Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, August 13, 2017

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 248/2017 ಕಲಂ. 107 ಸಿ.ಆರ್.ಪಿ.ಸಿ.:.
ಪ್ರಕಾಶ ಮಾಳಿ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ ಠಾಣೆ ಈ ಮೂಲಕ ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸಲ್ಲಿಸುವ ಸ್ವಂತ ಫಿರ್ಯಾದಿ ಏನೆಂದರೆ, ನಾನು ಗ್ರಾಮ ಬೇಟಿ ಕುರಿತು ಹೊಸಹಳ್ಳಿಗೆ ಎಸ್.ಬಿ.ಪಿ.ಸಿ-363 ರವರೊಂದಿಗೆ ಹೋಗಿ ಗುಪ್ತವಾಗಿ ಮಾಹಿತಿ ಸಂಗ್ರಹಿಸಲಾಗಿ, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ: 08-08-2017 ರಂದು ದುರ್ಗಾದೇವಿಯ ಜಾತ್ರೆಯ ಸಮಯದಲ್ಲಿ ಡೊಳ್ಳು ಹರಿದ ನೆಪದಲ್ಲಿ  ಕುರುಬಜನಾಗಂದ ಮರಿಯಪ್ಪ ತಂದಿ ದುರುಗಪ್ಪ ಕಲ್ಗುಡಿ ಸಾ-ಹೊಸಹಳ್ಳಿ ಇವರ ಮೇಲೆ ಮಹೇಶ ತಂದಿ ಈರಣ್ಣ ಮೋಟಿ ವಯಾ- 29 ವರ್ಷ ಜಾ- ಗಂಗಾಮತಸ್ಥ ಉ- ಒಕ್ಕಲುತನ ಸಾ- ಹೊಸಹಳ್ಳಿ ತಾ- ಗಂಗಾವತಿ  ಹಾಗೂ ಇತರೆ 19 ಜನರು. ಹಾಗೂ ಇತರರು ಹಲ್ಲೆಮಾಡಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಕಬ್ಬೇರ ಜನಾಂಗದವರ ಮೇಲೆ ಗುನ್ನೆ ನಂ: 245 / 2017 ಕಲಂ : 143, 147, 341, 323, 504, 506 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ. ಇದರ ವಿರುದ್ದ ಹನಮಂತಪ್ಪ ತಂದಿ ಹುಲಗಪ್ಪ ವಯಾ-65 ವರ್ಷ  ಗಂಗಾಮತಸ್ಥ ಉ-ಒಕ್ಕಲುತನ ಸಾ- ಹೊಸಹಳ್ಳಿ ತಾ- ಗಂಗಾವತಿ. ಇವರು ಕೂಡಾ ಕುರುಬ ಜನಾಂಗದ  ಮರಿಯಪ್ಪ ತಂದಿ ದುರಗಪ್ಪ ಕಲ್ಗುಡಿ ಹಾಗೂ ಇತರೆ 57 ಜನರು ಸೇರಿ ತಮ್ಮ ಮೇಲೆ  ಹಲ್ಲೇ ಮಾಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಗುನ್ನೆ ನಂ: 246 / 2017 ಕಲಂ : 143, 147, 341, 323, 504, 506 ಸಹಿತ 149 ಐ.ಪಿ.ಸಿ, ಪ್ರಕಾರ ಪ್ರಕರಣಗಳು ದಾಖಲಾಗಿದ್ದು, ಅಲ್ಲದೆ ಈ ಹಿಂದೆ ಗ್ರಾಮದಲ್ಲಿ ಅಂಬಿಗರಚೌಡಯ್ಯ ಮತ್ತು  ಕ್ರಾಂತಿವೀರ ಸಂಗೋಳ್ಳಿರಾಯಣ್ಣ ಇವರ ಮುರ್ತಿ ಕೂಡ್ರಿಸುವ ವಿಷಯದಲ್ಲಿ ಎರಡೂ ಪಾರ್ಟಿಯ ಜನರು ದ್ವೇಷಸಾದಿಸುತ್ತಾ ಬಂದಿದ್ದು, ಸದರಿ ಎರಡೂ ಪಾರ್ಟಿಯ ಜನರುಗಳು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಲಿಷ್ಟರಿದ್ದು  ಮುಂಬರುವ ದಿನಗಳಲ್ಲಿ ಹಾಗೂ ಗೌರಿ ಗಣೇಶ ಹಬ್ಬದ ಸಮಯದಲ್ಲಿ ಒಬ್ಬರಿಗೊಬ್ಬರು ಜಗಳಾ ಮಾಡಿಕೊಂಡು ಸಾರ್ವಜನಿಕ ಆಸ್ತಿಪಾಸ್ಥಿಯನ್ನು ಹಾಳು ಮಾಡಿ ಜೀವ ಹಾನಿ ಮಾಡಿಕೊಳ್ಳುವ ಸಾದ್ಯತೆಗಳು ಹೆಚ್ಚಾಗಿ ಕಂಡು ಬಂದಿದ್ದರಿಂದ  ವಾಪಾಸ್ ಠಾಣೆಗೆ  ದಿನಾಂಕ:- 12-08-2017 ರಂದು ಬೆಳಿಗ್ಗೆ 10:00 ಗಂಟೆಗೆ ಸ್ವಂತ ಫಿರ್ಯಾದಿ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ: 248/2017 ಕಲಂ 107 ಸಿಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 249/2017 ಕಲಂ. 107 ಸಿ.ಆರ್.ಪಿ.ಸಿ.:.
ಪ್ರಕಾಶ ಮಾಳಿ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ ಠಾಣೆ ಈ ಮೂಲಕ ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸಲ್ಲಿಸುವ ಸ್ವಂತ ಫಿರ್ಯಾದಿ ಏನೆಂದರೆ, ನಾನು ಗ್ರಾಮ ಬೇಟಿ ಕುರಿತು ಹೊಸಹಳ್ಳಿಗೆ ಎಸ್.ಬಿ.ಪಿ.ಸಿ-363 ರವರೊಂದಿಗೆ ಹೋಗಿ ಗುಪ್ತವಾಗಿ ಮಾಹಿತಿ ಸಂಗ್ರಹಿಸಲಾಗಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ : 08-08-2017 ರಂದು ದುರ್ಗಾದೇವಿಯ ಜಾತ್ರೆಯ ಸಮಯದಲ್ಲಿ ಡೊಳ್ಳು ಹರಿದ ನೆಪದಲ್ಲಿ  ಕುರುಬಜನಾಗಂದ ಮರಿಯಪ್ಪ ತಂದಿ ದುರುಗಪ್ಪ ಕಲ್ಗುಡಿ ಸಾ-ಹೊಸಹಳ್ಳಿ ಇವರ ಮೇಲೆ ಮಹೇಶ ತಂದಿ ಈರಣ್ಣ ಮೋಟಿ ವಯಾ- 29 ವರ್ಷ ಜಾ- ಗಂಗಾಮತಸ್ಥ ಉ- ಒಕ್ಕಲುತನ ಸಾ- ಹೊಸಹಳ್ಳಿ ತಾ- ಗಂಗಾವತಿ  ಹಾಗೂ ಇತರೆ 19 ಜನರು. ಹಾಗೂ ಇತರರು ಹಲ್ಲೆಮಾಡಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಕಬ್ಬೇರ ಜನಾಂಗದವರ ಮೇಲೆ ಗುನ್ನೆ ನಂ: 245 / 2017 ಕಲಂ : 143, 147, 341, 323, 504, 506 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ. ಇದರ ವಿರುದ್ದ ಹನಮಂತಪ್ಪ ತಂದಿ ಹುಲಗಪ್ಪ ವಯಾ-65 ವರ್ಷ  ಗಂಗಾಮತಸ್ಥ ಉ-ಒಕ್ಕಲುತನ ಸಾ- ಹೊಸಹಳ್ಳಿ ತಾ- ಗಂಗಾವತಿ. ಇವರು ಕೂಡಾ ಕುರುಬ ಜನಾಂಗದ  ಮರಿಯಪ್ಪ ತಂದಿ ದುರಗಪ್ಪ ಕಲ್ಗುಡಿ ಹಾಗೂ ಇತರೆ 57 ಜನರು ಸೇರಿ ತಮ್ಮ ಮೇಲೆ  ಹಲ್ಲೇ ಮಾಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಗುನ್ನೆ ನಂ: 246 / 2017 ಕಲಂ : 143, 147, 341, 323, 504, 506 ಸಹಿತ 149 ಐ.ಪಿ.ಸಿ, ಪ್ರಕಾರ ಪ್ರಕರಣಗಳು ದಾಖಲಾಗಿದ್ದು, ಅಲ್ಲದೆ ಈ ಹಿಂದೆ ಗ್ರಾಮದಲ್ಲಿ ಅಂಬಿಗರಚೌಡಯ್ಯ ಮತ್ತು  ಕ್ರಾಂತಿವೀರ ಸಂಗೋಳ್ಳಿರಾಯಣ್ಣ ಇವರ ಮುರ್ತಿ ಕೂಡ್ರಿಸುವ ವಿಷಯದಲ್ಲಿ ಎರಡೂ ಪಾರ್ಟಿಯ ಜನರು ದ್ವೇಷಸಾದಿಸುತ್ತಾ ಬಂದಿದ್ದು, ಸದರಿ ಎರಡೂ ಪಾರ್ಟಿಯ ಜನರುಗಳು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಲಿಷ್ಟರಿದ್ದು ಮುಂಬರುವ ದಿನಗಳಲ್ಲಿ ಹಾಗೂ ಗೌರಿ ಗಣೇಶ ಹಬ್ಬದ ಸಮಯದಲ್ಲಿ ಒಬ್ಬರಿಗೊಬ್ಬರು ಜಗಳಾ ಮಾಡಿಕೊಂಡು ಸಾರ್ವಜನಿಕ ಆಸ್ತಿಪಾಸ್ಥಿಯನ್ನು ಹಾಳು ಮಾಡಿ ಜೀವ ಹಾನಿ ಮಾಡಿಕೊಳ್ಳುವ ಸಾದ್ಯತೆಗಳು ಹೆಚ್ಚಾಗಿ ಕಂಡು ಬಂದಿದ್ದರಿಂದ ವಾಪಾಸ್ ಠಾಣೆಗೆ ದಿನಾಂಕ:- 12-08-2017 ರಂದು ಬೆಳಿಗ್ಗೆ 11:30 ಗಂಟೆಗೆ ಸ್ವಂತ ಫಿರ್ಯಾದಿ ಮೇಲಿಂದ ಆರೋಪಿತರಾದ ಮಹೇಶ ತಂದಿ ಈರಣ್ಣ ಮೋಟಿ ವಯಾ-29ವರ್ಷ ಜಾ- ಗಂಗಾಮತಸ್ಥ ಉ- ಪೈಪಲೈನ್ ಕೆಲಸ ಸಾ- ಹೊಸಹಳ್ಳಿ ಹಾಗೂ ಇತರೆ 27 ಜನರ ಮೇಲೆ  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ: 249/2017 ಕಲಂ 107 ಸಿಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 250/2017 ಕಲಂ. 41 (1) (D), 102 ,  ಸಿ.ಆರ್.ಪಿ.ಸಿ.R/W 379 IPC:.
ನಾನು ಪ್ರಕಾಶ ಮಾಳಿ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಸಲ್ಲಿಸುವ ಫಿರ್ಯಾದಿ ಏನೆಂದರೆ, ದಿನಾಂಕ : 12-08-2017 ರಂದು ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ- 328, 358  ಎ.ಪಿ.ಸಿ- 15 ರವರೊಂದಿಗೆ ಹಳ್ಳಿ ಬೇಟಿ ಕುರಿತು ಹೆಬ್ಬಾಳ, ಮುಷ್ಟೂರ್, ದೆಸಾಯಿಖ್ಯಾಂಪ್ ಮರಳಿ ಮುಗಿಸಿಕೊಂಡು ಜಂಗಮರ ಕಲ್ಗುಡಿಯಲ್ಲಿ ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ನಮ್ಮ ಸರಕಾರಿ ಜೀಪ್ ನಂಬರ್- ಕೆ.ಎ- 37 / ಜಿ- 307 ನೇದ್ದರಲ್ಲಿ  ಜಂಗಮರ ಕಲ್ಗುಡಿ ಹತ್ತಿರ ಬರುತ್ತಿರುವಾಗ್ಗೆ  ನಾಲ್ಕುಜನರು  ಒಂದು ಆಕಳನ್ನು  ಹಿಡಿದುಕೊಂಡು ನಡೆದುಕೊಂಡು ಹೊರಟಿದ್ದು ನಮ್ಮ ಜೀಪ್ ನೋಡಿ ಆಕಳನ್ನು ಬಿಟ್ಟು ಓಡಿ ಹೊಗಲು ಪ್ರಯತ್ನಿಸಿದ್ದು ನಾವು ಜೀಪ್ ನಿಲ್ಲಿಸಿ 4 ಜನರನ್ನು ಹಿಡಿದು ವಿಚಾರಿಸಲು ಸದರಿಯವರು ತಮ್ಮ ಹೆಸರುಗಳನ್ನು ಕೆಳಲು ತಡವರಿಸಿದ್ದು ಪುನ: ಪುನ: ವಿಚಾರಿಸಲಾಗಿ 1) ಬಸವರಾಜ ತಂದಿ ಶಿವಪ್ಪ  ನೇಕಾರ  ವಯಾ- 25 ವರ್ಷ ಜಾ- ನೇಕಾರ ಸಾ- ಗೌಂಡಿ ಕೆಲಸ ಸಾ- ಜೆ.ಪಿ. ನಗರ ಕಾರಟಗಿ 2) ಮುಸ್ತಪಾ ತಂದಿ ಶೇಕ್ಷಾವಲಿ  ವಯಾ-26 ವರ್ಷ ಜಾ- ಮುಸ್ಲಿಂ ಉ- ಮೇಸನ್ ಕೆಲಸ ಸಾ- ಜೆ.ಪಿ.ನಗರ ಕಾರಟಗಿ 3) ಅಪ್ಪಣ್ಣ @ ಕೆಂಪೆಗೌಡ ತಂದಿ ರಂಗಪ್ಪ ಬಿಲ್ಗಾರ  ವಯಾ-27 ವರ್ಷ ಜಾ- ನಾಯಕ  ಉ- ಗೋಬಿ ರೈಸ್  ಕುಷ್ಟಗಿ ಬಸ್ ನಿಲ್ದಾಣ ಹತ್ತಿರ ಸಾ-ಬಿಲ್ಗಾರ ಓಣಿ ಕಾರಟಗಿ 4) ರಮೇಶ ತಂದಿ ಬಸಪ್ಪ ಕುಂಬಳಾವತಿ ವಯಾ-28 ವರ್ಷ  ಜಾ- ನಾಯಕ ಉ- ಗೌಂಡಿ ಕೆಲಸ ಸಾ- ಜೆ.ಪಿ. ನಗರ ಕಾರಟಗಿ ಅಂತಾ ಹೇಳಿದ್ದು ಹಾಗೂ ಆಕಳನ್ನು ಹಿಡಿದುಕೊಂಡು ಹೊರಟಿದ್ದರ ಬಗ್ಗೆ ವಿಚಾರಿಸಲು ಯಾವುದೇ ಸಮರ್ಪಕವಾದ ಉತ್ತರ ಕೊಡದ್ದರಿಂದ ಸದರಿಯವರಿಗೆ ಆಕಳು ಯಾರದು ಆಕಳನ್ನು ಎಲ್ಲಿಂದ ತದಿರುತ್ತಿರಿ ಅಂತಾ ವಿಚಾರಿಸಲು ಸದರಿಯವರು ಯಾವುದೆ ಉತ್ತರ ಕೊಡದ್ದರಿಂದ  ಸದರ್  ಸದ್ಯ ಆಕಳದ ವಾರಸುದಾರರು ಯಾರು ಇರದ್ದರಿಂದ ಬಿಡಾಡಿ ಆಕಳವನ್ನು ಸದರಿಯವರು ಸುಮಾರು 10 ಸಾವಿರ ಬೆಲೆಬಾಳುವ ಆಕಳವನ್ನು ಕಳ್ಳತನ ಮಾಡಿಕೊಂಡು ಹೊರಟಿದ್ದರಿಂದ ಬಲವಾದ ಸಂಶಯ ಬಂದಿದ್ದರಿಂದ ಈ ಬಗ್ಗೆ  ಸವಿಸ್ಥಾರವಾದ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಕರೆದುಕೊಂಡು ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 251/2017 ಕಲಂ. 96  ಕರ್ನಾಟಕ ಪೊಲೀಸ್ ಕಾಯ್ದೆ.
ದಿನಾಂಕ. 12-8-2017 ರಂದು 09-15 ಪಿ.ಎಂಕ್ಕೆ. ಪ್ರಕಾಶ ಮಾಳಿ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ರವರು ಮೂಲ ಜಪ್ತಿ ಪಂಚನಾಮೆ ಹಾಗೂ ಆರೋಪಿತನಿಗೆ ಮತ್ತು ಗಣಕೀಕೃತ ದೂರು ಹಾಜರ ಪಡಿಸಿದ್ದು ಸಾರಾಂಶವೆನಂದರೆ. ಇಂದು ದಿನಾಂಕ : 12-08-2017 ರಂದು ರಾತ್ರಿ ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ- 328, 358  ಎ.ಪಿ.ಸಿ- 15 ರವರನ್ನು ಕರೆದುಕೊಂಡು ನಮ್ಮ ಸರಕಾರಿ ಜೀಪ್ ನಂಬರ್- ಕೆ.ಎ- 37 / ಜಿ- 307 ನೇದ್ದರಲ್ಲಿ ಹಳ್ಳಿ ಬೇಟಿ ಕುರಿತು ವಿದ್ಯಾನಗರ, ಜಂಗಮರ ಕಲ್ಗುಡಿ, ಶ್ರೀರಾಮನಗರ, ಹೋಗುತ್ತಿರುವಾಗ ರಾತ್ರಿ 07-30 ಗಂಟೆ ಸುಮಾರಿಗೆ ವಿದ್ಯಾನಗರ ಹತ್ತಿರ ಪಾರ್ಥ ಹೋಟೇಲ್ ಮುಂದೆ ಲಾರಿಗಳು ನಿಲ್ಲಿಸುವ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತಿದ್ದು ನಮ್ಮ ಪೊಲೀಸ್ ಜೀಪನ್ನು ನೋಡಿ ಒಂದು ನಿಂತ ಲಾರಿಯ ತಮ್ಮ ಮುಖವನ್ನು ಮರೆ ಮಾಚಿಕೊಂಡು ನಿಂತಿರುವದು ನೋಡಿ ಅವರ ಹತ್ತಿರ ಹೋಗಿ ಅವರನ್ನು ವಿಚಾರಿಸಲು ಮೊದಲಿಗೆ ತಮ್ಮ ಹೆಸರು ಬೇರೆ ಬೇರೆ ಹೇಳಿದ್ದು ನಂತರ ಕೂಲಂಕುಷವಾಗಿ ವಿಚಾರಿಸಲು ತಮ್ಮ ಹೆಸರು 1) ನಾಗರಾಜ ತಂದೆ ಹನಮಂತಪ್ಪ ವಡ್ಡರ ವಯಾ 22, ಜಾ. ವಡ್ಡರ ಸಾ. ಕೊರವರ ಓಣಿ ಕಾರಟಗಿ 2) ದೇವರಾಜ ತಮದೆ ಪಕೀರಪ್ಪ ನೇಕಾರ ವಯಾ 20 ಜಾ. ನಾಯಕ ಸಾ. ಸಾಲೋಣಿ ಕಾರಟಗಿ ಎಂದು ತಿಳಿಸಿದರು. ನಂತರ ಅಲ್ಲಿಯೇ ರಸ್ತೆಯ ಮೇಲೆ ಹೊರಟಿದ್ದ ಇಬ್ಬರು ಪಂಚರಾದ ವೀಪಾಕ್ಷಪ್ಪ ತಂದ ಬಸಣ್ಣ ಬಿಲ್ಲೆಕಲ್ ಸಾ. ಢಣಾಪುರ, ಮತ್ತು ಬಸವ ನಾಯಕ ತಂದೆ ತಿಮ್ಮನಾಯಕ ಸಾ. ಢಣಾಪುರ. ಇವರನ್ನು ಕರೆದು ಪಂಚರ ಸಮಕ್ಷಮದಲ್ಲಿ ಅವರಿಬ್ಬರ ಅಂಗ ಜಡ್ತಿ ಮಾಡಲು ನಾಗರಾಜನ ಹತ್ತಿರ ಒಂದು ಕಟಿಂಗ್ ಪ್ಲೇಯರ ಮತ್ತು ದೇವರಾಜನ ಹತ್ತಿರ ಒಂದು ಸ್ಕೋಡ್ ಡ್ರಾವರ್ ಸಿಕ್ಕಿದ್ದು, ಅವರಿಬ್ಬರು ಅನುಮಾನಾಸ್ಪದವಾಗಿ ಕತ್ತಲಲ್ಲಿ ಸಿಕ್ಕಿದ್ದು ಯಾಕೆ ಕತ್ತಲಲ್ಲಿ ನಿಂತುಕೊಂಡಿದ್ದಿರಾ ಎಂದು ಕೇಳಲು ಸದರಿ ಇಬ್ಬರು ಅಲ್ಲಿ ಇರುವ ಬಗ್ಗೆ ಸಮರ್ಪಕವಾದ ಉತ್ತರ ನೀಡಲಾರದ್ದರಿಂದ ಹಾಗೂ ಸದರಿಯವರು ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದೆಂದು ಬಲವಾದ ಸಂಶಯ ಬಂದಿದ್ದರಿಂದ ಅವರ ಹತ್ತಿರ ದೊರೆತ ವಸ್ತುಗಳನ್ನು ರಾತ್ತಿ 07-45 ಗಂಟೆಯಿಂದ 08-45 ಗಂಟೆ ವರೆಗೆ ಜಪ್ತಿ ಪಂಚನಾಮ ಮಾಡಿಕೊಂಡು ಕತ್ತಲಲ್ಲಿ ಸಿಕ್ಕ ಇಬ್ಬರು ವ್ಯಕ್ತಿಗಳನ್ನು ತಾಬಾಕ್ಕೆ ಪಡೆದುಕೊಂಡು ವಾಪಸ ಠಾಣೆಗೆ 09-15 ಗಂಟೆಗೆ ಬಂದು ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5]  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 117/2017 ಕಲಂ. 110 (ಇ) &( )ಜಿ ಸಿ.ಆರ್.ಪಿ.ಸಿ.  

ದಿನಾಂಕ: 12-08-2017 ರಂದು ಸಾಯಾಂಕಾಲ 4:30 ಗಂಟೆಗೆ ಬಸವಾರಾಜ ಹೆಚ್.ಸಿ-186 ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾಧಿ ಹಾಜರಪಡಿಸಿದ್ದು ಸಾರಂಶವೆನಂದರೆ . ದಿನಾಂಕ: 12-08-2017 ರಂದು ಮದ್ಯಾಹ್ನ 2:30 ಗಂಟೆಗೆ ಫಿರ್ಯಾದಿದಾರರು ಠಾಣಾ ವ್ಯಾಪ್ತಿಯ ನವಲಿ,ವಡಕಿ, ಗ್ರಾಮಗಳ ಗ್ರಾಮ ಬೇಟಿ ಮುಗಿಸಿಕೊಂಡು ಮದ್ಯಾಹ್ನ 3:30 ಗಂಟೆಗೆ  ಚಿರ್ಚನಗುಡ್ಡ  ಗ್ರಾಮಕ್ಕೆ ಬಂದಾಗ ಈ ವೇಳೆಯಲ್ಲಿ ಚಿರ್ಚನಗುಡ್ಡದ ಗ್ರಾಮದ ಸ.ಹಿ.ಪ್ರಾ.ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ನಿಂತುಕೊಂಡು ಹೋಗು-ಬರುವ ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ವಿನಾ:ಕಾರಣ ಯಾರು ಬರುತ್ತೀರೀ ಬರ್ರಿಲೇ ಸೂಳೇಯರೇ ನಿಮ್ಮನ್ನು ಉಳಿಸುವದಿಲ್ಲ ನಿಮ್ಮನ್ನು ಒಂದು ಕೈ ನೋಡಿಕೊಳ್ಳುತ್ತೆನೆ ಯಾವ ಸೂಳೇ ಮಗ ಏನೋ ಸೆಂಟ್ ಹರಕ್ಕೋಂತರಾ ಅಂತಾ ವಗೈರೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಸಾರ್ವಜನಿಕರ ಶಾಂತತಾ ಭಂಗವನ್ನುಂಟು ಮಾಡುತ್ತಾ ಗೂಂಡಾಗಿರಿ ಮಾಡುತ್ತಿರುವುದು ಕಂಡು ಬಂದಿದ್ದು ನಂತರ ಸದರಿಯವನನ್ನು ವಿಚಾರಿಸಲು ಅವನು ತನ್ನ ಹೆಸರು ಲಾಲಮಹ್ಮದ ತಂದೆ ರಹಿಮಾನಸಾಬ ಹಿರೇಮನಿ ವಯಾ: 48 ವರ್ಷ ಜಾತಿ: ಮುಸ್ಲಿಂ ಉ: ಒಕ್ಕಲುತನ ಸಾ:ಬೂದಗುಂಪಾ ಹಾ:ವ: ಸೋಮನಾಳ ತಾ: ಗಂಗಾವತಿ  ಅಂತಾ ತಿಳಿಸಿದ್ದು ಸದರಿಯವನ್ನು ಹಾಗೇ ಬಿಟ್ಟಲ್ಲಿ ಊರಿನಲ್ಲಿ ಶಾಂತತಾ ಭಂಗ ಹಾಗೂ ಜಗಳಗಳು ಉಂಟಾಗುವ ಲಕ್ಷಣಗಳು ಕಂಡು ಬಂದಿದ್ದರಿಂದ ಹಾಗೂ ಸದರಿಯವನಿಗೆ ಊರಿನವರು ಹೊಡಿ ಬಡಿ ಮಾಡುವ ಸಂಭವವಿರುವುದರಿಂದ ಮುಂಜಾಗ್ರತವಾಗಿ ಅವನನ್ನು ದಸ್ತಗಿರಿ ಮಾಡಿಕೊಂಡು ಸಾಯಾಂಕಾಲ 4-30 ಗಂಟೆಗೆ ವಾಪಸ್ ಠಾಣೆಗೆ ಬಂದಿದ್ದು ಸದರಿ ಲಾಲಮಹ್ಮದ ಹಿರೇಮನಿ ಇವನ ಮೇಲೆ  ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ನೀಡಿದ ಫಿರ್ಯಾದಿ ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008