Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, August 3, 2017

1]  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 116/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ:
ದಿನಾಂಕ: 02-08-2017 ರಂದು ಮುಂಜಾನೆ 8-20 ಗಂಟೆಗೆ ಠಾಣೆಯಲ್ಲಿದ್ದಾಗ ನಿಲೋಗಲ ಗ್ರಾಮದಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ  ಖಚಿತ ಬಾತ್ಮೀ ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-168, 192  ರವರೊಂದಿಗೆ ನಿಲೋಗಲ ಗ್ರಾಮಕ್ಕೆ ತಲುಪಿ ಅಲ್ಲಿ ಹೋಸ್ಕೂಲ ಹತ್ತಿರ ಮುಂಜಾನೆ 9-20 ಗಂಟೆಗೆ ತಲುಪಿ ಮುಂಜಾನೆ 9-25 ದಾಳಿಮಾಡಿದಾಗ ಉಮೇಶ ತಂದೆ ಶರಣಪ್ಪ ಹುಗಾರ ಸಾ: ನಿಲೋಗಲ ಸಿಕ್ಕಿಬಿದಿದ್ದು ಅವನ 1] 180 .ಎಂ.ಎಲ್.ಅಳತೆಯ 27 ಟೆಟ್ರಾ ಪಾಕೇಟಗಳು OLD TAVERN   ಪ್ರತಿಯೊಂದಕ್ಕೆ ಎಂ.ಆರ್.ಪಿ. 68.56 ಅಂತಾ ಬೆಲೆ ಇರುತ್ತದೆ. ಇವುಗಳ ಟ್ಟು ಅಂ:ಕಿ: 1,851-12 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 550-00  ರೂಪಾಯಿ ಸಿಕ್ಕಿದ್ದು ಸದರ ದಾಳಿ ಪಂಚನಾಮೆಯನ್ನು ಇಂದು ಮುಂಜಾನೆ 9-25 ಗಂಟೆಯಿಂದ ಮುಂಜಾನೆ 10-45 ಗಂಟೆಯವರಗೆ ನಿರ್ವಹಿಸಿದ್ದು ಇರುತ್ತದೆ. ಸದರ ಆರೋಪಿತನು ತನ್ನ ಲಾಬಕ್ಕೋಸ್ಕರ ಯಾವುದೇ ಪರವಾನಿಗೆ ಪಡೆಯದೆ ಮಾರಾಟ ಮಾಡಿ ಅಪರಾದ ಮಾಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.  
2]  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 117/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ:
ದಿನಾಂಕ: 02-08-2017 ರಂದು ಮುಂಜಾನೆ 11-50 ಗಂಟೆಗೆ ಹನಮಸಾಗರದ ಬಸ್ ನಿಲ್ದಾಣದ ಹತ್ತಿರ ಪೆಟ್ರೋಲಿಂಗದಲ್ಲಿದ್ದಾಗ ನಿಲೋಗಲ ಗ್ರಾಮದಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ  ಖಚಿತ ಬಾತ್ಮೀ ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-83 ಪಿ.ಸಿ-28, 452  ರವರೊಂದಿಗೆ ನಿಲೋಗಲ ಗ್ರಾಮಕ್ಕೆ ತಲುಪಿ ನಿಲೋಗಲದಿಂದ 1/2 ಕಿ.ಮಿ ಅಂತರದಲ್ಲಿ  ಶ್ಯಾಡ್ಲಗೇರಿ ರಸ್ತೆಯ ಬಾಜು ಹೊಲದಲ್ಲಿಯ ಮನೆಯ ಹತ್ತಿರ ಮದ್ಯಾಹ್ನ 12-30 ಗಂಟೆಗೆ ತಲುಪಿ ಮದ್ಯಾಹ್ನ 12-35 ಗಂಟೆಗೆ ದಾಳಿಮಾಡಿದಾಗ ಮಲ್ಲಪ್ಪ ತಂದೆ ಹನಮಪ್ಪ ಭಂಡಾರಿ ಸಾ: ನಿಲೋಗಲ ಸಿಕ್ಕಿಬಿದಿದ್ದು ಅವನ 1] 180 .ಎಂ.ಎಲ್.ಅಳತೆಯ 30 ಟೆಟ್ರಾ ಪಾಕೇಟಗಳು OLD TAVERN   ಪ್ರತಿಯೊಂದಕ್ಕೆ ಎಂ.ಆರ್.ಪಿ. 68.56 ಅಂತಾ ಬೆಲೆ ಇರುತ್ತದೆ. ಇವುಗಳ ಟ್ಟು ಅಂ:ಕಿ: 2,056-08 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 430-00 ರೂಪಾಯಿ ಸಿಕ್ಕಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 240/2017 ಕಲಂ. 78(3) Karnataka Police Act.
02-08-2017 ರಂದು ಮಧ್ಯಾಹ್ನ ಪಿ.ಎಸ್.ಐ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಬರುವ ಶ್ರೀರಾಮನಗರ ಗ್ರಾಮದ ಗ್ರಾಮ ಪಂಚಾಯತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಪಿ.ಸಿ. ನಂ: 358, 328, ಎ.ಪಿ.ಸಿ. 15 ನೀಲಪ್ಪ ಇವರು ಮತ್ತು ಇಬ್ಬರು ಪಂಚರು ಕೂಡಿಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಗ್ರಾಮ ಪಂಚಾಯತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅದೃಷ್ಟದ ಮಟಕಾ ಅಂಕಿಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗಿ ಜನರನ್ನು ಕರೆದು ಜನರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಆಗ ಮಧ್ಯಾಹ್ನ 3:30 ಗಂಟೆಯಾಗಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ದುರಗಪ್ಪ ತಂದೆ ಹನುಮಂತ, ವಯಸ್ಸು 35 ವರ್ಷ, ಜಾತಿ: ಮಾದಿಗ ಉ: ಹಮಾಲಿ ಕೆಲಸ ಸಾ: 5ನೇ ವಾರ್ಡ, ರಾಘವೇಂದ್ರ ಕಾಲೋನಿ, ಶ್ರೀರಾಮನಗರ. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 1,380/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.   
4]  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 174/2017 ಕಲಂ. 87 Karnataka Police Act.
ದಿನಾಂಕ 02-08--2017 ರಂದು ಸಂಜೆ 5-00 ಗಂಟೆಯ ಸುಮಾರಿಗೆ ಕಾರಟಗಿಯ ಲಕ್ಷ್ಮೀ ಲಾಡ್ಜ ಹತ್ತಿರ  ಸಾರ್ವಜನಿಕರ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಶ್ರೀ ಯಲ್ಲಪ್ಪ ಪಿ.ಎಸ್.ಐ. ಹಾಗೂ  ಸಿಬ್ಬಂದಿಯವರು ಹಾಗೂ ಪಂಚರ ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ 7 ಜನ ಆರೋಪಿಗಳು ಸಿಕ್ಕಿಬಿದ್ದಿದ್ದು ಸದರ್ ಸಿಕ್ಕಿಬಿದ್ದಿರುವ ಆರೋಪಿತರ ವಶದಿಂದ ರೂ. 1180/- ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ. 
5] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 179/2017 ಕಲಂ. 287, 304(ಎ) ಸಹಿತ 34 ಐ.ಪಿ.ಸಿ:.
ದಿ:03-08-2017 ರಂದು 01-00 ಎ.ಎಮ್ ಕ್ಕೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತ ಸರೋಜ ಇವರ ಪೈಕಿ ಶಾಲಿನಿ ಚವ್ಹಾಣ ಸಾ: ಗಿಣಿಗೇರಿ ತಾಂಡಾ ಇವರು ನೀಡಿದ ಲಿಖಿತ ದೂರಿನ ಸಾರಂಶವೇನೆಂದರೆ, ದಿ:02-08-2017 ರಂದು ಸಂಜೆ 4-30 ಗಂಟೆಗೆ ಆಪಾದಿತರಾದ ಪಾಲಾಕ್ಷಗೌಡ ಪೊಲೀಸ್ ಪಾಟೀಲ ಸಾ: ಕೊಪ್ಪಳ ಇವರ ಮಾಲೀಕತ್ವದ ಗಿಣಿಗೇರಿ-ಭೀಮನೂರ ರಸ್ತೆಯ ನಡುವೆ ಬರುವ ಕರಿ ಬೂದಿ ಸ್ಲ್ಯಾಗ್ ಪ್ಲಾಂಟ್ ದಲ್ಲಿ ಫಿರ್ಯಾದಿ ಮತ್ತು ಸಂಗಡ ರೇಣುಕಮ್ಮ ರಾಠೋಡ ಹಾಗೂ ಸರೋಜ ರಾಠೋಡ ಇವರು ಕೆಲಸ ಮಾಡುವಾಗ ಸ್ಲ್ಯಾಗ್ ಯಂತ್ರದಿಂದ ಒಂದು ಕಲ್ಲು ಪುಟಿದು ಸರೋಜಾ ರಾಠೋಡ ಇವರ ತಲೆಗೆ ಜೋರಾಗಿ ಬಡಿದು ತಲೆಗೆ ಭಾರಿ ರಕ್ತಗಾಯವಾಗಿದ್ದು, ನಂತರ ಅವಳನ್ನು ಕೊಪ್ಪಳದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಂಜೆ 5-15 ಕ್ಕೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ಬ್ರಾಟ್ ಡೆಡ್ ಆಗಿರುವ ಬಗ್ಗೆ ತಿಳಿಸಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
6] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 192/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ:

ದಿನಾಂಕ: 02-07-2017 ರಂದು ರಂದು ಶ್ರೀ ಆರ್.ಎಸ್.ಉಜ್ಜನಕೊಪ್ಪ, ಪಿ.ಐ. ಡಿಸಿಬಿ ಘಟಕ ಕೊಪ್ಪಳ, ಪ್ರಭಾರ:- ಗಂಗಾವತಿ ನಗರ ಪೊಲೀಸ್ ಠಾಣೆ ರವರು ಗಂಗಾವತಿ ನಗರದ ರಾಯಚೂರು ಸರ್ಕಲ್ ಹತ್ತಿರ ವಾಹನಗಳನ್ನು ತಪಾಸಣೆ ಮಾಡುತ್ತಾ ಐ.ಎಂ.ವಿ. ಕೇಸುಗಳನ್ನು ದಾಖಲಿಸುತ್ತಿರುವಾಗ ಆರೋಪಿತನಾದ ಉಮೇಶ ತಂದೆ ಮುದಿಯಪ್ಪ ಕಕ್ಕರಗೋಳ ವಯಸ್ಸು 24 ವರ್ಷ ಜಾ: ನಾಯಕ ಸಾ: ಹೊಸಕೇರಾ ಡಗ್ಗಿ ಇವನು ತನ್ನ ಬಜಾಜ್ ಡಿಸ್ಕವರಿ ವಾಹನ ನಂ. ಕೆ.ಎ.-35/ವಿ-0248 ನೇದ್ದನ್ನು ಚಲಾಯಿಸಿಕೊಂಡು ಬಂದಿದ್ದು, ಸದರಿಯವನ ವಾಹನವನ್ನು ನಿಲ್ಲಿಸಿ ವಿಚಾರಿಸಿದ್ದು ನಂತರ ಸದರಿಯವನ ಹತ್ತಿರ (01) 180 ಎಂ.ಎಲ್.ನ ಓಲ್ಡ್ ಟವರಿನ 10 ಮಧ್ಯದ ಟೆಟ್ರೋ ಪಾಕೆಟಗಳು ಪ್ರತಿಯೊಂದರ ಬೆಲೆ ರೂ. 68-56 ಇದ್ದು, ಒಟ್ಟು ರೂ. 685-00. (02) 180 ಎಂ.ಎಲ್.ನ 10 ಓರಿಜಿನಲ್ ಚಾಯಿಸ್ ಮಧ್ಯದ ಟೆಟ್ರೋ ಪಾಕೇಟಗಳು ಪ್ರತಿಯೊಂದರ ಬೆಲೆ ರೂ. 56-27 ಒಟ್ಟು ರೂ. 567-70. ಮತ್ತು (03) 90 ಎಂ.ಎಲ್.ನ ಓರಿಜಿನಲ್ ಚಾಯಿಸ್ ನ ಮಧ್ಯದ 10 ಟೆಟ್ರೋ ಪಾಕೇಟಗಳು. ಪ್ರತಿಯೊಂದರ ಬೆಲೆ ರೂ. 28-13. ಒಟ್ಟು ರೂ. 281-30 ಆಗುತ್ತದೆ. ಸದರಿ ಮಧ್ಯದ ಬಾಟಲಿಗಳನ್ನು ಹಾಗೂ ಬಜಾಜ್ ಡಿಸ್ಕವರಿ ವಾಹನವನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. 

0 comments:

 
Will Smith Visitors
Since 01/02/2008