1] ಹನುಮಸಾಗರ
ಪೊಲೀಸ್ ಠಾಣೆ ಗುನ್ನೆ ನಂ. 118/2017 ಕಲಂ.
78(3) Karnataka Police Act.
ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಸಾಯಾಂಕಾಲ 17-15 ಗಂಟೆಗೆ ಠಾಣೆಯಲ್ಲಿದ್ದಾಗ ಬೆನಕನಾಳ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ
ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಹೋಗಿ ದಾಳಿ
ಮಾಡಲಾಗಿ ಮಟಕಾ ಬರೆದುಕೊಂಡು ಹಣ ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು, ಮಟಕಾ ಚೀಟಿ ಬರೆದುಕೊಡುವವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಬಸವರಾಜ
ತಂದೆ ಮಹಾಂತಪ್ಪ ಅಂಗಡಿ, ವಯ: 30 ವರ್ಷ ಜಾ: ಲಿಂಗಾಯತ, ಸಾ: ಬೆನಕನಾಳ ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಚೀಟಿ, 1730=00 ರೂಪಾಯಿ ನಗದು ಹಣ ಹಾಗೂ ಒಂದು ಬಾಲಪೆನ್ನ ಜಪ್ತಮಾಡಿಕೊಂಡು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈ ಗೊಳ್ಳಲಾಗಿರುತ್ತದೆ.
2] ಕುಕನೂರ
ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ.
32, 34 ಕರ್ನಾಟಕ ಅಬಕಾರಿ ಕಾಯ್ದೆ:
ದಿನಾಂಕ: 03-08-2017 ರಂದು
ಬೆಳೆಗ್ಗೆ 11:30 ಗಂಟೆ ಸುಮಾರಿಗ ಬಳಿಗೇರಿ ಗ್ರಾಮದಲ್ಲಿಯ ಯಡಿಯಾಪೂರ ರಸ್ತೆಯ ಪಕ್ಕದಲ್ಲಿ ಆರೋಪಿತಳು
ತನ್ನ ಮುಂದುಗಡೆ ಒಂದು ಗೊಬ್ಬರದ ಚೀಲದಲ್ಲಿ ಮದ್ಯದ ಟ್ರೆಟ್ರಾ ಪ್ಯಾಕಗಳನ್ನು ಇಟ್ಟುಕೊಂಡು
ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತ ಮದ್ಯ ಮಾರಾಟ ಮಾಡುತಿದ್ದಾಗ ಪಿ.ಎಸ್.ಐ. ರವರು ಹಾಗೂ ಸಿಬ್ಬಂದಿಯವರು
ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತಳಿಂದ ಒಟ್ಟು 1519/- ರೂ. ಮೌಲ್ಯದ 90 M.L. ನ HAYWARDS CHEERS
WHISKY ಕಂಪನಿಯ ಒಟ್ಟು
54 ಮದ್ಯದ ಟೇಟ್ರಾ ಪ್ಯಾಕ್(ಪಾಕೇಟ್)ಗಳನ್ನು ಹಾಗೂ ಮದ್ಯ ಮಾರಾಟದ ನಗದು ಹಣ 80 /- ರೂ. ಗಳನ್ನು ಜಪ್ತ ಮಾಡಿಕೊಂಡು
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ
ಪೊಲೀಸ್ ಠಾಣೆ ಗುನ್ನೆ ನಂ. 176/2017 ಕಲಂ.
279, 338, 304(ಎ) ಐ.ಪಿ.ಸಿ:
ದಿನಾಂಕ :-03-08-2017
ರಂದು ಬೆಳಿಗ್ಗೆ ನಮ್ಮ ಎಕ್ಷ್ ಎಲ್ ಸೂಪರ್ ಮೋಟಾರ್ ಸೈಕಲ್ ತೆಗೆದುಕೊಂಡು ಗಂಗಾವತಿಗೆ ಹೋಗಿ ತಕರಾರಿ ತೆಗೆದುಕೊಂಡು ನಂತರ ನಮ್ಮ ಸಿದ್ದಿಕೇರಿಗೆ ಹೋಗಿ ನಮ್ಮ ತಾಯಿಯನ್ನು ಕರೆದುಕೊಂಡು ಹೋಗಬೇನ್ನುವಾಗಿ ನಮ್ಮ ತಾಯಿಯ ತಮ್ಮ ಸಂಜಿವ್ ಮೂರ್ತಿ ತಂದಿ ಲಕ್ಷ್ಮಣ ಶೆಟ್ಟಿ ಈತನು ತಾನೆ ಬಂದು ಬಿಟ್ಟು ಬರುತ್ತೇನೆ ಅಂತಾ ಹೇಳಿದ್ದರಿಂದ ನಾನು ನನ್ನ ಎಕ್ಸ್.ಎಲ್ ಸುಪರ್ ಮೋಟಾರ್ ಸೈಕಲ್ ಮೇಲೆ ತರಕಾರಿ ಇಟ್ಟುಕೊಂಡು ನಂತರ ನಮ್ಮ ಮಾವ ಸಂಜೀವ್ ಮೂರ್ತಿ ಈತನು ತನ್ನ ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲ ನಂ ಕೆ.ಎ-37 ಆರ್-8300
ನೆದ್ದರಲ್ಲಿ ನಮ್ಮ ತಾಯಿಯನ್ನು ಕೂಡಿಸಿಕೊಂಡು ಗಂಗಾವತಿಯಿಂದ ಬಂದೆವು ನಾವು ಸಿದ್ದಾಪೂರ ದಾಟಿ ನಮ್ಮ ಸೈಡಿನಲ್ಲಿ ಹಿಂದೆ ಮುಂದೆ ಬರುತ್ತಿದ್ದೇವು ರವಿನಗರದ ಹತ್ತಿರ ನಮ್ಮ ಇಂದಿನಿಂದ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ಅತೀ ವೇಗವಾಗಿ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲ್ ಗಳನ್ನು ಓಒರ್ ಟೇಕ್ ಮಾಡಿ ಮುಂದೆ ವೇಗವಾಗಿ ಚಲಾಯಿಸಿಕೊಂಡು ಹೋಗಿ, ಬೆಳಿಗ್ಗೆ 10-15 ಗಂಟೆಗೆ ಹಿಂದೆ ಹೋರಟಿದ್ದ ನಮ್ಮ ಮಾವ ಸಂಜಿವ್ ಮೂರ್ತಿ ಈತನಿಗೆ ಲಾರಿ ಚಾಲಕ ಯಾವುದೇ ರೀತಿಯ ಸಿಗ್ನಲ್ ಕೊಡದೇ ಒಂದೆ ಸಲ ಬ್ರೇಕ್ ಹಾಕಿ ರವಿನಗರದಲ್ಲಿರುವ ಮೀಲ್ ಒಳಗಡೆ ಹೋಗಲು ಲಾರಿಯನ್ನು ಕಟ್ ಮಾಡಿಕೊಂಡಿದ್ದರಿಂದ ಹಿಂದೆ ಹೋರಟಿದ್ದ ನಮ್ಮ ಮಾವನ ಮೋಟಾರ್ ಸೈಕಲ್ ಲಾರಿಗೆ ಟಕ್ಕರ್ ಆಗಿ ಅಪಘಾತವಾಗಿದ್ದರಿಂದ ನಮ್ಮ ಮಾವನ ಮೋಟಾರ್ ಸೈಕಲ್ ಮೇಲೆ ಇದ್ದ ನಮ್ಮ ಮಾವ ಸಂಜೀವ್ ಮೂರ್ತಿಗೆ ಮುಖಕ್ಕೆ, ಬುಜಕ್ಕೆ ಕೈಕಾಲುಗಳಿಗೆ ಗಂಭೀರ ಸ್ವಾರೂಪದ ಗಾಯವಾಗಿದ್ದು ಹಿಂದೆ ಕುಳಿತ್ತಿದ್ದ ನಮ್ಮ ತಾಯಿ ನರಸಮ್ಮಳಿಗೆ ತಲೆಗೆ ಗಂಭೀರ ಸ್ವಾರೂಪದ ಗಾಯವಾಗಿದ್ದರಿಂದ ಚಿಕಿತ್ಸೆ ಕುರಿತು ಕಾರಟಗಿ ಆಸ್ಪತ್ರೆಗೆ ನಂತರ ಬಂದು ತಡಮಾಡದೇ ಗಂಗಾವತಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಕರೆದುಕೊಂಡು ಹೋರಟಿದ್ದಾಗ್ಗೆ ಗಂಗಾವತಿಯಲ್ಲಿ ಮದ್ಯಾಹ್ನ 12-15 ಗಂಟೆಗೆ ನಮ್ಮ ತಾಯಿ ನರಸಮ್ಮಳು ತೆಲೆಗೆ ಆಗಿದ್ದ ಗಂಭೀರ ಸ್ವರೂಪದ ಗಾಯದಿಂದ ಮೃತಪಟ್ಟಿರುತ್ತಾಳೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment