1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 213/2017 ಕಲಂ: : 143, 147, 148, 323, 324, 307,
504, 506 ಸಹಿತ 149 ಐ.ಪಿ.ಸಿ.
ದಿನಾಂಕ 16-09-2017 ರಂದು 19-40 ಗಂಟೆಗೆ ಸರ್ಕಾರಿ ಆಸ್ಪತ್ರೆ,
ಗಂಗಾವತಿಯಿಂದ ಎಂ.ಎಲ್.ಸಿ ಸ್ವೀಕೃತವಾಗಿದ್ದು, ಸದರಿ ಎಂ.ಎಲ್.ಸಿ ವಿಚಾರಣೆ ಕುರಿತು 19-50 ಗಂಟೆಗೆ
ಸರಕಾರಿ ಆಸ್ಪತ್ರೆ ಗಂಗಾವತಿಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸವರಾಜ ತಂದೆ
ಗವಿಸಿದ್ದಪ್ಪ ಹೊಸಬಾವಿ ಇವನ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ ಫಿರ್ಯಾದಿಯು, ಇಂದು
ದಿನಾಂಕ 16-09-2017 ರಂದು ಕಂಪನಿಯ ಕೆಲಸದ ನಿಮಿತ್ಯ ಮರಳಿಗೆ ಹೋಗಿ ಕೆಲಸವನ್ನು ಮುಗಿಸಿಕೊಂಡು ವಾಪಾಸ್
ನನ್ನ ಮೋಟಾರ್ ಸೈಕಲ್ ನಲ್ಲಿ ಸಾಯಂಕಾಲ 6-30 ಗಂಟೆಯ ಸುಮಾರಿಗೆ ಗಂಗಾವತಿ ನಗರದ ರಿಲಾಯನ್ಸ್ ಪೆಟ್ರೋಲ್
ಬಂಕ್ ಹತ್ತಿರ ಬರುತ್ತಿರುವಾಗ ಪರಿಚಯವಿದ್ದ ರಾಕೇಶ ಮತ್ತು ಪರಶುರಾಮ ಇಬ್ಬರು ನಿಂತುಕೊಂಡಿದ್ದು ಅದನ್ನು
ನೋಡಿದ ಫಿರ್ಯಾದಿ ಸದರಿಯವರ ಹತ್ತಿರ ಮಾತನಾಡಿಸಿಕೊಂಡು ನಿಂತಿರುವಾಗ ಆರೋಪಿತರಾದ 1) ನಭಿ ಸಾ: ಇಸ್ಲಾಂಪೂರ
(2) ನಬಿ ತಮ್ಮ ಅಜ್ಜು (3) ಡೊಂಗ್ರಿ ಹುಸೇನ (4) ಕಟ್ಟಿಗೆ ಅಡ್ಡೆ ಶರೀಪ್ (05) ಸ್ವಾಟ್ಯಾ ಕಿಲ್ಲಾ
ಏರಿಯಾ(06) ಆಸೀಫ್ (07) ಜೀಲಾನ್ (08) ಮೆಹಬೂಬ (09) ಶಾಮೀದ್ ಅಲಿ ಹಾಗೂ ಇತರೇ ಸುಮಾರು 20-30 ಜನರು ಕಟ್ಟಿಗೆ ರಾಡ್ ಬಲೀಸ್ ಗಳನ್ನು ಹಿಡಿದುಕೊಂಡು ಬಂದು ನಮಗೆ
ನಿವೇನು ಲೇ ಆ ಜಗಳದಲ್ಲಿ ಇದ್ದವರು ಅಂತಾ ಅಂದಿದ್ದಕ್ಕೆ ಆಗ ಫಿರ್ಯಾದಿಯು ನಾನು ಕೆಲಸವನ್ನು ಮುಗಿಸಿಕೊಂಡು
ಈಗ ತಾನೇ ಬಂದಿರುವೇನು ನನಗೆ ಜಗಳದ ಬಗ್ಗೆ ಗೊತ್ತಿಲ್ಲಾ ಅಂತಾ ಅಂದಿದ್ದಕ್ಕೆ ಆರೋಪಿತರೆಲ್ಲರೂ ಸೇರಿಕೊಂಡು
ಈ ಸೂಳೆ ಮಕ್ಕಳೇ
ಜಗಳ ಮಾಡಿಕೊಂಡು ಬಂದವರೇ ಇವರನ್ನು ಜೀವ ಸಹಿತ ಬಿಡಬ್ಯಾಡ್ರಿ ಅಂತಾ ಅಂದವನೇ ನಮಗೆ ಕೊಲೆ ಮಾಡುವ ಉದ್ದೇಶದಿಂದ
ಆರೋಪಿ ನಭಿಯು ತನ್ನ ಕೈಯಲ್ಲಿದ್ದ ರಾಡನ್ನು ತಗೆದುಕೊಂಡು ಫಿರ್ಯಾದಿಯ ತಲೆಯ ಹಿಂಭಾಗಕ್ಕೆ ಹೊಡೆದು
ಬಾರಿರಕ್ತ ಗಾಯ ಮಾಡಿದ್ದು ಹಾಗೂ ಉಳಿದವರು ಕೈ ಹಾಗೂ ಕಟ್ಟಿಗೆ ಮತ್ತು ಕಲ್ಲುಗಳಿಂದ ಫಿರ್ಯಾದಿಗೆ ಹಾಗೂ
ರಾಕೇಶ ಮತ್ತು ಪರಶುರಾಮ ಇವರಿಗೂ ಹೊಡಿ-ಬಡಿ ಮಾಡಿರುತ್ತಾರೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 214/2017 ಕಲಂ: : 143, 147, 148, 341, 323, 324,
307, 504, 506 ಸಹಿತ 149 ಐ.ಪಿ.ಸಿ.
ದಿನಾಂಕ 16-09-2017 ರಂದು ಶನಿವಾರ ದಿವಸ ರಾತ್ರಿ 8-30 ಗಂಟೆ ಸುಮಾರಿಗೆ ನನ್ನ ಕೆಲಸ ಮುಗಿಸಿಕೊಂಡು
ನನ್ನ ಮೋಟಾರ್ ಸೈಕಲ್ ದಲ್ಲಿ ಗುಂಡಮ್ಮ ಕ್ಯಾಂಪಿಗೆ ಹೊರಟಿದ್ದೆನು. ನಾನು ದುರ್ಗಮ್ಮನ ಹಳ್ಳ
ದಾಟಿ ದುರ್ಗಮ್ಮನ ಗುಡಿ ಹತ್ತಿರ ಬಂದಾಗ ಅಲ್ಲಿ ನಿಂತಿದ್ದ (1) ರವಿ ಲಿಂಗರಾಜ ಕ್ಯಾಂಪ್ (2) ಅಂಜಿ
ಲಿಂಗರಾಜ ಕ್ಯಾಂಪ್ (3) ಹತ್ತರೊಟ್ಟಿ ಶರಣ ಲಿಂಗರಾಜ ಕ್ಯಾಂಪ್ (4) ಪರಶುರಾಮ ಲಿಂಗರಾಜ ಕ್ಯಾಂಪ್
(5) ಮಂಜುನಾಥ ಲಿಂಗರಾಜ ಕ್ಯಾಂಪ್ (6) ಗೋಬಿ ಮಂಜ ಗುಂಡಮ್ಮ ಕ್ಯಾಂಪ್ (7) ಮಹೇಶ ಗುಂಡಮ್ಮ ಕ್ಯಾಂಪ್
(8) ತಪ್ಪಲ ಗುಂಡಮ್ಮ ಕ್ಯಾಂಪ್ (9) ಗಾಳೆಪ್ಪ ಗುಂಡಮ್ಮ ಕ್ಯಾಂಪ್ (10) ಕುಂಯ್ಯ ವಿದ್ಯಾನಗರ
(11) ಬೆಟ್ಟಡಿಕೆ ಮಂಜ ವಿದ್ಯಾನಗರ (12) ಕುಂಟ ಮಹಾಂತ (13) ಹನುಮೇಶ ಸಿದ್ದಿಕೇರಿ (14) ರಾಕೇಶ ಸಿದ್ದಿಕೇರಿ
(15) ಮೌಲಾಸಾಬ ಜುಲೈನಗರ (16) ಬಸವರಾಜ ಜಯನಗರ ಹಾಗೂ ಇತರೇ 10-15 ಜನರು ಕೈಯಲ್ಲಿ ಕಲ್ಲು, ಕಟ್ಟಿಗೆ,
ರಾಡ್ ಹಾಗೂ ಚಾಕುವನ್ನು ಹಿಡಿದುಕೊಂಡು ಎಲ್ಲರೂ ಸೇರಿ ನನ್ನ ಹತ್ತಿರ ಬಂದು ನನ್ನನ್ನು ತಡೆದು ನಿಲ್ಲಿಸಿ
ಏಯ್ ನಿನ್ನ ಹೆಸರು ಏನು ಎಂದು ಕೇಳಿದರು. ಆಗ ನಾನು ಹೆಸರನ್ನು ಹೇಳಿದಾಗ ಎಲ್ಲರೂ ಸೇರಿ ಏಕಾಏಕಿ ಹಾಕ್ರಿ
ಈ ಸೂಳೇಮಗ್ಗ ಅಂತಾ ಅನ್ನುತ್ತಾ ರವಿ ಇವನು ತನ್ನ ಕೈಯಲ್ಲಿದ್ದ ಚಾಕುವಿನಿಂದ ತಿವಿಯಲು ಬಂದಿದ್ದು,
ನಾನು ಬಗ್ಗಿದಾಗ ಬಲಗಣ್ಣಿನ ಹುಬ್ಬಿನ ಹತ್ತಿರ ಗೀಚಿದ್ದು ಅಂಜಿ, ಹನುಮೇಶ, ಗೋಬಿ ಮಂಜ, ಕುಂಯ್ಯ, ಬೆಟ್ಟಡಿಕೆ
ಮಂಜ, ಹತ್ತರೊಟ್ಟಿ ಶರಣ ಇವರೆಲ್ಲರೂ ಸೇರಿ ತಮ್ಮ ಕೈಗಳಲ್ಲಿದ್ದ ಕಲ್ಲು ಹಾಗೂ ರಾಡ್ದಿಂದ ನನ್ನ ಕಣ್ಣಿಗೆ
ಹಾಗೂ ಬೆನ್ನಿಗೆ ಹೊಡೆದಿದ್ದು ಅಲ್ಲದೇ ಉಳಿದವರೆಲ್ಲರೂ ಕೈಗಳಿಂದ ಹೊಡೆದದ್ದು ಅಲ್ಲದೇ ಕಾಲಿನಿಂದ ಒದೆಯಲು
ಪ್ರಾರಂಭಿಸಿದರು. ನಾನು ನೋವಿನಿಂದ ಜೋರಾಗಿ ಚೀರಿಕೊಂಡಾಗ ನನಗೆ ಹೊಡೆಯುವುದನ್ನು ನಿಲ್ಲಿಸಿದ್ದು,
ಇದರಿಂದ ನನ್ನ ಬಲಗಣ್ಣಿನ ಹುಬ್ಬಿನ ಹತ್ತಿರ ಬಲಮೊಣಕಾಲಿಗೆ ರಕ್ತಗಾಯವಾಗಿದ್ದು, ಬೆನ್ನಿಗೆ, ಬಲ ಪಕ್ಕಡಿಗೆ
ಒಳಪೆಟ್ಟು ಹಾಗೂ ಮೈಕೈಗೆ ನೋವಾಗಿದ್ದು ಇದೆ. ಅದೇ ವೇಳೆಗೆ ಅಲ್ಲಿಗೆ ಮೋಟಾರ್ ಸೈಕಲ್ ದಲ್ಲಿ
ನನ್ನಂತೆಯೇ ಬಂದ ಇನ್ನೊಬ್ಬನನ್ನು ಎಲ್ಲರೂ ಸೇರಿ ವಿಚಾರಿಸಿದ್ದು ಅವನು ತನ್ನ ಹೆಸರು ಸೈಯದ್ ಸುಲೇಮಾನ್
ಅಂತಾ ತಿಳಿಸಿದಾಗ ಏಕಾಏಕಿ ಹಾಕ್ರಿ ಈ ಸೂಳೇಮಗ್ಗ ಇವನೂ ಅದಾ ಸೂಳೇಮಗಾ ಅದಾನ್ ಅಂತಾ ಅನ್ನುತ್ತಾ
ಅಂಜಿ ಇವನು ತನ್ನ ಕೈಯಲ್ಲಿದ್ದ ಚಾಕುವಿನಿಂದ ಅವನ ಎಡಭಾಗದ ಪಕ್ಕಡಿಗೆ ಇರಿದನು. ಮಂಜುನಾಥ,
ಹತ್ತರೊಟ್ಟಿ ಶರಣ, ಗಾಳೆಪ್ಪ, ತಪ್ಪಲ, ಗೋಬಿ ಮಂಜ, ರವಿ ಇವರೆಲ್ಲರೂ ತಮ್ಮ ಕೈಗಳಲ್ಲಿದ್ದ ಕಟ್ಟಿಗೆ,
ರಾಡ್ ಹಾಗೂ ಕಲ್ಲಿನಿಂದ ಅವನ ಮುಖಕ್ಕೆ, ಬೆನ್ನಿಗೆ, ಎಡಗೈಗೆ ಹಾಗೂ ಮೈಕೈಗೆ ಹೊಡೆಬಡೆ ಮಾಡಿದರು.
ಇದರಿಂದ ಅವನ ಪಕ್ಕಡಿಯಿಂದ ಜೋರಾಗಿ ರಕ್ತ ಚಿಮ್ಮಲು ಪ್ರಾರಂಭಿಸಿತು. ಅವರೆಲ್ಲರೂ ಲೇ ನಿಮ್ಮೌರ್ ನಿಮ್ಮನ್
ಜೀವಂತ್ ಉಳಸಂಗಿಲ್ಲ, ಇವತ್ ಇವರ್ ಬಂದ್ರ ಅಂತ ಉಳಕೊಂಡ್ರಿ ಸೂಳೇಮಕ್ಕಳ ಹುಷಾರ್ ಅಂತಾ ಅನ್ನುತ್ತಾ
ಹೊರಟುಹೋದರು. ಆಗ ಸಮಯ ರಾತ್ರಿ ಸುಮಾರು 9-15 ಗಂಟೆ ಆಗಿರಬಹುದು. ನಂತರ ಖಾಜಾಮೊಹಿದ್ದೀನ್
ಬಳ್ಳಾರಿ ಹಾಗೂ ಇಸ್ಮೈಲ್ ಹಕೀಮ್ ಇವರು ನಮ್ಮಿಬ್ಬರನ್ನು ಸರ್ಕಾರಿ ಆಸ್ಪತ್ರೆ, ಗಂಗಾವತಿಗೆ ಕರೆತಂದು
ಚಿಕಿತ್ಸೆ ಕುರಿತು ದಾಖಲು ಮಾಡಿದರು. ಆಸ್ಪತ್ರೆಯ ಲೈಟಿನ ಬೆಳಕಿನಲ್ಲಿ ನೋಡಲಾಗಿ ಸುಲೇಮಾನ್
ಗೆ ತಲೆಗೆ ಹಿಂಭಾಗದಲ್ಲಿ, ಎಡಗೈ ರಟ್ಟೆಗೆ, ಎಡಗಣ್ಣಿನ ಹುಬ್ಬಿಗೆ ರಕ್ತಗಾಯವಾಗಿದ್ದು, ಎಡಪಕ್ಕಡಿಗೆ
ತೀವ್ರವಾದ ರಕ್ತಗಾಯ ಹಾಗೂ ಎಡಹುಬ್ಬಿನ ಮೇಲೆ ಒಳಪೆಟ್ಟಾಗಿತ್ತು. ಕಾರಣ ಮೇಲ್ಕಂಡ 16 ಜನರು
ಹಾಗೂ ಮತ್ತಿತರ 10-15 ಜನರು ಎಲ್ಲರೂ ಸಾ: ಗಂಗಾವತಿ ಇವರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ನಮ್ಮನ್ನು
ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ನನಗೆ ಹಾಗೂ ಸೈಯದ್ ಸುಲೇಮಾನ್ ತಂದೆ ಸೈಯದ್ ಅಬ್ದುಲ್ ರೆಹಮಾನ್
ಇವನಿಗೆ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಇರಿದಿದ್ದು ಅಲ್ಲದೇ ಕಲ್ಲು, ರಾಡ್ ದಿಂದ ಹಾಗೂ ಕೈಗಳಿಂದ
ಹೊಡೆದು ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ್ದು, ಮೇಲ್ಕಂಡವರೆಲ್ಲರ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸಲು ವಿನಂತಿ. ಬೀದಿ ದೀಪದ ಬೆಳಕಿನಲ್ಲಿ ನೋಡಿರುವುದರಿಂದ ನಾನು ಇನ್ನುಳಿದವರನ್ನು ಗುರುತಿಸುತ್ತೇನೆ.
ಅಂತಾ ಮುಂತಾಗಿ ನೀಡಿದ ಫಿರ್ಯಾದಿಯನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment