1] ಕೊಪ್ಪಳ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ.
06/2017 ಕಲಂ:
498(ಎ), 323, 504, 506 ಐ.ಪಿ.ಸಿ ಮತ್ತು ಕಲಂ. 3[2], 5[ಎ] ಎಸ್.ಸಿ/ಎಸ್.ಟಿ. ಕಾಯ್ದೆ:
ದಿನಾಂಕ: 24-08-2017 ರಂದು ರಾತ್ರಿ 8-45 ಗಂಟೆಗೆ ಫಿರ್ಯಾದಿದಾರರ
ಶ್ರೀಮತಿ ಸೀತಾ ಗಂಡ ರಾಮಪ್ಪ ಬಳ್ಳಾರಿ. ಸಾ: ನಂದಿನಗರ ಕೊಪ್ಪಳ. ಇವರು ಠಾಣೆಗೆ ಹಾಜರಾಗಿ ನೀಡಿದ
ಲಿಖಿತ ದೂರಿನ ಸಾರಾಂಶವೇನೆಂದರೇ, ಕಳೆದ 03 ವರ್ಷಗಳಿಂದ ಫಿರ್ಯಾದಿದಾರರು ಕಿಡದಾಳ ಗ್ರಾಮದ
ರಾಮಪ್ಪ @ ರಮೇಶ ಎಂಬುವವರನ್ನು ಮದುವೆಯಾಗಿದ್ದು, ಅವರಿಗೆ 02 ವರ್ಷದ ಧೃವ ಎಂಬ ಗಂಡು
ಮಗನಿದ್ದಾನೆ. ಕಳೆದ 01 ತಿಂಗಳಿಂದೆ ರಾತ್ರಿ 8-00 ಗಂಟೆಗೆ ನಂದಿನಗರದಲ್ಲಿರುವ ಗಂಡನ
ಬಾಡಿಗೆಮನೆಯಲ್ಲಿ ತನ್ನ ಗಂಡನು ಫಿರ್ಯಾದಿದಾರಳಿಗೆ ನೀನು ಚಲುವಾದಿ ಕೀಳು ಜಾತಿಯವಳಿದ್ದಿಯಾ
ನಿನ್ನೊಂದಿಗೆ ಸಂಸಾರ ಮಾಡಲು ಇಷ್ಟವಿಲ್ಲ ನೀನು ಮನೆಯಲ್ಲಿ ಇರುವುದು ಬೇಡ ಎಂದು ಮಾನಸಿಕ ಕಿರುಕುಳ
ಕೊಡುತ್ತಾ, ತಾನು ಬೇರೆ ಮದುವೆಯಾಗುತ್ತೇನೆ. ಎಂದು ದೈಹಿಕವಾಗಿ ಹಲ್ಲೆ ಮಾಡಿ ಯಾವತ್ತಿದ್ದರು
ನಿನ್ನ ಸಾವು ನನ್ನ ಕೈಯಲ್ಲೇ ಎಂದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾನೆ. ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 234/2017 ಕಲಂ: 363
ಐ.ಪಿ.ಸಿ:
ದಿನಾಂಕ
:- 23-08-2017 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾದಿದಾರರಾದ ಬಾಳಪ್ಪ ತಂದೆ ಮರಿಹುಲುಗಪ್ಪ ಬೂತಬಿಲ್ಲಿ, ವಯಾ:
45 ವರ್ಷ ಜಾತಿ: ಪರಿಶೀಷ್ಟ, ಉ:
ಕೆ.ಇ.ಬಿ.
ಲೈನ್ ಮ್ಯಾನ ಕೆಲಸ, ಸಾ:
ಅಂಬೇಡ್ಕರ ಕಾಲೋನಿ ಕುಷ್ಟಗಿ ರವರು ಠಾಣೆಗೆ ಬಂದು ಗಣಕೀಕೃತ
ಪಿರ್ಯಾದಿಯನ್ನು ಹಾಜರಪಡಿಸದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ನನಗೆ 3 ಜನ ಮಕ್ಕಳಿದ್ದು ಎಲ್ಲರೂ ವಿದ್ಯಾಭ್ಯಾಸವನ್ನು ಮಾಡಿಕೊಂಡಿದ್ದು ಹಿರಿಯ
ಮಗನಾದ ಅಭಿಶೇಕ ವಯಾ 16 ವರ್ಷ ಇತನು 10 ನೇ ತರಗತಿಯಲ್ಲಿ
ಓದುತ್ತಿದ್ದು ದಿನಾಂಕ : 21-08-2017 ರಂದು ಮುಂಜಾನೆ 6-00 ಗಂಟೆಗೆ ನನ್ನ ಹೆಂಡತಿ ಪದ್ಮಾ ಇವಳು ನನ್ನ ಮಗನನ್ನು ದಿನಾಲೂ
ಎಬ್ಬಿಸುವಂತೆ ಟ್ಯೂಷನ್ನಿಗೆ ಹೋಗಿ ಬಾ ಅಂತಾ ಎಬ್ಬಿಸಿದ್ದು ನನ್ನ ಮಗನು ಎದ್ದು ಮನೆಯಿಂದ ಹೋದವನು
ಸಂಜೆಯಾದರು ಮನೆಗೆ ಬಾರದ್ದರಿಂದ ನಾನು ನಮ್ಮ ಸಂಬಂಧಿಕರಲ್ಲಿ ಮತ್ತು ನಮ್ಮ ಗೆಳೆಯರಲ್ಲಿ ಹೋಗಿ
ಹುಡುಕಾಡಿದ್ದು ನನ್ನ ಮಗನ ಸುಳಿವು ದೋರೆಯಲಿಲ್ಲಾ. ನನ್ನ ಮಗನ ಪತ್ತೆ ಕುರಿತು ಇಲಕಲ್, ಹೋಸೂರು ತಾ : ಬಾದಾಮಿ, ಗದಗ, ಹೊಸಪೇಟೆ, ಸಿಂದನೂರು, ಗಜೇಂದ್ರಗಡಾ ಮುಂತಾದ ಕಡೆಗಳಲ್ಲಿ ವಾಸವಾಗಿರುವ ನಮ್ಮ ಸಂಬಂಧಿಕರಿಗೆ
ಕರೆಮಾಡಿ ನನ್ನ ಮಗನ ಬಗ್ಗೆ ವಿಚಾರಿಸಲು ನನ್ನ ಮಗನ ಬಗ್ಗೆ ಯಾವುದೇ ಸುಳಿವು ದೋರೆತಿರುವುದಿಲ್ಲಾ. ನನ್ನ ಮಗನು
ಮನೆಯಿಂದ ಹೋಗುವಾಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಬಿಳಿಯ ಬಣ್ಣದ ಟೀ ಶರ್ಟ, ಧರಿಸಿದ್ದು ಅದೆ. ನನ್ನ ಮಗನು
ಕೋಲುಮುಖ ಸಾಧ ಗಪ್ಪು ಬಣ್ಣ, 4-5 ಅಡಿ ಎತ್ತರ, ಕಪ್ಪು ಕೂದಲು, ತೆಳ್ಳನೆಯ ಮೈಕಟ್ಟು ಹೊಂದಿದ್ದು ಕನ್ನಡ ಬಾಷೆಯನ್ನು ಮಾತನಾಡುತ್ತಾನೆ. ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 186/2017 ಕಲಂ: 379
ಐ.ಪಿ.ಸಿ KMMC Role 3 ,36 & 42 R/w 44 MMRD Act 1957 Rule 4, 4[1] 4[a] R/w
21[4], 21:
ದಿನಾಂಕ 23-08-2017
ರಂದು ಮದ್ಯಾಹ್ನ 1-45ಗಂಟೆಯ ಸುಮಾರಿಗೆ ಕಾರಟಗಿ ಬೂದಗುಂಪಾ ರಸ್ತೆಯ ಕೇನಾಲ್ ಹತ್ತಿರ 1) ಒಂದು ಜಾನ್ ಡೀರ್
ಕಂಪನಿಯ ಟ್ರ್ಯಾಕ್ಟರ್ ಇಂಜಿನ್ ನಂ PY30290307439 ಚೆಸ್ಸಿ ನಂ 3029DPY26 ಮತ್ತು ಇದಕ್ಕೆ ಹೊಂದಿಕೊಂಡಿರುವ
ನಂಬರ ಇಲ್ಲದ ಟ್ರ್ಯಾಲಿಯಲ್ಲಿ ಇದರ ಚಾಲಕ ರಮೇಶ ತಂದೆ ಮುದಕಪ್ಪ ಸಾ.ಗುಂಜಳ್ಳಿ ಈತನು ಅಂದಾಜು
1500/- ರೂಪಾಯಿ ಬೆಲೆಬಾಳುವ ಮರಳನ್ನು ಸರಕಾರದಿಂದ ಯಾವುದೇ ಅಧೀಕೃತ ಪರವಾನಿಗೆ ಇಲ್ಲದೇ ಸರಕಾರಕ್ಕೆ
ಯಾವುದೇ ರಾಜಧನ ಕಟ್ಟದೇ ಕಳ್ಳತನದಿಂದ ಸಾಗಿಸುತ್ತಿದ್ದಾಗ್ಗೆ ಶ್ರಿ ಮೋನಯ್ಯ
ಎ.ಎಸ್.ಐ ಹಿಡಿದುಕೊಂಡು ಪರವಾನಿಗೆ ಬಗ್ಗೆ ವಿಚಾರಿಸುತ್ತಿದ್ದಂತೆ ಚಾಲಕನು ಪರಮೀಟ್
ತೋರಿಸುವ ನೇಪದಲ್ಲಿ ಟ್ರ್ಯಾಕ್ಟರ್ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಸದ್ರಿ ಮರಳು
ತುಂಬಿದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಪಂಚರ ಸಮಕ್ಷಮದಲ್ಲಿ ಜಪ್ತು ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡು
ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
0 comments:
Post a Comment