1] ಕೂಕನೂರ
ಪೊಲೀಸ್ ಠಾಣೆ ಗುನ್ನೆ ನಂ. 112/2017
ಕಲಂ. 379 ಐಪಿಸಿ & 4(1) 4(1A) R/W 21, 22 MMDR
Act -1957.
ದಿನಾಂಕ: 13-08-2017
ರಂದು ಬೆಳೆಗ್ಗೆ 08:00 ಗಂಟೆ ಸುಮಾರಿಗೆ ಗುದ್ನೆಪ್ಪನಮಠದ ಹತ್ತಿರ ಯಡಿಯಾಪೂರ
ಕಡೆಯಿಂದ ಕುಕನೂರು ಕಡೆಗೆ ಟ್ರ್ಯಾಕ್ಟರ್ ಇಂಜನ್ ನಂ; NKBC04091 ಹಾಗೂ ಟ್ರೇಲರ್ ನಂ: KA37 TR
1571 ನೇದ್ದರ ಚಾಲಕನು ಸದರಿ ಟ್ರ್ಯಾಕ್ಟರ್ ದಲ್ಲಿ ತನ್ನ ಮಾಲಿಕನು ಹೇಳಿದಂತೆ
ಸರ್ಕಾರದಿಂದ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೇ ಅನಧೀಕೃತವಾಗಿ ಕಳ್ಳತನದಿಂದ ಟ್ರ್ಯಾಕ್ಟರ್
ದಲ್ಲಿ ಮರಳನ್ನು ಲೋಡ್ ಮಾಡಿಕೊಂಡು ಬರುತ್ತಿದ್ದ ಬಗ್ಗೆ ಬಾತ್ಮೀ ಬಂದ ಮೇರೆಗೆ ಪಿಎಸ್‍ಐ ರವರು
ಹಾಗೂ ಸಿಬ್ಬಂದಿಯವರು ಪಂಚರೊಂದಗೆ ಹೋಗಿ ದಾಳಿ ಮಾಡಿದಾಗ ಸದರಿ ಟ್ರ್ಯಾಕ್ಟರ್ ಚಾಲಕನು ತನ್ನ
ಟ್ರ್ಯಾಕ್ಟರ್ ನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಕಾರಣ ಸದರಿ ಚಾಲಕ ಹಾಗೂ ಮಾಲಿಕನ
ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಜಪ್ತಿ ಪಂಚನಾಮೆ ಯೊಂದಿಗೆ ತಮ್ಮ ದೂರು ನೀಡಿದ
ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ
2] ಕೊಪ್ಪಳ
ನಗರ ಪೊಲೀಸ್ ಠಾಣೆ ಗುನ್ನೆ ನಂ. 122/2017
ಕಲಂ. 454 511 IPC.
ದಿನಾಂಕ: 13-08-2015 ರಂದು ಮದ್ಯಾಹ್ನ 3-30 ಗಂಟೆಗೆ ಫಿರ್ಯಾದಿದಾರರಾದ ಪ್ರದೀಪ್ ಕುಮಾರ
ತಂದೆ ವಿಠಲ ಬಡಿಗೇರ ಸಾ: ಹಿಂದಿ ಬಿಈಡ್ ಕಾಲೇಜ್ ಹಿಂದೆ ಬೆಂಕಿನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ
ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶ ಏನೆಂದರೆ, ಫಿರ್ಯಾದಿದಾರರು ಇಂದು ದಿನಾಂಕ:
13-08-2015 ರಂದು ಮದ್ಯಾಹ್ನ 01-00 ಗಂಟೆಯಿಂದ ಮದ್ಯಹ್ನ 2-30 ಗಂಟೆಯ ಅವಧಿಯಲ್ಲಿ ತಾನು ಮತ್ತು
ತನ್ನ ತಾಯಿ ಕೂಡಿಕೊಂಡು ಬಿಟಿ ಪಾಟೀಲ್ ನಗರದಲ್ಲಿರುವ ತನ್ನ ಮಾವನ ಮನೆಗೆ ಹೋಗಿದ್ದಾಗ ಆರೋಪಿತನಾದ
ಮಲ್ಲಿಕಾರ್ಜುನ ನಾಯಕ ಸಾ: ಬಳ್ಳಾರಿ ಇತನು ಫಿರ್ಯಾದಿದಾರರ ಮನೆಯ ಬೀಗ ಮುರಿದು ಮನೆಯೋಳಗೆ ಪ್ರವೇಶ
ಮಾಡಿ ಎರಡು ಬೆಡ್ ರೂಂನಲ್ಲಿದ್ದ ಎರಡು ಅಲ್ಮರಗಳನ್ನ ಮೀಟಿ ತೆರೆದು ಕಳ್ಳತನ ಮಾಡಲು ಯತ್ನಿಸಿದ್ದು
ಇರುತ್ತದೆ. ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಅದೆ.
3] ಗಂಗಾವತಿ ಸಂಚಾರಿ
ಪೊಲೀಸ್ ಠಾಣೆ ಗುನ್ನೆ ನಂ. 23/2017 ಕಲಂ.
279, 337, 338 IPC:.
ದಿನಾಂಕ 13-08-2017 ರಂದು
ಸಂಜೆ 05-00 ಗಂಟೆಗೆ
ಫಿರ್ಯಾದಿ ಸಣ್ಣ ಹುಸೇನಸಾಬ ಸಾ: ಜೀರಾಳ ಕಲ್ಗುಡಿ ಗಂಗಾವತಿ ಇವರು ಠಾಣೆಗೆ ಹಾಜರಾಗಿ ನೀಡಿದ
ದೂರಿನ ಸಾರಂಶವೇನೆಂದರೆ ಇಂದು ದಿನಾಂಕ 13-08-2017 ಮದ್ಯಾಹ್ನ
2-30 ಪಿಎಂ ಗಂಟೆಗೆ ನಾನು
ಮತ್ತು ನನ್ನ ಮಗ ಹುಸೇನ್ಸಾಬ ವ:45 ಸಾ:ಜೀರಾಳ
ಕಲ್ಗುಡಿ, ಮನೆಯಲ್ಲಿ
ಇರುವಾಗ ನನ್ನ ಮಗನ ಅಳಿಯನಾದ ನಜೀರ್ ತಂದೆ ಮಹ್ಮದ್ಅಲಿ ವ:24 ಜಾ:ಮುಸ್ಲಿಂ ಉ:ಮ್ಯಾಕನೀಕ್ ಸಾ: ಗದಗ ಇತನು ಪೊನ್ ಮಾಡಿ ನನಗೆ
ತಿಳಿಸಿದ್ದನೇಂದರೆ ತಾನು ಗದಗ ನಿಂದ ಬರುವಾಗ ಗಂಗಾವತಿಯ ಎಪಿಎಂಸಿ 1 ನೇ ಗೇಟ್ ಹತ್ತಿರ
ಬಸ್ ನಿಂದ ಇಳಿಯುವಾಗ ಬಿದ್ದಿರುತ್ತೇನೆ ಅಂತಾ ಹೇಳಿದನು ನಾನು ಮತ್ತು ನನ್ನ ಮಗ ಹುಸೇನ್ ಸಾಬ
ಕೂಡಲೇ ಗಂಗಾವತಿಯ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನಜೀರ್ ಇತನು ಇಲಾಜು ಪಡೆಯುತ್ತಿದ್ದು
ಇತನಿಗೆ ವಿಚಾರಿಸಲಾಗಿ ತಾನು ಗದಗ ನಿಂದ ಗಂಗಾವತಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಮದ್ಯಾಹ್ನ 1-30 ಪಿಎಂ ಗಂಟೆಗೆ ಸಿಬಿ
ಸರ್ಕಲ್ಗೆ ಬಂದಾಗ ನಾನು ಇಳಿಯದೇ ಹಾಗೇ ಮರೆತು ಕುಳಿತುಕೊಂಡಿದ್ದು ನಂತರ ನಾನು ಬಸ್ ಕಂಡಕ್ಟರ್ಗೆ
ಇಳಿಯುತ್ತೆನೆ ಬಸ್ ನಿಲ್ಲಿಸಿ ಅಂತಾ ಹೇಳಿದಾಗ ಕಂಡಕ್ಟರ್ ಸೀಟಿಯನ್ನು ಹಾಕಿ ಎಪಿಎಂಸಿ 1 ನೇ ಗೇಟ್ ಹತ್ತಿರ
ನಿಲ್ಲಿಸಿದನು ನಂತರ ನಾನು ಬಸ್ನಿಂದ ಇಳಿಯುವಾಗ ಕಂಡಕ್ಟರ್ನು ಬಸ್ಅನ್ನು ರೈಟ್
ಅಂತಾ ವೀಜಿಲ್ ಹಾಕಿದನು ಆಗ ಬಸ್ ಚಾಲಕನು ಒಮ್ಮೇಲೆ ಬಸ್ನ್ನು ಮುಂದಕ್ಕೆ ಜೋರಾಗಿ ಚಾಲನೆ
ಮಾಡಿದ್ದರಿಂದ ನಾನು ಇಳಿಯುವಾಗ ಡೋರ್ ದಿಂದ ರಸ್ತೆ ಮೇಲೆ ಬಿದ್ದಿದ್ದು ಬಸ್ನಲ್ಲಿದ್ದ ಜನರು
ನನ್ನನು ನೋಡಿ ಕೂಗಾಡಿದಾಗ ಬಸ್ ಸ್ವಲ್ಪ ಮುಂದೆ ಹೋಗಿ ನಿಂತಿದ್ದು ನಂತರ ಬಸ್ನ ಕಂಡಕ್ಟರ್ ಮತ್ತು
ಡ್ರೈವರ್ ಓಡಿಬಂದು ನನ್ನನು ಏಬ್ಬಿಸಿದರು ಮತ್ತು ಬಸ್ ನಲ್ಲಿದ್ದ ಅಮರೇಶ ತಂದೆ ತಿಪ್ಪಣ್ಣ ಸಾ:
ಗಂಗಾವತಿ ಎಂಬುವನು ಸಹಾ ಬಂದು ಸಹಾಯ ಮಾಡಿದನು ನಾನು ಬಸ್ ನಂ ನೋಡಲಾಗಿ ಕೆಎ 42 ಎಫ್ 866 ಅಂತಾ ಇದ್ದು ಚಾಲಕ
ಹೆಸರು ಕೇಳಲಾಗಿ ಹಜ್ಜಕೇಲ್ ತಂದೆ ದಾನೇಲಪ್ಪ ಹಾಲಪ್ಪನವರ ಬ್ಯಾಡ್ಜ್ ನಂ 2235 ಸಾ: ಗದಗ ಬೇಟಗೇರಿ
ಡೀಪೂ ಅಂತಾ ಹೇಳಿದನು ಕಂಡಕ್ಟರ್ ಹೆಸರು ಕೇಳಲಾಗಿ ಜಗದೀಶ ತಂದೆ ರೇವಣಸಿದ್ದಪ್ಪ ಆದಿ ಬ್ಯಾಡ್ಜ್
ನಂ 1729 ಸಾ:ಗದಗ
ಬೆಟಗೇರಿ ಡೀಪೂ ಅಂತಾ ಹೇಳಿದನು ನನಗೆ ತೆಲೆಗೆ ಭಾರಿ ಒಳಾಪೆಟ್ಟಾಗಿ ಮತ್ತು ಸ್ವಲ್ಪ
ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಹೇಳಿದನು ನಂತರ ನಾನು ಕೂಡಲೇ ಕಂಡಕ್ಟರನನ್ನು ಕರೆದುಕೊಂಡು
ಘಟಣಾ ಸ್ಥಳಕ್ಕೆ ಹೋಗಿ ನೋಡಿಕೊಂಡು ಬಂದೆನು ನಮ್ಮ ಮಗನ ಅಳಿಯ ಗಾಭರಿಯಾಗಿದ್ದರಿಂದ ಮತ್ತು
ಮನೆಯಲ್ಲಿ ವಿಚಾರಿಸಿ ತಡವಾಗಿ ಠಾಣೆಗೆ ಬಂದು ದೂರನ್ನು ಸಲ್ಲಿಸಿರುತ್ತೆನೆ.ಈ ಘಟಣೆಗೆ ಕಂಡಕ್ಟರ್
ಮತ್ತು ಬಸ್ ಚಾಲಕ ಇಬ್ಬರು ಕಾರಣರಾಗಿದ್ದು ಬಸ್ ಕಂಡಕ್ಟರ ನಿರ್ಲಕ್ಷತನದಿಂದ ಬಸನ್ನು ಮುಂದೆ
ಚಾಲಯಿಸುವಂತೆ ಡ್ರೈವರ್ಗೆ ವಿಜೀಲ್ ಹಾಕಿದ್ದರಿಂದ ಮತ್ತು ಡ್ರೈವರ್ನು ಹಿಂದೆ ಮುಂದೆ ನೋಡದೆ
ಒಮ್ಮೇಲೆ ಬಸ್ನು ಜೋರಾಗಿ ಮತ್ತು ಅಲಕ್ಷತನ ದಿಂದ ಚಾಲನೆ ಮಾಡಿದ್ದರಿಂದ ಈ ಘಟಣೆ
ಜರುಗಿದ್ದು ಕಾರಣ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಇದೆ ಅಂತಾ ನೀಡಿದ ದೂರಿನ ಮೇಲಿಂದ
ಠಾಣೆ ಗುನ್ನೆ ನಂ 23/2017 ಕಲಂ 279.337.338 ಐಪಿಸಿ ಪ್ರಕಾರ
ತನಿಖೆ ಕೈಗೊಂಡಿದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ
ನಂ. 228/2017 ಕಲಂ. 279, 337, 338 ಐ.ಪಿ.ಸಿ..
ದಿನಾಂಕ :
13-08-2017 ರಂದು
ಸಾಯಂಕಾಲ 6-00 ಗಂಟೆಗೆ ಇಲಕಲ್ ಅಕ್ಕಿಬಾಯಿ ಆಸ್ಪತ್ರೆಯಿಂದ ಎಮ್.ಎಲ್.ಸಿ. ಮಾಹಿತಿ
ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಹೇಳಿಕೆ ಪಡೆದುಕೊಂಡು ವಾಪಾಸ್ ಠಾಣೆಗೆ
ರಾತ್ರಿ 8-30 ಗಂಟೆಗೆ ಬಂದಿದ್ದು ಸಾರಾಂಶವೆನೆಂದರೆ ಫಿರ್ಯಾದಿದಾರರು ಹಾಗೂ ಮೊ.ಸೈ ನಂ: ಕೆ.ಎ-26/ಯು-3274 ನೇದ್ದರ ಸವಾರನಾದ ಮಹೇಶ ಆಡಿನ ಇಬ್ಬರೂ ಕೂಡಿ ದಿನಾಂಕ: 16-08-2017 ರಂದು ಫಿರ್ಯಾದಿದಾರರ ಮಗನ ಜವಳ ಕಾರ್ಯಕ್ರಮವಿದ್ದ ಕಾರಣ ತಮ್ಮ
ಸಂಬಂದಿಕರಿಗೆ ಹೇಳುವ ಕುರಿತು ಹೋಗಿ ಮಲಕಾಪೂರದಲ್ಲಿ ಹೇಳಿಕೊಂಡು ಚಳಗೇರಿಗೆ ಹೋಗುತ್ತಿರುವಾಗ
ಮಲಕಾಪೂರ ಕ್ರಾಸ್ ಹತ್ತಿರ ಕುಷ್ಟಗಿ ಕಡೆಯಿಂದ ಕಾರ ನಂ: ಕೆ.ಎ-37/ಎಂ-6806
ನೇದ್ದರ ಚಾಲಕನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ
ಕಾರನ್ನು ನಡೆಸಿಕೊಂಡು ಬಂದು ಫಿರ್ಯಾದಿದಾರರ ಮೊ.ಸೈ ಗೆ ಟಕ್ಕರ ಮಾಡಿದ್ದರಿಂದ ಮೊ.ಸೈ
ಸವಾರನಾದ ಮಹೇಶ ಆಡಿನ
ಹಾಗೂ ಫಿರ್ಯಾದಿ ಮಹಾಂತೇಶ ಮುಶಿಗೇರಿ ಇವರಿಗೆ ಸಾದಾ ಮತ್ತು
ಭಾರಿ ಸ್ವರೂಪದ ಗಾಯವಾಗಿದ್ದು ಕಾರಣ ಸದರಿ ಕಾರ ಚಾಲಕನಾದ ಶೇಖರಪ್ಪ ತಂದೆ ಶರಣಪ್ಪ ವರಪೇಟೆ ಸಾ: ಹುಲಗೇರಿ
ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆಯ
ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:
228/2017 ಕಲಂ 279,
337, 338 ಐ.ಪಿ.ಸಿ
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment