ್ಕೆ 28.13 ರೂಗಳಂತೆ ಒಟ್ಟು 1687.8 ರೂ. ಬೆಲೆವುಳ್ಳಗಳನ್ನು ಜಪ್ತಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 188/2017 ಕಲಂ. 279 ಐ.ಪಿ.ಸಿ..
ದಿ:11-08-2017 ರಂದು ಮದ್ಯಾಹ್ನ 3-15 ಗಂಟೆಗೆ ಫಿರ್ಯಾದಿದಾರರಾದ ಆನಂದ ಶಿವಂಗಿ. ಸಾ: ವಿಜಯಪೂರ. ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೆನೆಂದರೆ, ದಿ:11-08-2017 ರಂದು ಬೆಳಗಿನಜಾವ 04-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಮಾಲೀಕತ್ವದ ಲಾರಿ ನಂ: ಕೆಎ-28/ಸಿ-1939 ನೇದ್ದನ್ನು ಆರೋಪಿತ ಚಾಲಕನು ಬಾಗಲಕೋಟೆ ಕಡೆಯಿಂದ ತೋರಣಗಲ್ ಜಿಂದಾಲ್ ಫ್ಯಾಕ್ಟರಿಯ ಕಡೆಗೆ ಅಂತಾ ಎನ್.ಹೆಚ್-50 ರಸ್ತೆಯ ಜಿನ್ನಾಪೂರ ತಾಂಡಾ ಕ್ರಾಸ್ ದಾಟಿ ಹೊಸಪೇಟೆಯ ಕಡೆಗೆ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಓಡಿಸಿಕೊಂಡು ಬರುವಾಗ ವಾಹನ ನಿಯಂತ್ರಿಸದೇ ಅಪಘಾತ ಮಾಡಿದ್ದರಿಂದ ರಸ್ತೆಯ ಡಿವೈಡರ್ ಗೆ ಬಡಿದು ಲಾರಿಯ ಕೆಳಗಡೆ ಭಾಗವು ಜಖಂ ಆಗಿದ್ದು ಇರುತ್ತದೆ. ಕಾರಣ ಸದರಿ ಲಾರಿಯ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ತಡವಾಗಿ ಸಲ್ಲಿಸಿದ ಫಿರ್ಯಾದಿ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5]  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 110/2017 ಕಲಂ. 143, 147, 148, 323, 324, 504, 506 ಸಹಿತ 149 ಐ.ಪಿ.ಸಿ..
ದಿನಾಂಕ : 11-08-2017 ರಂದು ರಾತ್ರಿ 9-30 ಗಂಟೆಗೆ ಫಿರ್ಯಾಧಿ ಪಕ್ಕೀರಪ್ಪ ತಂದೆ ರಂಗಪ್ಪ ತಳವಾರ. ವಯ: 42 ವರ್ಷ. ಜಾತಿ: ವಾಲ್ಮೀಕಿ. ಉ: ಒಕ್ಕಲುತನ. ಸಾ: ಕೆ. ಹೋಸುರು ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾಧಿಯನ್ನು ನೀಡಿದ್ದು ಸಾರಾಂಶವೆನೆಂದರೆ ಆರೋಪಿತರು ಈ ಹಿಂದೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಮತ್ತು ಎನ್.ಆರ್.ಇ.ಜಿ ಯಲ್ಲಿ ಅಕ್ರಮಗಳನ್ನು ಮಾಡುತ್ತಿದ್ದು ಇವಗಳನ್ನು ಫಿಯರ್ಾದಿದಾರರು ತಡೆದಿದ್ದು ಇದೇ ಕಾರಣಕ್ಕೆ ಫಿರ್ಯಾಧಿದಾರರ ಕಡೆಯವರಿಗೂ ಮತ್ತು ಆರೋಪಿತರ ಕಡೆಯವರಿಗೂ ದ್ವೇಷ ಇತ್ತು.  ಇಂದು ದಿನಾಂಕ : 11-08-2017 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಫಿಯರ್ಾದಿದಾರರು ತಮ್ಮ ಮನೆಯಲ್ಲಿದ್ದಾಗ ಆರೋಪಿತರ ಪೈಕಿ 1) ಪಕ್ಕೀರಪ್ಪ ತಂದೆ ರಂಗಪ್ಪ ತಳವಾರ 2) ಗ್ಯಾನಪ್ಪ ತಂದೆ ರಂಗಪ್ಪ ತಳವಾರ 3) ಬಸವರಾಜ ತಂದೆ ಪಕ್ಕೀರಪ್ಪ ತಳವಾರ 4) ಮಂಜುನಾಥ ತಂದೆ ಪಕ್ಕೀರಪ್ಪ ತಳವಾರ ರವರುಗಳು ಕೂಡಿ ಫಿರ್ಯಾಧಿದಾರರ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿದ್ದು, ಆಗ ಫಿರ್ಯಾಧಿದಾರರು ಹೊರಗೆ ಬಂದು ಯಾಕೇ ಬೈಯ್ಯದು ಅಂತಾ ಕೇಳಿದ್ದಕ್ಕೆ ಬಸವರಾಜನು ಫಿರ್ಯಾಧಿದಾರನನ್ನು ಕೆಳಗೆ ನೂಕಿ, ಕಾಲಿನಿಂದ ಎಡಕಪಾಳಕ್ಕೆ ಒದ್ದನು. ಆಗ ಮಂಜುನಾಥನು ಬಲಗಾಲನ್ನು ಹಿಡಿದು ನೆಲಕ್ಕೆ ಹಚ್ಚಿ ಬರಬರನೆ ಎಳೆದಾಡಿದ್ದು ಇದರಿಂದ ಬಲಗಾಲ ತೊಡೆಗೆ ತೆರಚಿದ ಗಾಯವಾಗಿದ್ದು, ಪಕ್ಕೀರಪ್ಪನು ಕೆಳಗೆ ಬಿದ್ದಿದ್ದ ಫಿಯರ್ಾದಿದಾರರ ಎಡ ಕಪಾಳದ ಮೇಲೆ ಕಾಲು ಇಟ್ಟು ಕುತ್ತಿಗೆ ಹಿಚುಕಲು ಪ್ರಯತ್ನ ಮಾಡಿದನು. ಫಿರ್ಯಾಧಿದಾರರ ಎದ್ದು ನಿಂತ ನಂತರ ಗ್ಯಾನಪ್ಪ ಎರಡು ಏಟು ಬೆನ್ನಿಗೆ ಹೊಡೆದನು. ಆಗ ಜಗಳ ಬಿಡಿಸಲು ಬಂದ ಫಿರ್ಯಾಧಿದಾರರ ತಂದೆ ಭೀಮಪ್ಪನಿಗೆ ಬಸವರಾಜನು ಎಡಕಪಾಳಕ್ಕೆ ಹೊಡೆದಿದ್ದು ಮತ್ತು ಮಂಜುನಾಥನು ಹೊಟ್ಟೆಗೆ ಒದ್ದನು. ಉಳಿದ ಆರೋಪಿತರು ಕೂಡ ಫಿರ್ಯಾಧಿದಾರರ ತಾಯಿಗೆ, ತಂಗಿಗೆ ಕೈಯಿಂದ ಹೊಡೆಬಡೆ ಮಾಡಿದ್ದು ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6]  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 111/2017 ಕಲಂ. 143, 147, 148, 323, 324, 504,506 ರೆ/ವಿ 149  ಐಪಿಸಿ.
ಇಂದು ದಿನಾಂಕ : 11-08-2017 ರಂದು ರಾತ್ರಿ 10-45 ಗಂಟೆಗೆ ಫಿರ್ಯಾಧಿದಾರರಯ ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾಧಿಯನ್ನು ನೀಡಿದ್ದು ಸಾರಾಂಶವೆನೆಂದರೆ ನನ್ನ ಹೆಂಡತಿ ಈ ಹಿಂದೆ ಸುಮಾರು 2.5 ವರ್ಷಗಳ ಹಿಂದೆ ಜರುಗಿದ ಗ್ರಾಮ. ಪಂಚಾಯತಿ ಚುನಾವಣೆಯಲ್ಲಿ ನನ್ನ ಹೆಂಡತಿ ದುರುಗಮ್ಮ ಈಕೆಯು ನನ್ನ ಅಳಿಯನಾದ ಯಮನೂರಪ್ಪ ತಂದೆ ಭೀಮಣ್ಣ ತಳವಾರ ಈತನ ವಿರುದ್ಧ ಗೆದ್ದಿದ್ದಳು. ಸೋತ ನನ್ನ ಅಳಿಯ ಯಮನೂರಪ್ಪನು ಗ್ರಾಮದಲ್ಲಿ ನನ್ನ ಹೆಂಡತಿ  ಪಂಚಾಯತಿ ಕಡೆಯಿಂದ ಮಾಡುವ ಪ್ರತಿಯೊಂದು ಸರಕಾರಿ ಅಭಿವೃದ್ದಿ ಕಾರ್ಯಗಳಿಗೆ ತಕರಾರು ಮಾಡುತ್ತಾ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ, ನಮ್ಮ ಮೇಲೆ ದ್ವೇಷ ಸಾಧಿಸುತ್ತಾ ಬಂದಿದ್ದನು. ಇಂದು ದಿನಾಂಕ: 11-08-2017 ರಂದು ಸಂಜೆ 7-30 ಗಂಟೆ ಸುಮಾರಿಗೆ ನಮ್ಮೂರಿನ ಶಾಲೆ ಹತ್ತಿರ ರಸ್ತೆಯ ಮೇಲೆ ನಾನು ನಿಂತುಕೊಂಡಿದ್ದಾಗ ಅಲ್ಲಿಗೆ ನಮ್ಮ ಅಳಿಯ ಯಮನೂರಪ್ಪನು ಬಂದಿದ್ದು, ಆಗ ನಾನು ಆತನಿಗೆ ಯಾಕೇ ನನ್ನ ಹೆಂಡತಿ ಪಂಚಾಯತಿಯಿಂದ ಮಾಡಿಸುವ ಕೆಲಸಗಳಿಗೆ ತಕಾರಾರು ಮಾಡುತ್ತಿರುವಿ ಅಂತಾ ಕೇಳಿದ್ದು, ಅದಕ್ಕೆ ಆತನು ಒಮ್ಮೇಲೆ ಸಿಟ್ಟಿಗೆ ಬಂದು ಹೌದು ಲೇ ನಾನು ಜಯ ಕನರ್ಾಟಕ ಸಂಘಟನೆಯ ಗ್ರಾಮ ಘಟಕದ ಅಧ್ಯಕ್ಷನಿದ್ದು ನನಗೆ ಜನಬೆಂಬಲವಿದೆ. ನಿನ್ನ ಹೆಂಡತಿ ಗ್ರಾಮ ಪಂಚಾಯತಿ ಮೇಂಬರ್ ಇದ್ದರೆ. ನಾನು ಸಂಘಟನೆಯ ಅಧ್ಯಕ್ಷನಿದ್ದೆನೆ ನಿನೇನು ಸೆಂಟಾ ಮಾಡಕಾಗಾಲ್ಲ. ಅಂತಾ ಅವಾಚ್ಯವಾಗಿ ಬೈದು. ಜಗಳ ತೆಗೆದು ಬಾಯಿ ಮಾಡಹತ್ತಿದ್ದು, ಆಗ ನಾವು ಬಾಯಿ ಮಾಡುವ ವಿಷಯ ಕೇಳಿ ಅಲ್ಲಿಗೆ ನನ್ನ ಮಕ್ಕಳಾದ ಬಸವರಾಜ, ಮಂಜುನಾಥ, ಅಳಿಯ ಯಮನೂರಪ್ಪ, ಹಾಗೂ ಅಣ್ಣನ ಮಕ್ಕಳಾದ ದೇವಪ್ಪ, ದೇವಮ್ಮ ರವರುಗಳು ಬಂದರು. ಹಾಗೂ ಯಮನೂರಪ್ಪನ ತಂದೆ ಭೀಮಪ್ಪ, ತಾಯಿ ಕನಕಮ್ಮ, ಅಳಿಯ ಕನಕಪ್ಪ, ತಂಗಿಯರಾದ ಶಂಕ್ರಮ್ಮ, ಚಿನ್ನಮ್ಮ, ಗೌರಮ್ಮ ರವರುಗಳು ಬಂದಿದ್ದು. ನನ್ನ ಮಕ್ಕಳು ನನ್ನನ್ನು ಬಿಡಿಸಿಕೊಳ್ಳಲು ಬಂದಾಗ ನನ್ನ ಮಗ ಬಸವರಾಜನಿಗೆ ಯಮನೂರನು ತನ್ನ ಮೊಣಕೈಯಿಂದ ತಲೆಯ ಮೇಲೆ ಗುದ್ದಿದನು. ನನ್ನ ಅಳಿಯ ಯಮನೂರಪ್ಪನಿಗೆ ಕನಕಪ್ಪನು ಕಾಲಿನಿಂದ ಒದ್ದಿದ್ದು ಇದರಿಂದ ಆತನ ಎಡಗಾಲಿನ ಕೆಳಗೆ ರಕ್ತಗಾಯವಾಗಿದ್ದು, ದೇವಮ್ಮಳಿಗೆ ಕನಕಮ್ಮಳು ಕೈಯಿಂದ ತಲೆಯ ಹಿಂಭಾಗದಲ್ಲಿ ಹೊಡೆದಳು. ನಂತರ ದೇವಪ್ಪನಿಗೆ ಚಿನ್ನಮ್ಮಳು ಬಲಗಣ್ಣಿಗೆ ಕೈಯಿಂದ ಹೊಡೆದಳು. ನಂತರ ಉಳಿದ ಭೀಮಣ್ಣ, ಶಂಕ್ರಮ್ಮ, ಗೌರಮ್ಮ ರವರುಗಳು ನಮಗೆ ಅವಾಚ್ಯ ಶಬ್ದಗಳಿಂದ ಬೈದು. ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು, ಕಾರಣ ಈ ಮೇಲ್ಕಾಣಿಸಿದವರು ನಮ್ಮೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದಾಡಿ, ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು, ಕಾರಣ ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
7]  ಕನಕಗಿರ ಪೊಲೀಸ್ ಠಾಣೆ ಗುನ್ನೆ ನಂ. 116/2017 ಕಲಂ. 32, 34, ಕರ್ನಾಟಕ ಅಬಕಾರಿ ಕಾಯ್ದೆ.
ಶ್ರೀ ಶಾಂತಪ್ಪ ಬೆಲ್ಲದ ಎ.ಎಸ್.ಐ ಕನಕಗಿರಿ ಠಾಣೆ ರವರಿಗೆ ಅಕ್ರಮ ಮದ್ಯ ಮಾರಾಟ ಮಾಡುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕೂಡಲೇ ಪಂಚರಿಗೆ ಬರಮಾಡಿಕೊಂಡು ಸಿಬ್ಬಂದಿಗಳೊಂದಿಗೆ ಠಾಣೆಯಿಂದ ಸಂಜೆ 6-00 ಗಂಟೆಗೆ ಮೋಟಾರ್ ಸೈಕಲ್ ಗಳಲ್ಲಿ ಹೊರಟು ಕನಕಗಿರಿ-ಗಂಗಾವತಿ ರಸ್ತೆಯಲ್ಲಿ ಅರಳಹಳ್ಳಿ ಕ್ರಾಸ್ ಹತ್ತಿರ ನಿಲ್ಲಿಸಿ ಸ್ವಲ್ಪ ಮುಂದೆ ಸಾಗಿ ನೋಡಲು ಅಲ್ಲಿ ಎಡಗಡೆಯಲ್ಲಿ ಆರೋಪಿತನು ಒಂದು ಟಿ,.ವ್ಹಿ.ಎಸ್. ಎಕ್ಸ್.ಎಲ್.ಸೂಪರ್ ಮೇಲೆ ಒಂದು ಚೀಲವನ್ನಿಟ್ಟುಕೊಂಡು ನಿಂತಿರುವುದು ಕಂಡು ಕೂಡಲೇ ಧಾಳಿ ಮಾಡಲು ಆರೊಪಿತನು ಓಡಿ ಹೋಗಲು ಪ್ರಯತ್ನಿಸಿದ್ದು ಕೂಡಲೇ ಅವನಿಗೆ ಹಿಡಿಕೊಂಡು ಆರೋಪಿತನಿಂದ 01] ಓರಿಜೀನಲ್ ಚಾಯ್ಸ ವಿಸ್ಕಿ ಮದ್ಯದ 90 ಎಂಎಲ್. ಅಳತೆಯ ಒಟ್ಟು 90 ಟೆಟ್ರಾ ಪಾಕೇಟಗಳು ಇದ್ದು ಪ್ರತಿ ಪ್ಯಾಕೇಟ್ ಬೆಲೆ ರೂಪಾಯಿ 28.13 ಒಟ್ಟು ಮೌಲ್ಯ 2,531=00 ರೂಪಾಯಿ. 02] ನಗದು ಹಣ 460=00 ರೂಪಾಯಿ ಹಾಗೂ 03] ಟಿವಿಎಸ್ ಎಕ್ಸೆಲ್ ಸುಪರ್ ಮೋ/ಸೈ ನೊಂದಣಿ ಸಂಖ್ಯೆ ಇರುವುದಿಲ್ಲ ಚಾಸ್ಸಿ ಸಂ. ಪಿ3003ಎಫ್243853 ಅಂ.ಕಿ 5000=00 ಬೆಲೆಬಾಳುವವುಗಳನ್ನು ಪಂಚರ ಸಮಕ್ಷಮ ಆರೋಪಿತನಿಂದ ಜಪ್ತ ಮಾಡಿದ್ದು, ನಂತರ ಆರೋಪಿ, ಇತರೇ ಸಾಮಾಗ್ರಿಗಳೊಂದಿಗೆ ಠಾಣೆಗೆ ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008